ಕಲರ್ಸ್​ ಕನ್ನಡ ಪಾಲಾದ ಅವತಾರ ಪುರುಷ & ಗರುಡ ಗಮನ ವೃಷಭ ವಾಹನ ಟಿವಿ ರೈಟ್ಸ್​!

ಗರುಡ ಗಮನ ವೃಷಭ ವಾಹನ ಸಿನಿಮಾ ಹಾಗೂ ಇನ್ನೂ ತೆರೆ ಕಾಣಬೇಕಿರುವ ಅವತಾರ ಪುರುಷ  ಸಿನಿಮಾಗಳ ಟಿವಿ ರೈಟ್ಸ್​(TV Rights) ಕಲರ್ಸ್ ಕನ್ನಡ(Colours Kannada) ಪಾಲಾಗಿದೆ. ಎರಡು ಚಿತ್ರಗಳಿಗೂ ದಾಖಲೆಯ ಮೊತ್ತ ನೀಡಿಯೇ ಖರೀದಿಸಿದ್ದಾರೆ ಎಂಬ ಮಾಹಿತಿ ಕೂಡ ಹೊರಬಿದ್ದಿದೆ. 

ಅವತಾರ ಪುರುಷ, ಗರುಡ ಗಮನ ವೃಷಭ ವಾಹನ

ಅವತಾರ ಪುರುಷ, ಗರುಡ ಗಮನ ವೃಷಭ ವಾಹನ

  • Share this:
ಇತ್ತೀಚೆಗೆ ಬಿಡುಗಡೆಯಾದ ಕನ್ನಡದ 'ಗರುಡ ಗಮನ ವೃಷಭ ವಾಹನ' ಚಿತ್ರ ಸಾಕಷ್ಟು ಮೆಚ್ಚುಗೆಯನ್ನು ಪಡೆದುಕೊಂಡಿದೆ. ಚಿತ್ರ ರಿಲೀಸ್‌ಆದ ಬಳಿಕ ಕೆಲ ವರ್ಗದ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ಸು ಕಂಡಿದೆ. ಚಿತ್ರದ ಭಿನ್ನ ರೀತಿಯ ಪರಿಕಲ್ಪನೆ ಬಗ್ಗೆ ಚಿತ್ರರಂಗದಲ್ಲೂ ಟಾಕ್ ಕ್ರಿಯೇಟ್(Talk Create) ಆಗಿದೆ. ರಾಜ್​ ಬಿ. ಶೆಟ್ಟಿ (Raj B Shetty) ನಿರ್ದೇಶನ ಮಾಡಿರುವ ‘ಗರುಡ ಗಮನ ವೃಷಭ ವಾಹನ’ (Garuda Gamana Vrishabha Vahana) ಚಿತ್ರ ಸೂಪರ್​ ಹಿಟ್(Super Hit)​ ಆಗಿದೆ. ರಿಷಬ್​​ ಶೆಟ್ಟಿ(Rishab Shetty) ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ರೌಡಿಸಂ ಸಿನಿಮಾಗಳನ್ನು ಹೀಗೂ ಮಾಡಬಹುದು ಅಂತ ತೋರಿಸಿಕೊಟ್ಟಿದ್ದಾರೆ. ವಿದೇಶಗಳಲ್ಲೂ ಗರುಡ ಗಮನ ವೃಷಭ ವಾಹನ ಸಿನಿಮಾಗೆ ಡಿಮ್ಯಾಂಡ್(Demand)​ ಸಿಕ್ಕಿದೆ. ಬೇರೆ ಭಾಷೆಯ ಚಿತ್ರರಂಗದವರು ಈ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರ ಹಕ್ಕು ಪಡೆಯಲು ಹಲವು ಚಾನೆಲ್​ಗಳು ಪೈಪೋಟಿ ನೀಡಿದ್ದರು. ಆದರೆ ಕೊನೆಗೆ ಈ ಸಿನಿಮಾ ಹಾಗೂ ಇನ್ನೂ ತೆರೆ ಕಾಣಬೇಕಿರುವ ಅವತಾರ ಪುರುಷ  ಸಿನಿಮಾಗಳ ಟಿವಿ ರೈಟ್ಸ್​(TV Rights) ಕಲರ್ಸ್ ಕನ್ನಡ(Colors Kannada) ಪಾಲಾಗಿದೆ. ಎರಡು ಚಿತ್ರಗಳಿಗೂ ದಾಖಲೆಯ ಮೊತ್ತ ನೀಡಿಯೇ ಖರೀದಿಸಿದ್ದಾರೆ ಎಂಬ ಮಾಹಿತಿ ಕೂಡ ಹೊರಬಿದ್ದಿದೆ. 

ಗರುಡ ಗಮನ ವೃಷಭ ವಾಹನ ಸಿನಮಾಗೆ ಹೆಚ್ಚು ಡಿಮ್ಯಾಂಡ್!

ಗರುಡ ಗಮನ ವೃಷಭ ವಾಹನ’(Garuda Gamana Vrishabha Vahana Movie)ಸಿನಿಮಾ ಬಿಡುಗಡೆಯಾಗಿ ಸಖತ್​ ರೆಸ್ಪಾನ್ಸ್​​ ಪಡೆದುಕೊಳ್ಳುತ್ತಿದೆ. ಹಿಂದೆಂದೂ ನೋಡಿರದ ಹೊಸತನವನ್ನು ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿ ನೋಡುಬಹುದಾಗಿದೆ. ಈಗಲೂ ಹಲವು ಚಿತ್ರಮಂದಿರಗಳಲ್ಲಿ ಹೌಸ್​ಪುಲ್​ ಪ್ರದರ್ಶನ ಕಾಣುತ್ತಿದೆ. ಹೀಗಾಗಿ ಈ ಚಿತ್ರ ಟಿವಿ ಹಕ್ಕಿಗೆ ತುಂಬಾ ಕ್ರಿಯೆಟ್​ ಆಗಿತ್ತು. ಹಣ ಹೆಚ್ಚಾದರೂ ಪರ್ವಾಗಿಲ್ಲ. ಈ ಸಿನಿಮಾದ ರೈಟ್ಸ್ ಪಡೆಯಲು ಹಲವು ಪ್ರತಿಷ್ಠಿತ ಚಾನೆಲ್​ಗಳು ಪ್ರಯತ್ನ ನಡೆಸಿದ್ದರು. ಆದರೆ ಕೊನೆಗೆ ಗರುಡ ಗಮನ ವೃಷಭ ವಾಹನ ಸಿನಿಮಾ ಟಿವಿ ಹಕ್ಕನ್ನು ಪಡದುಕೊಳ್ಳುವಲ್ಲಿ ಕಲರ್ಸ್ ಕನ್ನಡ ಯಶಸ್ವಿಯಾಗಿದ್ದಾರೆ.

ಇದನ್ನು ಓದಿ : 3 ದಿಗ್ಗಜರನ್ನು ಒಟ್ಟುಗೂಡಿಸಿದ್ದ ಶಿವರಾಮ್​​: ಅಣ್ಣಾವ್ರು ಅಂದ್ರೆ ಇವ್ರಿಗೆ ಪಂಚ ಪ್ರಾಣ..!

ನೆಟ್​ಫ್ಲಿಕ್ಸ್ ತೆಕ್ಕೆಗೆ ಗರುಡ ಗಮನ ವೃಷಭ ವಾಹನ?

ಇನ್ನೂ ಟಿವಿಯಲ್ಲಿ ಈ ಚಿತ್ರ ಪ್ರಸಾರವಾಗುವ ಮುನ್ನ ಓಟಿಟಿಯಲ್ಲಿ ತೆರೆಕಾಣಲಿದೆ. ಈಗಾಗಲೇ ಓಟಿಟಿಯಿಂದಲೂ ಈ ಚಿತ್ರಕ್ಕೆ ಸಖತ್​ ಡಿಮ್ಯಾಂಡ್​ ಬಂದಿದೆ ಎಂದು ಸ್ವತಃ ಚಿತ್ರ ನಾಯಕ ನಟ ಹಾಗೂ ನಿರ್ದೇಶಕ ರಾಜ್​ ಬಿ ಶೆಟ್ಟಿ ಹೇಳಿದ್ದರು. ತುಂಬಾ ಕರೆಗಳು ಬರುತ್ತಿವೆ, ನಮಗೆ ಈ ಸಿನಿಮಾವನ್ನು ಕೊಡಿ ಅಂತ ಎಲ್ಲರೂ ಕೇಳುತ್ತಿದ್ದಾರೆ ಖುಷಿಯಾಗುತ್ತೆ ಎಂದು ರಾಜ್​ ಬಿ ಶೆಟ್ಟಿ ಹೇಳಿದ್ದರು. ನೆಟ್​ಫ್ಲಿಕ್ಸ್​​ನಲ್ಲಿ ಹೆಚ್ಚು ಜನಪ್ರಿಯಗಳಿಸಿದ ಸಿನಿಮಾಗಳನ್ನು ಹೆಚ್ಚು ಹಣ ನೀಡಿ ಖರೀದಿ ಮಾಡಲಾಗುತ್ತೆ. ಹೀಗಾಗಿ ಗರುಡ ಗಮನ ವೃಷಭ ವಾಹನ ಚಿತ್ರವನ್ನು ನೆಟ್​ಫ್ಲಿಕ್ಸ್​ ಸಂಸ್ಥೆ ಖರೀದಿ ಮಾಡುವ ಸಾಧ್ಯತೆ ಹೆಚ್ಚಿದೆ

ಇದನ್ನು ಓದಿ : `ಅಖಂಡ’ನ ಆರ್ಭಟಕ್ಕೆ ಟಾಲಿವುಡ್​ ಬಾಕ್ಸಾಫೀಸ್​ ಧೂಳಿಪಟ: ಮಾಸ್​ ಪ್ರೇಕ್ಷಕರಿಗೆ ಮೃಷ್ಟಾನ್ನ ಭೋಜನ! 

ಶರಣ್​ ಅಭಿನಯದ ಅವತಾರ ಪುರುಷ!

ಈಗಾಗಲೇ ಚಿತ್ರಮಂದಿರಗಳಲ್ಲಿ ಸಿಂಪಲ್​ ಸುನಿಯವರ ‘ಸಖತ್​’ ಸುದ್ದಿ ಮಾಡುತ್ತಿದೆ. ಇದರ ಬೆನ್ನಲ್ಲೇ ಇವರ ನಿರ್ದೇಶನದ ಮತ್ತೊಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಹೌದು ಶರಣ್​ ಅಭಿನಯದ ಅವತಾರ ಪುರುಷ ತೆರೆಗೆ ಬರೋಕೆ ಸಜ್ಜಾಗಿದೆ. ಸಿನಿಮಾ ರಿಲೀಸ್​ಗೂ ಮುನ್ನವೇ ಭಾರಿ ಮೊತ್ತಕ್ಕೆ ಇದರ ಟಿವಿ ರೈಟ್ಸ್ ಸೇಲ್​ ಆಗಿದೆ. ಕಲರ್ಸ್ ಕನ್ನಡ ಈ ಸಿನಿಮಾದ ಟಿವಿ ಹಕ್ಕನ್ನು ಖರೀದಿಸಿದೆ. ಇನ್ನೂ ಅಮೇಜಾನ್​ ಪ್ರೈಮ್​ ಕೂಡ ಸಿನಿಮಾ ತಂಡವನ್ನು ಸಂಪರ್ಕಿಸಿ ಕೊನೆ ಹಂತದ ಮಾತುಕತೆ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ.
Published by:Vasudeva M
First published: