ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 10 ಗಂಟೆಗೆ ಪುಣ್ಯವತಿ (Punyavathi) ಎನ್ನುವ ಧಾರಾವಾಹಿ (Serial) ಪ್ರಸಾರವಾಗುತ್ತಿದೆ. ಧಾರಾವಾಹಿ ಶುರುವಾದಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಗಿದೆ. ಈ ಧಾರಾವಾಹಿಯ ನಾಯಕಿ ಪದ್ಮಿನಿ. ಈಕೆಗೆ ಡ್ಯಾನ್ (Dance) ಅಂದ್ರೆ ಪ್ರಾಣ. ಡ್ಯಾನ್ಸ್‍ನಲ್ಲೇ ಏನಾದ್ರೂ ಸಾಧನೆ ಮಾಡಬೇಕು ಎಂದು ಪದ್ಮಿನಿ ಹಂಬಲಿಸುತ್ತಿದ್ದಳು. ಆದ್ರೆ ಮನೆಯಲ್ಲಿ ಪದ್ಮಿನಿ ಅಪ್ಪನಿಗೆ ಡ್ಯಾನ್ಸ್ ಅಂದ್ರೆ ಇಷ್ಟ ಇಲ್ಲ. ಡ್ಯಾನ್ಸ್, ಹಾಡು ಸಹವಾಸಕ್ಕೆ ಹೋಗಬಾರದು ಎಂದು ಹೇಳಿದ್ದಾರೆ. ಈ ಧಾರಾವಾಹಿ ಶುರುವಾಗೋದೇ ಕುಣಿವ ಹಕ್ಕಿಗೆ ಮಾಂಗಲ್ಯ ಬಂಧನ ಎಂದು. ಅಲ್ಲದೇ ಪದ್ಮಿನಿಗೆ ನಂದನ್ ಎನ್ನುವವನ ಜೊತೆ ಮದುವೆ (Marriage) ಸೆಟ್ ಆಗಿದೆ. ಆ ಮದುವೆ ಮಾಡಲು ಭುಜಂಗಯ್ಯ ಇಟ್ಟಿದ್ದ ಹಣ್ಣಕ್ಕೆ (Money) ಮೋಸವಾಗಿದೆ.
ನಾನೇ ಮದುವೆ ಮಾಡ್ತೀನಿ ಎಂದ ಭುಜಂಗಯ್ಯ
ಅಮ್ಮಾಜಿ ಎನ್ನುವ ಶ್ರೀಮಂತ ಮನೆಯ ಹುಡುಗ ನಂದನ್. ಅವನಿಗೆ ಪದ್ಮಿನಿ ಮದುವೆ ಸೆಟ್ ಆಗಿದೆ. ಶ್ರೀಮಂತರಾದ ಕಾರಣ ಅಮ್ಮಾಜಿ ನಾವೇ ಮದುವೆ ಮಾಡಿಕೊಳ್ತೇವೆ ಎಂದು ಹೇಳಿರುತ್ತಾರೆ. ಅದಕ್ಕೆ ಭುಜಂಗಯ್ಯನಿಗೆ ಸ್ವಾಭಿಮಾನ ಅಡ್ಡ ಬರುತ್ತೆ. ನಾನೇ ನನ್ನ ಮಗಳ ಮದುವೆ ಮಾಡಿಕೊಡ್ತೇನೆ. ಇದು ನನ್ನ ಗೌರವದ ಪ್ರಶ್ನೆ ಎಂದು ಹೇಳ್ತಾನೆ. ಅದಕ್ಕೆ ಅಮ್ಮಾಜಿ ಒಪ್ಪಿಕೊಳ್ತಾರೆ.
ರಿಚ್ ಆಗಿ ಆಗಬೇಕು ಮದುವೆ
ನಂದನ್ ದೊಡ್ಡ ಕುಟುಂಬದವನು ಆದ ಕಾರಣ ಮದುವೆ ಅಮ್ಮಾಜಿ ಮನೆಯವರು ಹೇಳಿದಂತೆ ಆಗಬೇಕು. ಮುದವೆ ಎಷ್ಟು ದಿನ ಆಗಬೇಕು. ಊಟಕ್ಕೆ ಯಾವ ರೀತಿ ಇರಬೇಕು, ಹೋಟೆಲ್ ಎಲ್ಲಾ ದೊಡ್ಡ ಲೀಸ್ಟ್ ಕೊಟ್ಟಿದ್ದಾರೆ. ಅದಕ್ಕೆ ಭುಜಂಗಯ್ಯ ಒಪ್ಪಿಕೊಂಡು ಬಂದಿದ್ದಾನೆ. ಆದ್ರೆ ಅಷ್ಟು ದುಡ್ಡು ಹೇಗೆ ಜೋಡಿಸ್ತೀರಿ ಎಂದು ಹೆಂಡ್ತಿ ಕೇಳಿದ್ದಾಳೆ. ಅದಕ್ಕೆ ನಾವು ಇಷ್ಟು ದಿನ ಕೂಡಿಟ್ಟ ಚೀಟೆ ಹಣ ತೆಗೆಯೋಣ ಅಂತಾನೆ.
ಪದ್ಮಿನಿ ಅಮ್ಮನಿಗೆ ಚಿಂತೆ
ಮದುವೆಗೆ 10 ಲಕ್ಷ ಬೇಕು ಎಂದು ಗೊತ್ತಾಗಿದೆ. ಅದಕ್ಕೆ ಭುಜಂಗಯ್ಯ ಚೀಟೆ ಹಣ ಬಿಡಿಸಿಕೊಳ್ಳಲು ಮುಂದಾಗಿದ್ದಾನೆ. ಅದಕ್ಕೆ ಪದ್ಮಿನಿ ಅಮ್ಮ ಚಿಂತೆ ಮಾಡ್ತಾ ಇದ್ದಾಳೆ. ಜೀವನ ಪೂರ್ತಿ ಕೂಡಿಟ್ಟ ಹಣ ಒಬ್ಬಳ ಮದುವೆಗೆ ಮುಗಿದು ಹೋದ್ರೆ, ಇನ್ನಿಬ್ಬರು ಹೆಣ್ಮಕ್ಕಳ ಮದುವೆ ಹೇಗೆ ಮಾಡುವುದು ಎಂದು ಆತಂಕಗೊಂಡಿದ್ದಾಳೆ.
ಚೀಟಿ ಹಣಕ್ಕ ಮೋಸ
ಭುಜಂಜಯ್ಯ ಚೀಟಿ ಹಣ ಬಿಡಿಸಿಕೊಳ್ಳಲು ಹೋದ್ರೆ, ಅಲ್ಲಿ ಜನ ಸೇರಿರುತ್ತಾರೆ. ಯಾಕೆ ಅಂತ ನೋಡಿದ್ರೆ ಚೀಟಿ ಕಟ್ಟಿಸಿಕೊಂಡವ ದುಡ್ಡಿನ ಜೊತೆ ಪರಾರಿಯಾಗಿದ್ದಾನೆ. ಭುಜಂಗಯ್ಯನಿಗೆ ಈ ವಿಚಾರ ಗೊತ್ತಾಗಿ ಚಡಪಡಿಸುತ್ತಿದ್ದಾನೆ. ನನ್ನ ಮಗಳ ಮದುವೆ 15 ದಿನದಲ್ಲಿ ಇದೆ. ಪೊಲೀಸರೇ ಕೊಡಿಸಿ ಎಂದು ಕೇಳ್ತಾನೆ. ಅದಕ್ಕೆ ಪೊಲೀಸರು ಎಲ್ಲರ ಕಷ್ಟ ಬಗೆರಿಸಬೇಕು. ನಿನೊಬ್ಬನೇ ಅಲ್ಲ ಹೋಗು ಎನ್ನುತ್ತಾರೆ. ಅದನ್ನು ಕೇಳಿ ಭುಜಂಗಯ್ಯ ಶಾಕ್ ಆಗಿದ್ದಾನೆ.
ಕುಸಿದ ಪದ್ಮಿನಿ ತಂದೆ
ಪೊಲೀಸರಿಗೆ ಭುಜಂಗಯ್ಯ ಹೆಚ್ಚು ಕಾಟ ಕೊಟ್ಟ ಕಾರಣ ಆತನನ್ನು ತಳ್ಳಿ ಬಿಟ್ಟಿದ್ದಾರೆ. ಅದಕ್ಕೆ ಭುಜಂಗಯ್ಯ ಬಿದ್ದಿದ್ದಾನೆ. ಅದನ್ನು ನೋಡಿ ಪದ್ಮಿನಿ ಕಣ್ಣೀರು ಹಾಕುತ್ತಿದ್ದಾಳೆ. ತನ್ನ ತಂದೆಗೆ ತನ್ನಿಂದ ಈ ಕಷ್ಟ ಎನ್ನುತ್ತಿದ್ದಾಳೆ. ಭುಜಂಗಯ್ಯ ಏನಾದ್ರೂ ನಾನು ಬಿಡುವುದಿಲ್ಲ. ನನ್ನ ದುಡ್ಡು ನನಗೆ ಬೇಕೇ ಬೇಕು ಎಂದು ಹೇಳ್ತಾನೆ. ಆದ್ರೆ ಅಲ್ಲಿರುವ ಎಲ್ಲಾ ಜನಕ್ಕೂ ಮೋಸ ಆಗಿದೆ. ಈಗ ಭುಜಂಗಯ್ಯ ಏನ್ ಮಾಡ್ತಾನೆ ಅನ್ನೋದೆ ಪ್ರಶ್ನೆ ಆಗಿದೆ.
ಇದನ್ನೂ ಓದಿ: Actor Kiran Raj: ಕನ್ನಡತಿ ಮುಗಿದ ಬಳಿಕ ದುಬೈಗೆ ಹಾರಿದ ಹರ್ಷ, ರಿಲಾಕ್ಸ್ ಮೂಡ್‍ನಲ್ಲಿ ಕಿರಣ್ ರಾಜ್!
ಪದ್ಮಿನಿ ಮದುವೆಗೆ ನೂರೆಂಟು ವಿಘ್ನ. ಭುಜಂಗಯ್ಯ ಈಗ ಏನ್ ಮಾಡ್ತಾನೆ? ಮದುವೆ ಹೇಗೆ ಮಾಡ್ತಾನೆ? ಮುಂದೇನಾಗುತ್ತೆ ಅಂತ ನೋಡೋಕೆ ಪುಣ್ಯವತಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ