ಕಲರ್ಸ್ ಕನ್ನಡಲ್ಲಿ (Colors Kannada) ರಾತ್ರಿ 9 ಗಂಟೆಗೆ ರಾಮಾಚಾರಿ (Ramachari) ಧಾರಾವಾಹಿ (Serial) ಪ್ರಸಾರವಾಗ್ತಿದೆ. ಧಾರಾವಾಹಿಯಲ್ಲಿ ಚಾರುಗೆ ಕಣ್ಣು ಕಾಣಲ್ಲ ಎಂದು ಒತ್ತಡಕ್ಕೆ ಸಿಲುಕಿ ರಾಮಾಚಾರಿ ತಾಳಿ ಕಟ್ಟಿರುತ್ತಾನೆ. ಆದ್ರೆ ಈಗ ಚಾರುಗೆ ಕಣ್ಣು ಕಾಣ್ತಾ ಇದೆ. ಅಲ್ಲದೇ ರಾಮಾಚಾರಿ ಮನೆಯರಿಗೆ ಚಾರುನ ಕಂಡ್ರೆ ಆಗಲ್ಲ. ಅದಕ್ಕೆ ಮನೆಯವರಿಗಾಗಿ ಚಾರುಳನ್ನು ಬಿಡಲು ತಯಾರಾಗಿದ್ದಾನೆ. ನಿನ್ನ ಹೆಂಡ್ತಿ ಇನ್ಮೇಲೆ ನಿನಗೆ ಭಾರವಾಗಿ ಕಾಡಲ್ಲ. ನಿನ್ನ ಭಾರ ಎಲ್ಲಾ ಕಳಚಿ ಈ ಭೂಮಿ ಬಿಟ್ಟು ಹೋಗಲು ಎಲ್ಲಾ ತಯಾರಿ ನಡೆದಿದೆ. ತಾಳಿ ಬಿಚ್ಚೋಕೆ ಆಗಲ್ಲ. ಆದ್ರೆ ಪ್ರಾಣ ಬಿಡಬಹುದು. ಅದಕ್ಕೆ ಪ್ರಾಣ ಬಿಡ್ತಾ ಇದೀನಿ. ಮುಂದಿನ ಜನ್ಮ ಅಂತ ಇದ್ರೆ, ನನ್ನ ಹಣೆಯಲ್ಲಿ ನಿನ್ನ ಹೆಸರು ಬರೆಸಿಕೊಂಡು ಬರ್ತೇನೆ. ನಿನ್ನ ಕೈನಲ್ಲೇ ತಾಳಿ ಕಟ್ಟಿಸಿಕೊಳ್ತೇನೆ. ಆಗ ನಿನ್ನ ಜೊತೆ ನಾನು ಜೀವನ ನಡೆಸುತ್ತೇನೆ ಎಂದು ಚಾರು ಹೇಳಿ ವಿಷ ಕುಡಿಯುವ ನಾಟಕ (Drama) ಮಾಡಿದ್ದಾಳೆ.
ವಿಷ ಕುಡಿಯುವ ನಾಟಕ
ಭಾವನೆ ಜೊತೆ ಆಟವಾಡಬೇಡಿಏನ್ರಿ ಚಾರು ಮೇಡಂ, ಏನ್ ಅಂತ ತಿಳ್ಕೊಂಡಿದೀರಿ ನೀವು? ನಿಮ್ಮ ಕುತ್ತಿಗೆಗೆ ಮೂರು ಗಂಟು ಹಾಕಿದೀನು ಅಂದ್ರೆ, ನೀವು ಹೇಳಿದ ಹಾಗೇ ಕೇಳ್ತೀನಿ ಅಂದುಕೊಂಡ್ರಾ? ಬದುಕಿನ ಜೊತೆ ಆಟವಾಡ್ತಾ ಇದೀರಾ ಎಂದು ರಾಮಾಚಾರ ಕೇಳ್ತನೆ. ಅದಕ್ಕೆ ಚಾರು ಕೋಪ ಮಾಡಿಕೊಂಡು, ಆಟವಾಡ್ತಿರೋದು ನೀನು. ಆಗಿರೋ ಮದುವೆಯನ್ನು ಆಗಿಲ್ಲ ಅನ್ಕೊಳ್ಳಿ. ಕಟ್ಟಿಲ್ಲ ತಾಳಿಯನ್ನು ಕಟ್ಟಿಲ್ಲ ಅನ್ಕೊಳ್ಳಿ ಎಂದು ಒಂದು ಹೆಣ್ಣಿನ ಭಾವನೆ ಜೊತೆ ಆಟವಾಡ್ತಿರೋದು ನೀವು ಎಂದು ಚಾರು ಹೇಳ್ತಾ ಇದ್ದಾನೆ.
ನಿನಗ ಕ್ಲಾರಿಟಿ ಕೋಡೋಕೆ ನಾಟಕ ಮಾಡ್ದೆ
ವಿಷ ತೆಗೆದುಕೊಳ್ಳುವ ನಾಟಕವಿಷ ತೆಗೆದುಕೊಳ್ಳುವ ನಾಟಕವನ್ನು ಏಕೆ ಮಾಡಿದ್ರಿ ಎಂದು ಕೇಳ್ತಾನೆ. ಅದಕ್ಕೆ ಚಾರು ಸಂಸಾರದ ಅರ್ಥ ತಿಳಿಸೋಕೆ, ತಾಳಿ ಗಟ್ಟಿತನ ತೋರಿಸೋಕೆ. ಈ ಜನ್ಮಕ್ಕೆ ನೀನೇ ನನ್ನ ಗಂಡ ಎಂದು ನಾನು ಕ್ಲಿಯರ್ ಆಗಿದೀನಿ. ಆದ್ರೆ ಆ ಕ್ಲಾರಿಟಿ ಇಲ್ಲದೇ ಇರೋ ತರ ನಾಟಕ ಮಾಡ್ತೀರೋ ನಿನಗ ಕ್ಲಾರಿಟಿ ಕೋಡೋಕೆ ನಾಟಕ ಮಾಡ್ದೆ ಎಂದು ಚಾರು ಹೇಳಿದ್ದಾಳೆ.
ನಿನಗೆ ನನ್ನ ಮೇಲೆ ಪ್ರೀತಿ ಇದೆ
ನೀನು ಎಷ್ಟೇ ತಿರಸ್ಕಾರ ಮಾಡಿದ್ರೂ ನಾನು ನಿನ್ನ ಹಿಂದೆ ಬಂದೆ. ನೀನು ಆಫೀಸ್‍ನಲ್ಲಿ ಬೈದೆ. ಅವಮಾನ ಮಾಡಿದೆ. ನನ್ನ, ನಿನ್ನ ಮನಸ್ಸಿನಿಂದ ಕಿತ್ತಾಕಿದ್ದೀನಿ ಎಂದು ಹೇಳಿದೆ. ಆ ರೀತಿ ಕಿತ್ತು ಬೀಸಾಕಿದ ಮೇಲೆ ನನ್ನ ಕಾಪಾಡೋಕೆ ಬಂದೆ? ನೀನು ನನ್ನ ಮೇಲಿರುವ ಪ್ರೀತಿಗೆ, ನನ್ನ ಹೆಂಡ್ತಿ ಸತ್ತು ಹೋಗ್ತಾಳೆ ಎಂದು ಓಡೋಡಿ ಬಂದು ಕಾಪಾಡಿದೆ. ಇದನ್ನೇ ಕಣೋ ಸಂಸಾರ ಎನ್ನುವುದು ಎಂದು ಚಾರು ಹೇಳಿದ್ದಾಳೆ.
ರಾಮಾಚಾರಿಗೆ ಪ್ರೀತಿ ಪಾಠ
ಮಾತಲ್ಲಿ ಕೊಲ್ಲುವಷ್ಟು ಕೋಪ ಇದ್ರೂ, ಮನಸ್ಸಲ್ಲಿ ಬೆಟದಷ್ಟು ಪ್ರೀತಿ ಇರುತ್ತೆ. ಸಂಗಾತಿ ಸಂಕಟದಲ್ಲಿ ಇದಾಳೆ ಅಂತ ಅವಳನ್ನು ಕಾಪಾಡೋಕೆ ಬಂದೆ. ನಿನ್ನ ಮನಸ್ಸಿನಲ್ಲಿ ನನಗೆ ಜಾಗ ಇಲ್ಲದೇನೆ, ನಾನು ಸಾಯ್ತೀನಿ ಎಂದು ನಿನ್ನ ಮನಸ್ಸು ಅಷ್ಟು ಒದ್ದಾಡ್ತಾ? ಆ ಒದ್ದಾಟಕ್ಕೆ ಹೆಸರೇ ಪ್ರೀತಿ ಎಂದು ರಾಮಾಚಾರಿಗೆ ಪ್ರೀತಿ ಪಾಠ ಹೇಳಿದ್ದಾಳೆ ಚಾರು.
ಚಾರು ಮೇಲೆ ಪ್ರೀತಿ ಹುಟ್ಟುತ್ತಾ?
ಅದು ಪ್ರೀತಿ ಅಲ್ಲ ಮೇಡಂ ಕರುಣೆ. ಇಷ್ಟು ಸಣ್ಣ ವಿಷಯಕ್ಕೆ ಒಂದು ಜೀವ ಹೋಗಬಾರದು ಎಂದು ಸಹಾಯ ಮಾಡಲು ಬಂದೆ ಎಂದು ರಾಮಾಚಾರಿ ಹೇಳಿದ್ದಾನೆ. ನೀವು ವಿಡಿಯೋ ಕಳಿಸಿದ್ರಿ, ಅದಕ್ಕೆ ನಾನು ಬಂದೆ. ನೀವು ನನ್ನ ಭಾವನೆ ಜೊತೆ ಆಟವಾಡಿದ್ರಿ ಎಂದು ರಾಮಾಚಾರಿ ಹೇಳಿದ್ದಾನೆ. ಚಾರು ಮಾತಿನಿಂದ ರಾಮಾಚಾರಿಗೆ ಚಾರು ಮೇಲೆ ಪ್ರೀತಿ ಹುಟ್ಟುತ್ತಾ ನೋಡಬೇಕು.
ಇದನ್ನೂ ಓದಿ: Lakshana: ಮದುವೆ ನಿಲ್ಲಿಸುವಂತೆ ಮೌರ್ಯನಿಗೆ ಸವಾಲು ಹಾಕಿದ ಶ್ವೇತಾ, ತನ್ನ ಆಟ ತೋರಿಸುತ್ತಾನಾ ಭೂಪತಿ ತಮ್ಮ!
ಚಾರು ಮೇಲೆ ಪ್ರೀತಿ ಹುಟ್ಟುತ್ತಾ? ರಾಮಾಚಾರಿ ಬದಲಾಗ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ