Olavina Nildana: ತಾರಿಣಿಗೆ ಇರೋ ಸಮಸ್ಯೆಯ ಹೆಸರೇ ಸಿದ್ಧಾಂತ್, ಮೊಮ್ಮಗಳ ಅಳು ಕಂಡು ತಾತಾ ಕಂಗಾಲು!

ತಾರಿಣಿ ಅಳು ಕಂಡು ಕಂಗಾಲಾಗಿರುವ ಮನೆಯವರು ಸಿದ್ಧಾಂತ್‍ಗೆ ಫೋನ್ ಮಾಡಿದ್ದಾರೆ. ಸಿದ್ಧಾಂತ್ ಜೊತೆ ತಾತಾ ಮಾತನಾಡಿ, ನಿನ್ನ ಬಳಿ ಒಂದು ವಿಷಯ ಕೇಳಬೇಕಿತ್ತು, ನಮ್ಮ ಪಾಪುಗೆ ಅಂದ್ರೆ ತಾರಿಗೆ ಏನಾಗಿದೆ ಎಂದು ಕೇಳುತ್ತಾರೆ. ಸಿದ್ಧಾಂತ್ ಅವಳಿಗೆ ಏನಾಗಿದೆ ತಾತಾ ಅವಳು ಊರಿನಲ್ಲೇ ಇದ್ದಾಳೆ ಎನ್ನುತ್ತಾನೆ. ಅದಕ್ಕೆ ತಾತಾ ಅವಳು ಊರಿನಲ್ಲಿದ್ದಾಳೆ ನಿಜ. ಆದರೆ ಅವಳ ಮನಸ್ಸು ಇಲ್ಲಿ ಇಲ್ಲ. ಏನೋ ತಲೆಯಲ್ಲಿ ಇಟ್ಟುಕೊಂಡು ಕೊರಗುತ್ತಿದ್ದಾಳೆ.

ಒಲವಿನ ನಿಲ್ದಾಣ

ಒಲವಿನ ನಿಲ್ದಾಣ

 • Share this:
  ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada), ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ಬಂದು ಕಡಿಮೆ ದಿನ ಆಗಿದ್ರು. ಜನ ಮಿಸ್ ಮಾಡ್ದೇ ಈ ಸೀರಿಯಲ್ ನೋಡಲು ಕಾಯ್ತಾ ಇರ್ತಾರೆ. ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಬಗ್ಗೆಯ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ಇನ್ನು ನಟಿ ತಾರಿಣಿ ಮುಗ್ಧತೆ. ಸಿದ್ಧಾಂತ್ ಮೇಲಿನ ಪ್ರೀತಿ (Love), ತನ್ನ ಕನಸಿನ ಹುಡುಗನ್ನು ಪಡೆಯಲು ಪರದಾಡುತ್ತಿರುವ ಪರಿ ಜನರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ಸಿದ್ಧಾಂತ್‍ಗೆ ತನ್ನ ಮೇಲೆ ಪ್ರೀತಿ ಇಲ್ಲ ಎಂದು ತಾರಿಣಿಗೆ ಗೊತ್ತಾಗಿದೆ. ಅಲ್ಲದೇ ಸಿದ್ಧಾಂತ್ ಮತ್ತು ತಾರಿಣಿ ಮಧ್ಯೆ ಆಗಿರುವ ಸುಳ್ಳು ನಿಶ್ಚಿತಾರ್ಥದ (Engagement) ಬಗ್ಗೆ ಮನೆಯಲ್ಲಿ ಹೇಳಬೇಕು ಎಂದು ಕೊಂಡಿದ್ದಾಳೆ. ಆದ್ರೆ ಅದು ಆಗುತ್ತಿಲ್ಲ.

  ಮನೆಯವರ ಮುಂದೆ ಬಿಕ್ಕಿ ಬಿಕ್ಕಿ ಅತ್ತ ತಾರಿಣಿ
  ತಾರಿಣಿ ತಾನು ಏನೂ ಹೇಳಬೇಕು ಎಂದು ಮನೆಯವರಿಗೆಲ್ಲಾ ಹೇಳಿರುತ್ತಾಳೆ. ಅಂತೆಯೇ ಮನೆಯವರೆಲ್ಲಾ ಅವಳ ಮಾತು ಕೇಳಲು ಸೇರಿರುತ್ತಾರೆ. ತಾರಿಣಿ ಮಾತನಾಡದೇ ಎಷ್ಟೋ ಹೊತ್ತು ಸುಮ್ಮನೆ ನಿಂತಿರುತ್ತಾಳೆ. ನಂತರ, ಮನೆಯವರೆಲ್ಲಾ ಏನು ವಿಷಯ ಅಂತ ಕೇಳಿದ್ರೆ, ಏನೂ ಹೇಳದೇ ಅಳುತ್ತಾ ಕೂತು ಬಿಡುತ್ತಾಳೆ. ತಾರಿಣಿ ಅಳು ಕಂಡು ಮನೆಯವರೆಲ್ಲಾ ಗಾಬರಿಯಾಗಿದ್ದಾರೆ. ಮಗಳಿಗೆ ಏನ್ ಆಯ್ತು ಎನ್ನೋ ಚಿಂತೆಯಲ್ಲಿದ್ದಾರೆ.

  ಸಿದ್ಧಾಂತ್‍ಗೆ ಫೋನ್ ಮಾಡಿದ ತಾರಿಣಿ ಮನೆಯವರು

  ತಾರಿಣಿ ಅಳು ಕಂಡು ಕಂಗಾಲಾಗಿರುವ ಮನೆಯವರು ಸಿದ್ಧಾಂತ್‍ಗೆ ಫೋನ್ ಮಾಡಿದ್ದಾರೆ. ಸಿದ್ಧಾಂತ್ ಜೊತೆ ತಾತಾ ಮಾತನಾಡಿ, ನಿನ್ನ ಬಳಿ ಒಂದು ವಿಷಯ ಕೇಳಬೇಕಿತ್ತು, ನಮ್ಮ ಪಾಪುಗೆ ಅಂದ್ರೆ ತಾರಿಗೆ ಏನಾಗಿದೆ ಎಂದು ಕೇಳುತ್ತಾರೆ. ಸಿದ್ಧಾಂತ್ ಅವಳಿಗೆ ಏನಾಗಿದೆ ತಾತಾ ಅವಳು ಊರಿನಲ್ಲೇ ಇದ್ದಾಳೆ ಎನ್ನುತ್ತಾನೆ. ಅದಕ್ಕೆ ತಾತಾ ಅವಳು ಊರಿನಲ್ಲಿದ್ದಾಳೆ ನಿಜ. ಆದರೆ ಅವಳ ಮನಸ್ಸು ಇಲ್ಲಿ ಇಲ್ಲ. ಏನೋ ತಲೆಯಲ್ಲಿ ಇಟ್ಟುಕೊಂಡು ಕೊರಗುತ್ತಿದ್ದಾಳೆ.

  ಇದನ್ನೂ ಓದಿ: Sathya Serial: ಡಿವೋರ್ಸ್ ಪೇಪರ್ ಗೆ ಇವತ್ತು ಸಹಿ ಮಾಡಲಿರುವ ಸತ್ಯ! ಸುಲಭವಾಗಿ ಸೋಲು ಒಪ್ಪಿಕೊಳ್ತಾಳಾ ಲೇಡಿ ರಾಮಾಚಾರಿ? 

  ನಿನ್ನೆ ರಾತ್ರಿ ಏನೋ ಹೇಳಬೇಕು ಎಂದು ಹೇಳಿದಳು. ಇವತ್ತು ಬೆಳಗ್ಗೆ ಎಲ್ಲರನ್ನೂ ಸೇರಿಸಿದ್ಲು. ಆದ್ರೆ ಇದ್ದಕ್ಕಿದ್ದ ಹಾಗೇ ಅಳುತ್ತಾ ಕೂತು ಬಿಟ್ಟಳು. ಅವಳು ಅಳುವ ಹುಡುಗಿ ಅಲ್ಲ. ಅವಳು ಕಣ್ಣಲ್ಲಿ ನೀರಾಕ್ತಾಳೆ ಅಂದ್ರೆ ನಮಗೂ ನೋವು. ಅವಳು ಏನೂ ಹೇಳದೇ ಹೊರಟು ಹೋದ್ಲು. ನೀನು ಅವಳನ್ನು ಮದುವೆಯಾಗೋ ಹುಡುಗ. ನಾಳೆ ಅವಳ ಕಷ್ಟ-ಸುಖ ಹಂಚಿಕೊಳ್ಳೋನು. ನಿನಗೆ ಗೊತ್ತಿರಬಹುದು ಅಂತ ನಿನ್ನ ಕೇಳ್ತಾ ಇದೀನಿ. ಅವಳಿಗೆ ಬೆಂಗಳೂರಿನಲ್ಲಿ ಏನಾದ್ರೂ ಸಮಸ್ಯೆನಾ ಎಂದು ಸಿದ್ಧಾಂತ್‍ಗೆ ತಾತಾ ಕೇಳುತ್ತಿದ್ದಾರೆ. ತಾತಾನಿಗೆ ಏನು ಹೇಳೋದು ಗೊತ್ತಾಗದೇ ಸಿದ್ಧಾಂತ್ ಸೈಲೆಂಟ್ ಆಗಿ ಇದ್ದಾನೆ.

  Colors Kannada serial, Kannada serial, Olavina nildana Serial, Olavina Nildana serial today episode, interestin episode in serial, ಒಲವಿನ ನಿಲ್ದಾಣ ಧಾರಾವಾಹಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ತಾರಿಣಿ ತಾತಾ


  ಸತ್ಯ ಹೇಳಲಾಗದೇ ಪರದಾಡುತ್ತಿರುವ ತಾರಿಣಿ
  ತಾರಿಣಿಗೆ ಈ ಮೊದಲು ಮನೆಯವರು ಧೀರಜ್ ಎನ್ನುವ ಹುಡುಗನ ಜೊತೆ ನಿಶ್ಚಿತಾರ್ಥ ಮಾಡುತ್ತಾ ಇರುತ್ತಾರೆ. ಅದು ತಾರಿಣಿಗೆ ಇಷ್ಟ ಇರುವುದಿಲ್ಲ. ಅದಕ್ಕೆ ಅದನ್ನು ತಡೆಯಲು ಸಿದ್ಧಾಂತ್, ತಾನು, ತಾರಿಣಿ ಪ್ರೀತಿಸುತ್ತಿದ್ದೇವೆ. ಸುಳ್ಳು ನಿಶ್ಚಿತಾರ್ಥ ಮಾಡಿಕೊಂಡಿರುತ್ತಾರೆ. ಅದನ್ನೇ ನಿಜ ಎಂದುಕೊಂಡ ಮನೆಯವರು, ಸಿದ್ಧಾಂತ್‍ಗೆ ಪದೇ ಪದೇ ಕಾಲ್ ಮಾಡಿ ಮದುವೆ ಯಾವಾಗ ಎನ್ನುತ್ತಾರೆ. ಅದರಿಂದ ಸಿದ್ಧಾಂತ್‍ಗೆ ತೊಂದರೆಯಾಗುತ್ತಿದೆ.

  ಇದನ್ನೂ ಓದಿ: Ramachari: ರಾಮಾಚಾರಿ ಮನೆಗೆ ಬಂದು ಸವಾಲ್ ಹಾಕಿದ ಚಾರು! ದುರಂಹಕಾರಕ್ಕೆ ಫುಲ್​ಸ್ಟಾಪ್ ಯಾವಾಗ?

  ಅದಕ್ಕೆ ಸಿದ್ಧಾಂತ್ ತಾರಿಣಿಗೆ ಮನೆಯವರ ಬಳಿ ಸತ್ಯ ಹೇಳು. ನನಗೆ ತೊಂದರೆ ಆಗುತ್ತಿದೆ ಎನ್ನುತ್ತಾನೆ. ಅದಕ್ಕೆ ತಾರಿಣಿ ಸತ್ಯ ಹೇಳಲು ಊರಿಗೆ ಹೋಗಿದ್ದಾಳೆ. ಆದರೆ ಮನೆಯವರ ಮುಂದೆ ಸತ್ಯ ಹೇಳಲು ಆಗದೇ ಪರದಾಡುತ್ತಿದ್ದಾಳೆ. ತಾರಿಣಿ ಸತ್ಯ ಹೇಳ್ತಾಳ ಮನೆಯಲ್ಲಿ ಅನ್ನೋದನ್ನು ನೋಡೋಕೆ ಒಲವಿನ ನಿಲ್ದಾಣ ಸೀರಿಯಲ್ ನೋಡಬೇಕು.
  Published by:Savitha Savitha
  First published: