• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Olavina Nildana: ಮದುವೆ ಮನೆಯಿಂದ ತಾರಿಣಿಯನ್ನು ಕರೆದುಕೊಂಡು ಹೊರಟ ತಾತಾ; ಸಿದ್ಧಾಂತ್ ಜೊತೆ ಮದುವೆ?

Olavina Nildana: ಮದುವೆ ಮನೆಯಿಂದ ತಾರಿಣಿಯನ್ನು ಕರೆದುಕೊಂಡು ಹೊರಟ ತಾತಾ; ಸಿದ್ಧಾಂತ್ ಜೊತೆ ಮದುವೆ?

ತಾತಾ-ತಾರಿಣಿ

ತಾತಾ-ತಾರಿಣಿ

ತಾರಿಣಿ ಅಪ್ಪ-ಅಮ್ಮ, ಮಾವ-ಅತ್ತೆಗೆ ಹೇಳ್ತೇನೆ ಎಂದ್ರೂ ತಾತಾ ಬೇಡ ಎನ್ನುತ್ತಾರೆ, ಎಲ್ಲರೂ ಸಂಭ್ರಮದಲ್ಲಿದ್ದಾರೆ. ನಾವು ಬೇಗ ಆಸ್ಪತ್ರೆಗೆ ಹೋಗಿ ಬರೋಣ ಎಂದು ಹೇಳ್ತಾರೆ.

 • News18 Kannada
 • 5-MIN READ
 • Last Updated :
 • Karnataka, India
 • Share this:

ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 6 ಗಂಟೆಗೆ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಪ್ರಸಾರವಾಗ್ತಿದೆ. ಇದೊಂದು ಪ್ರೀತಿ (Love) ಆಧಾರಿತ ಕಥೆಯಾಗಿದ್ದು, ಹೀರೋ ಸಿದ್ಧಾಂತ್ ಮತ್ತು ನಟಿ ತಾರಿಣಿ ತಮ್ಮ ಪ್ರೀತಿ ಪಡೆದುಕೊಳ್ಳಲು ಆಗದೇ ಒದ್ದಾಡುತ್ತಿದ್ದಾರೆ. ತಾರಿಣಿ ಸಿದ್ಧಾಂತ್‍ನನ್ನು ತುಂಬಾ ಪ್ರೀತಿ ಮಾಡ್ತಾ ಇದ್ದಳು. ಅವನಿಗೆ ತನ್ನ ಪ್ರೀತಿ ವಿಷ್ಯ ಹೇಳಿಕೊಂಡು ಮದುವೆಯಾಗಬೇಕು ಎಂದುಕೊಂಡಿದ್ದಾಳೆ. ಆದ್ರೆ ಸಿದ್ಧಾಂತ್ ಅವತ್ತೇ ತಾನು ವಿದೇಶಕ್ಕೆ ಹೋಗುವುದಾಗಿ ಹೇಳಿದ್ದ.ತಾರಿಣಿ ತನ್ನ ಪ್ರೀತಿ ಮುಚ್ಚಿಟ್ಟು, ಧೀರಜ್ ನನ್ನು ಮದುವೆಯಾಗಲು ಒಪ್ಪಿದ್ದಾಳೆ. ಬಳೆ ಶಾಸ್ತ್ರ, ಮೆಹಂದಿ ಶಾಸ್ತ್ರ ಮುಕ್ತಾಯವಾಗಿದೆ. ಇನ್ನೇನು ಮದುವೆಯಿದೆ. ತಾತಾ ತಾರಿಣಿಯನ್ನು ಮದುವೆ (Marriage) ಮನೆಯಿಂದ ಕರೆದುಕೊಂಡು ಹೋಗಿದ್ದಾರೆ.


ಏರ್ ಪೋರ್ಟ್‍ನಲ್ಲಿರುವ ಸಿದ್ಧಾಂತ್
ಸಿದ್ಧಾಂತ್‍ಗೆ ಆಸ್ಟ್ರೇಲಿಯಾದಲ್ಲಿ ಕೆಲಸ ಆಗಿದೆ. ತಿಂಗಳಿಗೆ 4 ಲಕ್ಷ ಸಂಬಳ. ಅದಕ್ಕೆ ಸಿದ್ಧಾಂತ್ ಕೆಲಸಕ್ಕೆಂದು ಆಸ್ಟ್ರೇಲಿಯಾಗೆ ಹೊರಟಿದ್ದಾನೆ. ಆಸ್ಟ್ರೇಲಿಯಾಗೆ ಹೋಗಲು ಏರ್ ಪೋರ್ಟ್ ಗೆ ಹೋಗಿದ್ದಾನೆ. ತಾರಿಣಿಯನ್ನು ಮರೆತು ಮನೆಯವರಿಗಾಗಿ ಕೆಲಸ ಮಾಡಲು ವಿದೇಶಕ್ಕೆ ಹೊರಟಿದ್ದಾನೆ. ತಾರಿಣಿಯನ್ನು ಅಲ್ಲಿ ಹೋದ ಮೇಲೆ ಮರೆಯಬಹುದು ಎಂದುಕೊಂಡಿದ್ದಾನೆ.


ತಾರಿಣಿ ಮೇಲೆ ಪ್ರೀತಿ
ಸಿದ್ಧಾಂತ್ ತಾತಾನ ಬಳಿ ನನಗೂ ತಾರಿಣಿ ಮೇಲೆ ತುಂಬಾ ಪ್ರೀತಿ ಇದೆ. ಯಾವಾಗ ತಾರಿಣಿ ಇನ್ನೊಬ್ಬರನ್ನು ಮದುವೆ ಆಗ್ತಾಳೆ ಅಂತ ಗೊತ್ತಾಯ್ತೋ, ಆಗ ನಾನು ಮದುವೆ ಆಗಲ್ಲ ಅಂತ ಡಿಸೈಡ್ ಮಾಡಿದೆ. ಸಿದ್ಧಾಂತ್ ಮನಸ್ಸಿನಲ್ಲಿ ತಾರಿಣಿಗೆ ಮಾತ್ರ ಜಾಗ. ಅದನ್ನು ಯಾರ ಜೊತೆಯೂ ಹಂಚಿಕೊಳ್ಳಲ್ಲ. ತಾರಿಣಿ ಮದುವೆಯಾಗಿ ಸುಖವಾಗಿ ಇರಬೇಕಾದವಳು. ಆ ಧೀರಜ್ ನ ಮದುವೆಯಾಗ್ತಿರೋದು ತುಂಬಾ ಬೇಜಾರಿದೆ. ಧೀರಜ್ ಒಳ್ಳೆಯವನಲ್ಲ ಎಂದು ಸಿದ್ಧಾಂತ್ ಹೇಳಿದ್ದಾನೆ.
ಎದೆನೋವು ಎಂದು ನಾಟಕ
ತಾರಿಣಿ ಮದುವೆಗೆ ತಯಾರಾಗಿದ್ದಾಳೆ. ಮುಹೂರ್ತ ಹತ್ತಿರ ಬಂದಿದೆ. ಆಗ ತಾರಿಣಿ ಬಳಿ ಹೋದ ತಾತಾ, ನನಗೆ ತುಂಬಾ ಎದೆ ನೋಯ್ತಾ ಇದೆ ಎಂದು ಹೇಳಿದ್ದಾರೆ. ಅದಕ್ಕೆ ತಾರಿಣಿಗೆ ಭಯವಾಗಿದೆ. ಮನೆಯವರನ್ನು ಕರೆಯುತ್ತೇನೆ ಎನ್ನುತ್ತಾಳೆ. ಆದ್ರೆ ತಾತಾ ಬೇಡ, ಎಲ್ಲರೂ ಗಾಬರಿಯಾಗ್ತಾರೆ ಎಂದು ಹೇಳ್ತಾನೆ. ಅದಕ್ಕೆ ತಾರಿಣಿ ತಾನೇ ಆಸ್ಪತ್ರೆಗೆ ಲರೆದುಕೊಂಡು ಹೋಗುವುದಾಗಿ ಹೇಳ್ತಾಳೆ. ತಾತಾ ಓಕೆ ಎನ್ನುತ್ತಾರೆ.


ಏರ್ ಪೋರ್ಟ್ ನತ್ತ ಹೊರಟ ಕಾರು
ತಾರಿಣಿ ಅಪ್ಪ-ಅಮ್ಮ, ಮಾವ-ಅತ್ತೆಗೆ ಹೇಳ್ತೇನೆ ಎಂದ್ರೂ ತಾತಾ ಬೇಡ ಎನ್ನುತ್ತಾರೆ. ಎಲ್ಲರೂ ಸಂಭ್ರಮದಲ್ಲಿದ್ದಾರೆ. ನಾವು ಬೇಗ ಆಸ್ಪತ್ರೆಗೆ ಹೋಗಿ ಬರೋಣ ಎಂದು ಹೇಳ್ತಾನೆ. ಅದಕ್ಕೆ ತಾರಿಣಿ ಸಹ ಓಕೆ ಎನ್ನುತ್ತಾಳೆ. ಕಾರು ಹೊರಟ ಮೇಲೆ, ತಾತಾ ಡ್ರೈವರ್ ಗೆ ಏರ್ ಪೋರ್ಟ್ ಕಡೆ ಹೋಗು ಎಂದು ಹೇಳ್ತಾನೆ. ತಾರಿಣಿ ಶಾಕ್ ಆಗ್ತಾಳೆ. ಮನೆಯವರು ಹುಡುಕುತ್ತಾರೆ, ಬನ್ನಿ ವಾಪಸ್ ಹೋಗೋಣ ಎನ್ನುತ್ತಾಳೆ. ಆದ್ರೆ ತಾತಾ ಕೇಳಲ್ಲ. ಇದು ನಿನ್ನ ಹೊಸ ಪಯಣ, ಹಿಂದಿರುಗಿ ನೋಡಬೇಡ ಎನ್ನುತ್ತಾರೆ.


ತಾರಿಣಿ


ಸಿದ್ಧಾಂತ್ ಜೊತೆ ಮದುವೆ
ತಾರಿಣಿ ತಾತಾನಿಗೆ ಮೊದಲಿನಿಂದಲೂ ಸಿದ್ಧಾಂತ್ ಇಷ್ಟ ಇತ್ತು. ಆದ್ರೆ ಮನೆಯವರು ಬೇಸರ ಮಾಡಿಕೊಳ್ತಾರೆ ಅಂತ ಸುಮ್ಮನಿರುತ್ತಾರೆ. ಯಾವಾಗ ಧೀರಜ್ ಒಳ್ಳೆಯವನಲ್ಲ ಎಂದು ಗೊತ್ತಾಗುತ್ತೋ, ಆಗ ತಾತಾ ತಾರಿಣಿಯನ್ನು ಕರೆದುಕೊಂಡು ಸಿದ್ಧಾಂತ್ ಬಳಿ ಹೋಗ್ತಾ ಇದ್ದಾನೆ. ಹಾಗಾದ್ರೆ ತಾರಿಣಿ-ಸಿದ್ಧಾಂತ್ ಮದುವೆಯಾಗುತ್ತಾ ನೋಡಬೇಕು.


ಸಿದ್ಧಾಂತ್


ಇದನ್ನೂ ಓದಿ: Olavina Nildana: ತಾರಿಣಿ ಮರೆಯೋಕೆ ಸಾಧ್ಯ ಇಲ್ಲ, ಧೀರಜ್ ಜೊತೆ ಮದುವೆ ಮಾಡಬೇಡಿ ಎಂದ ಸಿದ್ಧಾಂತ್! 

top videos


  ತಾರಿಣಿ-ಸಿದ್ಧಾಂತ್ ಮದುವೆಯಾಗುತ್ತಾ? ವಿಮಾನ ನಿಲ್ದಾಣದಲ್ಲಿ ಮೊಳಗುತ್ತಾ ಗಟ್ಟಿಮೇಳ? ಇದಕ್ಕೆ ಸಿದ್ಧಾಂತ್ ಒಪ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.

  First published: