ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 10 ಗಂಟೆಗೆ ಪುಣ್ಯವತಿ (Punyavathi) ಎನ್ನುವ ಧಾರಾವಾಹಿ ಪ್ರಸಾರವಾಗುತ್ತಿದೆ. ಧಾರಾವಾಹಿ (Serial) ಶುರು ಆದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಗಿದೆ. ಈ ಧಾರಾವಾಹಿಯ ನಾಯಕಿ ಪದ್ಮಿನಿ. ಈಕೆಗೆ ಡ್ಯಾನ್ ಅಂದ್ರೆ ಪ್ರಾಣ. ಆದ್ರೆ ಮನೆಯವರಿಗೆ ಡ್ಯಾನ್ಸ್ ಇಷ್ಟ ಇಲ್ಲ ಎಂದು ತನ್ನ ಆಸೆ ಬಿಟ್ಟಿದ್ದಾರೆ. ಈ ಧಾರಾವಾಹಿ ಶುರುವಾಗೋದೇ ಕುಣಿವ ಹಕ್ಕಿಗೆ ಮಾಂಗಲ್ಯ ಬಂಧನ ಎಂದು. ಅಲ್ಲದೇ ಪದ್ಮಿನಿಗೆ ನಂದನ್ ಎನ್ನುವವನ ಜೊತೆ ಮದುವೆ ಸೆಟ್ ಆಗಿದೆ. ಮದುವೆಗೆ ಹಣದ ಸಮಸ್ಯೆ ಆಗಿರುತ್ತೆ, ಅದಕ್ಕೆ ಪದ್ಮಿನಿ ಡ್ಯಾನ್ಸ್ (Dance) ಮಾಸ್ಟರ್ ನಿಂದ ಸಾಲ ಪಡೆದಿರುತ್ತಾಳೆ. ಆತ ಮದುವೆಗೆ ಅಡ್ಡಿ ಮಾಡ್ತಾ ಇದ್ದಾನೆ. ಎಲ್ಲಾ ಕಷ್ಟಗಳನ್ನು ದಾಟಿ ನಂದನ್ ಜೊತೆ ಹಸೆಮಣೆ ಏರ್ತಾಳಾ ನೋಡಬೇಕು.
ಡ್ಯಾನ್ಸ್ ಗೆ ಹೋಗಿದ್ದ ಪದ್ಮಿನಿ
ಮದುವೆ ಸೆಟ್ ಆಗೋಕು ಮುಂಚೆ ಪದ್ಮಿನಿ ಡ್ಯಾನ್ಸ್ ಮಾಡಲು ಹೋಗಿರುತ್ತಾಳೆ. ಆಕೆಗೆ ಡ್ಯಾನ್ಸ್ ತುಂಬಾ ಇಷ್ಟ ಇರುತ್ತೆ. ಆ ಡ್ಯಾನ್ಸ್ ವಿಡಿಯೋವನ್ನು ಡ್ಯಾನ್ಸ್ ಮಾಸ್ಟರ್ ಶೋಭರಾಜ್ ವಿಡಿಯೋ ಮಾಡಿಕೊಂಡಿರುತ್ತಾನೆ. ಪದ್ಮಿನಿ ನಮ್ಮ ಶೋಗೆ ಬಂದ್ರೆ, ನಮ್ಮ ಶೋ ಹಿಟ್ ಆಗೋದು ಖಂಡಿತಾ ಎಂದು ಆಕೆಯನ್ನು ಬೆನ್ನು ಬಿಡದೇ ಕಾಡ್ತಾ ಇದ್ದಾನೆ.
ಮದುವೆಗೆ ಹಣ ಸಹಾಯ
ಪದ್ಮಿನಿ ತಂದೆ ನಂದನ್ ಜೊತೆ ಗ್ರ್ಯಾಂಡ್ ಆಗಿ ಮದುವೆ ಮಾಡಲು ಒಪ್ಪಿರುತ್ತಾನೆ. ಆದ್ರೆ ದುಡ್ಡಿನ ಸಮಸ್ಯೆ ಆಗಿರುತ್ತೆ. ಅದಕ್ಕೆ ಪದ್ಮಿನಿ ಅತ್ತೆ ಶೋಭರಾಜ್ ಹಣದ ಸಹಾಯ ಮಾಡ್ತಾನೆ. ಆದ್ರೆ ಒಂದು ಕಂಡಿಷನ್ ಹಾಕ್ತಾನೆ. ಇವತ್ತೇ ಬಂದು ಒಂದು ಡ್ಯಾನ್ಸ್ ಮಾಡಬೇಕು ಎಂದು ಹೇಳ್ತಾನೆ. ಪದ್ಮಿನಿ ಮದುವೆ ಇದೆ ಬರಲ್ಲ ಎಂದು ಹೇಳ್ತಾಳೆ. ಅದಕ್ಕೆ ಶೋಭರಾಜ್ ಮದುವೆ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡ್ತಾನೆ.
ಪೂರ್ವಿಗೆ ಮದುವೆ ಡ್ರೆಸ್ ಹಾಕಿ ಹೋಗಿದ್ದ ಪದ್ಮಿನಿ
ಪದ್ಮಿನಿ ತನ್ನ ತಂಗಿ ಪೂರ್ವಿಗೆ ಮದುವೆ ಡ್ರೆಸ್ ಹಾಕಿಸಿ ಡ್ಯಾನ್ಸ್ ಮಾಡಲು ಹೋಗಿರುತ್ತಾಳೆ. ಪೂರ್ವಿಗೆ ಭಯ ಸ್ಟಾರ್ಟ್ ಆಗಿರುತ್ತೆ. ಶೋಭರಾಜ್ ಪದ್ಮಿನಿಯನ್ನೂ ಕೂಡಿ ಹಾಕಿರುತ್ತಾನೆ. ಪದ್ಮಿನಿ ಮದುವೆಯಾದ್ರೆ ಡ್ಯಾನ್ಸ್ ಗೆ ಬರಲ್ಲ ಎಂದು ಈ ರೀತಿ ಮಾಡಿದ್ದಾನೆ. ಪದ್ಮಿನಿಗೆ ಮದುವೆಗ ಹೋಗಲು ಆಗದೇ ಒದ್ದಾಡುತ್ತಿದ್ದಾಳೆ. ದಯಮಾಡಿ ಬಾಗಿಲು ತೆಗೆಯಿರಿ ಎಂದು ಕೇಳಿಕೊಳ್ತಾಳೆ. ಆದ್ರೆ ಶೋಭರಾಜ್ ತೆಗೆಯಲ್ಲ.
ತಪ್ಪಿಸಿಕೊಂಡು ಬಂದ ಪದ್ಮಿನಿ
ಪದ್ಮಿನಿ ಲಾಕ್ ಆದ ರೂಮ್ ನಿಂದ ತಪ್ಪಿಸಿಕೊಂಡು ಬಂದಿದ್ದಾಳೆ. ಅಲ್ಲಿಂದ ಆಟೋ ಹಿಡಿದು ಮದುವೆ ಮನೆಯತ್ತ ಹೋಗುತ್ತಿದ್ದಾಳೆ. ಅವಳನ್ನು ಶೋಭರಾಜ್ ಫಾಲೋ ಮಾಡಿಕೊಂಡು ಬಂದಿದ್ದಾನೆ. ಮದುವೆ ಮನೆಯತ್ತ ಹೋಗುತ್ತಿದ್ದಾಳೆ. ಎಲ್ಲಾ ಕಷ್ಟಗಳನ್ನು ದಾಟಿ ಪದ್ಮಿನಿ ನಂದನ್ ಜೊತೆ ಮದುವೆಯಾಗ್ತಾಳಾ ನೋಡಬೇಕು.
ನಂದನ್ ಜೊತೆ ಯಾರಾಗ್ತಾರೆ ಮದುವೆ?
ಪೂರ್ವಿ ಮದುವೆ ಹೆಣ್ಣಿನ ವೇಷದಲ್ಲಿದ್ದಾಳೆ. ಮದುವೆ ಮುಹೂರ್ತ ಹತ್ತಿರ ಬರುತ್ತಿದೆ. ಆದ್ರೆ ಪದ್ಮಿನಿ ಇನ್ನೂ ಬಂದಿಲ್ಲ. ಅದಕ್ಕೆ ಪೂರ್ವಿ ಭಯಪಡ್ತಾ ಇದ್ದಾಳೆ. ನಂದನ್ ಪದ್ಮಿನಿ ಜೊತೆ ಮದುವೆಯಾಗಲು ಕಾತರದಿಂದ ಕಾಯ್ತಾ ಇದ್ದೀನಿ. ಹಾಗಾದ್ರೆ ನಂದನ್ ಜೊತೆ ಮದುವೆಯಾಗುವುದು ಯಾರು? ಪೂರ್ವಿನಾ? ಪದ್ಮಿನಿನಾ? ಅನ್ನೋ ಕುತೂಹಲ ಹೆಚ್ಚಾಗಿದೆ.
ಇದನ್ನೂ ಓದಿ: Lakshmi Baramma: ಕೀರ್ತಿ ನೆನೆದು ಕಣ್ಣೀರಿಟ್ಟ ವೈಷ್ಣವ್, ತನ್ನ ಮೇಲೆ ಪ್ರೀತಿ ಇಲ್ಲ ಎಂದು ಗೊತ್ತಾಗಿ ಕುಸಿದ ಲಕ್ಷ್ಮಿ!
ಪದ್ಮಿನಿ ಮದುವೆಗೆ ನೂರೆಂಟು ವಿಘ್ನ, ನಂದನ್ ಜೊತೆ ಮದುವೆ ಆಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಪುಣ್ಯವತಿ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ