Ramachari: ಗಂಡನಿಗಾಗಿ ವಿಷ ಕುಡಿದ ಚಾರು; ಎಮೆರ್ಜೆನ್ಸಿ ವಾರ್ಡ್​ನಲ್ಲಿ ರಾಮಾಚಾರಿ ಮಡದಿ

ವಿಷ ಕುಡಿದ ಚಾರು

ವಿಷ ಕುಡಿದ ಚಾರು

ಯಾವಾಗ ರಾಮಾಚಾರಿ ಚಾರುಳನ್ನು ತಿರುಗಿಯೂ ನೋಡಲಿಲ್ವೋ, ಆಗ ಚಾರು ವಿಷ ಕುಡಿದಿದ್ದಾಳೆ. ಎಚ್ಚರ ತಪ್ಪಿ ಬಿದ್ದಿದ್ದಾಳೆ.

  • News18 Kannada
  • 2-MIN READ
  • Last Updated :
  • Karnataka, India
  • Share this:

ರಾಮಾಚಾರಿ (Ramachari) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗ್ತಿದೆ. ಚಾರು-ರಾಮಾಚಾರಿ ಗುಟ್ಟಾಗಿ ಮದುವೆಯಾಗಿದ್ದಾರೆ (Marriage). ಮನೆಯಲ್ಲಿ ಈ ಸತ್ಯ ಯಾರಿಗೂ ಗೊತ್ತಿಲ್ಲ. ಗೊತ್ತಾದ್ರೆ ದೊಡ್ಡ ರಂಪ ರಾಮಾಯಣ ಆಗೋದು ಪಕ್ಕಾ. ರಾಮಾಚಾರಿ ಚಾರುಗೆ ತನ್ನಿಂದ ದೂರ ಹೋಗು ಎನ್ನುತ್ತಿದ್ದಾ,ಎ ಅದಕ್ಕೆ ಚಾರು ಬೇಸರ ಮಾಡಿಕೊಂಡಿದ್ದಾಳೆ. ಗಂಡ ಬಡವ ಅಂತಾನೋ ಅಥವಾ ಅವನಿಗೆ ಏನಾದ್ರೂ ಕಾಯಿಲೆ ಬಂತು ಅಂತಾನೋ, ಹೆಂಡ್ತಿ ಗಂಡನನ್ನು ಬಿಟ್ಟು ಹೋಗಲ್ಲ. ಮಾತು ಎತ್ತಿದ್ರೆ, ಮನೆತನ, ಸಂಸ್ಕಾರ ಅಂತೀಯಾ. ಗಂಡನನ್ನು ಬಿಟ್ಟು ಇನ್ನೊಬ್ಬನನ್ನು ಕಟ್ಕೋ ಅಂತ ಹೇಳುವುದು, ನಿಮ್ಮ ಮನೆತನಕ್ಕೆ, ಸಂಸ್ಕಾರಕ್ಕೆ ತಕ್ಕ ಕೆಲಸನಾ? ಒಂದು ಸತಿ ಮದುವೆಯಾದ್ರೆ ಮುಗೀತು ರಾಮಾಚಾರಿಗೆ ಎಂದು ಹೇಳಿದ್ದಾಳೆ. ರಾಮಾಚಾರಿ ಸಿಗಲ್ಲ ಎಂದು ನಿಜವಾಗಿಯೂ ವಿಷ (Poison) ಕುಡಿದಿದ್ದಾಳೆ.


ಪ್ರಾಣ ಬಿಡ್ತೀನಿ ಎಂದು ಈ ಹಿಂದೆ ಡ್ರಾಮಾ


ನಿನ್ನ ಹೆಂಡ್ತಿ ಇನ್ಮೇಲೆ ನಿನಗೆ ಭಾರವಾಗಿ ಕಾಡಲ್ಲ. ನಿನ್ನ ಭಾರ ಎಲ್ಲಾ ಕಳಚಿ ಈ ಭೂಮಿ ಬಿಟ್ಟು ಹೋಗಲು ಎಲ್ಲಾ ತಯಾರಿ ನಡೆದಿದೆ. ತಾಳಿ ಬಿಚ್ಚೋಕೆ ಆಗಲ್ಲ. ಆದ್ರೆ ಪ್ರಾಣ ಬಿಡಬಹುದು. ಅದಕ್ಕೆ ಪ್ರಾಣ ಬಿಡ್ತಾ ಇದೀನಿ.


ಮುಂದಿನ ಜನ್ಮ ಅಂತ ಇದ್ರೆ, ನನ್ನ ಹಣೆಯಲ್ಲಿ ನಿನ್ನ ಹೆಸರು ಬರೆಸಿಕೊಂಡು ಬರ್ತೇನೆ. ನಿನ್ನ ಕೈನಲ್ಲೇ ತಾಳಿ ಕಟ್ಟಿಸಿಕೊಳ್ತೇನೆ. ಆಗ ನಿನ್ನ ಜೊತೆ ನಾನು ಜೀವನ ನಡೆಸುತ್ತೇನೆ ಎಂದು ಚಾರು ವಿಷ ಕುಡಿಯುವ ನಾಟಕ ಮಾಡಿದ್ದಳು.


ಮತ್ತೆ ವಿಷದ ಬಾಟೆಲ್ ಹಿಡಿದ ಚಾರು


ಚಾರು ಮತ್ತು ಆಕೆಯ ಸ್ನೇಹಿತೆ ಸಾನ್ವಿ ಪಾರ್ಕ್‍ನಲ್ಲಿ ರಾಮಾಚಾರಿಯನ್ನು ಭೇಟಿ ಮಾಡಿದ್ದಾರೆ. ರಾಮಾಚಾರಿ ನೀನು ನನ್ನನ್ನು ಹೆಂಡ್ತಿ ಎಂದು ಸ್ವೀಕಾರ ಮಾಡು ಇಲ್ಲ ಅಂದ್ರೆ ಸಾಯುತ್ತೇನೆ ಎಂದು ವಿಷದ ಬಾಟೆಲ್ ಹಿಡಿದು ತೋರಿಸಿದ್ದಾಳೆ. ಅದಕ್ಕೆ ರಾಮಾಚಾರಿ ನಿಮ್ಮ ಈ ನಾಟಕಕ್ಕೆ ನಾನು ಭಯ ಪಡಲ್ಲ. ನೀವು ಏನಾದ್ರೂ ಮಾಡಿಕೊಳ್ಳಿ ಎಂದು ಹೊರಟಿದ್ದಾನೆ.




3 ಎಣಿಸುತ್ತೇನೆ ಎಂದ ಚಾರು


ರಾಮಾಚಾರಿ ನಾನು 3 ಎಣಿಸುತ್ತೇನೆ. ಅಷ್ಟರಲ್ಲಿ ನೀನು ಬಂದು ನನ್ನ ಹೆಂಡ್ತಿ ಎಂದು ಒಪ್ಪಿಕೊಳ್ಳಬೇಕು. ಇಲ್ಲ ಅಂದ್ರೆ ನಾನು ನಿಜವಾಗಿಯೂ ವಿಷ ಕುಡಿಯುತ್ತೇನೆ ಎನ್ನುತ್ತಾಳೆ. ಅದನ್ನು ಲೆಕ್ಕಿಸದೇ ರಾಮಾಚಾರಿ ಹೋಗುತ್ತಾನೆ.


ಚಾರು 1, 2, 3 ಎಂದು ಎಣಿಸಿದ್ರೂ ರಾಮಾಚಾರಿ ತಿರುಗಿಯೂ ನೋಡದೇ ಹೊರಟು ಹೋಗ್ತಾನೆ. ಯಾಕಂದ್ರೆ ಕಳೆದ ಬಾರಿಯೂ ಚಾರು ವಿಷ ಕುಡಿದಿದ್ದೇನೆ ಎಂದು ಡ್ರಾಮಾ ಮಾಡಿದ್ದಳು.


colors kannada serial, kannada serial, ramachari serial, charu take poison, ramachari serial kannada cast, ರಾಮಾಚಾರಿ ಧಾರಾವಾಹಿ, ರಾಮಾಚಾರಿಗಾಗಿ ನಿಜವಾಗಿಯೂ ವಿಷ ಕುಡಿದ ಚಾರು, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
ರಾಮಾಚಾರಿ


ವಿಷ ಕುಡಿದ ಚಾರು


ಯಾವಾಗ ರಾಮಾಚಾರಿ ಚಾರುಳನ್ನು ತಿರುಗಿಯೂ ನೋಡಲಿಲ್ವೋ, ಆಗ ಚಾರು ವಿಷ ಕುಡಿದಿದ್ದಾಳೆ. ಎಚ್ಚರ ತಪ್ಪಿ ಬಿದ್ದಿದ್ದಾಳೆ. ಜೊತೆಗಿದ್ದ ಸಾನ್ವಿ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾಳೆ.


ಆಸ್ಪತ್ರೆಯಲ್ಲಿ ಪೊಲೀಸರಿಗೆ ದೂರು ನೀಡಿ ಎನ್ನುತ್ತಿದ್ದಾರೆ. ಅದಕ್ಕೆ ಸಾನ್ವಿ ಭಯಪಟ್ಟು ರಾಮಾಚಾರಿಗೆ ಫೋನ್ ಮಾಡಿದ್ದಾಳೆ. ಆದ್ರೆ ರಾಮಾಚಾರಿ ಫೋನ್ ಪಿಕ್ ಮಾಡಿಲ್ಲ.


colors kannada serial, kannada serial, ramachari serial, charu take poison, ramachari serial kannada cast, ರಾಮಾಚಾರಿ ಧಾರಾವಾಹಿ, ರಾಮಾಚಾರಿಗಾಗಿ ನಿಜವಾಗಿಯೂ ವಿಷ ಕುಡಿದ ಚಾರು, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
ವಿಷ ಕುಡಿದ ಚಾರು


ಇದನ್ನೂ ಓದಿ: Bhagya Lakshmi: ಭಾಗ್ಯಾಳಿಗೆ ದೂರ ಹೋಗುವಂತೆ ಹೇಳಿದ ತಾಂಡವ್, ಬದಲಾದ ಎನ್ನುವಷ್ಟರಲ್ಲಿ ಮತ್ತದೇ ಹಳೇ ಚಾಳಿ! 


ಸಾವು ಬದುಕಿನ ನಡುವೆ ಹೋರಾಟ


ಚಾರು ಆಸ್ಪತ್ರೆಗೆ ಸೇರಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಎಮರ್ಜೆನ್ಸಿ ವಾರ್ಡ್‍ಗೆ ಹಾಕಿದ್ದಾರೆ. ಸಾನ್ವಿಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಈ ವಿಷ್ಯವನ್ನು ಮಾನ್ಯತಾಗೆ ಹೇಳಿದ್ರೆ, ಮಾನ್ಯತಾ ಏನು ಮಾಡ್ತಾಳೋ ಗೊತ್ತಿಲ್ಲ. ರಾಮಾಚಾರಿ ಏನ್ ಮಾಡ್ತಾನೋ ಗೊತ್ತಿಲ್ಲ.ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.

First published: