ಕಲರ್ಸ್ ಕನ್ನಡ (Colors Kannada) ವಾಹಿನಿಯು ಜನರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ಈಗಾಗಲೇ ಧಾರಾವಾಹಿಗಳ (Serials) ಮೂಲಕ ಜನರನ್ನು ಹಿಡಿದಿಡುವಲ್ಲಿ ಯಶಸಿಯಾಗಿದೆ. ಆ ಸಾಲಿಗೆ ಸೇರಲು 'ಪುಣ್ಯವತಿ' (Punyavathi) ಧಾರಾವಾಹಿ ರೆಡಿಯಾಗಿದೆ. ಕಲರ್ಸ್ ಕನ್ನಡದಲ್ಲಿ ಪ್ರತಿದಿನ ರಾತ್ರಿ 10 ಗಂಟೆಗೆ ಪುಣ್ಯವತಿ ಧಾರಾವಾಹಿ ಪ್ರಸಾರವಾಗ್ತಿದೆ. ಈ ಧಾರಾವಾಹಿಯ ನಾಯಕಿ ಪದ್ಮಿನಿ. ಈಕೆಗೆ ಡ್ಯಾನ್ ಅಂದ್ರೆ ಪ್ರಾಣ. ಡ್ಯಾನ್ಸ್ ನಲ್ಲೇ ಏನಾದ್ರೂ ಸಾಧನೆ ಮಾಡಬೇಕು ಎಂದು ಪದ್ಮಿನಿ ಹಂಬಲಿಸುತ್ತಿದ್ದಾಳೆ. ಆದ್ರೆ ಮನೆಯಲ್ಲಿ ಪದ್ಮಿನಿ ಅಪ್ಪನಿಗೆ ಡ್ಯಾನ್ಸ್ ಅಂದ್ರೆ ಇಷ್ಟ ಇಲ್ಲ. ಡ್ಯಾನ್ಸ್ (Dance), ಹಾಡು (Song) ಸಹವಾಸಕ್ಕೆ ಹೋಗಬಾರದು ಎಂದು ಹೇಳಿದ್ದಾರೆ. ಪದ್ಮಿನಿ ನೋಡಲು ಗಂಡಿನ ಮನೆಯವರು ಬಂದಿದ್ದಾರೆ. ಪದ್ಮಿನಿ ಅಮ್ಮಾಜಿಗೆ ಇಷ್ಟ ಆದ್ಲಾ ನೋಡಬೇಕು.
ಪದ್ಮಿನಿ ಡ್ಯಾನ್ಸ್ ಗೆ ಬೆಂಬಲವಿಲ್ಲ
ಪುಣ್ಯವತಿ ಧಾರಾವಾಹಿಯೂ ಕುಣಿವ ಹಕ್ಕಿಗೆ ಮಾಂಗಲ್ಯ ಬಂಧನ ಎಂಬ ಅಡಿ ಬರಹದಲ್ಲಿ ಶುರುವಾಗಿದೆ. ಇಲ್ಲಿ ಹೆಣ್ಣು ಮಕ್ಕಳಿಗೆ ಕನಸು ಕಾಣಲು ಸಹ ಹಕ್ಕಿಲ್ಲ. ಅಪ್ಪ ಹೇಳಿದ ಹಾಗೇ ಕೇಳಬೇಕು. ಆದ್ರೂ ಪದ್ಮಿನಿ ತಂಗಿ ತಮ್ಮ ಕಾಲೇಜಿನಲ್ಲಿ ಡ್ಯಾನ್ಸಿಂಗ್ ಚಾಂಪಿಯನ್ ಸ್ಪರ್ಧೆ ಇದೆ ಅಂತ ಹೇಳಿ, ಅಕ್ಕನ ಹೆಸರು ಕೊಟ್ಟಿದ್ದಳು. ಕಷ್ಟ ಪಟ್ಟು ಡ್ಯಾನ್ಸ್ ಮಾಡಿ ಬಂದಿದ್ದಾಳೆ.
ಅಮ್ಮಾಜಿ ಬಳಿ ಕ್ಷಮೆ ಕೇಳಿದ ಪದ್ಮಿನಿ
ಅಮ್ಮಾಜಿ ಹೆಣ್ಣು ನೋಡಲು ಬಂದು ತುಂಬಾ ಹೊತ್ತು ಕಾದಿದ್ದರು. ಪದ್ಮಿನಿ ಡ್ಯಾನ್ಸ್ ಮಾಡಲು ಹೋಗಿದ್ದರಿಂದ , ಬೇಸರ ಮಾಡಿಕೊಂಡು ಮನೆಗೆ ಹೊರಟು ಬಿಟ್ಟಿದ್ದರು. ಅಷ್ಟರಲ್ಲಿ ಪದ್ಮಿನಿ ಬಂದು ಅಮ್ಮಾಜಿ ಬಳಿ ಕ್ಷಮೆ ಕೇಳಿದ್ದಾಳೆ. ಅಷ್ಟರಲ್ಲಿ ಅಮ್ಮಾಜಿ ಸುಮ್ಮಾನಾಗಿ ಪದ್ಮಿನಿಗೆ ಪಾಯಸ ಮಾಡಲು ಹೇಳಿದ್ದಾರೆ.
ಇದನ್ನೂ ಓದಿ: Kannadathi: ಡಿವೋರ್ಸ್ ಲಾಯರ್ ಮುಂದೆ ಬಂದು ಕೂತ ಹರ್ಷ, ವರೂ ನಾಟಕ ಬಯಲು ಮಾಡ್ತಾನಾ?
ಪಾಯಸ ಮಾಡಲು ಪದ್ಮಿನಿ ಜೊತೆ ಹೋಗಿದ್ದಾರೆ
ಅಮ್ಮಾಜಿ ಪದ್ಮಿನಿ ಜೊತೆ ಪಾಯಸ ಮಾಡುವುದನ್ನು ನೋಡಲು ಅಡುಗೆ ಮನೆಗೆ ಹೋಗಿದ್ದಾರೆ. ಅಲ್ಲಿ ಪದ್ಮಿನಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಓದುವುದ ಜೊತೆಗೆ ಬೇರೆ ಅಭ್ಯಾಸ ಇದೆಯಾ ಎಂದು ಕೇಳಿದ್ದಾರೆ. ಪದ್ಮಿನಿಗೆ ಡ್ಯಾನ್ಸ್ ಇಷ್ಟ ಇದ್ರೂ, ಇಲ್ಲ ಎಂದು ಹೇಳಿದ್ದಾಳೆ. ಪಾಯಸಕ್ಕೆ ಬೆಲ್ಲ ಹಾಕಿ ಮಾಡಿದ್ದಾಳೆ. ಆರೋಗ್ಯಕ್ಕೆ ಒಳ್ಳೆಯದು ಎಂದು ಅಮ್ಮಾಜಿ ಬಳಿ ಹೇಳಿದ್ದಾಳೆ.
ಅಮ್ಮಾಜಿಗೆ ಪದ್ಮಿನಿ ಇಷ್ಟ ಆದ್ಲಾ?
ಪದ್ಮಿನಿ ಮಾತು, ಗುಣ ಎಲ್ಲಾ ಅಮ್ಮಾಜಿಗೆ ಇಷ್ಟ ಆಗಿದೆ. ಹಾಗಾದ್ರೆ ಪದ್ಮಿನಿಯನ್ನು ನಂದನ್ ಗೆ ಮದುವೆ ಮಾಡಿಕೊಳ್ಳಲು ಒಪ್ತಾರಾ ಇಲ್ವೋ ನೋಡಬೇಕು. ಅಮ್ಮಾಜಿಯವರು ತುಂಬಾ ಶ್ರೀಮಂತರು. ಪದ್ಮಿನಿ ಅವರು ತುಂಬಾ ಬಡವರು. ಈ ಮದುವೆ ಆಗ್ತಾರಾ ನೋಡಬೇಕು.
ನಂದನ್ ಕಾರಿಗೆ ಕಲ್ಲಿನ ಏಟು
ನಂದನ್ ಪದ್ಮಿನಿ ಮನೆಯನ್ನು ಹುಡುಕಿಕೊಂಡು ಬಂದಿದ್ದಾನೆ. ಕಾರು ನಿಲ್ಲಿಸಿ ಅಡ್ರೆಸ್ ಕೇಳುವಾಗ, ಇವನು ನನ್ನ ಹಿಂಬಾಲಿಸಿಕೊಂಡು ಬಂದ ಎಂದು ಪದ್ಮಿನಿ ಹೇಳಿದ್ದಾಳೆ. ಅದಕ್ಕೆ ಪದ್ಮಿನಿ ತಂಗಿ ನಂದನ್ ಕಾರಿಗೆ ಕಲ್ಲಿಂದ ಹೊಡೆದಿದ್ದಾಳೆ. ಅದನ್ನು ನೋಡಿ ನಂದನ್ ಗಾಬರಿ ಆಗಿದ್ದಾನೆ. ಯಾರು ಹೊಡೆದಿದ್ದು ಎಂದು ಹುಡುಕುತ್ತಿದ್ದಾನೆ.
ಇದನ್ನೂ ಓದಿ: Bhagya Lakshmi: ಕೀರ್ತಿ ಸಿಗಲ್ಲ ಅಂತ ಸಾಯೋಕೆ ಹೊರಟ ವೈಷ್ಣವ್, ಅತ್ತ ಭಾಗ್ಯನಿಗೆ ಅತ್ತೆಯ ಬುದ್ಧಿ ಮಾತು!
ಪದ್ಮಿನಿ-ನಂದನ್ ಭೇಟಿ ಆಗಿದೆ. ನಂದನ್ ತನ್ನ ಪ್ರೀತಿ ಹೇಳಿ ಕೊಳ್ತಾನಾ? ಪದ್ಮಿನಿ ಒಪ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಪುಣ್ಯವತಿ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ