Ramachari: ರಾಮಾಚಾರಿ ಹಾಕಿದ ಮೂರನೇ ಸವಾಲಿಗೆ ತಬ್ಬಿಬ್ಬಾದ ಚಾರು! CEO ಪಟ್ಟಕ್ಕಾಗಿ ಈ ಕೆಲಸ ಮಾಡ್ತಾಳಾ?

ಚಾರುಗೆ ರಾಮಾಚಾರಿ ಮೂರನೇ ಟಾಸ್ಕ್ ನೀಡಿದ್ದಾನೆ. ಭ್ರಷ್ಟ ಮಂತ್ರಿಯೊಬ್ಬರಿಗೆ ನಿಮ್ಮ ಮನೆಯವರು ಬೆಂಬಲ ನೀಡುತ್ತಿದ್ದಾರೆ. ಎಲ್ಲ ಕುತಂತ್ರ ಮಾಡುತ್ತಿರುವುದು ನಿಮ್ಮ ಅಮ್ಮ. ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದು ನಿಮ್ಮ ಚಿಕ್ಕಮ್ಮ. ಎಲ್ಲವನ್ನೂ ಸರಿ ಮಾಡು. ಭ್ರಷ್ಟರಿಗೆ ಶಿಕ್ಷೆಯಾಗಬೇಕು. ನಿಮ್ಮ ಚಿಕ್ಕಮ್ಮ ನಿಮ್ಮ ಮನೆಯಲ್ಲೇ ಉಳಿಬೇಕು ಎಂದು ಟಾಸ್ಕ್ ನೀಡಿದ್ದಾನೆ.

ರಾಮಾಚಾರಿ

ರಾಮಾಚಾರಿ

  • Share this:
    ರಾಮಾಚಾರಿ (Ramachari), ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ರಾಮಾಚಾರಿ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಎಷ್ಟೋ ಜನ ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕøತ ಹುಡುಗನಾಗಿರವ ರಾಮಾಚಾರಿ, ದುರಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದಕ್ಕೆ ಒಂದು ಚೆಂದ. ತನ್ನ ಅಪ್ಪನ ಕಂಪನಿಗೆ ಸಿಇಓ ಆಗಬೇಕು ಎಂದುಕೊಂಡಿರುವ ಚಾರು, ಸದ್ಯ ರಾಮಾಚಾರಿಯ ಕೆಳಗೆ ಬೇರೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಳೆ. ಸಿಇಓ (CEO) ಮಾಡಲು ಅಪ್ಪ ಕೇಳಿದ ಸರ್ಟಿಫಿಕೇಟ್ (Certificate) ಪಡೆಯಲು ರಾಮಾಚಾರಿ ಹೇಳಿದಂತೆ ಕೇಳುತ್ತಿದ್ದಾಳೆ. ಈಗಾಗಲೇ 2 ಟಾಸ್ಕ್ ಮಾಡಿರುವ ಚಾರುಗೆ, ರಾಮಾಚಾರಿ ಮೂರನೇ ಟಾಸ್ಕ್ ನೀಡುತ್ತಿದ್ದಾನೆ. ರಾಮಾಚಾರಿ ಹೇಳಿದ ಮೂರನೇ ಟಾಸ್ಕ್ (Task)ಕೇಳಿ ಚಾರು, ಶಾಕ್ ಆಗಿದ್ದಾಳೆ. ಆ ಟಾಸ್ಕ್ ಆಕೆಯ ಮನೆಗೆ ಸಂಬಂಧಿಸಿದ್ದೇ ಆಗಿದೆ.

    ಮೊದಲನೇ ಟಾಸ್ಕ್ ಏನು?
    ಅಪ್ಪನ ಕಂಪನಿ ಅಧಿಕಾರ ವಹಿಸಿಕೊಳ್ಳಲು ಚಾರುಗೆ ಸರ್ಟಿಫಿಕೇಟ್ ಬೇಕೇ ಬೇಕು. ಆದ ಕಾರಣ ಚಾರು ರಾಮಾಚಾರಿ ಹೇಳಿದಂತೆ ಕೇಳಲೇ ಬೇಕಾದ ಅನಿವಾರ್ಯದಲ್ಲಿ ಇದ್ದಾಳೆ. ರಾಮಾಚಾರಿ ಮೊದಲೇ ಟಾಸ್ಕ್ ದೇವಸ್ಥಾನದ ಬಳಿ ಶೂ ಪಾಲೀಶ್ ಮಾಡುವುದನ್ನು ನೀಡಿದ್ದ. ಒಮ್ಮೆ ಚಾರುಲತಾ ಶೂ ಪಾಲೀಶ್ ಮಾಡಿಸಿಕೊಂಡು, ಅವರಿಗೆ ಅವಮಾನ ಮಾಡಿದ್ದಳು. ಅದಕ್ಕೆ ಆ ಟಾಸ್ಕ್ ನೀಡಿದ್ದ. ಚಾರು ಕಚೇರಿ ಬಿಟ್ಟು ಹೊರಗೆ ಮಾಡಿದ ತಪ್ಪು ಕೆಲಸ ಸರಿ ಮಾಡ್ತಿದ್ದ ರಾಮಾಚಾರಿ.

    ಚಾರುಗೆ ಕೊಟ್ಟ ಎರಡನೇ ಟಾಸ್ಕ್ ಏನು?
    ಮೊದಲನೇದು ಶೂ ಪಾಲೀಶ್ ಮಾಡೋ ಟಾಸ್ಕ್ ಆದ್ರೆ, ಎರಡನೆಯದ್ದು, ಮಗುವೊಂದನ್ನು ಸಮಾಧಾನ ಮಾಡುವುದು. ಚಾರು ಕೆಲ ದಿನಗಳ ಹಿಂದೆ ತನ್ನ ಸ್ನೇಹಿತೆ ಜೊತೆ ನೇಚರ್‍ನಲ್ಲಿ ಡ್ರಿಂಕ್ಸ್ ಮಾಡಬೇಕೆಂದು ಬಂದಿರುತ್ತಾಳೆ. ಕಾರಿನಲ್ಲಿ ಜೋರಾಗಿ ಹಾಡು ಹಾಕಿ, ಕುಣಿಯುತ್ತಾ ಕುಡಿಯುತ್ತಾ ಇರುತ್ತಾಳೆ. ಆ ಸೌಂಡ್‍ಗೆ, ಅಲ್ಲೇ ಹತ್ತಿರದಲ್ಲಿ ಗುಡಿಸಲ ಪಕ್ಕದಲ್ಲಿ ಮರಕ್ಕೆ ಹಾಕಿದ್ದ ಜೋಲಿಯಲ್ಲಿನ ಮಗು ಜೋರಾಗಿ ಅಳಲು ಶುರು ಮಾಡುತ್ತೆ.

    ಇದನ್ನೂ ಓದಿ: Paaru: ಅಖಿಲಾಂಡೇಶ್ವರಿ ಬಳಿ ರಾಖಿ ಕಟ್ಟಿಸಿಕೊಳ್ಳಲು ಬಂದ ವೀರಣ್ಣ; ಅರಸನಕೋಟೆಯಲ್ಲಿ ಸಂಭ್ರಮವೋ, ಸಂಭ್ರಮ

    ಆಗ ಮಗುವಿನ ತಾಯಿ ಸೌಂಡ್ ಕಡಿಮೆ ಮಾಡುವಂತೆ ಹೇಳುತ್ತಾಳೆ. ಆದ್ರೆ ಚಾರು ಕೇಳದೇ ನಿನ್ನ ಮಗು ಅಳದಂತೆ ಬಾಯಿ ಮುಚ್ಚು ಎಂದು ತಾಯಿಗೆ ಎಚ್ಚರಿಕೆ ನೀಡುತ್ತಾಳೆ. ಭಯಗೊಂಡ ತಾಯಿ ಮಗುವಿನ ಬಾಯಿ ಮುಚ್ಚುತ್ತಾಳೆ. ಅದಕ್ಕೆ ಆ ಮಗು ಸಾಯೋ ಸ್ಥಿತಿಗೆ ಬಂದು ಆಸ್ಪತ್ರೆ ಸೇರಿರುತ್ತೆ. ಆ ಮಗುವಿಗೆ ಸ್ನಾನ ಮಾಡಿಸಿ, ಸಮಾಧಾನ ಮಾಡೋದು ಎರಡನೇ ಟಾಸ್ಕ್.

    ಮೂರನೇ ಟಾಸ್ಕ್ ಕೇಳಿ ತಬ್ಬಿಬ್ಬಾದ ಚಾರು
    ಚಾರುಗೆ ರಾಮಾಚಾರಿ ಮೂರನೇ ಟಾಸ್ಕ್ ನೀಡಿದ್ದಾನೆ. ಭ್ರಷ್ಟ ಮಂತ್ರಿಯೊಬ್ಬರಿಗೆ ನಿಮ್ಮ ಮನೆಯವರು ಬೆಂಬಲ ನೀಡುತ್ತಿದ್ದಾರೆ. ಎಲ್ಲ ಕುತಂತ್ರ ಮಾಡುತ್ತಿರುವುದು ನಿಮ್ಮ ಅಮ್ಮ. ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದು ನಿಮ್ಮ ಚಿಕ್ಕಮ್ಮ. ಎಲ್ಲವನ್ನೂ ಸರಿ ಮಾಡು. ಭ್ರಷ್ಟರಿಗೆ ಶಿಕ್ಷೆಯಾಗಬೇಕು. ನಿಮ್ಮ ಚಿಕ್ಕಮ್ಮ ನಿಮ್ಮ ಮನೆಯಲ್ಲೇ ಉಳಿಬೇಕು ಎಂದು ಟಾಸ್ಕ್ ನೀಡಿದ್ದಾನೆ.

    ಚಾರು ಅಮ್ಮನ ಕುತಂತ್ರದಿಂದ ಚಿಕ್ಕಮ್ಮನಿಗೆ ಸಂಕಷ್ಟ
    ಚಾರು ತಂದೆಗೆ ಇಬ್ಬರು ಹೆಂಡತಿಯರು. ಮೊದಲನೇ ಹೆಂಡತಿ ಮಗಳೇ ಚಾರುಲತಾ. ಅಪ್ಪನಿಗೆ ಚಿಕ್ಕಮ್ಮನನ್ನು ಕಂಡರೆ ಹೆಚ್ಚು ಪ್ರೀತಿ ಅದಕ್ಕೆ ಎಲ್ಲ ಜವಾಬ್ದಾರಿ ಅವಳಿಗೆ ನೀಡುತ್ತಾನೆ. ಮಂತ್ರಿಯೊಬ್ಬರ ಭ್ರಷ್ಟತನದ ಬಗ್ಗೆ ಮಾಹಿತಿ ಇದ್ದ ಫೈಲ್ ವೊಂದನ್ನು ಪೊಲೀಸ್ ಚಾರು ಅಪ್ಪನ ಬಳಿ ಸುರಕ್ಷಿತೆಯಿಂದ ಇಡಲು ಹೇಳಿರುತ್ತಾನೆ. ಆದ್ರೆ ಚಾರು ಅಮ್ಮನ ಕುತಂತ್ರದಿಂದ ಆ ಫೈಲ್ ಭ್ರಷ್ಟರ ಕೈ ಸೇರಿದೆ. ಅದನ್ನು ಸರಿ ಮಾಡೋ ಜವಾಬ್ದಾರಿ ಈಗ ಚಾರು ಮೇಲಿದೆ.

    ಇದನ್ನೂ ಓದಿ: Actress Ankita: ಸಪ್ತಪದಿ ತುಳಿದ ಕಮಲಿ ಬೆಸ್ಟ್ ಪ್ರೆಂಡ್ ನಿಂಗಿ, ಅಂಕಿತಾ ಮದುವೆಯಾಗಿದ್ದು ಯಾರನ್ನು?

    ಸಿಇಓ ಪಟ್ಟಕ್ಕಾಗಿ ಅಮ್ಮನ ವಿರುದ್ಧವೇ ನಿಲ್ತಾಳಾ ಚಾರು, ಅಥವಾ ಅಧಿಕಾರ ಬೇಡ ಎಂದು ಸುಮ್ಮನಾಗ್ತಾಳಾ? ಎಲ್ಲವನ್ನು ನೋಡಲು ಇವತ್ತಿನ ಸಂಚಿಕೆ ನೋಡಬೇಕು.
    Published by:Savitha Savitha
    First published: