ಕಲರ್ಸ್ ಕನ್ನಡ (Colors Kannada) ವಾಹಿನಿ ಹೊಸ ಹೊಸ ಪ್ರಯೋಗಗಳ ಮೂಲಕ ಜನರನ್ನು ಸೆಳೆಯುತ್ತಿದೆ. ಪ್ರತಿಯೊಂದು ಕಾರ್ಯಕ್ರಮಗಳು ಅದ್ಭುತವಾಗಿ ಮೂಡಿ ಬರುತ್ತಿವೆ. ಈಗ ಇನ್ನೊಂದು ಹೊಸ ಆವಿಷ್ಕಾರಕ್ಕೆ ಕೈ ಹಾಕಿದ್ದು ಬಿಗ್ ಬಾಸ್ (Big Boss) ಅನ್ನು ವೋಟ್ ಒಟಿಟಿಯಲ್ಲಿ ತರುತ್ತಿದೆ. ಹೀಗೆ ಹಲವಾರು ನೂತನ ಕಾರ್ಯಕ್ರಮಗಳನ್ನು ನೀಡುತ್ತಿದೆ. ಕಳೆದ ವರ್ಷದಿಂದ ರಾಜಾ-ರಾಣಿ ಎನ್ನುವ ಕಾರ್ಯಕ್ರಮ ಮಾಡಿದ್ರು. ಪತಿ-ಪತ್ನಿಯರು ಅರ್ಥ ಮಾಡಿಕೊಂಡು ಜೀವನ ಸಾಗಿಸುವ ಪರಿ. ಆಟಗಳ ಜೊತೆ ಜೀವನ ಪಾಠವೂ ಇತ್ತು. ಈ ಕಾರ್ಯಕ್ರಮ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಈಗ ರಾಜಾ-ರಾಣಿ (Raja-Rani) ಸೀಸನ್ ಶುರುವಾಗಿದೆ. ಜಡ್ಜ್ಗಳಾಗಿ ಸೃಜನ್ ಲೋಕೇಶ್, ನಟಿ ತಾರ ಅನುರಾಧ ತೀರ್ಪು ನೀಡುತ್ತಿದ್ದಾರೆ. ಈ ಬಾರಿ ಸ್ಪರ್ಧಿಗಳಾಗಿ ಸಂಗೀತಾ ನಿರ್ದೇಶಕ ವಿ.ಮನೋಹರ್ (V. Manohar) ಅವರ ಪತ್ನಿ ವೇಣಿ ಜೊತೆ ಭಾಗವಹಿಸಿದ್ದಾರೆ.
ಇವತ್ತು ಫ್ಯಾಮಿಲಿ ರೌಂಡ್
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಜಾ-ರಾಣಿ ಸೀಸನ್ 2 ನಲ್ಲಿ ಇವತ್ತು ಫ್ಯಾಮಿಲಿ ರೌಂಡ್ ಇದೆ. ಎಲ್ಲ ಸ್ಪರ್ಧಿಗಳು ಇವತ್ತು ತಮ್ಮ ಕುಟುಂಬದವರ ಜೊತೆ ಬೆರೆತು ಏನಾದ್ರೂ ಪ್ರೊಗ್ರಾಮ್ ಕೊಡಬೇಕು. ಕುಟುಂಬದ ಜೊತೆಗಿನ ಅವರ ನಂಟು, ಹೊಂದಾಣಿಕೆ, ಎಮೋಷನಲ್ ನೋಡಿ ಇವತ್ತು.
ತನ್ನ ಮಗಳಲ್ಲಿ ತಾಯಿ ಕಂಡ ವಿ.ಮನೋಹರ್
ಇಂದಿನ ಫ್ಯಾಮಿಲಿ ರೌಂಡ್‍ನಲ್ಲಿ ವಿ. ಮನೋಹರ್ ಅವರು ತಮ್ಮ ಮಗಳ ಜೊತೆ ಪರ್ಪಾಮೆನ್ಸ್ ಮಾಡಲಿದ್ದಾರೆ. ತನ್ನ ಮಗಳಲ್ಲಿ ತಾಯಿಯನ್ನೇ ಕಂಡೆ ಎಂದು ಅವಳ ಮಡಿಲಲ್ಲಿ ಮಲಗೋ ಸೀನ್ ಎಲ್ಲರಲ್ಲಿ ಕಣ್ಣೀರು ತರಿಸುತ್ತೆ. ಅಲ್ಲದೇ ಮಗಳಿಗೆ ತನ್ನ ತಾಯಿ ಪದ್ಮಾವತಿ ಭಟ್ ಅವರ ಹೆಸರನ್ನೇ ಇಟ್ಟಿದ್ದಾರೆ.
View this post on Instagram
ನಿಮ್ಮ ಮಗಳಿಗೆ ಟ್ಯಾಲೆಂಟ್ ಇಲ್ಲ ಎಂದು ಹೀಯಾಳಿಕೆ
ಇನ್ನು ವಿ.ಮನೋಹರ್ ಅವರ ಮಗಳು 2 ವರ್ಷಗಳಿಂದ ತುಂಬಾ ಡಲ್ ಆಗಿದ್ದಾರಂತೆ. ರೂಮ್ ಬಿಟ್ಟು ಆಚೆ ಬರುವುದಿಲ್ಲವಂತೆ. ಜನ ನಿಮ್ಮ ಮಗಳಿಗೆ ಹಾಡಲು ಬರಲ್ವಾ? ಟ್ಯಾಲೆಂಟ್ ಇಲ್ವಾ ಎಂದು ಹೀಯಾಳಿಸಿದ್ದರಂತೆ. ಅದಕ್ಕೆ ಬೇಸರಗೊಂಡು ರೂಮ್‍ನಲ್ಲೇ ಇರ್ತಿದ್ದಳಂತೆ.
ವಿ.ಮನೋಹರ್ ಅವರು ಹೇಳಿದ್ದೇನು?
ವಿ. ಮನೋಹರ್ ಅವರು ತಾನು ತಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಂಡಿಲ್ಲ. ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳಲು ಆಗಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: Dance Karnataka Dance: ಡ್ಯಾನ್ಸ್ ವಿತ್ ಮಿ ಎಂದ ಶಿವಣ್ಣ! ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ನಲ್ಲಿ ಶಿವಣ್ಣನ ಝಲಕ್ ನೋಡಿ
ತಮ್ಮ ಮಗಳು ತಮಗೆ ವಾಪಸ್ ಸಿಕ್ಕಳು ಎಂದು ಖುಷಿ
ರಾಜಾ-ರಾಣಿ ಫ್ಯಾಮಿಲಿ ರೌಂಡ್‍ಗಾಗಿ, ಅಪ್ಪ-ಅಮ್ಮನಿಗಾಗಿ ಎಲ್ಲ ನೋವು ಮರೆತು ಶೋಗೆ ಬಂದಿದ್ದಾರೆ. ಭಾಗವಹಿಸಿದ್ದಾರೆ. ಅದಕ್ಕೆ ಮನೋಹರ್ ಹಾಗೂ ಅವರ ಪತ್ನಿಗೆ ಖುಷಿಯಾಗಿದೆ. ನಮ್ಮ ಮಗಳು ನಮಗೆ ವಾಪಸ್ ಸಿಕ್ಕಳು ಎಂದು ಖುಷಿಯಾಗಿದ್ದಾರೆ.
ಸಂಗೀತ ನಿರ್ದೇಶಕರಾಗಿ ವಿ.ಮನೋಹರ್
ವಿಟ್ಲ ಮನೋಹರ್ ಒಬ್ಬ ಭಾರತೀಯ ಸಂಗೀತ ನಿರ್ದೇಶಕ, ಗೀತರಚನೆಕಾರ, ಚಲನಚಿತ್ರ ನಿರ್ದೇಶಕ ಮತ್ತು ಕನ್ನಡ ಮತ್ತು ತುಳು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಹಲವಾರು ಕನ್ನಡ ಮತ್ತು ತುಳು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಕರ್ನಾಟಕ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ 1000ಕ್ಕೂ ಹೆಚ್ಚು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.
ಮನೋಹರ್ ಅವರು ಭಾರತದ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಗ್ರಾಮದವರು. ಇವರ ತಂದೆ ಶಿವಣ್ಣ ಭಟ್, ತಾಯಿ ಪದ್ಮಾವತಿ. ಅವರು ಕೆಲವು ಪ್ರಮುಖ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಕೆಲಸ ಮಾಡುವ ಕಾರ್ಟೂನಿಸ್ಟ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು.
ಇದನ್ನೂ ಓದಿ: Ismart Jodi: ನನ್ನ ದುಡಿಮೆಯಲ್ಲೇ ನನ್ನ ಗಂಡ ಕೂತು ತಿನ್ನುತ್ತಾನೆ! ಹೀಗ್ಯಾಕೆ ಅಂದ್ರು ಈ ನಟಿ?
ಅವರ ವೃತ್ತಿಜೀವನದ ಆರಂಭದಲ್ಲಿ, ಜನಪ್ರಿಯ ಕನ್ನಡ ಸಿನಿಮಾ ನಿರ್ದೇಶಕರಾದ ಕಾಶಿನಾಥ್ ಮತ್ತು ಉಪೇಂದ್ರ ಅವರೊಂದಿಗೆ ಬಹಳ ನಿಕಟ ಸಂಬಂಧ ಹೊಂದಿದ್ದರು. ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ಬಳಿ ಕೆಲಸ ಮಾಡಿದ್ದಾರೆ. ಸಂಗೀತ ನಿರ್ದೇಶಕರಾಗಿ ಅವರ ಮೊದಲ ಚಿತ್ರ ಉಪೇಂದ್ರ ನಿರ್ದೇಶನದ ಜಗ್ಗೇಶ್ ಅಭಿನಯದ ತರ್ಲೆ ನನ್ನ ಮಗ ಮಾಡಿದ್ದರು. ವಿ.ಮನೋಹರ್ ಅವರ ಎಮೋಷನಲ್ ಎಪಿಸೋಡ್ ಮಿಸ್ ಮಾಡ್ದೇ ಇವತ್ತು ನೋಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ