ಕಲರ್ಸ್ ಕನ್ನಡ (Colors Kannada) ವಾಹಿನಿಯು ಜನರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ಈಗಾಗಲೇ ಧಾರಾವಾಹಿಗಳ ಮೂಲಕ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಆ ಸಾಲಿಗೆ ಪುಣ್ಯವತಿ (Punyavathi) ಧಾರಾವಾಹಿಯೂ (Serial) ಸೇರಿದೆ. ಕಲರ್ಸ್ ಕನ್ನಡದಲ್ಲಿ ಪ್ರತಿದಿನ ರಾತ್ರಿ 10 ಗಂಟೆಗೆ ಪುಣ್ಯವತಿ ಎನ್ನುವ ಧಾರಾವಾಹಿ ಪ್ರಸಾರವಾಗ್ತಿದೆ. ಈ ಧಾರಾವಾಹಿಯ ನಾಯಕಿ ಪದ್ಮಿನಿ. ಈಕೆಗೆ ಡ್ಯಾನ್ (Dance) ಅಂದ್ರೆ ಪ್ರಾಣ. ಡ್ಯಾನ್ಸ್ ನಲ್ಲೇ ಏನಾದ್ರೂ ಸಾಧನೆ ಮಾಡಬೇಕು ಎಂದು ಪದ್ಮಿನಿ ಹಂಬಲಿಸುತ್ತಿದ್ದಾಳೆ. ಆದ್ರೆ ಮನೆಯಲ್ಲಿ ಪದ್ಮಿನಿ ಅಪ್ಪನಿಗೆ ಡ್ಯಾನ್ಸ್ ಅಂದ್ರೆ ಇಷ್ಟ ಇಲ್ಲ. ಡ್ಯಾನ್ಸ್, ಹಾಡು ಸಹವಾಸಕ್ಕೆ ಹೋಗಬಾರದು ಎಂದು ಹೇಳಿದ್ದಾರೆ. ಪದ್ಮಿನಿ ಮದುವೆ ಆಗೋ ಹುಡುಗ ಪದ್ಮಿನಿ ಡ್ಯಾನ್ಸ್ ಮಾಡುವುದನ್ನು ನೋಡಿ ಕೋಪ (Angry) ಮಾಡಿಕೊಂಡಿದ್ದಾನೆ.
ಡ್ಯಾನ್ಸ್ ಮಾಡಿದ್ದ ಪದ್ಮಿನಿ
ಪದ್ಮಿನಿಗೆ ಡ್ಯಾನ್ಸ್ ಅಂದ್ರೆ ಇಷ್ಟ. ಅದಕ್ಕೆ ಬೆಂಗಳೂರಿನಲ್ಲಿ ಡ್ಯಾನ್ಸ್ ಸ್ಪರ್ಧೆವೊಂದಕ್ಕೆ ಸೆಲೆಕ್ಟ್ ಆಗಲು ಆಡಿಷನ್ ನಲ್ಲಿ ಭಾಗವಹಿಸಿದ್ದಳು.ಅದನ್ನು ನಂದನ್ ನೋಡಿ ಬಿಟ್ಟಿದ್ದಾನೆ. ತಾನು ಮೆಚ್ಚಿಕೊಂಡು ಹುಡುಗಿ ಇವಳೇನಾ? ಮನೆಯಲ್ಲಿ ದೇವಸ್ಥಾನಕ್ಕೆ ಹೋಗ್ತೇನೆ ಎಂದು ಸುಳ್ಳು ಹೇಳಿ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಳೆ ಎಂದು ಕೋಪ ಮಾಡಿಕೊಂಡಿದ್ದಾನೆ.
ನಂದನ್ ಬಳಿ ಕ್ಷಮೆ ಕೇಳಿದ ಪದ್ಮಿನಿ
ತನ್ನ ಮದುವೆ ಆಗೋ ಹುಡುಗ ಡ್ಯಾನ್ಸ್ ನೋಡಿದ್ದಾನೆ ಎಂದು ಪದ್ಮಿನಿ ಗಾಬರಿಯಾಗಿದ್ದಾಳೆ. ಅವನ ಬಳಿ ಕೈ ಮಗಿದು ಕ್ಷಮೆ ಕೇಳಿದ್ದಾಳೆ. ನನಗೆ ಡ್ಯಾನ್ಸ್ ಅಂದ್ರೆ ಇಷ್ಟ. ಇದನ್ನು ನಿಮ್ಮ ಬಳಿ ನಾನೇ ಹೇಳಬೇಕು ಅಂದಕೊಂಡಿದ್ದೆ ಆದ್ರೆ ಆಗಿರಲಿಲ್ಲ. ಅಪ್ಪನ ಬಳಿ ಸುಳ್ಳು ಹೇಳಿ ಬಂದಿದ್ದೇನೆ. ಅಪ್ಪನಿಗೆ ಡ್ಯಾನ್ಸ್ ಅಂದ್ರೆ ಇಷ್ಟ ಇಲ್ಲ ಅದಕ್ಕೆ ಎಂದು ಹೇಳಿದ್ದಾಳೆ.
ಕಡಿಮೆಯಾಗದ ನಂದನ್ ಕೋಪ
ಡ್ಯಾನ್ಸ್ ಗಾಗಿ ಹೆತ್ತಪ್ಪನಿಗೆ ಮೋಸ ಮಾಡ್ತಾ ಇದ್ದೀಯಾ. ಮದುವೆ ಆದ ಮೇಲೆ ನನ್ನ ಬಳಿ ಸುಳ್ಳು ಹೇಳಲ್ಲ ಎಂದು ಹೇಗೆ ನಂಬಲಿ. ನಾನು ನಮ್ಮ ಮದುವೆ ನಮ್ಮಿಬ್ಬಿರ ಪ್ರೀತಿ ಮೇಲೆ ನಡೆಯುತ್ತಿದೆ ಎಂದುಕೊಂಡಿದ್ದೆ. ಆದ್ರೆ ಸುಳ್ಳಿನ ಮೇಲೆ ನಿಂತಿದೆ ಎಂದುಕೊಂಡಿರಲಿಲ್ಲ ಎಂದು ಬೇಸರ ಮಾಡಿಕೊಂಡಿದ್ದಾನೆ. ಪದ್ಮಿನಿ ಮಾತು ಕೇಳದೇ ಹೊರಟು ಹೋಗಿದ್ದಾನೆ.
ಪದ್ಮಿನಿ ಮನೆಗೆ ಬಂದ ನಂದನ್
ನಂದನ್ ಗೆ ಪದ್ಮಿನಿ ಮೇಲೆ ಯಾಕೋ ನಂಬಿಕೆ ಬರ್ತಾ ಇಲ್ಲ. ಪದ್ಮಿನಿ ಎಷ್ಟೇ ಬೇಡಿಕೊಂಡ್ರೂ ಕೇಳುತ್ತಿಲ್ಲ. ಮನೆಗೆ ಹೋಗಿ ಮಾತನಾಡೋಣ ಇನ್ನೊಮ್ಮೆ ಎಂದು ನಂದನ್ ಬಂದಿದ್ದಾನೆ. ಪದ್ಮಿನಿ ಅತ್ತೆ ಊರ್ವಶಿ ಹೇಳಿದ್ದಾಳೆ. ಪದ್ಮಿನಿ ನಿಮ್ಮ ಮನೆಗೆ ತಕ್ಕ ಸೊಸೆ. ಆಕೆಯನ್ನು ಒಂದು ಡ್ಯಾನ್ಸ್ ನಿಂದ ಅಳೆಯಬೇಡಿ. ಒಳಗಣ್ಣಿನಿಂದ ಓಡಿ ಎಂದು ಹೇಳಿ ಹೋಗಿದ್ದಾಳೆ.
ಮದುವೆ ಮುರಿಯುತ್ತಾ?
ಯಾರು ಏನೇ ಹೇಳಿದ್ರೂ ನಂದನ್‍ಗೆ ಸಮಾಧಾನ ಆಗ್ತಾ ಇಲ್ಲ. ಅಮ್ಮಾಜಿ ಬೇರೆ ಮದುವೆಯನ್ನು ಬೇಗ ಮಾಡೋಣ ಎಂದು ಹೇಳುತ್ತಿದ್ದಾರೆ. ಎಲ್ಲವನ್ನೂ ಮರೆತು, ನಂದನ್ ಮೊದಲಿನಂತೆ ಪದ್ಮಿನಿಯನ್ನು ಇಷ್ಟ ಪಡ್ತಾನಾ? ಆಕೆಯನ್ನು ಮದುವೆ ಆಗ್ತಾನಾ ಅನ್ನೋ ಪ್ರಶ್ನೆಗಳು ಎದ್ದಿವೆ. ಇಲ್ಲ ಮದುವೆ ಬೇಡ ಎಂದು ಹೇಳ್ತಾನಾ ನೋಡಬೇಕು.
ಇದನ್ನೂ ಓದಿ: Bhagya Lakshmi: ಮಾರ್ಡನ್ ಲುಕ್‍ನಲ್ಲಿ ಲಕ್ಷ್ಮಿ, ವೈಷ್ಣವ್ ಮದುವೆ ಆಗಲು ನಿರಾಕರಣೆ!
ಪದ್ಮಿನಿ ಡ್ಯಾನ್ಸ್ ಮದುವೆಗೆ ಅಡ್ಡಿ ಆಗುತ್ತಾ? ನಂದನ್ ಎಲ್ಲ ಮರೆತು ಮದುವೆ ಆಗ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ಪುಣ್ಯವತಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ