ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 10 ಗಂಟೆಗೆ ಪುಣ್ಯವತಿ (Punyavathi) ಎನ್ನುವ ಧಾರಾವಾಹಿ (Serial) ಪ್ರಸಾರವಾಗುತ್ತಿದೆ. ಧಾರಾವಾಹಿ ಶುರುವಾದಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಗಿದೆ. ಈ ಧಾರಾವಾಹಿಯ ನಾಯಕಿ ಪದ್ಮಿನಿ. ಈಕೆಗೆ ಡ್ಯಾನ್ (Dance) ಅಂದ್ರೆ ಪ್ರಾಣ. ಆದ್ರೆ ಮನೆಯವರಿಗೆ ಡ್ಯಾನ್ಸ್ ಇಷ್ಟ ಇಲ್ಲ ಎಂದು ತನ್ನ ಆಸೆ ಬಿಟ್ಟಿದ್ದಾರೆ. ಈ ಧಾರಾವಾಹಿ ಶುರುವಾಗೋದೇ ಕುಣಿವ ಹಕ್ಕಿಗೆ ಮಾಂಗಲ್ಯ ಬಂಧನ ಎಂದು. ಅಲ್ಲದೇ ಪದ್ಮಿನಿಗೆ ನಂದನ್ ಎನ್ನುವವನ ಜೊತೆ ಮದುವೆ ಸೆಟ್ ಆಗಿದೆ. ಮದುವೆ (Marriage) ಮಾಡಲು ಅಪ್ಪ ಭುಜಂಗಯ್ಯ ಹೊಲ, ಮನೆ ಅಡವಿಟ್ಟಿದ್ದಾನೆ. ಅಲ್ಲದೇ ಶ್ರೀಮಂತರ ಮನೆಗೆ ತಕ್ಕಂತೆ ಮದುವೆ ಮಾಡಲು ಹೋಗಿ ಹಣದ (Money) ಸಮಸ್ಯೆ ಎದುರಿಸುತ್ತಿದ್ದಾರೆ.
ನಾನೇ ಮದುವೆ ಮಾಡ್ತೀನಿ ಎಂದ ಭುಜಂಗಯ್ಯ
ಅಮ್ಮಾಜಿ ಎನ್ನುವ ಶ್ರೀಮಂತ ಮನೆಯ ಹುಡುಗ ನಂದನ್. ಅವನಿಗೆ ಪದ್ಮಿನಿ ಮದುವೆ ಸೆಟ್ ಆಗಿದೆ. ಶ್ರೀಮಂತರಾದ ಕಾರಣ ಅಮ್ಮಾಜಿ ನಾವೇ ಮದುವೆ ಮಾಡಿಕೊಳ್ತೇವೆ ಎಂದು ಹೇಳಿರುತ್ತಾರೆ. ಅದಕ್ಕೆ ಭುಜಂಗಯ್ಯನಿಗೆ ಸ್ವಾಭಿಮಾನ ಅಡ್ಡ ಬರುತ್ತೆ. ನಾನೇ ನನ್ನ ಮಗಳ ಮದುವೆ ಮಾಡಿಕೊಡ್ತೇನೆ. ಇದು ನನ್ನ ಗೌರವದ ಪ್ರಶ್ನೆ ಎಂದು ಹೇಳ್ತಾನೆ. ಅದಕ್ಕೆ ಅಮ್ಮಾಜಿ ಒಪ್ಪಿಕೊಳ್ತಾರೆ.
ಕೈ ಕೊಟ್ಟ ಅಡುಗೆಯವರು
ಭುಜಂಗಯ್ಯ ತಾನು ಅಂದುಕೊಂಡಂತೆ ಮಗಳ ಮದುವೆ ಮಾಡಬೇಕೆಂದು ಎಲ್ಲಾ ತಯಾರಿ ನಡೆಸಿದ್ದಾನೆ. ಆದ್ರೆ ನಂದನ್ ಚಿಕ್ಕಮ್ಮ ಅದಕ್ಕೆ ಕಲ್ಲು ಹಾಕುತ್ತಿದ್ದಾಳೆ. ಅಡುಗೆಯವರ ಬಳಿ ಹೋಗಿ, ನಮ್ಮ ಪದ್ಮಿನಿ ಅಪ್ಪ ತುಂಬಾ ಬಡವರು. ಅವರ ಬಳಿ ಹಣವಿಲ್ಲ. ನೋಡಿ ಮೊದಲೇ ಎಲ್ಲಾ ಹಣ ಕೇಳಿ ಎನ್ನುತ್ತಾರೆ. ಹೇಗಾದ್ರೂ ಮಾಡಿ ಈ ಮದುವೆ ನಿಲ್ಲಿಸಬೇಕು ಎಂದು ಈ ರೀತಿ ಮಾಡ್ತಿದ್ದಾಳೆ.
ಭುಜಂಗಯ್ಯನಿಗೆ ಅವಮಾನ
ಅಡುಗೆಯವರು ಭುಜಂಗಯ್ಯನಿಗೆ ದುಡ್ಡು ಕೇಳಿದ್ದಾರೆ. ಆದ್ರೆ ಭುಜಂಗಯ್ಯ ಕೊಟ್ಟಿಲ್ಲ. ಮದುವೆಯೆಲ್ಲಾ ಆದ ಮೇಲೆ ಕೊಡ್ತೀನಿ ಎಂದಿದ್ದಾನೆ. ಅದಕ್ಕೆ ಅಡುಗೆಯವರು ಗೆಸ್ಟ್ ಗಳಿಗೆ ಊಟ ಬಡಿಸದೇ ಹೋಗಿದ್ದಾರೆ. ಅದಕ್ಕೆ ಭುಜಂಗಯ್ಯನಿಗೆ ಅವಮಾನ ಆಗಿದೆ. ಅವರ ಕಾಲಿಡಿದ್ರು ಅಡುಗೆಯವರು ಬಿಟ್ಟು ಹೋಗಿದ್ದಾರೆ. ಭುಜಂಗ ಕಣ್ಣೀರಿಟ್ಟಿದ್ದಾನೆ.
ಸಹಾಯ ಮಾಡ್ತೀನಿ ಎಂದ ನಂದನ್
ನಂದನ್ ಗೆ ಮದುವೆ ಮನೆಯಲ್ಲಿ ನಡೆದ ವಿಷ್ಯ ಗೊತ್ತಾಗಿದೆ. ಅದಕ್ಕೆ ನಂದನ್ ಬಂದ ಪದ್ಮಿನಿ ಬಳಿ ಹಣದ ಸಹಾಯ ಮಾಡ್ತೇನೆ ಎಂದಿದ್ದಾನೆ. ಆದ್ರೆ ಅದಕ್ಕೆ ಪದ್ಮಿನಿ ಒಪ್ಪಿಲ್ಲ. ನಮ್ಮ ಅಪ್ಪನಿಗೆ ಯಾವ ದುಡ್ಡಿನ ಸಮಸ್ಯೆಯೂ ಆಗಿಲ್ಲ. ನೀವು ಯಾವ ಸಹಾಯ ಮಾಡೋದು ಬೇಡ. ನನ್ನನ್ನು ನೀವು ಇಷ್ಟ ಪಡಬಾರದಿತ್ತು ನಂದನ್, ಶ್ರೀಮಂತ ಮನೆ ಹುಡುಗಿಯನ್ನು ಇಷ್ಟ ಪಡಬೇಕು ಎಂದು ಕಣ್ಣೀರು ಹಾಕುತ್ತಾ ಹೇಳಿದ್ದಾಳೆ.
ಸ್ವಾಭಿಮಾನಿ ಅಪ್ಪ
ನಮ್ಮ ಅಪ್ಪ ಯಾರ ಬಳಿಯೂ ಸಹಾಯ ಪಡೆಯಲ್ಲ. ಅವರು ತುಂಬಾ ಸ್ವಾಭಿಮಾನಿ. ಮನೆಯವರ ಬಳಿಯೇ ಸಹಾಯ ಪಡೆಯಲ್ಲ. 20 ವರ್ಷದಿಂದ ಅಪ್ಪನ್ನನು ನೋಡಿದ್ದೀನಿ. ಮನೆಯವರ ಬಳಿಯೇ ಸ್ವಾಭಿಮಾನ ಬಿಡಲ್ಲ. ಅಲ್ಲದೇ ನೀವು ಸಹಾಯ ಮಾಡ್ತೀನಿ ಅಂದ್ರೂ ಅವರು ಪಡೆಯಲ್ಲ. ಅವರ ಬಗ್ಗೆ ನನಗೆ ಗೊತ್ತು ಎಂದು ಪದ್ಮಿನಿ ಹೇಳಿದ್ದಾಳೆ.
ಇದನ್ನೂ ಓದಿ: Lakshana: ಪ್ರೀತಿ ಹೇಳಿಕೊಳ್ಳುವ ಖುಷಿಯಲ್ಲಿ ಭೂಪತಿ, ದೂರವಾಗುವ ನೋವಿನಲ್ಲಿ ನಕ್ಷತ್ರಾ
ಎಲ್ಲಾ ಕಷ್ಟಗಳ ನಡುವೆ ಪದ್ಮಿನಿ-ನಂದನ್ ಮದುವೆ ಆಗುತ್ತಾ? ಭುಜಂಗಯ್ಯ ಮದುವೆ ಮಾಡುವಲ್ಲಿ ಯಶಸ್ವಿಯಾಗ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ಪುಣ್ಯವತಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ