ಕಲರ್ಸ್ ಕನ್ನಡ (Colors Kannada) ವಾಹಿನಿಯು ಜನರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ಈಗಾಗಲೇ ಧಾರಾವಾಹಿಗಳ (Serials) ಮೂಲಕ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಆ ಸಾಲಿಗೆ ಪುಣ್ಯವತಿ (Punyavathi) ಧಾರಾವಾಹಿಯೂ ಸೇರಿದೆ. ಕಲರ್ಸ್ ಕನ್ನಡದಲ್ಲಿ ಪ್ರತಿದಿನ ರಾತ್ರಿ 10 ಗಂಟೆಗೆ ಪುಣ್ಯವತಿ ಎನ್ನುವ ಧಾರಾವಾಹಿ ಪ್ರಸಾರವಾಗ್ತಿದೆ. ಈ ಧಾರಾವಾಹಿಯ ನಾಯಕಿ ಪದ್ಮಿನಿ. ಈಕೆಗೆ ಡ್ಯಾನ್ ಅಂದ್ರೆ ಪ್ರಾಣ. ಡ್ಯಾನ್ಸ್‌ನಲ್ಲೇ ಏನಾದ್ರೂ ಸಾಧನೆ ಮಾಡಬೇಕು ಎಂದು ಪದ್ಮಿನಿ ಹಂಬಲಿಸುತ್ತಿದ್ದಾಳೆ. ಆದ್ರೆ ಮನೆಯಲ್ಲಿ ಪದ್ಮಿನಿ ಅಪ್ಪನಿಗೆ ಡ್ಯಾನ್ಸ್ ಅಂದ್ರೆ ಇಷ್ಟ ಇಲ್ಲ. ಡ್ಯಾನ್ಸ್ (Dance), ಹಾಡು ಸಹವಾಸಕ್ಕೆ ಹೋಗಬಾರದು ಎಂದು ಹೇಳಿದ್ದಾರೆ. ಅಲ್ಲದೇ ನಂದನ್ ಮನೆಯವರು ಪದ್ಮಿನಿಯನ್ನು ನೋಡಿ ಮದುವೆಗೆ (Marriage) ಒಪ್ಪಿಕೊಂಡಿದ್ದಾರೆ.
ಪದ್ಮಿನಿಗೆ ಡ್ಯಾನ್ಸ್ ಇಷ್ಟ
ಪುಣ್ಯವತಿ ಧಾರಾವಾಹಿ ಕುಣಿವ ಹಕ್ಕಿಗೆ ಮಾಂಗಲ್ಯ ಬಂಧನ ಎಂಬ ಅಡಿ ಬರಹದಲ್ಲಿ ಶುರುವಾಗಿದೆ. ಇಲ್ಲಿ ಹೆಣ್ಣು ಮಕ್ಕಳಿಗೆ ಕನಸು ಕಾಣಲು ಸಹ ಹಕ್ಕಿಲ್ಲ. ಅಪ್ಪ ಹೇಳಿದ ಹಾಗೇ ಕೇಳಬೇಕು. ಆದ್ರೂ ಪದ್ಮಿನಿ ಅಪ್ಪನ ಮಾತು ಮೀರಿ ಡ್ಯಾನ್ಸ್ ಮಾಡಲು ಬೆಂಗಳೂರಿಗೆ ಹೋಗಿದ್ದಾಳೆ. ಎರಡನೇ ಸುತ್ತಿನ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಾಳೆ.
ಪದ್ಮಿನಿ ಮನೆಗೆ ಹೋಗಿದ್ದ ನಂದನ್ ಮತ್ತು ಮನೆಯವರು
ಪದ್ಮಿನಿಯನ್ನು ನಂದನ್ ಮನೆಯವರೆಲ್ಲಾ ನೋಡಿರಲಿಲ್ಲ. ಅದಕ್ಕೆ ಅವರ ಮನೆಗೆ ಹೋಗಿದ್ದರು. ಆದ್ರೆ ಪದ್ಮಿನಿ ಇರಲಿಲ್ಲ. ದೇವರ ಹರಕೆ ತೀರಿಸಲು ಹೋಗಿದ್ದಾಳೆ ಎಂದು ಪದ್ಮಿನಿ ಅಪ್ಪ ಹೇಳ್ತಾರೆ. ಪದ್ಮಿನಿ ಮನೆಯಲ್ಲಿ ಅದೇ ಸುಳ್ಳು ಹೇಳಿ ಹೋಗಿದ್ದಾಳೆ. ಅದಕ್ಕೆ ನಂದನ್ ಬೇಸರ ಮಾಡಿಕೊಂಡು ಹೋಗಿರುತ್ತಾನೆ.
ಅಮ್ಮಾಜಿಗೆ ನಂಬಿಕೆ
ಅಮ್ಮಾಜಿ ಪದ್ಮಿನಿಯನ್ನು ನೋಡಿ ಮನಸಾರೆ ಒಪ್ಪಿಕೊಂಡಿದ್ದರು. ಇವಳೇ ನಮ್ಮ ಮನೆಗೆ ತಕ್ಕ ಸೊಸೆ. ಡ್ಯಾನ್ಸ್, ಪಬ್, ಆ ರೀತಿಯ ಯಾವುದೇ ಹವ್ಯಾಸ ಇಲ್ಲ ಎಂದುಕೊಂಡಿದ್ದರು. ಹೆಣ್ಣು ನೋಡಲು ಬಂದಾಗ ಪದ್ಮಿನಿ ಸಹ ಅದನ್ನೇ ಹೇಳಿದ್ದಳು. ನನಗೆ ಬೇರೆ ಅಭ್ಯಾಸ ಇಲ್ಲ ಎಂದು. ಆದ್ರೆ ಅವಳಿಗೆ ಡ್ಯಾನ್ಸ್ ಇಷ್ಟ.
ಮಾರ್ಡನ್ ಡ್ರೆಸ್‍ನಲ್ಲಿ ಹುಡಗನ ಜೊತೆ ಡ್ಯಾನ್ಸ್
ಪದ್ಮಿನಿ ಯಾವಾಗಲೂ ಲಂಗಾ ದಾವಣಿ ಹಾಕುವುದು. ಆದ್ರೆ ಡ್ಯಾನ್ಸ್ ಗಾಗಿ ಮಾರ್ಡನ್ ಬಟ್ಟೆ ಹಾಕಬೇಕಿದೆ. ಅಲ್ಲದೇ ಹುಡುಗನ ಜೊತೆ ಡ್ಯಾನ್ಸ್ ಮಾಡಬೇಕಿದೆ. ಅದಕ್ಕೆ ಮೊದಲು ಪದ್ಮಿನಿ ಒಪ್ಪಿರಲಿಲ್ಲ. ಆದ್ರೆ ಎಲ್ಲರೂ ಡ್ಯಾನ್ಸ್ ಗಾಗಿ ಮಾತ್ರ ಎಂದು ಹೇಳಿ ಒಪ್ಪಿಸಿದ್ದಾರೆ. ಅದಕ್ಕೆ ಒಪ್ಪಿ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡಿದ್ದಾಳೆ.
ಪದ್ಮಿನಿ ನೋಡಿ ನಂದನ್ ಶಾಕ್
ಪದ್ಮಿನಿ ಡ್ಯಾನ್ಸ್ ಕಾರ್ಯಕ್ರಮದ ಊಟದ ಆರ್ಡರ್ ನಂದನ್ ಅವರ ಅಮ್ಮಜೀ ಸ್ವೀಟ್ಸ್ ಗೆ ಸಿಕ್ಕಿರುತ್ತೆ. ಅದಕ್ಕೆ ನಂದನ್ ಅಲ್ಲಿ ಬಂದಿರುತ್ತಾನೆ. ನಂದನ್ ಪದ್ಮಿನಿ ಡ್ಯಾನ್ಸ್ ಮಾಡುವುದನ್ನು ನೋಡಿ ಶಾಕ್ ಆಗಿದ್ದಾನೆ. ನಾನು ಇಷ್ಟ ಪಟ್ಟ ಹುಡುಗಿ ಇವಳೇನಾ ಎಂದು ಆತಂಕಗೊಂಡಿದ್ದಾನೆ. ಪದ್ಮಿನಿ ಸಹ ನಂದನ್ ನೋಡಿ ಗಾಬರಿಯಾಗಿದ್ದಾಳೆ.
ಈ ಸಂಬಂಧ ಮುರಿದು ಬೀಳುತ್ತಾ?
ಪದ್ಮಿನಿ ಮತ್ತು ನಂದನ್ ಮನೆಯವರು ಇಬ್ಬರು ಒಪ್ಪಿಕೊಂಡು ಮದುವೆ ಮಾತುಕತೆ ಮಾಡುತ್ತಿದ್ದಾರೆ. ಚಿಕ್ಕದಾಗಿ ತಾಂಬೂಲವನ್ನೂ ಬದಲಾಯಿಸಿಕೊಂಡಿದ್ದಾರೆ. ಈಗ ಪದ್ಮಿನಿ ಡ್ಯಾನ್ಸ್ ಮಾಡ್ತಾಳೆ ಅಂತ ಗೊತ್ತಾದ್ರೆ ಅಮ್ಮಾಜಿ ಈ ಮದುವೆಗೆ ಖಂಡಿತಾ ಒಪ್ಪಲ್ಲ. ಅಲ್ಲದೇ ಪದ್ಮಿನಿ ಅಪ್ಪ ಸಹ ಇದನ್ನು ಸಹಿಸಲ್ಲ.
ಇದನ್ನೂ ಓದಿ: Saanya Iyer: ಗ್ರಾಜುಯೇಟ್ ಆದ ಸಾನ್ಯಾ ಐಯ್ಯರ್, ಪದವಿ ಪಡೆದ ಖುಷಿಯಲ್ಲಿ 'ಪುಟ್ಟಗೌರಿ'!
ನಂದನ್ ಈ ಮದುವೆಯಿಂದ ದೂರ ಸರಿಯುತ್ತಾನಾ? ಪದ್ಮಿನಿ ಈಗ ಏನ್ ಮಾಡ್ತಾಳೆ? ಮುಂದೇನಾಗುತ್ತೆ ಅಂತ ನೋಡೋಕೆ ಪುಣ್ಯವತಿ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ