ಮನೆಯವರಲ್ಲಾ ಚಾರು ಮದುವೆ ಮಾಡಬೇಕು ಎಂಬ ಖುಷಿಯಲ್ಲಿದ್ದಾರೆ. ಚಾರು ಮದುವೆಯಾಗಬೇಕು ಎಂದುಕೊಂಡಿದ್ದ ಫೈವ್ ಸ್ಟಾರ್ ಹೋಟೆಲ್‍ನಲ್ಲಿ ನಿಶ್ಚಿತಾರ್ಥ (Engagement) ಮಾಡ್ತಾ ಇದ್ದಾರೆ. ನಾವ್ ಹೇಳ್ತಿರೋದು ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗ್ತಿರುವ ರಾಮಾಚಾರಿ (Ramachari) ಸೀರಿಯಲ್ ಬಗ್ಗೆ. ಈ ಧಾರಾವಾಹಿ (Serial) ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗ್ತಿದೆ. ಧಾರಾವಾಹಿಯಲ್ಲಿ ಈಗಾಗಲೇ ಚಾರು ಮತ್ತು ರಾಮಾಚಾರಿಗೆ ಗುಟ್ಟಾಗಿ ಮದುವೆಯಾಗಿದೆ. ರಾಮಾಚಾರಿ ಈ ಮದುವೆ (Marriage) ಸಂಬಂಧ ಕಳೆದುಕೊಂಡು ಬಿಡೋಣ ಎನ್ನುತ್ತಿದ್ದಾನೆ. ಅಲ್ಲದೇ ಚಾರು ಮನೆಯಲ್ಲಿ ವಿಕಾಸ್ ಎನ್ನುವ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಲು ರೆಡಿಯಾಗಿದ್ದಾರೆ. ಅದಕ್ಕೆ ಚಾರು ಬೇಸರದಿಂದ ಇದ್ದಾಳೆ.
ಮೂರು ಗಂಟಿನ ನಂಟು ಬೇಡ ಎಂದ ರಾಮಾಚಾರಿ
ಚಾರುಗೆ ಕಣ್ಣು ಕಾಣಲ್ಲ ಎಂದು ಒತ್ತಡಕ್ಕೆ ಸಿಲುಕಿ ರಾಮಾಚಾರಿ ತಾಳಿ ಕಟ್ಟಿರುತ್ತಾನೆ. ಆದ್ರೆ ಈಗ ಚಾರುಗೆ ಕಣ್ಣು ಕಾಣ್ತಾ ಇದೆ. ಅಲ್ಲದೇ ರಾಮಾಚಾರಿ ಮನೆಯರಿಗೆ ಚಾರುನ ಕಂಡ್ರೆ ಆಗಲ್ಲ. ಅದಕ್ಕೆ ಮನೆಯವರಿಗಾಗಿ ಚಾರುಳನ್ನು ಬಿಡಲು ತಯಾರಾಗಿದ್ದಾನೆ. ಈ ಮೂರು ಗಂಟಿನ ನಂಟು ಕಳೆದುಕೊಳ್ಳೋಣ ಎಂದು ಹೇಳಿದ್ದಾನೆ. ಅದಕ್ಕೆ ಚಾರು ತುಂಬಾ ಬೇಸರವಾಗಿದ್ದಾಳೆ.
ಚಾರು ನಿಶ್ಚಿತಾರ್ಥಕ್ಕೆ ತಯಾರಿ
ಮಾನ್ಯತಾ ಚಾರುಗಾಗಿ ಗಂಡು ಹುಡುಕಿದ್ದಾಳೆ. ವಿಕಾಸ್ ಎನ್ನುವ ಹುಡುಗನ ಜೊತೆ ಮದುವೆ ಮಾಡಬೇಕು ಎಂದುಕೊಂಡಿದ್ದಾಳೆ. ವಿಕಾಸ್ ದೊಡ್ಡ ಶ್ರೀಮಂತ ಹುಡುಗ. ಈಗ ವಿಕಾಸ್ ಜೊತೆ ನಿಶ್ಚಿತಾರ್ಥ ಮಾಡಬೇಕು ಎಂದುಕೊಂಡಿದ್ದಾರೆ.ಮನೆಯವರು ಚಾರು ಮದುವೆ ಮಾಡಬೇಕು ಎಂಬ ಖುಷಿಯಲ್ಲಿದ್ದಾರೆ. ಚಾರು ಮದುವೆಯಾಗಬೇಕು ಎಂದುಕೊಂಡಿದ್ದ ಫೈವ್ ಸ್ಟಾರ್ ಹೋಟೆಲ್‍ನಲ್ಲಿ ನಿಶ್ಚಿತಾರ್ಥ ಮಾಡ್ತಾ ಇದ್ದಾರೆ.
ನಿನ್ನ ಖುಷಿಯೇ ನನ್ನ ಸಂಭ್ರಮ
ನೀನು ಮದುವೆಗೆ ಇಷ್ಟಪಟ್ಟ ಜಾಗವನ್ನು ಮದುವೆಗೆ ಬುಕ್ ಮಾಡಿದ್ದೇನೆ. ಇನ್ನು ನಿನ್ನ ಮದುವೆ ಯಾವ ಲೆವೆಲ್ ಗೆ ಇರುತ್ತೆ ಅಂತ ಯೋಚ್ನೆ ಮಾಡು. ನಾನು, ವಿಕಾಸ್ ಮತ್ತು ನೀನು ರಿಂಗ್ ಎಕ್ಸ್‍ಚೇಂಜ್ ಮಾಡುವುದನ್ನು ನೋಡಲು ಕಾಯ್ತಾ ಇದ್ದೇನೆ. ಒಬ್ಬ ತಂದೆಗೆ ಮಗಳ ಮದುವೆ, ಅವಳ ಖುಷಿ ಅಂದ್ರೆನೇ ದೊಡ್ಡ ಸಂಭ್ರಮ. ನಿನ್ನ ಎಲ್ಲಾ ಖುಷಿಗಳನ್ನು ನೋಡಬೇಕು ಎಂದು ಚಾರು ಅಪ್ಪ ಹೇಳಿದ್ದಾರೆ.
ನನ್ನ ಖುಷಿ ರಾಮಾಚಾರಿ
ನನ್ನ ಜೀವನದಲ್ಲಿ ಖುಷಿ ಯಾವತ್ತೂ ಇರಲು ಸಾಧ್ಯವಿಲ್ಲ ಡ್ಯಾಡಿ. ನನಗೆ ರಾಮಾಚಾರಿ ಬೇಕು. ನನಗೆ ನನ್ನ ಗಂಡ ರಾಮಾಚಾರಿ ಬೇಕು. ಅವರನ್ನು ತಂದು ಕೋಡೋಕೆ ಆಗುತ್ತಾ ಡ್ಯಾಡ್. ಅವನನ್ನು ಒಪ್ಪಿಸಿಕೊಂಡು ಕರೆದುಕೊಂಡು ಬರುತ್ತೀರಾ ಎಂದು ಚಾರು ಮನಸ್ಸಿನಲ್ಲೇ ಕೇಳಿಕೊಂಡಿದ್ದಾಳೆ. ಆದ್ರೆ ಮನೆಯವರೆಲ್ಲಾ ಚಾರು-ವಿಕಾಸ್ ಮದುವೆ ಮಾಡಬೇಕು ಎಂದು ಕಾಯ್ತಾ ಇದ್ದಾರೆ.
ಕೈ ಮಗಿದು ಬೇಡಿದ ಚಾರು
ಇದು ನೋವಲ್ಲಿ ಬರ್ತಾ ಇರೋ ಕಣ್ಣೀರು. ನಾನು ನಿಜವಾಗ್ಲೂ ಅಳ್ತಾ ಇದೀನಿ. ನನಗೆ ನಿಜವಾಗ್ಲೂ ನೋವಾಗ್ತಾ ಇದೆ. ನನಗೆ ಈ ಕಾರ್ಯಕ್ರಮ ನೋಡ್ತಾ ಇದ್ರೆ, ಸಂಕಟ ಆಗ್ತಾ ಇದೆ. ಯಾಕ್ ಎಲ್ಲ ಸೇರಿ ನನಗೆ ಹಿಂಸೆ ಮಾಡ್ತಾ ಇದೀರಾ? ದಯವಿಟ್ಟು ನನ್ನ ನನ್ ಪಾಡಿಗೆ ಬಿಟ್ಟು ಬಿಡಿ ಎಂದು ಚಾರು ಮನೆಯವರ ಮುಂದೆ ಕೈ ಮುಗಿದು ಬೇಡಿಕೊಳ್ತಾ ಇದ್ದಾಳೆ.
ಇದನ್ನೂ ಓದಿ: Ramachari: ಪತ್ನಿಯ ಮದುವೆ ಮುಹೂರ್ತವಿಡಲು ಹೊರಟ ರಾಮಾಚಾರಿ, ಆತಂಕದಲ್ಲಿ ಚಾರು!
ಚಾರು ನಿಶ್ಚಿತಾರ್ಥ ವಿಕಾಸ್ ಜೊತೆ ಆಗುತ್ತಾ? ರಾಮಾಚಾರಿ ಚಾರುಳನ್ನು ಒಪ್ಪಿಕೊಳ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ