ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 10 ಗಂಟೆಗೆ ಪುಣ್ಯವತಿ (Punyavathi) ಎನ್ನುವ ಧಾರಾವಾಹಿ (Serial) ಪ್ರಸಾರವಾಗುತ್ತಿದೆ. ಧಾರಾವಾಹಿ ಶುರುವಾದಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಗಿದೆ. ಈ ಧಾರಾವಾಹಿಯ ನಾಯಕಿ ಪದ್ಮಿನಿ. ಈಕೆಗೆ ಡ್ಯಾನ್ ಅಂದ್ರೆ ಪ್ರಾಣ. ಡ್ಯಾನ್ಸ್‍ನಲ್ಲೇ ಏನಾದ್ರೂ ಸಾಧನೆ ಮಾಡಬೇಕು ಎಂದು ಪದ್ಮಿನಿ ಹಂಬಲಿಸುತ್ತಿದ್ದಳು. ಆದ್ರೆ ಮನೆಯಲ್ಲಿ ಪದ್ಮಿನಿ ಅಪ್ಪನಿಗೆ ಡ್ಯಾನ್ಸ್ (Dance) ಅಂದ್ರೆ ಇಷ್ಟ ಇಲ್ಲ. ಡ್ಯಾನ್ಸ್, ಹಾಡು ಸಹವಾಸಕ್ಕೆ ಹೋಗಬಾರದು ಎಂದು ಹೇಳಿದ್ದಾರೆ. ಈ ಧಾರಾವಾಹಿ ಶುರುವಾಗೋದೇ ಕುಣಿವ ಹಕ್ಕಿಗೆ ಮಾಂಗಲ್ಯ ಬಂಧನ ಎಂದು. ಅಲ್ಲದೇ ಪದ್ಮಿನಿಗೆ ನಂದನ್ ಎನ್ನುವವನ ಜೊತೆ ಮದುವೆ (Marriage) ಸೆಟ್ ಆಗಿದೆ. ಮದುವೆ ಮಾಡಲು ಅಪ್ಪ ಭುಜಂಗಯ್ಯ ಹೊಲ, ಮನೆ ಅಡವಿಟ್ಟಿದ್ದಾನೆ.
ನಾನೇ ಮದುವೆ ಮಾಡ್ತೀನಿ ಎಂದ ಭುಜಂಗಯ್ಯ
ಅಮ್ಮಾಜಿ ಎನ್ನುವ ಶ್ರೀಮಂತ ಮನೆಯ ಹುಡುಗ ನಂದನ್. ಅವನಿಗೆ ಪದ್ಮಿನಿ ಮದುವೆ ಸೆಟ್ ಆಗಿದೆ. ಶ್ರೀಮಂತರಾದ ಕಾರಣ ಅಮ್ಮಾಜಿ ನಾವೇ ಮದುವೆ ಮಾಡಿಕೊಳ್ತೇವೆ ಎಂದು ಹೇಳಿರುತ್ತಾರೆ. ಅದಕ್ಕೆ ಭುಜಂಗಯ್ಯನಿಗೆ ಸ್ವಾಭಿಮಾನ ಅಡ್ಡ ಬರುತ್ತೆ. ನಾನೇ ನನ್ನ ಮಗಳ ಮದುವೆ ಮಾಡಿಕೊಡ್ತೇನೆ. ಇದು ನನ್ನ ಗೌರವದ ಪ್ರಶ್ನೆ ಎಂದು ಹೇಳ್ತಾನೆ. ಅದಕ್ಕೆ ಅಮ್ಮಾಜಿ ಒಪ್ಪಿಕೊಳ್ತಾರೆ.
ಪದ್ಮಿನಿ ಮದುವೆಗೆ ಬೇಕು 10 ಲಕ್ಷ
ಅಮ್ಮಾಜಿ ಮನೆಯವರು ಮದುವೆ ತುಂಬಾ ರಿಚ್ ಆಗಿ ನಡೆಯಬೇಕು ಎಂದು ಹೇಳಿದ್ದಾರೆ. ಊಟ, ತಿಂಡಿ ಎಲ್ಲಾ ಶಾಸ್ತ್ರಗಳು ಗ್ರ್ಯಾಂಡ್ ಆಗಿ ನಡೆಯಬೇಕು ಎಂದಿದ್ದಾರೆ. ಅದಕ್ಕೆ ಪದ್ಮಿನಿ ಮದುವೆ ಮಾಡಲು ಏನಿಲ್ಲ ಅಂದ್ರೂ 10 ಲಕ್ಷ ಬೇಕಾಗಿದೆ. ಅದಕ್ಕೆ ಆ ದುಡ್ಡನ್ನು ಭುಜಂಗಯ್ಯ ತಾನು ಹಾಕಿದ ಚೀಟಿಯಲ್ಲಿ ತೆಗೆದುಕೊಳ್ಳೋಣ ಎಂದುಕೊಂಡಿದ್ದ. ಆದ್ರೆ ಚೀಟಿ ದುಡ್ಡು ಸಹ ಮೋಸವಾಗಿದೆ.
ಹೊಲ, ಮನೆ ಅಡವಿಟ್ಟ ಭುಜಂಗ
ಭುಜಂಗಯ್ಯನಿಗೆ ತನ್ನ ಮಗಳ ಮದುವೆ ಹೇಗೆ ಮಾಡಬೇಕು ಎಂದು ತಿಳಿಯದೇ ಹೊಲ, ಮನೆ ಅಡವಿಟ್ಟಿದ್ದಾನೆ. ಸಾಲ ಮಾಡಿದ್ದಾರೆ. ಮಗಳ ಮದುವೆಯನ್ನು ನೆಮ್ಮದಿಯಾಗಿ ಮಾಡಬಹುದು. ನಿಧಾನಕ್ಕೆ ಸಾಲ ತೀರಿಸಿಕೊಳ್ಳೋಣ ಎಂದುಕೊಂಡಿದ್ದಾನೆ. ಭುಜಂಗನ ಹೆಂಡ್ತಿ ಒಬ್ಬ ಮಗಳ ಮದುವೆಗೆ ಈ ರೀತಿ ಮಾಡಿದ್ರೆ, ಉಳಿದ ಇಬ್ಬರ ಗತಿ ಏನು ಎಂದು ಪ್ರಶ್ನೆ ಮಾಡ್ತಾ ಇದ್ದಾಳೆ.
ಸತ್ಯ ಗೊತ್ತಾಗಿ ಪದ್ಮಿನಿ ಕಣ್ಣೀರು
ತನ್ನ ಅಪ್ಪ ಮದುವೆಗಾಗಿ ಹೊಲ, ಮನೆ ಅಡವಿಟ್ಟ ವಿಚಾರ ಪದ್ಮಿನಿಗೆ ಗೊತ್ತಾಗಿದೆ. ಅದನ್ನು ಕೇಳಿಸಿಕೊಂಡು ಶಾಕ್ ಆಗಿದ್ದಾಳೆ. ತನ್ನಿಂದ ತನ್ನ ತವರು ಮನೆಗೆ ಈ ರೀತಿಯ ಪರಿಸ್ಥಿತಿ ಬರುತ್ತಿದೆ ಎಂದು ಕಣ್ಣೀರು ಹಾಕುತ್ತಿದ್ದಾಳೆ. ನಾನು ಮದುವೆಯನ್ನೇ ಆಗೋದು ಬೇಡ ಎಂದುಕೊಳ್ತಾ ಇದ್ದಾಳೆ. ಆದ್ರೆ ಈಗಾಗಲೇ ಎಲ್ಲಾ ತಯಾರಿ ನಡೆದಿದೆ.
ನಂದನ್ ಖುಷಿಗೆ ಪಾರವೇ ಇಲ್ಲ
ಪದ್ಮಿನಿ ಅಂದ್ರೆ ನಂದನ್‍ಗೆ ತುಂಬಾ ಇಷ್ಟ. ಅವಳನ್ನೇ ಮದುವೆ ಆಗಬೇಕು ಎಂದುಕೊಂಡಿದ್ದ. ಅಂತೆಯೇ ಎಲ್ಲವೂ ಆಗುತ್ತಿದೆ. ತನ್ನ ಪ್ರೀತಿ ಪದ್ಮಿನಿಯನ್ನು ಮದುವೆ ಆಗಲು ಕಾಯ್ತಾ ಇದ್ದಾನೆ. ಒಂದು ದಿನವೂ ಬಿಟ್ಟಿರಲಾಗದೇ ಆಕೆಯನ್ನು ನೋಡಲು ಬೆಂಗಳೂರಿನಿಂದ ಮಂಡ್ಯಕ್ಕೆ ಬರುತ್ತಿದ್ದಾನೆ. ಇಬ್ಬರಿಗೂ ಖುಷಿಯಿಮದ ಸಂಸಾರ ಮಾಡಬೇಕು ಎಂದುಕೊಂಡಿದ್ದಾರೆ.
ಇದನ್ನೂ ಓದಿ: Bhagya Lakshmi: ಕೀರ್ತಿನ ಮದುವೆ ಆಗಲು ಒಪ್ಪಿಗೆ ಕೊಟ್ಟ ಕಾವೇರಿ: ವೈಷ್ಣವ್ ಗೆ ಇದೆ ಗಡುವಿನ ಲೆಕ್ಕಾಚಾರ!
ಪದ್ಮಿನಿ-ನಂದನ್ ಮದುವೆ ಆಗುತ್ತಾ? ಕೊನೆ ಕ್ಷಣದಲ್ಲಿ ಪದ್ಮಿನಿ ಮದುವೆ ಬೇಡ ಎಂದು ಬಿಡ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಪುಣ್ಯವತಿ ಧಾರಾವಾಹಿ ನೊಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ