Raja Rani: ವಂಶಿಕಾ ಜೊತೆ ರಾ ರಾ ರಕ್ಕಮ್ಮ ಹಾಡಿಗೆ ಸಖತ್ ಸ್ಟೆಪ್ಸ್​ ಹಾಕಿದ ಅದಿತಿ ಪ್ರಭುದೇವ

ರಾಜಾ-ರಾಣಿ ಸೀಸನ್ 2 ನಲ್ಲಿ ಇವತ್ತು ಫ್ಯಾಮಿಲಿ ರೌಂಡ್ ನಲ್ಲಿ ಅರುಣ್-ಮಾಧುರ್ಯ ಜೋಡಿಯ ಡ್ಯಾನ್ಸ್​​ಗೆ ಗಿಚ್ಚಿ ಗಿಲಿಗಿಲಿಯ ವನ್ಷಿಕಾ ಪಪ್ಪಿ ಪಾತ್ರ ಮಾಡಿ ಸಾಥ್ ನೀಡಿದ್ದಾಳೆ. ಪಪ್ಪಿ ವೇಷದಲ್ಲಿ ಮುದ್ದು ಮುದ್ದಾಗಿ ಕಾಣುವ ವನ್ಷಿಕಾ ಎಲ್ಲರ ಮನ ಗೆದ್ದಿದ್ದಾಳೆ. ಎಮೋಷನ್ ಡ್ಯಾನ್ಸ್ ಮೋಡಿ ಮಾಡಿದೆ. ಇನ್ನು ಸ್ಟೇಜ್ ಮೇಲೆ ಬಂದ ನಟಿ ಅದಿತಿ ಪ್ರಭುದೇವ್ ವಂಶಿ ಜೊತೆ ರಾ ರಾ ರಕ್ಕಮ್ಮ ಹಾಡಿಗೆ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಇಬ್ಬರ ಡ್ಯಾನ್ಸ್ ಕರುನಾಡನ್ನೇ ಮೋಡಿ ಮಾಡಿದೆ.

ನಟಿ ಅದಿತಿ ಪ್ರಭುದೇವ್

ನಟಿ ಅದಿತಿ ಪ್ರಭುದೇವ್

 • Share this:
  ಕಲರ್ಸ್ ಕನ್ನಡ (Colors Kannada)ವಾಹಿನಿ ಹೊಸ ಹೊಸ ಪ್ರಯೋಗಗಳ ಮೂಲಕ ಜನರನ್ನು ಸೆಳೆಯುತ್ತಿದೆ. ಪ್ರತಿಯೊಂದು ಕಾರ್ಯಕ್ರಮಗಳು ಅದ್ಭುತವಾಗಿ ಮೂಡಿ ಬರುತ್ತಿವೆ. ಈಗ ಇನ್ನೊಂದು ಹೊಸ ಆವಿಷ್ಕಾರಕ್ಕೆ ಕೈ ಹಾಕಿದ್ದು ಬಿಗ್ ಬಾಸ್ (Big Boss) ಅನ್ನು ಓಟಿಟಿ (OTT)ಯಲ್ಲಿ ತರುತ್ತಿದೆ. 24 ಗಂಟೆಯೂ ವೋಟ್‍ ನಲ್ಲಿ ಬಿಗ್ ಬಾಸ್ ನೋಡಬಹುದು. ಹೀಗೆ ಹಲವಾರು ನೂತನ ಕಾರ್ಯಕ್ರಮಗಳನ್ನು ನೀಡುತ್ತಿದೆ. ಕಳೆದ ವರ್ಷದಿಂದ ರಾಜಾ-ರಾಣಿ (Raja Rani) ಎನ್ನುವ ಕಾರ್ಯಕ್ರಮ ಮಾಡಿದ್ರು. ಪತಿ-ಪತ್ನಿಯರು ಅರ್ಥ ಮಾಡಿಕೊಂಡು ಜೀವನ ಸಾಗಿಸುವ ಪರಿ. ಆಟಗಳ ಜೊತೆ ಜೀವನ ಪಾಠವೂ ಇತ್ತು. ಈ ಕಾರ್ಯಕ್ರಮ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಈಗ ರಾಜಾ-ರಾಣಿ ಸೀಸನ್ 2 ಶುರುವಾಗಿದೆ. ರಾಜಾ-ರಾಣಿಗೆ ಈ ಬಾರಿ ನಟಿ ಅದಿತಿ ಪ್ರಭುದೇವ್  ಗೆಸ್ಟ್ (Guest) ಆಗಿ ಬಂದಿದ್ದಾರೆ, ವಂಶಿ ಜೊತೆ ರಕ್ಕಮ್ಮ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ.

  ಇವತ್ತು ಫ್ಯಾಮಿಲಿ ರೌಂಡ್
  ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಜಾ-ರಾಣಿ ಸೀಸನ್ 2 ನಲ್ಲಿ ಇವತ್ತು ಫ್ಯಾಮಿಲಿ ರೌಂಡ್ ಇದೆ. ಎಲ್ಲ ಸ್ಪರ್ಧಿಗಳು ಇವತ್ತು ತಮ್ಮ ಕುಟುಂಬದವರ ಜೊತೆ ಬೆರೆತು ಏನಾದ್ರೂ ಪೆÇ್ರಗ್ರಾಮ್ ಕೊಡಬೇಕು. ನಿನ್ನೆ ಸಹ ಸ್ಪರ್ಧಿಗಳು ಕುಟುಂಬದ ಜೊತೆಗಿನ ಅವರ ನಂಟು, ಹೊಂದಾಣಿಕೆಯ ಬಗ್ಗೆ ಡ್ಯಾನ್ಸ್ ಮಾಡಿದ್ರು, ಇವತ್ತು ಎಪಿಸೋಡ್ ಕಂಟಿನ್ಯೂವ್ ಆಗಿದೆ.  ಅರುಣ್, ಮಾಧುರ್ಯ ಜೊತೆ ಪಪ್ಪಿ ಪಾತ್ರ ಮಾಡಿದ ವಂಶಿ
  ಫ್ಯಾಮಿಲಿ ರೌಂಡ್ ನಲ್ಲಿ ಅರುಣ್-ಮಾಧುರ್ಯ ಜೋಡಿಯ ಡ್ಯಾನ್ಸ್‍ಗೆ ಗಿಚ್ಚಿ ಗಿಲಿಗಿಲಿಯ ವನ್ಷಿಕಾ ಪಪ್ಪಿ ಪಾತ್ರ ಮಾಡಿ ಸಾಥ್ ನೀಡಿದ್ದಾಳೆ. ಪಪ್ಪಿ ವೇಷದಲ್ಲಿ ಮುದ್ದು ಮುದ್ದಾಗಿ ಕಾಣುವ ವನ್ಷಿಕಾ ಎಲ್ಲರ ಮನ ಗೆದ್ದಿದ್ದಾಳೆ. ಎಮೋಷನ್ ಡ್ಯಾನ್ಸ್ ಮೋಡಿ ಮಾಡಿದೆ.

  ರಾ ರಾ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದ ಅದಿತಿ ಪ್ರಭುದೇವ್
  ಇನ್ನು ಸ್ಟೇಜ್ ಮೇಲೆ ಬಂದ ನಟಿ ಅದಿತಿ ಪ್ರಭುದೇವ್ ವಂಶಿ ಜೊತೆ ರಾ ರಾ ರಕ್ಕಮ್ಮ ಹಾಡಿಗೆ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಇಬ್ಬರ ಡ್ಯಾನ್ಸ್ ಕರುನಾಡನ್ನೇ ಮೋಡಿ ಮಾಡಿದೆ.

  ಇದನ್ನೂ ಓದಿ: V Manohar: ವಿ ಮನೋಹರ್ ತಮ್ಮ ಮಗಳಿಗೆ ಅಮ್ಮನ ಹೆಸರನ್ನೇ ಇಟ್ಟಿದ್ದಾರಂತೆ!  

  ಪಟ್ ಪಟ್ ಪಟಾಕಿ ಈ ವಂನ್ಷಿಕಾ
  ವಂನ್ವಿಕಾ ಈ ಹೆಸರು ಕಳೆದ ಒಂದು ವರ್ಷದಿಂದ ಕನ್ನಡಿಗರ ಮನದಲ್ಲಿ ಉಳಿದು, ನೆಲೆಸಿರುವ ಹೆಸರು. ಈಕೆ ಮಾಸ್ಟರ್ ಆನಂದ್, ಯಶಸ್ವಿನಿ ಅವರ ಮಗಳು. ಈಗ 5 ವರ್ಷ. ಆದ್ರೆ ಆದ್ರೆ ಇವಳ ಮಾತು, ನಟನೆ ನೋಡಿದ್ರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಂಥಾ ಅದ್ಭುತ ಪ್ರತಿಭೆ ಎನ್ನಿಸುತ್ತೆ.

  ನಮ್ಮಮ್ಮ ಸೂಪರ್ ಸ್ಟಾರ್ ಟೈಟಲ್ ವಿನ್ನರ್
  ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಬಾರಿ ಪ್ರಸಾರವಾಗುತ್ತಿದ್ದ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ, ವಂಶಿ ಮತ್ತು ಯಶಸ್ವಿನಿ ಭಾಗವಹಿಸಿದ್ದರು. ಮೊದಲ ದಿನವೇ ಇವಳು ಕನ್ನಡಿಗರ ಮನಸ್ಸು ಕದ್ದಿದ್ದಳು. ತನ್ನ ಮಾತಿನಿಂದ ಮೋಡಿ ಮಾಡಿದ್ದಳು. ಅಂದಿನಿಂದ ವಂಶಿಗಾಗಿಯೇ ಎಷ್ಟೊಂದು ಜನ ನಮ್ಮಮ್ಮ ಸೂಪರ್ ಸ್ಟಾರ್ ನೋಡ್ತಾ ಇದ್ರು. ಅಂತೆಯೇ ಅವಳೇ ವಿನ್ ಆಗಿ ನಮ್ಮಮ್ಮ ಸೂಪರ್ ಸ್ಟಾರ್ ಪಟ್ಟ ಅಲಂಕರಿಸಿದಳು.

  ಇದನ್ನೂ ಓದಿ: Gicchi Gili Gili: ಗಿಚ್ಚಿ ಗಿಲಿಗಿಲಿ ಕ್ಲಿನಿಕ್‍ನಲ್ಲಿ ಡಾಕ್ಟರ್ ವಂಶಿ ನಗುವಿನ ಕಚಗುಳಿ, ಕರ್ಕೊಂಡು ಬರ್ತಾ ಇರಿ, ಹೊತ್ಕೊಂಡು ಹೋಗ್ತಾ ಇರಿ! 

  ನಟಿ ಅದಿತಿ ಪ್ರಭುದೇವ್, ಪಟಾಕಿ ವಂಶಿ ಡ್ಯಾನ್ಸ್ ನೋಡಬೇಕು ಅಂದ್ರೆ ನೀವು ಇವತ್ತು ಮಿಸ್ ಮಾಡ್ದೇ ರಾಜಾ-ರಾಣಿ ಶೋ ನೋಡಿ. ಒಂದು ಕಡೆ ಲವ್ಲಿ ನಟಿ, ಇನ್ನೊಂದು ಕಡೆ ಕ್ಯೂಟ್ ವಂಶಿ, ಸುಂದರವಾಗಿ ಸ್ಟೆಪ್ಸ್ ಹಾಕಿದ್ದಾರೆ. ನೀವೂ ನೋಡಿ ಅವರಿಬ್ಬರ ಮೋಡಿ.
  Published by:Savitha Savitha
  First published: