ರಾಮಾಚಾರಿ (Ramachari) ಧಾರಾವಾಹಿ ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗ್ತಿದೆ. ಚಾರು-ರಾಮಾಚಾರಿ ಗುಟ್ಟಾಗಿ ಮದುವೆಯಾಗಿದ್ದಾರೆ (Marriage). ಮನೆಯಲ್ಲಿ ಈ ಸತ್ಯ ಯಾರಿಗೂ ಗೊತ್ತಿಲ್ಲ. ಗೊತ್ತಾದ್ರೆ ದೊಡ್ಡ ರಂಪ ರಾಮಾಯಣ ಆಗೋದು ಪಕ್ಕಾ. ರಾಮಾಚಾರಿ ಮಾಡಿದ ಯಡವಟ್ಟಿನಿಂದ ಕೆಮಿಕಲ್ ಬಿದ್ದು ಚಾರು ಕಣ್ಣು ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತೆ. ಅದಕ್ಕೆ ರಾಮಾಚಾರಿ ಕೊರಗುತ್ತಾ ಇರುತ್ತಾನೆ. ಕಣ್ಣು ಕಾಣದ ಚಾರುಗೆ ನಾನೇ ಬೆಳಕಾಗಬೇಕು ಎಂದು ರಾಮಾಚಾರಿ ಯಾರಿಗೂ ಹೇಳದೇ ಆಕೆಗೆ ತಾಳಿ ಕಟ್ಟಿದ್ದಾನೆ. ಚಾರು ಈ ಊರೇ ಬೇಡ. ಈ ದೇಶ (Country) ಬಿಟ್ಟು, ವಿದೇಶಕ್ಕೆ ಹೋಗಿ ಸೆಟ್ಟಲ್ ಆಗೋಣ. ನಮ್ಮ ಭವಿಷ್ಯ ನಮ್ದು ರಾಮಾಚಾರಿ. ಈ ಇಂಡಿಯಾ ಬಿಟ್ಟು, ಬೇರೆ ದೇಶಕ್ಕೆ ಹೋಗಿ ನಮ್ಮ ಬದುಕು ಕಟ್ಟಿಕೊಳ್ಳೋಣ ಎಂದು ಹೇಳ್ತಾ ಇದ್ದಾಳೆ
ಇದ್ಯಾವ ನ್ಯಾಯ?
ಗಂಡ ಬಡವ ಅಂತಾನೋ ಅಥವಾ ಅವನಿಗೆ ಏನಾದ್ರೂ ಕಾಯಿಲೆ ಬಂತು ಅಂತಾನೋ, ಹೆಂಡ್ತಿ ಗಂಡನನ್ನು ಬಿಟ್ಟು ಹೋಗಲ್ಲ. ನನಗೆ ಕಣ್ಣು ಬಂತು ಅಂತ, ಅವಶ್ಯಕತೆ ಇಲ್ಲ ನನ್ನ ಬಿಟ್ಟು ಹೋಗು ಅನ್ನುವುದು ಯಾವ ನ್ಯಾಯ ರಾಮಾಚಾರಿ? ಮಾತು ಎತ್ತಿದ್ರೆ, ಮನೆತನ, ಸಂಸ್ಕಾರ ಅಂತೀಯಾ. ಗಂಡನನ್ನು ಬಿಟ್ಟು ಇನ್ನೊಬ್ಬನನ್ನು ಕಟ್ಕೋ ಅಂತ ಹೇಳುವುದು, ನಿಮ್ಮ ಮನೆತನಕ್ಕೆ, ಸಂಸ್ಕಾರಕ್ಕೆ ತಕ್ಕ ಕೆಲಸನಾ? ಒಂದು ಸತಿ ಮದುವೆಯಾದ್ರೆ ಮುಗೀತು ರಾಮಾಚಾರಿಗೆ ಎಂದು ಚಾರು ಹೇಳಿದ್ದಾಳೆ.
ನಾನು-ನೀವು ಮ್ಯಾಚ್ ಆಗಲ್ಲ
ನಿಮ್ಮ ರೀತಿಯ ಹೈಕ್ಲಾಸ್ ಫ್ಯಾಮಿಲಿಗೆ ನಾನು ಏನೂ ಬಿಡಿಸಿ ಹೇಳುವುದು ಏನಿಲ್ಲ. ಸೋಶಿಯಲ್ ಜೀವನದಲ್ಲಿ ಮುಂದೆ ಸಾಗಿರುವ ಮನೆ. ಆಗಿರುವುದನ್ನು ಸ್ವೀಕಾರ ಮಾಡ್ತಾರೆ. ಆದ್ರೆ ನಮ್ಮ ಕುಟುಂಬ ಆಗಲ್ಲ ಮೇಡಂ. ಮಡಿವಂತಿಕೆ ಕುಟುಂಬ. ಇವತ್ತು ಆ ಕುಟುಂಬದ ಮಡಿವಂತಿಕೆ ಉಳಿಸುವುದು ನನ್ನ ಜವಾಬ್ದಾರಿ. ಹಾಗಂತ ನಾನು ನಿಮ್ಮನ್ನು ಕೇವಲವಾಗಿ ನೋಡ್ತಾ ಇಲ್ಲ. ಈ ಸೂಟ್ ಮೇಲೆ ಶಲ್ಯ ಹಾಕಿಕೊಂಡ್ರೆ ಹೇಗೆ ಮ್ಯಾಚ್ ಆಗಲ್ವೋ ಆ ರೀತಿ ನಮ್ಮ ಸಂಬಂಧ ಎಂದು ರಾಮಾಚಾರಿ ಹೇಳಿದ್ದಾನೆ.
ಗಂಡ ಕೆಟ್ಟವನು ಎಂದುಕೊಳ್ಳಿ
ನಮ್ಮ ಕುಟುಂಬ, ನಿಮ್ಮ ಕುಟುಂಬ ಹೊಂದಾಣಿಕೆ ಆಗಲ್ಲ ಮೇಡಂ. ಅದೇ ರೀತಿ ನಾವು-ನೀವು ಸಂಸಾರ ಕಟ್ಟಿಕೊಂಡ್ರೆ ಅದನ್ನೂ ಯಾರು ಒಪ್ಪಲ್ಲ. ಆ ಸತ್ಯವನ್ನು ಒಪ್ಪಿಕೊಳ್ಳಿ. ನೀವು ಮದುವೆಯಾದ ಗಂಡ ಕೆಟ್ಟವನಾದ್ರೆ, ಬಿಟ್ಟು ಬೇರೆ ಮದುವೆಯಾಗುವುದು ಸಹಜ ಅಲ್ವಾ? ಇದನ್ನು ಅದೇ ರೀತಿ ಅಂಕೊಳ್ಳಿ ಎಂದು ರಾಮಾಚಾರಿ ಚಾರು ಹೇಳ್ತಾ ಇದ್ದಾನೆ. ಆದ್ರೆ ಚಾರು ರಾಮಾಚಾರಿಯನ್ನು ಬಿಟ್ಟು ಹೋಗಲು ತಯಾರಿಲ್ಲ.
ನಾನು ಸಾಕ್ತೇನೆ
ನೀನು ನನ್ನ ಮದುವೆ ಆಗಿರುವ ವಿಷ್ಯ ನಮ್ಮ ಮನೆಯಲ್ಲಿ ಗೊತ್ತಾದ್ರೆ, ಅವರ ವಿಶ್ವಾಸಕ್ಕೆ ಕೊಳ್ಳಿ ಇಟ್ಟಂತೆ ಆಗುತ್ತೆ. ಅದರಿಂದ ನಮ್ಮ ಮನೆ ಛಿದ್ರ ಛಿದ್ರ ಆಗುತ್ತೆ. ಆಗ ಮನೆ ಮಗ ಆಗಿರೋ ನಾನು, ಹೊರಗಿನವನು ಆಗ್ತೇನೆ ಎಂದು ರಾಮಾಚಾರಿ ಹೇಳಿದ್ದಾನೆ. ಅದಕ್ಕೆ ಚಾರು, ಅವರು ಮನೆಯಿಂದ ಹೊರಗೆ ಹಾಕಿದ್ರೆ ಹಾಕಲಿ. ನಾನು ನಿನ್ನನ್ನು ಸಾಕ್ತೇನೆ ಎಂದು ಚಾರು ಹೇಳಿದ್ದಾಳೆ.
ವಿದೇಶಕ್ಕೆ ಹೋಗೋಣ
ನೀನು ಮನೆ ಬಿಟ್ಟು ಬಾ, ರಾಜನಂತೆ ಸಾಕುತ್ತೇನೆ. ಆಗ ನಿನಗೆ ಹೆಂಡ್ತಿ ಬೆಲೆ ಏನು ಅಂತ ಅರ್ಥ ಆಗುತ್ತೆ. ನಮ್ಮ ಅಪ್ಪ ಕೋಟಿಗಟ್ಟಲೇ ಆಸ್ತಿ ಮಾಡಿದ್ದಾರೆ. ಅದೆಲ್ಲಾ ನಿನಗೆ ಕಣೋ. ನಮ್ಮನೆಯಿಂದನೂ ಆಚೆ ಹಾಕಿದ್ರೆ, ಈ ಊರೇ ಬೇಡ. ಈ ದೇಶ ಬಿಟ್ಟು, ವಿದೇಶಕ್ಕೆ ಹೋಗಿ ಸೆಟ್ಟಲ್ ಆಗೋಣ. ನಮ್ಮ ಭವಿಷ್ಯ ನಮ್ದು ರಾಮಾಚಾರಿ. ಈ ಇಂಡಿಯಾ ಬಿಟ್ಟು, ಬೇರೆ ದೇಶಕ್ಕೆ ಹೋಗಿ ನಮ್ಮ ಬದುಕು ಕಟ್ಟಿಕೊಳ್ಳೋಣ ಎಂದು ಹೇಳ್ತಾ ಇದ್ದಾಳೆ.
ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ ನ್ಯೂ ಲುಕ್ ನೋಡಿ ಫ್ಯಾನ್ಸ್ ಶಾಕ್! ಇದೆನ್ನಮ್ಮಾ ನಿನ್ನ ಅವತಾರಾ ಅಂದ್ರು ನೆಟ್ಟಿಗರು
ಚಾರು ಮಾತಿಗೆ ರಾಮಾಚಾರಿ ಒಪ್ತಾನಾ? ದೇಶ ಬಿಟ್ಟು ಹೋಗ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ