ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 10 ಗಂಟೆಗೆ ಪುಣ್ಯವತಿ (Punyavathi) ಎನ್ನುವ ಧಾರಾವಾಹಿ (Serial) ಪ್ರಸಾರವಾಗುತ್ತಿದೆ. ಧಾರಾವಾಹಿ ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಈ ಧಾರಾವಾಹಿಯ ನಾಯಕಿ ಪದ್ಮಿನಿ. ಈಕೆಗೆ ಡ್ಯಾನ್ (Dance) ಅಂದ್ರೆ ಇಷ್ಟ ಇತ್ತು. ಆದ್ರೆ ತನ್ನ ಅಪ್ಪನಿಗೆ ಡ್ಯಾನ್ಸ್ ಇಷ್ಟ ಇರಲಿಲ್ಲ. ಅದಕ್ಕೆ ಪದ್ಮಿನಿ ಅಪ್ಪ ತೋರಿಸಿದ ಹುಡುಗನನ್ನು ಮದುವೆಯಾಗುವುದಾಗಿ ಒಪ್ಪುತ್ತಾಳೆ. ನಂದನ್ ಎನ್ನುವ ಹುಡುಗನ ಜೊತೆ ಮದುವೆ (Marriage) ಫಿಕ್ಸ್ ಆಗಿರುತ್ತೆ. ಆದ್ರೆ ಆಕೆಯ ಡ್ಯಾನ್ಸ್ ಜೀವನಕ್ಕೆ ಮುಳುವಾಗಿದೆ. ಪದ್ಮಿನಿ ಮದುವೆಯಾಗಬೇಕಿದ್ದ ನಂದನ್ ನನ್ನು ಪೂರ್ವಿ ಮದುವೆಯಾಗಿದ್ದಾಳೆ. ಈ ಸತ್ಯ ಈಗ ನಂದನ್‍ಗೆ ಗೊತ್ತಾಗಿದೆ.
ವಿಧಿಯಾಟವೇ ಬೇರೆ
ಪದ್ಮಿನಿಯನ್ನು ನಂದನ್ ಇಷ್ಟ ಪಟ್ಟು ಮದುವೆಯಾಗುತ್ತಿದ್ದ. ಆದ್ರೆ ಪದ್ಮಿನಿ ಮದುವೆ ಟೈಮ್‍ಗೆ ಬರಲು ಆಗಲಿಲ್ಲ. ಕೊನೆಗೂ ಪೂರ್ವಿ ಜೊತೆ ನಂದನ್ ಮದುವೆ ನಡೆದೇ ಬಿಡುತ್ತೆ. ಆದ್ರೆ ಅದು ಯಾರಿಗೂ ಗೊತ್ತಾಗಲ್ಲ. ಮತ್ತೆ ಪದ್ಮಿನಿ ತಾನೇ ಮದುವೆಯಾದವಳ ರೀತಿ ನಾಟಕ ಮಾಡ್ತಾಳೆ. ಪೂರ್ವಿ ನಂದನ್ ಕಟ್ಟಿದ ತಾಳಿಯಿಂದ ಚಿಂತೆಗೆ ಒಳಗಾಗಿದ್ದಾಳೆ. ಅದನ್ನು ಹಾಕಿಕೊಳ್ಳಲು ಆಗದೇ, ತೆಗೆಯಲು ಆಗದೇ ಒದ್ದಾಡುತ್ತಿದ್ದಾಳೆ.
ಮನೆ ಬಿಟ್ಟು ಹೊರಟ ಪೂರ್ವಿ
ಪದ್ಮಿನಿ ಜೊತೆ ನಂದನ್ ಮನೆಗೆ ಪೂರ್ವಿಯೂ ಬಂದಿದ್ದಳು. ಪದ್ಮಿನಿ ಈ ಮನೆಗ ಹೊಂದಿಕೊಳ್ಳುವ ತನಕ ಇಲ್ಲೇ ಇರು ಎಂದು ಅಮ್ಮಾಜಿ ಸಹ ಹೇಳಿದ್ದರು. ಅದಕ್ಕೆ ಪೂರ್ವಿ ಇದ್ದಳು. ಆದ್ರೆ ಪದ್ಮಿನಿ, ನಂದನ್ ಮತ್ತು ಪೂರ್ವಿಯನ್ನು ಜೊತೆ ಮಾಡಬೇಕು ಎಂದು ಕಾಯ್ತಾ ಇದ್ದಳು. ಅದಕ್ಕೆ ಪೂರ್ವಿ ಮನೆ ಬಿಟ್ಟು ಹೋಗಿದ್ದಾಳೆ.
ದೇವರ ಬಳಿ ಹೂವು ಕೇಳಿದ ಪದ್ಮಿನಿ-ಪೂರ್ವಿ
ನಂದನ್ ಜೊತೆ ಸಂಸಾರ ಮಾಡಲು ಪೂರ್ವಿಗೆ ಪದ್ಮಿನಿ ಹೇಳ್ತಾ ಇದ್ದಾಳೆ. ನಿನಗೆ ನಂದನ್ ತಾಳಿ ಕಟ್ಟಿದ್ದಾರೆ. ನೀನೇ ಅವರ ಜೊತೆ ಸಂಸಾರ ಮಾಡುವುದು ಸರಿ ಎಂದು ಹೇಳ್ತಾ ಇದ್ದಾಳೆ. ಆದ್ರೆ ಪೂರ್ವಿ ಒಪ್ಪಿಕೊಳ್ತಾ ಇಲ್ಲ. ಅದು ಅಚಾನಕ್ಕಾಗಿ ನಡೆದ ಮದುವೆ. ನನಗೆ ನಂದನ್ ಅವರ ಮೇಲೆ ಆ ರೀತಿಯ ಭಾವನೆ ಇಲ್ಲ. ಅವರ ಜೊತೆ ಸಂಸಾರ ಮಾಡಲು ಆಗಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಇಬ್ಬರು ದೇವಸ್ಥಾನಕ್ಕೆ ಹೂವು ಕೇಳಲು ಬಂದಿದ್ದಾರೆ.
ನಂದನ್‍ಗೆ ಗೊತ್ತಾದ ಸತ್ಯ
ಪದ್ಮಿನಿ ನಂದನ್ ನಿಂದ ಪದೇ ಪದೇ ದೂರ ಹೋಗ್ತಾ ಇದ್ಲು. ಅದಕ್ಕೆ ನಂದನ್‍ಗೆ ತುಂಬಾ ಬೇರಸವಾಗಿತ್ತು. ತನ್ನ ಮದುವೆ ಫೋಟೋ ನೋಡುವಾಗ ಸತ್ಯ ಗೊತ್ತಾಗಿದೆ. ಮದುವೆ ಹೆಣ್ಣಿನ ಜಾಗದಲ್ಲಿ ಪೂರ್ವಿ ಇದ್ದಳು. ಕನ್ನಡಿಯಲ್ಲಿ ಒಂದು ಫೋಟೋ ಮಾತ್ರ ಬಂದಿದೆ. ಆ ಫೋಟೋವನ್ನು ನೋಡಿ ನಂದನ್ ಶಾಕ್ ಆಗಿದ್ದಾನೆ. ನಾನು ತಾಳಿ ಕಟ್ಟಿದ್ದು ಪೂರ್ವಿಗಾ ಎಂದು ಚಿಂತೆ ಮಾಡ್ತಾ ಇದ್ದಾನೆ.
ಮದುವೆ ನಿಜಾಂಶ ತಿಳಿಸಿದ ಪದ್ಮಿನಿ
ಪದ್ಮಿನಿ-ಪೂರ್ವಿ ಇದ್ದ ದೇವಸ್ಥಾನಕ್ಕೆ ನಂದನ್ ಬಂದಿದ್ದಾನೆ. ನಾನು ತಾಳಿ ಕಟ್ಟಿದ್ದು ಯಾರಿಗೆ? ಪದ್ಮಿನಿಗಾ? ಪೂರ್ವಿಗಾ? ಎಂದು ಕೇಳಿದ್ದಾನೆ ಅದಕ್ಕೆ ಪದ್ಮಿನಿ, ನೀವು ತಾಳಿ ಕಟ್ಟಿದ್ದು ಪೂರ್ವಿಗೆ ಎಂಬ ಸತ್ಯ ಹೇಳಿದ್ದಾಳೆ. ಅದನ್ನು ಕೇಳಿ ನಂದನ್‍ಗೆ ಶಾಕ್ ಆಗಿದೆ. ನಿಂತಲ್ಲೇ ಕುಸಿದು ಕೆಳಗೆ ಕೂತಿದ್ದಾನೆ. ಮುಂದೇನು ಮಾಡಬೇಕು ಎಂದು ತಿಳಿಯುತ್ತಿಲ್ಲ.
ಇದನ್ನೂ ಓದಿ: Ramachari: ಒಂದು ಕಡೆ ಅಪ್ಪ, ಮತ್ತೊಂದು ಕಡೆ ವಿಕಾಸ್; ಚಾರು-ರಾಮಾಚಾರಿ ಪರದಾಟ!
ನಂದನ್ ಸಂಸಾರ ಯಾರ ಜೊತೆ? ಪೂರ್ವಿ ಜೊತೆನಾ? ಪದ್ಮಿನಿ ಜೊತೆನಾ? ಈ ಸತ್ಯವನ್ನು ಮನೆಯವರಿಗೆ ಹೇಗೆ ಹೇಳ್ತಾರೆ? ಮುಂದೇನಾಗುತ್ತೆ ಅಂತ ನೋಡೋಕೆ ಪುಣ್ಯವತಿ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ