ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 10 ಗಂಟೆಗೆ ಪುಣ್ಯವತಿ (Punyavathi) ಧಾರಾವಾಹಿ (Serial) ಪ್ರಸಾರವಾಗುತ್ತಿದೆ. ಆರಂಭದಿಂದಲೂ ಜನರನ್ನು ಹಿಡಿದಿಡುವಲ್ಲಿ ಧಾರಾವಾಹಿ ಯಶಸ್ವಿಯಗಿದೆ. ಪುಣ್ಯವತಿ ಧಾರಾವಾಹಿಯನ್ನು ಜನ ಮೆಚ್ಚಿಕೊಂಡಿದ್ದಾರೆ. ಮಂಡ್ಯ ಭಾಷೆ ವೀಕ್ಷಕರಿಗೆ ಹತ್ತಿರವಾಗಿದೆ. ಈ ಧಾರಾವಾಹಿಯ ನಾಯಕಿ ಪದ್ಮಿನಿ. ಈಕೆಗೆ ಡ್ಯಾನ್ (Dance) ಅಂದ್ರೆ ಪ್ರಾಣ. ಆದ್ರೆ ಮನೆಯಲ್ಲಿ ಪದ್ಮಿನಿ ಅಪ್ಪ ಭುಜಂಗಯ್ಯನಿಗೆ ಡ್ಯಾನ್ಸ್ ಅಂದ್ರೆ ಇಷ್ಟ ಇಲ್ಲ. ಡ್ಯಾನ್ಸ್, ಹಾಡು ಸಹವಾಸಕ್ಕೆ ಹೋಗಬಾರದು ಎಂದು ಹೇಳಿದ್ದಾರೆ. ಈ ಧಾರಾವಾಹಿ ಶುರುವಾಗೋದೇ ಕುಣಿವ ಹಕ್ಕಿಗೆ ಮಾಂಗಲ್ಯ ಬಂಧನ ಎಂದು. ಪದ್ಮಿನಿಗೆ ನಂದನ್ ಎಂಬ ಹುಡುಗನ ಜೊತೆ ಮದುವೆ (Marriage) ಸೆಟ್ ಆಗಿದೆ. ಆದರೆ ನಂದನ್ ಕುಡಿದು ಪೊಲೀಸ್ ಠಾಣೆಯಲ್ಲಿದ್ದಾನೆ.
ನಂದನ್ ಜೊತೆ ಮದುವೆ
ಈ ಧಾರಾವಾಹಿಯ ನಾಯಕ ನಂದನ್. ಈತ ಅಮ್ಮಾಜಿ ಎನ್ನುವ ಶ್ರೀಮಂತ ಮನೆತನದ ಹುಡುಗ. ಇವನಿಗೆ ಪದ್ಮಿನಿ ಇಷ್ಟ ಆಗಿದ್ದಳು. ಮನೆಯಲ್ಲಿ ಹೇಳಿ, ಎಲ್ಲವೂ ಸರಿ ಹೋಗಿ ಮದುವೆ ತನಕ ಬಂದಿದ್ದಾರೆ. ಭುಜಂಗಯ್ಯ, ಪದ್ಮಿನಿಯ ಮದುವೆ ಮಾಡಲು ಇರೋ ಹೊಲ, ಮನೆ ಅಡವಿಟ್ಟಿದ್ದಾನೆ. ಇದು ಪದ್ಮಿನಿಗೆ ಗೊತ್ತಾಗಿ ತುಂಬಾ ಬೇಸರ ಮಾಡಿಕೊಂಡಿದ್ದಾಳೆ. ನನ್ನಿಂದ ಅಪ್ಪನ ಹೊಲ, ಮನೆ ಎಲ್ಲ ಹೋಗುತ್ತೆ ಎಂದು ಬೇಸರ ಮಾಡಿಕೊಂಡಿದ್ದಾಳೆ.
ಮದುವೆ ಬೇಡ ಎಂದ ಪದ್ಮಿನಿ
ಪದ್ಮಿನಿ, ನಾನು-ನೀವು ಈ ಜನುಮದಲ್ಲಿ ಒಂದಾಗಲು ಸಾಧ್ಯವಿಲ್ಲ. ಈ ಮದುವೆ ನಡೆಯೋದಿಲ್ಲ. ನಿಲ್ಲಿಸಿ ಬಿಡಿ ಇದನ್ನೆಲ್ಲ ಎಂದು ನಂದನ್ ಬಳಿ ಹೇಳ್ತಾ ಇದ್ದಾಳೆ. ಮದುವೆಯಾದ್ರೆ, ತನ್ನ ಅಪ್ಪ ಸಾಲದ ಸುಳಿಯಲ್ಲಿ ಸಿಲುಕಬೇಕಾಗುತ್ತೆ. ನನ್ನಿಂದ ಕಷ್ಟ ಪಡ್ತಾರೆ. ನನಗೆ ಈ ಸಂಬಂಧ ಬೇಡ ಎಂದು ಪದ್ಮಿನಿ ನಿರ್ಧಾರ ಮಾಡಿದ್ದಾಳೆ. ಅದಕ್ಕೆ ನಂದನ್ ಬೇಸರ ಮಾಡಿಕೊಂಡಿದ್ದಾನೆ.
ನಡು ರೋಡ್‌ನಲ್ಲಿ ನಂದನ್‌ಗೆ ಅವಮಾನ!
ಪದ್ಮಿನಿ ಎಷ್ಟೇ ನೀವು ಬೇಡ ಅಂದ್ರೂ, ನಂದನ್ ಕೇಳ್ತಾ ಇಲ್ಲ. ಆಕೆ ಹಿಂದೆ ಹಿಂದೆ ಹೋಗಿ ಮದುವೆ ಆಗಿ ಎನ್ನುತ್ತಿದ್ದಾನೆ. ಅದಕ್ಕೆ ರೋಡ್‍ನಲ್ಲಿರುವ ಜನ ಹುಡುಗಿಯನ್ನು ರೇಗಿಸಬೇಡ ಎಂದು ಹೇಳ್ತಾರೆ. ಆಗ ನಂದನ್ ಪದ್ಮಿನಿ ನನಗೆ ಗೊತ್ತಿರುವ ಹುಡುಗಿ ಎನ್ನುತ್ತಾನೆ. ಆದ್ರೆ ಪದ್ಮಿನಿ ಇವರು ಯಾರು ಎಂದು ಗೊತ್ತಿಲ್ಲ ಎಂದು ಬಿಡ್ತಾಳೆ. ಅದಕ್ಕೆ ನಂದನ್‍ಗೆ ಅವಮಾನ ಆಗಿದೆ.
ಕುಡಿದ ನಂದನ್ ಪೊಲೀಸ್ ಠಾಣೆಯಲ್ಲಿ
ಪದ್ಮಿನಿ ಬೇಡ ಎಂದಿದ್ದಕ್ಕೆ ನಂದನ್ ಅದೇ ಊರಿನಲ್ಲಿ ತುಂಬಾ ಕುಡಿದಿದ್ದಾನೆ. ಕುಡಿದು ಕಾರು ಡ್ರೈವ್ ಮಾಡಿಕೊಂಡು ಹೋಗುವಾಗ ಪೊಲೀಸರು ಹಿಡಿದಿದ್ದಾರೆ. ಅದಕ್ಕೆ ನಂದನ್ ನಾನು ಊರಿನ ಅಳಿಯ ನನ್ನನ್ನು ಬಿಟ್ಟು ಬಿಡಿ ಎನ್ನುತ್ತಿದ್ದಾನೆ. ಅದಕ್ಕೆ ನೀನು ಯಾರ ಮನೆಯ ಅಳಿಯ ಎಂದು ಕೇಳ್ತಾರೆ. ಅದಕ್ಕೆ ಭುಜಂಗಯ್ಯನ ಅಳಿಯ ಎನ್ನುತ್ತಾನೆ. ಅದಕ್ಕೆ ಪೊಲೀಸರು ಭುಜಂಗನಿಗೆ ಕಾಲ್ ಮಾಡ್ತಾರೆ.
ಭುಜಂಗಯ್ಯನಿಗೆ ಆತಂಕ
ಭುಜಂಗಯ್ಯ ಈ ಕೂಡಲೇ ನೀನು ಪೊಲೀಸ್ ಠಾಣೆಗೆ ಬಾ ಎಂದು ಪೊಲೀಸರು ಕಾಲ್ ಮಾಡಿ ಕರೆಯುತ್ತಾರೆ. ಅದಕ್ಕೆ ಭುಜಂಗಯ್ಯ ನಾನು ಏಕೆ ಬರಬೇಕು? ಎಂದು ಕೇಳ್ತಾನೆ. ಅದಕ್ಕೆ, ಪೊಲೀಸರು ನಿನ್ನ ಅಳಿಯ ಕುಡಿದು ಗಲಾಟೆ ಮಾಡ್ತಾನೆ ಎಂದು ಹೇಳ್ತಾರೆ. ಆದ್ರೂ ಭುಜಂಗಯ್ಯ ನಂಬಲ್ಲ. ನಂತರ ಒಂದು ಸಲ ಹೋಗಿ ಬರೋಣ ಎಂದು ಹೋಗ್ತಾನೆ.
ಪದ್ಮಿನಿಗೆ ಟೆನ್ಶನ್
ಪದ್ಮಿನಿಗೆ ಅಪ್ಪ ಪೊಲೀಸ್ ಠಾಣೆಗೆ ಹೋದದ್ದು ಗೊತ್ತಾಗುತ್ತೆ. ಆಕೆ ಸಹ ಬೇಸರ ಮಾಡಿಕೊಂಡಿದ್ದಾಳೆ. ನಂದನ್ ಏನಾದ್ರೂ ತಪ್ಪು ಮಾಡಿದ್ರಾ? ನನ್ನಿಂದ ಈ ರೀತಿ ಆಯ್ತಾ ಎಂದು ಚಿಂತೆ ಮಾಡ್ತಾ ಇದ್ದಳು. ಪದ್ಮಿನಿ ಮದುವೆ ಬೇಡ ಅಂದಿದ್ದಕ್ಕೆ ಈ ರೀತಿ ನಂದನ್ ಕುಡಿದು ಗಾಡಿ ಓಡಿಸಿದ್ದಾನೆ. ಭುಜಂಗಯ್ಯ ಈ ಸ್ಥಿತಿಯಲ್ಲಿ ಅಳಿಯನನ್ನು ನೋಡಿ ಏನೆಂದು ಕೊಳ್ತಾನೋ ಏನೋ?
ಇದನ್ನೂ ಓದಿ: Puttakkana Makkalu: ಆಸ್ತಿ ಪತ್ರ ಇಟ್ಟುಕೊಂಡು ಪುಟ್ಟಕ್ಕನನ್ನು ಬೀದಿಗೆ ತರಲು ರಾಜಿ ಪ್ಲ್ಯಾನ್! ಮುಂದೇನಾಗುತ್ತೆ?
ನಂದನ್ ಕೆಟ್ಟವನು ಎಂದು ತಿಳಿದುಕೊಳ್ತಾನಾ ಭುಜಂಗಯ್ಯ? ನಂದನ್ ಈ ಅಪವಾದದಿಂದ ಹೇಗೆ ಪಾರಾಗ್ತಾನೆ? ಮುಂದೇನಾಗುತ್ತೆ ಅಂತ ನೋಡೋಕೆ ಪುಣ್ಯವತಿ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ