ಕಲರ್ಸ್ ಕನ್ನಡ (Colors Kannada) ವಾಹಿನಿಯು ಜನರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ಈಗಾಗಲೇ ಧಾರಾವಾಹಿಗಳ (Serials) ಮೂಲಕ ಜನರನ್ನು ಹಿಡಿದಿಡುವಲ್ಲಿ ಯಶಸಿಯಾಗಿದೆ. ಆ ಸಾಲಿಗೆ ಸೇರಲು 'ಪುಣ್ಯವತಿ' (Punyavathi) ಧಾರಾವಾಹಿ ರೆಡಿಯಾಗಿದೆ. ಕಲರ್ಸ್ ಕನ್ನಡದಲ್ಲಿ ಪ್ರತಿದಿನ ರಾತ್ರಿ 10 ಗಂಟೆಗೆ ಪುಣ್ಯವತಿ ಎನ್ನುವ ಹೊಸ ಧಾರಾವಾಹಿ ಪ್ರಸಾರವಾಗ್ತಿದೆ. ಈ ಧಾರಾವಾಹಿಯ ನಾಯಕಿ ಪದ್ಮಿನಿ (Padmini). ಈಕೆಗೆ ಡ್ಯಾನ್ (Dance) ಅಂದ್ರೆ ಪ್ರಾಣ. ಡ್ಯಾನ್ಸ್ ನಲ್ಲೇ ಏನಾದ್ರೂ ಸಾಧನೆ ಮಾಡಬೇಕು ಎಂದು ಪದ್ಮಿನಿ ಹಂಬಲಿಸುತ್ತಿದ್ದಾಳೆ. ಆದ್ರೆ ಮನೆಯಲ್ಲಿ ಪದ್ಮಿನಿ ಅಪ್ಪನಿಗೆ ಡ್ಯಾನ್ಸ್ ಅಂದ್ರೆ ಇಷ್ಟ ಇಲ್ಲ. ಡ್ಯಾನ್ಸ್, ಹಾಡು ಸಹವಾಸಕ್ಕೆ ಹೋಗಬಾರದು ಎಂದು ಹೇಳಿದ್ದಾರೆ. ಪದ್ಮಿನಿ ನೋಡಲು ಗಂಡಿನ ಮನೆಯವರು ಬೇರೆ ಬರ್ತಾ ಇದ್ದಾರೆ. ಪದ್ಮಿನಿ ಡ್ಯಾನ್ಸ್ ಮಾಡಲು ಆಗದೇ ಕಣ್ಣೀರು ಹಾಕಿದ್ದಾಳೆ.
ಕುಣಿವ ಹಕ್ಕಿಗೆ ಮಾಂಗಲ್ಯ ಬಂಧನ
ಪುಣ್ಯವತಿ ಧಾರಾವಾಹಿಯೂ ಕುಣಿವ ಹಕ್ಕಿಗೆ ಮಾಂಗಲ್ಯ ಬಂಧನ ಎಂಬ ಅಡಿ ಬರಹದಲ್ಲಿ ಶುರುವಾಗ್ತಿದೆ. ಇಲ್ಲಿ ಹೆಣ್ಣು ಮಕ್ಕಳಿಗೆ ಕನಸು ಕಾಣಲು ಸಹ ಹಕ್ಕಿಲ್ಲ. ಅಪ್ಪ ಹೇಳಿದ ಹಾಗೇ ಕೇಳಬೇಕು. ಆದ್ರೂ ಪದ್ಮಿನಿ ತಂಗಿ ತಮ್ಮ ಕಾಲೇಜಿನಲ್ಲಿ ಡ್ಯಾನ್ಸಿಂಗ್ ಚಾಂಪಿಯನ್ ಸ್ಪರ್ಧೆ ಇದೆ ಅಂತ ಹೇಳಿ, ಅಕ್ಕನ ಹೆಸರು ಕೊಟ್ಟಿದ್ದಳು. ಅದರ ಸ್ಪರ್ಧೆಗೆ ಹೋಗಲು ಪದ್ಮಿನಿ ಸಾಹಸ ಮಾಡಿದ್ದಾಳೆ.
ಅಪ್ಪನ ಕಣ್ಣು ತಪ್ಪಿಸಿ ಹೊಗಿದ್ದ ಪದ್ಮಿನಿ
ಅತ್ತ ಪದ್ಮಿನಿ ಡ್ಯಾನ್ಸ್ ಗೆ ಹೆಸರು ಕೊಟ್ಟರೆ, ಈ ಕಡೆ ಧಾರಾವಾಹಿ ಹೀರೋ ನಂದನ್ ಕಡೆಯವರು ಪದ್ಮಿನಿ ನೋಡಲು ಬರುತ್ತಿದ್ದಾರೆ. ಅಷ್ಟು ದೊಡ್ಡ ಸಂಬಂಧ ಅಂತ ಮನೆಯವರೆಲ್ಲಾ ಖುಷಿ ಆಗಿದ್ದಾರೆ. ಡ್ಯಾನ್ಸ್ ಸ್ಪರ್ಧೆ ಸಹ ಅವತ್ತೇ ಇದೆ. ಎರಡನ್ನೂ ಮ್ಯಾನೇಜ್ ಮಾಡಬೇಕಿದೆ. ಪದ್ಮಿನಿ. ಹೇಗೋ ಅಪ್ಪನ ಕಣ್ಣು ತಪ್ಪಿಸಿ ಪದ್ಮಿನಿ ಡ್ಯಾನ್ಸ್ ಮಾಡಲು ಹೋಗಿದ್ದಾಳೆ.
ಇದನ್ನೂ ಓದಿ: Rupesh Shetty-Koragajja: ಬಿಗ್ ಬಾಸ್ ಗೆಲುವಿನ ಹಿಂದಿದೆಯಾ ಕೊರಗಜ್ಜನ ಕೃಪೆ? ದೈವದ ಮಹಿಮೆ ತೆರೆದಿಟ್ಟ ರೂಪೇಶ್ ಶೆಟ್ಟಿ!
ಡ್ಯಾನ್ಸ್ ಮಾಡಲು ನೂರೆಂಟು ವಿಘ್ನ
ಪದ್ಮಿನಿ ಬೇಗ ಡ್ಯಾನ್ಸ್ ಮಾಡಿ ಮನೆಗೆ ಹೋಗೋಣ ಎಂದುಕೊಳ್ತಾ ಇದ್ದಾಳೆ. ಆದ್ರೆ ಅವಳ ಸರದಿ ಇರುವುದು 70ನೇದು. ಅಲ್ಲದೇ ಅದೇ ಕಾಲೇಜಿಗೆ ಪದ್ಮಿನಿ ಚಿಕ್ಕಪ್ಪ ಬಂದಿದ್ದಾರೆ. ಅವರು ಏನಾದ್ರೂ ಪದ್ಮಿನಿ ಡ್ಯಾನ್ಸ್ ಮಾಡೋದನ್ನು ನೋಡಿದ್ರೆ, ಪದ್ಮಿನಿ ಅಪ್ಪನಿಗೆ ಹೇಳಿ ಬಿಡ್ತಾರೆ ಅದಕ್ಕೆ ಪದ್ಮಿಗೆ ಟೆನ್ಶನ್ ಹೆಚ್ಚಾಗಿದೆ. ಹೇಗೆ ಡ್ಯಾನ್ಸ್ ಮಾಡೋದು ಗೊತ್ತಾಗುತ್ತಾ ಇಲ್ಲ.
ಕಣ್ಣೀರು ಹಾಕಿದ ಪದ್ಮಿನಿ
ಅಪ್ಪನ ಕಣ್ಣು ತಪ್ಪಿಸಿ, ಡ್ಯಾನ್ಸ್ ಮಾಡೋಣ ಎಂದು ಕಾಲೇಜಿಗೆ ಬಂದಿದ್ಲು. ಆದ್ರೆ ಮನೆಯಿಂದ ಕಾಲ್ ಮಾಡ್ತಾ ಇದ್ದಾರೆ ಬೇಗ ಬಾ ಎಂದು. ಅದಕ್ಕೆ ಪದ್ಮಿನಿಗೆ ಏನು ಮಾಡೋದು ಅಂತ ಗೊತ್ತಾಗ್ತಾ ಇಲ್ಲ. ಆ ದೇವರು ಜಾಣ ಕುರುಡ. ಎಲ್ಲಾ ಪ್ರಾರ್ಥನೆಯನ್ನು ಕೇಳಿಸಿಕೊಳ್ಳಲ್ಲ ಎಂದು ಕಣ್ಣೀರು ಹಾಕುತ್ತಾ, ಡ್ಯಾನ್ಸ್ ಮಾಡದೇ ಮನೆಗೆ ವಾಪಸ್ ಹೊರಟಿದ್ದಾಳೆ.
ನಂದನ್ ಅಂದುಕೊಂಡಿದ್ದು ನಿಜ ಆಗುತ್ತಾ?
ನಂದನ್ ಪದ್ಮಿನಿಯನ್ನು ಇಷ್ಟ ಪಡ್ತಾ ಇದ್ದಾನೆ. ಅದು ಮನೆಯಲ್ಲಿ ಗೊತ್ತಾಗಿ, ಹೆಣ್ಣು ನೋಡಲು ಪದ್ಮಿನಿ ಮನೆಗೆ ಹೋಗಿದ್ದಾರೆ. ಅದಕ್ಕೆ ಪದ್ಮಿನಿ ಬೇಗ ಬೇಗ ಮನೆಗೆ ಹೋಗಿದ್ದಾಳೆ. ಅಲ್ಲದೇ ನಂದನ್ ನನ್ನ ಹುಡುಗಿಗೆ ಡ್ಯಾನ್ಸ್ ಅಭ್ಯಾಸ ಇಲ್ಲದೇ ಇರಲ್ಲಪ್ಪಾ ದೇವರೇ, ಯಾಕಂದ್ರೆ ಅಜ್ಜಿಗೆ ಅದು ಇಷ್ಟ ಆಗಲ್ಲ. ಅಜ್ಜಿ ಅದೇ ಕಾರಣಕ್ಕೆ ಹುಡುಗಿ ಬೇಡ ಅಂದ್ರೆ ಏನ್ ಮಾಡೋದು ಎಂದು ಚಿಂತೆ ಮಾಡ್ತಾ ಇದ್ದಾನೆ. ಆದ್ರೆ ಪದ್ಮಿನಿಗೆ ಡ್ಯಾನ್ಸ್ ಅಂದ್ರೆ ತುಂಬಾ ಇಷ್ಟ.
ಇದನ್ನೂ ಓದಿ: Kantara In Tv: ಸಂಕ್ರಾಂತಿಗೆ ಕಾಂತಾರ ಸಿನಿಮಾ, ಸ್ಟಾರ್ ಸುವರ್ಣದಲ್ಲಿ ಸಂಭ್ರಮ!
ನಂದನ್ ಅಂದುಕೊಂಡಿದ್ದು ನಿಜ ಆಗಿದೆ. ಪದ್ಮಿಗೆ ಡ್ಯಾನ್ಸ್ ಮಾಡಲು ಆಗೋದೇ ಇಲ್ವಾ? ಮುಂದೇನಾಗುತ್ತೆ ಅಂತ ನೋಡೋಕೆ ಪುಣ್ಯವತಿ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ