Ramachari Serial: ಎಲ್ಲರ ಬದುಕು ಸರಿ ಮಾಡೋ ರಾಮಾಚಾರಿ ಮನೆ ಒಡೆದು ಹೋಗುತ್ತಾ? ರಾಮನಿಂದ ದೂರ ಆಗ್ತಾನಾ ಕೋದಂಡ?

ಧಾರಾವಾಹಿಯಲ್ಲಿ ರಾಮಾಚಾರಿ ಅಣ್ಣ ಭಾರೀ ಬೇಸರದಲ್ಲಿದ್ದಾರೆ. ನಾನು ಅಣ್ಣನಾದ್ರೂ ನನಗೆ ಈ ಮನೆಯಲ್ಲಿ ಗೌರವ ಸಿಕ್ತಿಲ್ಲ. ಚಿಕ್ಕವನದ್ರೂ ರಾಮಾಚಾರಿಗೆ ಹೆಚ್ಚಿನ ಗೌರವ. ತಾನು ಈ ಮನೆಯಲ್ಲಿ ಇರುವುದಿಲ್ಲ. ಮನೆ ಬಿಟ್ಟು ಹೋಗುತ್ತೇನೆ ಎಂದು ತನ್ನ ಅಪ್ಪನ ಮುಂದೆ ಹೇಳಿಕೊಂಡಿದ್ದಾನೆ.

ರಾಮಾಚಾರಿ

ರಾಮಾಚಾರಿ

 • Share this:
  ರಾಮಾಚಾರಿ (Rama Chari) ಕಲರ್ಸ್ ಕನ್ನಡ (Colors Kannada)ದಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ರಾಮಾಚಾರಿ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಎಷ್ಟೋ ಜನ ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕøತ ಹುಡುಗನಾಗಿರವ ರಾಮಾಚಾರಿ, ದುರಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದಕ್ಕೆ ಒಂದು ಚೆಂದ. ಎಲ್ಲರ ಬದುಕು ಸರಿ ಮಾಡ್ತಿದ್ದ ರಾಮಾಚಾರಿ ಮನೆ ಒಡೆದು ಹೋಗುವ ಸ್ಥಿತಿ ಬಂದಿದೆ. ರಾಮಾಚಾರಿ ಅಣ್ಣ ಕೋದಂಡ ಮನೆಯಿಂದ ದೂರವಾಗುವ ಮಾತುಗಳನ್ನಾಡುತ್ತಿದ್ದಾನೆ. ನನಗೆ ಈ ಮನೆಯಲ್ಲಿ ಗೌರವ ಸಿಕ್ತಿಲ್ಲ. ಅದಕ್ಕೆ ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದಾನೆ. ಅದಕ್ಕೆ ಅಪರ್ಣ ಸಹ ಸಾಥ್ ನೀಡುತ್ತಿದ್ದು, ರಾಮಾಚಾರಿ ತಂದೆ ನಾರಾಯಣಾಚಾರ್ಯರ್ ಮನಸ್ಸು ಒಡೆದು ಹೋಗಿದೆ.

  ರಾಮಾಚಾರಿ ಅಣ್ಣನಿಗೆ ಬೇಸರವ್ಯಾಕೆ?
  ಧಾರಾವಾಹಿಯಲ್ಲಿ ರಾಮಾಚಾರಿ ಅಣ್ಣ ಭಾರೀ ಬೇಸರದಲ್ಲಿದ್ದಾರೆ. ನಾನು ಅಣ್ಣನಾದ್ರೂ ನನಗೆ ಈ ಮನೆಯಲ್ಲಿ ಗೌರವ ಸಿಕ್ತಿಲ್ಲ. ಚಿಕ್ಕವನದ್ರೂ ರಾಮಾಚಾರಿಗೆ ಹೆಚ್ಚಿನ ಗೌರವ. ತಾನು ಈ ಮನೆಯಲ್ಲಿ ಇರುವುದಿಲ್ಲ. ಮನೆ ಬಿಟ್ಟು ಹೋಗುತ್ತೇನೆ ಎಂದು ತನ್ನ ಅಪ್ಪನ ಮುಂದೆ ಹೇಳಿಕೊಂಡಿದ್ದಾನೆ.

  ಕೋದಂಡನ ಹೆಂಡ್ತಿ ಅಪರ್ಣ ಏನಂದ್ಲು?
  ಇನ್ನು ಕೋದಂಡ ಹೇಗೆ ಮಾತನಾಡುತ್ತಾನೆ ನೋಡು ಎಂದು ಸೊಸೆ ಅಪರ್ಣಗೆ ಹೇಳಿದ್ದಕ್ಕೆ, ಅವರು ಮಾತನಾಡುವುದರಲ್ಲಿ ತಪ್ಪೇನು?, ಹಕ್ಕಿ ಇಡೋ ಮೊಟ್ಟೆ ಒಡೆದರೆ ತಾನೆ ಮರಿ ಬರಲು ಸಾಧ್ಯ? ಮೊಟ್ಟೆ ಒಡೆಯದಿದ್ದರೆ, ಜೀವ ಸಾಯಲ್ವಾ ಎಂದು ಕೇಳಿದ್ದಾಳೆ. ಸೊನ್ನೆ ಒಂದಾಗಬೇಕು ಮಾವ. ಅವರು ಮುಂದು ಬರಲು ಮನೆ ಅವಕಾಶ ಕೊಟ್ಟಿಲ್ಲ. ನನ್ನ ಗಂಡನ ಏಳಿಗೆಯನ್ನು ನಾನು ಹೇಗೆ ಬೇಡ ಎನ್ನಲ್ಲಿ, ಹುಟ್ಟುತ್ತಾ ಹುಟ್ಟುತ್ತಾ ಅಣ್ಣ ತಮ್ಮಂದಿರು, ಬೆಳೆಯುತ್ತಾ, ಬೆಳೆಯುತ್ತಾ ದಾಯಾದಿಗಳು, ಗಂಡು ಮನೆ ಬಿಟ್ಟು ಹೋದ್ರೆ ಅನ್ಯಾಯನಾ ಎಂದು ಕೇಳಿದ್ದಾಳೆ.

  ಕೂಡಿ ಬಾಳಿದ ಮನೆ ಭಾಗ ಆಗುತ್ತಿರುವುದಕ್ಕೆ ಬೇಸರ
  ಇನ್ನು ಅಪ್ಪ ನಾರಾಯಣಾಚಾರ್ಯರು ಮನೆ ಒಡೆಯುತ್ತಿರುವುದಕ್ಕೆ ಬೇಸರ ಮಾಡಿಕೊಂಡಿದ್ದಾರೆ. ನಾವು ಕೂಡಿದ ಕುಟುಂಬವನ್ನು ಭಾಗ ಮಾಡೋ ಪರಿಸ್ಥಿತಿ ಬಂತು. ಎಂದು ತನ್ನ ಅಮ್ಮನ ಬಳಿ ಕಣ್ಣೀರು ಹಾಕಿದ್ದಾರೆ.

  ಇದನ್ನೂ ಓದಿ: Raja Rani: ವಂಶಿಕಾ ಜೊತೆ ರಾ ರಾ ರಕ್ಕಮ್ಮ ಹಾಡಿಗೆ ಸಖತ್ ಸ್ಟೆಪ್ಸ್​ ಹಾಕಿದ ಅದಿತಿ ಪ್ರಭುದೇವ

  ಎಲ್ಲರ ಬದುಕು ಸರಿ ಮಾಡೋ ರಾಮಾಚಾರಿ ಮನೆಯಲ್ಲಿ ಬಿರುಗಾಳಿ
  ರಾಮಾಚಾರಿ, ಚಾರುಲತಾಳ ಸೊಕ್ಕು ಮುರಿಯುವ ಪ್ರಯತ್ನದಲ್ಲಿ, ಅವಳ ಬದುಕು ಸರಿ ಮಾಡಲು ಪ್ರಯತ್ನ ಮಾಡುತ್ತಿದ್ದಾನೆ. ಆದ್ರೆ ಇಲ್ಲಿ ತನ್ನ ಮನೆಯೇ ಹೊತ್ತುಕೊಂಡು ಉರಿಯುತ್ತಿದೆ. ಇನ್ನು ತನ್ನ ಅಣ್ಣ ಈ ರೀತಿ ಮಾತನಾಡಿರುವುದ ಗೊತ್ತಿಲ್ಲ. ಗೊತ್ತಾದ್ರೆ ಏನು ಮಾಡ್ತಾನೋ ಗೊತ್ತಿಲ್ಲ. ತನ್ನ ಅಣ್ಣನನ್ನು ಸಮಾಧಾನ ಮಾಡಿ ಮನೆಯಲ್ಲೇ ಇರಿಸಿಕೊಳ್ತಾನಾ ನೋಡುದಕ್ಕೆ ಸಂಚಿಕೆಗಳನ್ನು ನೋಡಬೇಕು.

  ಅಷ್ಟಕ್ಕೂ ಕೋದಂಡ ದೂರವಾಗಲು ಅಪರ್ಣ ಕಾಯಿಲೆ ಕಾರಣ
  ಹೌದು ಅಪರ್ಣ ಬೇಕು ಅಂತ ತನ್ನ ಗಂಡನನ್ನು ಕರೆದಕೊಂಡ ಮನೆ ಬಿಟ್ಟು ಹೋಗತ್ತಿಲ್ಲ. ಅಪರ್ಣ ಕ್ಯಾನ್ಸರ್‍ನಿಂದ ಬಳಲುತ್ತಿದ್ದಾಳೆ. ಆ ಕಾಯಿಲೆ ಬಗ್ಗೆ ಮನೆಯಲ್ಲಿ ಗೊತ್ತಿಲ್ಲ. ಗೊತ್ತಾದ್ರೆ ಲಕ್ಷ ಲಕ್ಷ ಖರ್ಚು ಮಾಡುತ್ತಾರೆ ಎಂದುಕೊಂಡು, ಇರೋವರೆಗೂ ಗಂಡನ ಮನೆಗೆ ಕಷ್ಟ ಕೊಡಬಾರದು ಎಂದು ಈ ರೀತಿಯ ನಿರ್ಧಾರ ಮಾಡಿದ್ದಾಳೆ.

  ಇದನ್ನೂ ಓದಿ: Bigg Boss OTT: ಮೊದಲ ದಿನವೇ ಕಷ್ಟದ ಕಥೆ ಹೇಳಿಕೊಂಡು ಕಣ್ಣೀರಿಟ್ಟ ಸ್ಪರ್ಧಿಗಳು, ಫುಲ್ ಎಮೋಷನಲ್​ ಎಪಿಸೋಡ್ 

  ಈಗ ರಾಮಾಚಾರಿ ಹೇಗೆ ತನ್ನ ಕುಟುಂಬದ ಸಮಸ್ಯೆ ಬಗೆಹರಿಸುತ್ತಾನೆ. ತನ್ನ ಅತ್ತಿಗೆಯ ಕಾಯಿಲೆ ಬಗ್ಗೆ ತಿಳಿದುಕೊಳ್ಳುತ್ತಾನಾ, ಏನಾಗುತ್ತೆ ಅಂತ ಅಭಿಮಾನಿಗಳು ಕಾಯ್ತಾ ಇದ್ದಾರೆ. ಅಣ್ಣ ಕೋದಂಡನಿಗೆ ಬುದ್ಧಿ ಹೇಳ್ತಾನಾ, ತಮ್ಮನ ಮಾತು ಕೋದಂಡ ಕೇಳ್ತಾನಾ, ಮುಂದೆನಾಗುತ್ತೆ ಏನ್ನೋ ರೋಚಕ ತಿರುವುಗಳಿಗೆ ರಾಮಾಚಾರಿ ಧಾರಾವಾಹಿ ನೋಡಬೇಕು.
  Published by:Savitha Savitha
  First published: