• Home
  • »
  • News
  • »
  • entertainment
  • »
  • Ramachari: ಹನಿ ಹನಿ ನೀರಿಗೂ ಚಾರು ಪರದಾಟ! ಗಂಡನ ಮುಂದೆ ತಪ್ಪೊಪ್ಪಿಕೊಂಡ ಮಾನ್ಯತಾ!

Ramachari: ಹನಿ ಹನಿ ನೀರಿಗೂ ಚಾರು ಪರದಾಟ! ಗಂಡನ ಮುಂದೆ ತಪ್ಪೊಪ್ಪಿಕೊಂಡ ಮಾನ್ಯತಾ!

ಹನಿ ಹನಿ ನೀರಿಗೂ ಚಾರು ಪರದಾಟ

ಹನಿ ಹನಿ ನೀರಿಗೂ ಚಾರು ಪರದಾಟ

ಆ ಕಾಡಿನಲ್ಲಿ ಏನೂ ಸಿಗುವುದಿಲ್ಲ. ನೀರು ಕೂಡ ಸಿಗುತ್ತಿಲ್ಲ. ಚಾರುಗೆ ಕಿರುಚಿ ಕಿರುಚಿ ಗಂಟಲು ಒಣಗಿದೆ. ನೀರು ಬೇಕಾಗಿದೆ. ಆದ್ರೆ ಅಲ್ಲಿ ಹನಿ ನೀರು ಸಿಗ್ತಿಲ್ಲ. ಕಾಡಿನಲ್ಲಿ ಚಾರು ಪರದಾಡುತ್ತಿದ್ದಾಳೆ. ಯಾವಾಗ ಅಲ್ಲಿಂದ ಹೋಗ್ತೀನೋ ಎಂದು ಕಾಯುತ್ತಿದ್ದಾಳೆ.

  • News18 Kannada
  • Last Updated :
  • Karnataka, India
  • Share this:

    ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕೃತ ಹುಡುಗನಾಗಿರುವ ರಾಮಾಚಾರಿ, ದುರಹಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದಕ್ಕೆ ಒಂದು ಚೆಂದ. ರಾಮಾಚಾರಿ ಮನೆಗೆ ದುಡ್ಡಿನ ಅವಶ್ಯಕತೆ ಹೆಚ್ಚಾಗಿದೆ. ತನ್ನ ಅತ್ತಿಗೆಗೆ ಕ್ಯಾನ್ಸರ್ ಇದ್ದು, ಅವರ ಚಿಕಿತ್ಸೆಗೆ ದುಡ್ಡು ಬೇಕಾಗಿದೆ. ಅದಕ್ಕೆ ರಾಮಾಚಾರಿ ಒಂದು ಕಡೆ ಒದ್ದಾಡುತ್ತಿದ್ದಾನೆ. ಇನ್ನೊಂದೆಡೆ ಚಾರು ಅಮ್ಮ ಮಾನ್ಯತಾ, ಶರ್ಮಿಳಾನನ್ನು ಕೊಲ್ಲಲು (Murder) ಸುಪಾರಿ ಕೊಡಲು ಹೋಗಿ ಮಗಳನ್ನೇ ಅಪಾಯದಲ್ಲಿ ಸಿಲುಕಿಸಿದ್ದಾಳೆ. ಅಪಾಯದ ಕಾಡಿನಲ್ಲಿ ಚಾರು ಹನಿ ಹನಿ ನೀರಿಗೂ (Water) ಪರದಾಡುತ್ತಿದ್ದಾಳೆ. ಮಾನ್ಯತಾ ತಾನು ಮಾಡಿದ ತಪ್ಪನ್ನು ಗಂಡನ ಮುಂದೆ ಒಪ್ಪಿಕೊಂಡಿದ್ದಾಳೆ.


    ಮಗಳ ಜೀವಕ್ಕೆ ಕುತ್ತು ತಂದ ಮಾನ್ಯತಾ!


    ಚಾರು ಅಪ್ಪನಿಗೆ ಇಬ್ಬರು ಹೆಂಡತಿಯರು. ಮೊದಲನೇ ಅವಳು ಮಾನ್ಯತಾ, ಎರಡನೇ ಯವಳು ಶರ್ಮಿಳಾ. ಮಾನ್ಯತಾ ಮೋಸ ಮಾಡುವುದೆಲ್ಲಾ ಗೊತ್ತಾಗಿ ಗಂಡ ಜೈಶಂಕರ್, ಶರ್ಮಿಳಾಳನ್ನು ಹೆಚ್ಚು ಪ್ರೀತಿ ಮಾಡ್ತಾನೆ. ಎಲ್ಲಾ ಆಫೀಸ್ ಹಕ್ಕನ್ನು ಅವಳಿಗೆ ಕೊಟ್ಟಿದ್ದಾನೆ.


    ಅದಕ್ಕೆ ಮಾನ್ಯತಾಗೆ ಶರ್ಮಿಳಾ ಕಂಡ್ರೆ ಆಗಲ್ಲ. ಹೇಗಾದ್ರೂ ಅವಳನ್ನು ಕೊಲ್ಲಬೇಕು ಎಂದು ಪ್ಲ್ಯಾನ್ ಮಾಡಿದ್ದಳು. ಆದ್ರೆ ಶರ್ಮಿಳಾನನ್ನು ಕೊಲ್ಲಲು ಸುಪಾರಿ ಕೊಡಲು ಹೋಗಿ ಮಗಳನ್ನೇ ಅಪಾಯದಲ್ಲಿ ಸಿಲುಕಿಸಿದ್ದಾಳೆ. ಶರ್ಮಿಳಾ ಹೋಗಬೇಕಿದ್ದ ಕಾರಿನಲ್ಲಿ ಚಾರು ಹೋಗಿದ್ದಾಳೆ. ತೊಂದ್ರೆಯಲ್ಲಿ ಸಿಲುಕಿದ್ದಾಳೆ.


    ಶರ್ಮಿಳಾ ಸೇಫ್ ಆಗಿ ವಾಪಸ್


    ಮಾನ್ಯತಾ, ಶರ್ಮಿಳಾ ಕಥೆ ಇನ್ನು ಮುಗಿಯಿತು. ಆಕೆ ವಾಪಸ್ ಬರಲ್ಲ ಎಂದುಕೊಂಡು ಖುಷಿಯಲ್ಲಿ ಇರುತ್ತಾಳೆ. ಆದ್ರೆ ಶರ್ಮಿಳಾ ಮನೆಗೆ ವಾಪಸ್ ಆಗ್ತಾಳೆ. ಆಕೆಯನ್ನು ನೋಡಿದ ಮಾನ್ಯತಾ ಹೇಗೆ ಬಂದೆ ಎನ್ನುತ್ತಾಳೆ. ಕ್ಯಾಬ್ ನಲ್ಲಿ ಬಂದಿರುವುದಾಗಿ ಹೇಳ್ತಾಳೆ. ಆಗ ತಾನು ಹೇಳಿದ ಕಾರಿನಲ್ಲಿ ಮಗಳು ಹೋಗಿರುವುದು ಮಾನ್ಯತಾಗೆ ಗೊತ್ತಾಗುತ್ತೆ.


    ಇದನ್ನೂ ಓದಿ: Kendasampige: ತೀರ್ಥಂಕರ್ ನನ್ನನ್ನು ಮದ್ವೆಯಾಗಿದ್ದೇ ವೋಟ್‌ಗಾಗಿ ಅಂತ ಸುಮನಾಗೆ ಗೊತ್ತಾಯ್ತಾ?


    ಸತ್ಯ ಒಪ್ಪಿಕೊಂಡ ಮಾನ್ಯತಾ
    ಮಾನ್ಯತಾ ಮಗಳು ಚಾರು ದಟ್ಟ ಕಾಡಿನಲ್ಲಿ ಸಿಲುಕಿದ್ದಾಳೆ. ಹೇಗಾದ್ರೂ ಆಕೆಯನ್ನು ಕಾಪಾಡಬೇಕಿದೆ. ಅದಕ್ಕೆ ಮಾನ್ಯತಾ, ತನ್ನ ಗಂಡ ಜೈಶಂಕರ್ ಮುಂದೆ ಎಲ್ಲಾ ಸತ್ಯ ಒಪ್ಪಿಕೊಂಡಿದ್ದಾಳೆ. ನಾನು ಶರ್ಮಿಳಾ ಕೊಲ್ಲಲು ಪ್ಲ್ಯಾನ್ ಮಾಡಿದ್ದೆ. ಆದ್ರೆ ಆ ಕಾರಿನಲ್ಲಿ ಚಾರು ಹೋಗಿದ್ದಾಳೆ. ಅವಳ ಪ್ರಾಣ ಉಳಿಸಿ ಕೊಡಿ ಎಂದು ಬೇಡಿಕೊಳ್ಳುತ್ತಿದ್ದಾಳೆ


    colors Kannada serial, Kannada serial, Ramachari serial, Ramachari serial Kannada cast, Charu in forest dangers situation, ರಾಮಾಚಾರಿ ಧಾರಾವಾಹಿ, ಹನಿ ಹನಿ ನೀರಿಗೂ ಚಾರು ಪರದಾಟ, ತಾನು ಮಾಡಿದ ತಪ್ಪನ್ನು ಗಂಡನ ಮುಂದೆ ಒಪ್ಪಿಕೊಂಡ ಮಾನ್ಯತಾ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ಮಾನ್ಯತಾ


    ರಾಮಾಚಾರಿ ಮೇಲೆ ಚಾರು ಕೋಪ
    ತಾನು ಈ ಕಾಡಿನಲ್ಲಿ ಸಿಲುಕಿ ಕೊಳ್ಳಲು ರಾಮಾಚಾರಿಯೇ ಕಾರಣ. ಪ್ರಾಜೆಕ್ಟ್ ಸೋತಿದ್ದಕ್ಕೆ ಈ ರೀತಿ ಮಾಡ್ತಾ ಇದ್ದಾನೆ. ನನ್ನ ಮೇಲೆ ಸೇಡು ತೀರಿಕೊಳ್ತಿದ್ದಾನೆ ಎಂದು ಸಿಟ್ಟು ಮಾಡಿಕೊಂಡಿದ್ದಾಳೆ.


    colors Kannada serial, Kannada serial, Ramachari serial, Ramachari serial Kannada cast, Charu in forest dangers situation, ರಾಮಾಚಾರಿ ಧಾರಾವಾಹಿ, ಹನಿ ಹನಿ ನೀರಿಗೂ ಚಾರು ಪರದಾಟ, ತಾನು ಮಾಡಿದ ತಪ್ಪನ್ನು ಗಂಡನ ಮುಂದೆ ಒಪ್ಪಿಕೊಂಡ ಮಾನ್ಯತಾ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ರಾಮಾಚಾರಿ


    ಹನಿ ಹನಿ ನೀರಿಗೂ ಚಾರು ಪರದಾಟ
    ಆ ಕಾಡಿನಲ್ಲಿ ಏನೂ ಸಿಗುವುದಿಲ್ಲ. ನೀರು ಕೂಡ. ಚಾರುಗೆ ಕಿರುಚಿ ಕಿರುಚಿ ಗಂಟಲು ಒಣಗಿದೆ. ನೀರು ಬೇಕಾಗಿದೆ. ಆದ್ರೆ ಅಲ್ಲಿ ಹನಿ ನೀರು ಸಿಗ್ತಿಲ್ಲ. ಕಾಡಿನಲ್ಲಿ ಚಾರು ಪರದಾಡುತ್ತಿದ್ದಾಳೆ. ಯಾವಾಗ ಅಲ್ಲಿಂದ ಹೋಗ್ತೀನೋ ಎಂದು ಕಾಯುತ್ತಿದ್ದಾಳೆ.


    ಇದನ್ನೂ ಓದಿ: Super Mom: ಜೀ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ, ಶೀಘ್ರದಲ್ಲೇ ಬರಲಿದೆ ಸೂಪರ್ ಮಾಮ್


    ಚಾರು ಅಲ್ಲಿಂದ ವಾಪಸ್ ಬರ್ತಾಳಾ? ಆಕೆಯನ್ನು ಕಾಪಾಡೋದು ಯಾರು? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.

    Published by:Savitha Savitha
    First published: