• Home
  • »
  • News
  • »
  • entertainment
  • »
  • Punyavathi: ಕೊನೆಗೂ ಡ್ಯಾನ್ಸ್ ಮಾಡಿದ ಪದ್ಮಿನಿ, ಸಿಟ್ಟಾಗ್ತಾರಾ ವರನ ಕಡೆಯವರು?

Punyavathi: ಕೊನೆಗೂ ಡ್ಯಾನ್ಸ್ ಮಾಡಿದ ಪದ್ಮಿನಿ, ಸಿಟ್ಟಾಗ್ತಾರಾ ವರನ ಕಡೆಯವರು?

ಕೊನೆಗೂ ಡ್ಯಾನ್ಸ್ ಮಾಡಿದ ಪದ್ಮಿನಿ

ಕೊನೆಗೂ ಡ್ಯಾನ್ಸ್ ಮಾಡಿದ ಪದ್ಮಿನಿ

ಪದ್ಮಿನಿ ಸೂಪರ್ ಆಗಿ ಡ್ಯಾನ್ಸ್ ಮಾಡಿದ್ದಾಳೆ. ಪದ್ಮಿನಿ ಡ್ಯಾನ್ಸ್ ಗೆ ಜಡ್ಜ್ ಗಳು ಮನಸೋತಿದ್ದಾರೆ. ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಪದ್ಮಿನಿ ತುಂಬಾ ಖುಷಿಯಾಗಿದ್ದಾಳೆ.

  • News18 Kannada
  • 2-MIN READ
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡ (Colors Kannada) ವಾಹಿನಿಯು ಜನರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ಈಗಾಗಲೇ ಧಾರಾವಾಹಿಗಳ (Serials) ಮೂಲಕ ಜನರನ್ನು ಹಿಡಿದಿಡುವಲ್ಲಿ ಯಶಸಿಯಾಗಿದೆ. ಆ ಸಾಲಿಗೆ ಸೇರಲು 'ಪುಣ್ಯವತಿ' (Punyavathi) ಧಾರಾವಾಹಿ ರೆಡಿಯಾಗಿದೆ. ಕಲರ್ಸ್ ಕನ್ನಡದಲ್ಲಿ ಪ್ರತಿದಿನ ರಾತ್ರಿ 10 ಗಂಟೆಗೆ ಪುಣ್ಯವತಿ ಎನ್ನುವ ಹೊಸ ಧಾರಾವಾಹಿ ಪ್ರಸಾರವಾಗ್ತಿದೆ. ಈ ಧಾರಾವಾಹಿಯ ನಾಯಕಿ ಪದ್ಮಿನಿ. ಈಕೆಗೆ ಡ್ಯಾನ್ ಅಂದ್ರೆ ಪ್ರಾಣ. ಡ್ಯಾನ್ಸ್ ನಲ್ಲೇ ಏನಾದ್ರೂ ಸಾಧನೆ ಮಾಡಬೇಕು ಎಂದು ಪದ್ಮಿನಿ ಹಂಬಲಿಸುತ್ತಿದ್ದಾಳೆ. ಆದ್ರೆ ಮನೆಯಲ್ಲಿ ಪದ್ಮಿನಿ (Padmini) ಅಪ್ಪನಿಗೆ ಡ್ಯಾನ್ಸ್ ಅಂದ್ರೆ ಇಷ್ಟ ಇಲ್ಲ. ಡ್ಯಾನ್ಸ್ (Dance), ಹಾಡು ಸಹವಾಸಕ್ಕೆ ಹೋಗಬಾರದು ಎಂದು ಹೇಳಿದ್ದಾರೆ. ಪದ್ಮಿನಿ ನೋಡಲು ಗಂಡಿನ ಮನೆಯವರು ಬಂದು ಕಾಯ್ತಾ ಇದ್ದಾರೆ. ಕೊನೆಗೂ ಹೇಗೋ ಮಾಡಿ ಪದ್ಮಿನಿ ಡ್ಯಾನ್ಸ್ ಮಾಡಿದ್ದಾಳೆ.


    ಕುಣಿವ ಹಕ್ಕಿಗೆ ಮಾಂಗಲ್ಯ ಬಂಧನ
    ಪುಣ್ಯವತಿ ಧಾರಾವಾಹಿಯೂ ಕುಣಿವ ಹಕ್ಕಿಗೆ ಮಾಂಗಲ್ಯ ಬಂಧನ ಎಂಬ ಅಡಿ ಬರಹದಲ್ಲಿ ಶುರುವಾಗಿದೆ. ಇಲ್ಲಿ ಹೆಣ್ಣು ಮಕ್ಕಳಿಗೆ ಕನಸು ಕಾಣಲು ಸಹ ಹಕ್ಕಿಲ್ಲ. ಅಪ್ಪ ಹೇಳಿದ ಹಾಗೇ ಕೇಳಬೇಕು. ಆದ್ರೂ ಪದ್ಮಿನಿ ತಂಗಿ ತಮ್ಮ ಕಾಲೇಜಿನಲ್ಲಿ ಡ್ಯಾನ್ಸಿಂಗ್ ಚಾಂಪಿಯನ್ ಸ್ಪರ್ಧೆ ಇದೆ ಅಂತ ಹೇಳಿ, ಅಕ್ಕನ ಹೆಸರು ಕೊಟ್ಟಿದ್ದಳು. ಅದರ ಸ್ಪರ್ಧೆಗೆ ಹೋಗಲು ಪದ್ಮಿನಿ ಸಾಹಸ ಮಾಡಿದ್ದಳು.


    ಮನೆಯಲ್ಲಿ ಗಂಡಿನ ಕಡೆಯವರು!
    ಪದ್ಮಿನಿಯನ್ನು ನೋಡಿ ಧಾರಾವಾಹಿ ಹೀರೋ ನಂದನ್ ಇಷ್ಟ ಪಟ್ಟಿದ್ದ. ಅವರ ಮನೆಯವರಿಗೂ ಆಕೆ ಇಷ್ಟ ಆಗಿ ಹೆಣ್ಣು ನೋಡುವ ಶಾಸ್ತ್ರ ಇಟ್ಟುಕೊಂಡಿದ್ದಾರೆ. ಗಂಡಿನ ಮನೆಯವರು ಬರುವುದನ್ನು ಪದ್ಮಿನಿ ತಂಗಿಯರು ಸೇರಿ ಲೇಟ್ ಮಾಡಿದ್ರು. ಆದ್ರೆ ಈಗ ಅವರು ಮನೆಯಲ್ಲಿ ಬಂದು ಕೂತು ಬಿಟ್ಟಿದ್ದಾರೆ. ಪದ್ಮಿನಿ ಅಪ್ಪ ಭುಜಂಗಯ್ಯ ಪದ್ಮಿನಿಯನ್ನು ಕರೆಯುತ್ತಿದ್ದಾನೆ.


    ಇದನ್ನೂ ಓದಿ: Bhagya Lakshmi: ಶ್ರೇಷ್ಠಾ-ತಾಂಡವ್ ಕಳ್ಳಾಟ ಬಯಲು, ಕುಸುಮಾ ಮುಂದಿನ ನಡೆ ಏನು?


    ಅಕ್ಕನಿಗೆ ಕಾಲ್ ಮಾಡಿದ ಪೂರ್ವಿ
    ಪದ್ಮಿನಿ ತಂಗಿ ಪೂರ್ವಿ ಕಾಲ್ ಮಾಡಿ. ಅಕ್ಕ ಬೇಗ ಬಾ. ಗಂಡಿನ ಕಡೆಯವರು ಬಂದು ಕೂತಿದ್ದಾರೆ. ಇನ್ನು ನಾವು ಸುಳ್ಳು ಹೇಳಿ ಮ್ಯಾನೇಜ್ ಮಾಡೋಕೆ ಕಷ್ಟ. 10 ನಿಮಿಷ ಅಷ್ಟೇ ಬೇಗ ಬಾ ಎನ್ನುತ್ತಿದ್ದಾರೆ. ಪದ್ಮಿನಿಯೂ ಹೊರಡಲು ಸಿದ್ಧವಾಗಿದ್ದಳು. ಅಷ್ಟರಲ್ಲಿ ಆಕೆಯ ನಂಬರ್ ಕರೆಯುತ್ತಾರೆ. ಆಕೆಗೆ ಆಸೆ ಆಗಿ ಡ್ಯಾನ್ಸ್ ಮಾಡಲು ಹೋಗುತ್ತಾಳೆ.


    colors kannada serial, kannada serial, punyavathi new serial, finally Padmini doing dance, padmini join dance competition, ಕೊನೆಗೂ ಡ್ಯಾನ್ಸ್ ಮಾಡಿದ ಪದ್ಮಿನಿ, ಗಂಡಿನ ಕಡೆಯವರು ಸಿಟ್ಟಾಗ್ತಾರಾ?, ಕನ್ನಡ ಧಾರಾವಾಹಿ, ಪುಣ್ಯವತಿ ಹೊಸ ಧಾರಾವಾಹಿ, kannada news, karnataka news,
    ಪದ್ಮಿನಿ


    ಖುಷಿಯಿಂದ ಡ್ಯಾನ್ಸ್ ಮಾಡಿದ ಪದ್ಮಿನಿ
    ಪದ್ಮಿನಿಗೆ ಆಕೆಯ ನಂಬರ್ ಕರೆದಿದ್ದೇ ತಡ, ಎಲ್ಲವನ್ನೂ ಮರೆತು ಡ್ಯಾನ್ಸ್ ಮಾಡಲು ಹೋಗುತ್ತಾಳೆ. ಪದ್ಮಿನಿ ಸೂಪರ್ ಆಗಿ ಡ್ಯಾನ್ಸ್ ಮಾಡಿದ್ದಾಳೆ. ಪದ್ಮಿನಿ ಡ್ಯಾನ್ಸ್ ಗೆ ಜಡ್ಜ್ ಗಳು ಮನಸೋತಿದ್ದಾರೆ. ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಪದ್ಮಿನಿ ತುಂಬಾ ಖುಷಿಯಾಗಿದ್ದಾಳೆ. ಇನ್ನೂ 2 ರೌಂಡ್ ಬಾಕಿ ಇದೆ.


    ಜಡ್ಜ್ ಗಳು ಯಾರು ಗೊತ್ತಾ?
    ಡ್ಯಾನ್ಸಿಂಗ್ ಚಾಂಪಿಯನ್ ಸ್ಪರ್ಧೆಯ ಜಡ್ಜ್ ಗಳಾಗಿ ಅನು ಪ್ರಭಾಕರ್, ಮುರುಗ ಅವರು ಬಂದಿದ್ದಾರೆ. ಈ ಕಾರ್ಯಕ್ರಮಕ್ಕೆ ಆಡಿಷನ್ ನಡೆಸುತ್ತಿದ್ದಾರೆ. ಪದ್ಮಿನಿ ಡ್ಯಾನ್ಸ್ ನೋಡಿ ಮೆಚ್ಚಿಕೊಂಡಿದ್ದಾರೆ. ಗುರು ಇಲ್ಲದೇ ಇಷ್ಟು ಮಾಡಿದ್ದೀಯಾ. ಗುರು ಇದ್ದಿದ್ರೆ ಇನ್ನೂ ಚೆನ್ನಾಗಿ ಮಾಡ್ತಾ ಇದ್ದೆ ಎಂದು ಹೇಳಿದ್ದಾರೆ.


    colors kannada serial, kannada serial, punyavathi new serial, finally Padmini doing dance, padmini join dance competition, ಕೊನೆಗೂ ಡ್ಯಾನ್ಸ್ ಮಾಡಿದ ಪದ್ಮಿನಿ, ಗಂಡಿನ ಕಡೆಯವರು ಸಿಟ್ಟಾಗ್ತಾರಾ?, ಕನ್ನಡ ಧಾರಾವಾಹಿ, ಪುಣ್ಯವತಿ ಹೊಸ ಧಾರಾವಾಹಿ, kannada news, karnataka news,
    ಜಡ್ಜ್ ಗಳು


    ಇದನ್ನೂ ಓದಿ: Kannadathi: ಭುವಿ ಕೈಯಲ್ಲಿ ಸಾನಿಯಾ ಲಗಾಮು, ಸಿಕ್ಕಿರುವ ಇನ್ನೊಂದು ವಿಡಿಯೋದಲ್ಲಿ ಏನಿದೆ?


    ಪದ್ಮಿನಿ ನೋಡಲು ಬಂದ ಗಂಡಿನ ಕಡೆಯವರು ಸಿಟ್ಟು ಆಗ್ತಾರಾ? ಪದ್ಮಿನಿ ಅಪ್ಪನಿಗೆ ಕೋಪ ಬರುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಪುಣ್ಯವತಿ ಧಾರಾವಾಹಿ ನೋಡಬೇಕು.

    Published by:Savitha Savitha
    First published: