Olavina Nildana: ಸಿದ್ಧಾಂತ್ ಮನೆಗೆ ಬರಲು ರೆಡಿಯಾದ ತಾರಿಣಿ ಮನೆಯವರು, ಈಗೇನ್ ಮಾಡ್ತಾನೆ ಸಿದ್ದು?

ತಾರಿಣಿ ಮನೆಯವರು ಸಿದ್ಧಾಂತ್ ಮನೆಗೆ ಬರಲೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಸಿದ್ಧಾಂತ್‍ಗೆ ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ಅವರ ಮನೆಯವರು ಬಂದ್ರೆ, ತನ್ನ ಅಮ್ಮ, ಅಣ್ಣ, ಅತ್ತಿಗೆಗೆ ಏನ್ ಹೇಳೋದು ಅಂತ ತಲೆ ಕೆಡಿಸಿಕೊಂಡಿದ್ದಾನೆ. ಈಗ ಸಿದ್ದು ಏನ್ ಪ್ಲ್ಯಾನ್ ಮಾಡ್ತಾನೆ ಅನ್ನೋದೇ ಕುತೂಹಲ.

ಒಲವಿನ ನಿಲ್ದಾಣ

ಒಲವಿನ ನಿಲ್ದಾಣ

  • Share this:
    ಒಲವಿನ ನಿಲ್ದಾಣ (Olavina Nildana), ಧಾರಾವಾಹಿ (Serial) ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada), ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಬಗ್ಗೆಯ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ಇನ್ನು ನಟಿ ತಾರಿಣಿ ಮುಗ್ಧತೆ, ಸಿದ್ಧಾಂತ್ ಮೇಲಿನ ಪ್ರೀತಿ, ತನ್ನ ಕನಸಿನ ಹುಡುಗನ್ನು ಪಡೆಯಲು ಪರದಾಡುತ್ತಿರುವ ಪರಿ ಜನರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ತಾರಿಣಿಗೆ ಸಿದ್ಧಾಂತ್ (Siddhant) ಮೇಲೆ ಪ್ರೀತಿ ಇದೆ. ಅದನ್ನು ಹೇಳಿಕೊಳ್ಳಲು ಆಗುತ್ತಿಲ್ಲ. ಇನ್ನು ತಾರಿಣಿ ಮನೆಯವರ ಮುಂದೆ, ಸಿದ್ಧಾಂತ್-ತಾರಿಣಿ ಸುಳ್ಳು ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದಾರೆ. ಸತ್ಯವನ್ನು ಸಹ ತಾರಿಣಿ ಮನೆಯವರ ಮುಂದೆ ಹೇಳಲಾಗದೇ ಪರದಾಡುತ್ತಿದ್ದಾಳೆ.

    ಸಿದ್ಧಾಂತ್‍ಗೆ ಕಾಲ್ ಮಾಡಿದ ತಾರಿಣಿ ಅಪ್ಪ

    ಸಿದ್ಧಾಂತ್‍ಗೆ ತಾರಿಣಿ ಅಪ್ಪ ಕಾಲ್ ಮಾಡಿ, ಸಿದ್ಧಾಂತ್ ಇವತ್ತು ನೀವೂ ಮನೆಯಲ್ಲೇ ಇರುತ್ತೀರಾ? ನಿಮ್ಮ ಅಪ್ಪ, ಅಮ್ಮ, ಅಣ್ಣ, ಅತ್ತಿಗೆ ಎಲ್ಲರೂ ಮನೆಯಲ್ಲೇ ಇರ್ತಾರಾ ಎಂದು ಕೇಳುತ್ತಾರೆ. ಅದಕ್ಕೆ ಸಿದ್ಧಾಂತ್ ಯಾಕೆ ಅಂಕಲ್ ಎನ್ನುತ್ತಾನೆ. ಇವತ್ತು ನಾವೆಲ್ಲಾ ನಿಮ್ಮ ಮನೆಗೆ ಬರೋಣ ಅಂತಿದ್ದೀವಿ. ಮನೆಯಲ್ಲಿ ಎಲ್ಲರು ಇದ್ರೆ ಚೆನ್ನಾಗಿ ಇರುತ್ತೆ. ನಾವೆಲ್ಲಾ ಬರ್ತಾ ಇದೀವಿ. ಮನೆಯಲ್ಲಿ ಹೇಳಿ ಬಿಡಪ್ಪ ಎನ್ನುತ್ತಾರೆ. ಅದಕ್ಕೆ ಸಿದ್ಧಾಂತ್ ಶಾಕ್ ಆಗಿದ್ದಾನೆ.

    ತನ್ನ ಅಪ್ಪನ ಬಳಿ ಕಷ್ಟ ಹೇಳಿಕೊಂಡ ಸಿದ್ಧಾಂತ್
    ಅಪ್ಪ, ತಾರಿಣಿ ಮನೆಯವರೆಲ್ಲಾ ಮನೆಗೆ ಬರ್ತಿವಿ ಎಂದು ಹೇಳುತ್ತಿದ್ದಾರೆ. ಏನ್ ಮಾಡೋದು ಎಂದು ಕೇಳುತ್ತಾನೆ. ಅದಕ್ಕೆ ಸಿದ್ಧಾಂತ್ ಅಪ್ಪ ಯಾವಾಗ ಬರುತ್ತಾರೆ ಎನ್ನುತ್ತಾನೆ. ಇವತ್ತೆ ಎಂದು ಸಿದ್ಧಾಂತ್ ಹೇಳಿದಾಗ, ಅವರಿಗೆ ಇನ್ನರ್ಧ ಗಂಟೆ ಬಿಟ್ಟು ಕಾಲ್ ಮಾಡಿ ನಾನೇ ಹೇಳ್ತಿನಿ ಎಂದು ಹೇಳು ಎನ್ನುತ್ತಾರೆ. ಸಿದ್ಧಾಂತ್ ಅದೇ ರೀತಿ ಹೇಳುತ್ತಾನೆ.

    ಇದನ್ನೂ ಓದಿ: Lakshana: ನಕ್ಷತ್ರಾಳನ್ನು ಕೊಲ್ಲಲು ಭೂಪತಿ ಮನೆಯಲ್ಲೇ ಮೌರ್ಯನಿಗೆ ಸಹಾಯ! ಕಾಣದ ಕೈ ಯಾರದ್ದು?

    ಸಿದ್ದು ಈಗ ಏನ್ ಪ್ಲ್ಯಾನ್ ಮಾಡ್ತಾನೆ?

    ತಾರಿಣಿ ಮನೆಯವರು ಸಿದ್ಧಾಂತ್ ಮನೆಗೆ ಬರಲೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಸಿದ್ಧಾಂತ್‍ಗೆ ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ಅವರ ಮನೆಯವರು ಬಂದ್ರೆ, ತನ್ನ ಅಮ್ಮ, ಅಣ್ಣ, ಅತ್ತಿಗೆಗೆ ಏನ್ ಹೇಳೋದು ಅಂತ ತಲೆ ಕೆಡಿಸಿಕೊಂಡಿದ್ದಾನೆ. ಈಗ ಸಿದ್ದು ಏನ್ ಪ್ಲ್ಯಾನ್ ಮಾಡ್ತಾನೆ ಅನ್ನೋದೇ ಕುತೂಹಲ.

    ಮನೆಯವರ ಮುಂದೆ ಸತ್ಯ ಹೇಳಲಾಗದೇ ತಾರಿಣಿ ಒದ್ದಾಟ
    ತಾರಿಣಿ ತನ್ನ, ಸಿದ್ಧಾಂತ್ ಮಧ್ಯೆ ಪ್ರೀತಿ ಇಲ್ಲ. ಅವತ್ತು ನಡೆದಿದ್ದು ಸುಳ್ಳು ನಿಶ್ಚಿತಾರ್ಥ. ನನಗೆ ಇಷ್ಟ ಇಲ್ಲದೇ ಇರೋ ಗಂಡು ಮದುವೆ ಮಾಡ್ತೀರಾ ಅಂತ ಸಿದ್ಧಾಂತ್ ಅವತ್ತು ಪ್ರೀತಿ ನಾಟಕ ಆಡಿದ್ದರು. ಎಂದು ಎಲ್ಲ ಸತ್ಯವನ್ನು ತಾರಿಣಿ ಮನೆಯವರ ಮುಂದೆ ಹೇಳಬೇಕಿದೆ. ಆದ್ರೆ ಅವಳ ಕೈಯಲ್ಲಿ ಆಗುತ್ತಿಲ್ಲ. ಸತ್ಯ ಹೇಳಲಾಗದೇ ಪರದಾಟ ನಡೆಸುತ್ತಿದ್ದಾಳೆ.

    ಸುಳ್ಳಿನ ನಿಶ್ಚಿತಾರ್ಥದಿಂದ ಸಿದ್ಧಾಂತ್‍ಗೆ ಸಂಕಷ್ಟ

    ಸಿದ್ಧಾಂತ್ ತಾರಿಣಿ ಜೀವನ ಸರಿ ಮಾಡಲು ತನ್ನ ಬಗ್ಗೆ ಏನೂ ಯೋಚನೆ ಮಾಡದೇ, ಸುಳ್ಳಿನ ನಿಶ್ಚಿತಾರ್ಥ ಆಗಿದ್ದ. ಅದು ಸಿದ್ಧಾಂತ್ ಮನೆಯಲ್ಲೂ ಕೂಡ ಗೊತ್ತಿಲ್ಲ. ನಿಶ್ಚಿತಾರ್ಥ ಆಗಿದ್ದೇ ತಡ, ತಾರಿಣಿ ಮನೆಯವರು ಪದೇ ಪದೇ ಸಿದ್ಧಾಂತ್‍ಗೆ ಕರೆ ಮಾಡುತ್ತಿದ್ದಾರೆ. ಅದು ಸಿದ್ಧಾಂತ್ ಮನೆಯಲ್ಲಿ ಇದ್ದಾಗಲೇ, ಮದುವೆ ಯಾವಾಗ ಮಾಡೋಣ, ಲಗ್ನ ಪತ್ರಿಕೆ ಮಾಡಿಸಬೇಕು ಎಂದು ಕೇಳುತ್ತಾರೆ. ಅದಕ್ಕೆ ಸಿದ್ಧಾಂತ್‍ಗೆ ತೊಂದರೆ ಆಗುತ್ತಿದೆ. ಅಲ್ಲದೇ ಈಗ ಮನೆಗೆ ಬರ್ತಿವಿ ಅಂತಿದ್ದಾರೆ.

    ಇದನ್ನೂ ಓದಿ: Kendasampige: ಸುಮನಾ ಕುಟುಂಬಕ್ಕೆ ಮತ್ತೊಂದು ಆಘಾತ, ಮೂವರು ಮಕ್ಕಳ ತಂದೆ ಮೃತರಾದರಾ?

    ಸಿದ್ಧಾಂತ್ ಈ ಇಕ್ಕಟ್ಟಿನ ಪರಿಸ್ಥಿತಿಯನ್ನು ಹೇಗೆ ನಿಭಾಯಿಸ್ತಾನೆ ಅನ್ನೋದನ್ನ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.
    Published by:Savitha Savitha
    First published: