Olavina Nildana: ತಾರಿಣಿಯ ಪ್ರೀತಿಯಲ್ಲಿ ಬೀಳ್ತಿದ್ದಾನಾ ಸಿದ್ಧಾಂತ್? ಇಷ್ಟ ಇಲ್ಲ ಅಂದ್ರೂ ಬೆಟ್ಟದಷ್ಟು ಕಾಳಜಿ

ಸಿದ್ಧಾಂತ್, ತಾರಿಣಿಯ ಪ್ರೀತಿಯ ಬಲೆಗೆ ಬೀಳ್ತಾನಾ ಎನ್ನೋ ಅನುಮಾನ ಶುರುವಾಗಿದೆ. ಯಾಕಂದ್ರೆ ಸಿದ್ಧಾಂತ್, ತಾರಿಣಿಗಾಗಿ ತಾನೇ ಎಲೆಗಳನ್ನು ಹಾಸಿ, ಜಾಕೇಟ್ ಹಾಕಿ ಆಕೆಯನ್ನು ಮಲಗಿಸಿದ್ದಾನೆ. ಇಷ್ಟು ಒಳ್ಳೆ ಹುಡುಗಿಯನ್ನು ಮದುವೆಯಾಗಲು ಪುಣ್ಯ ಮಾಡಿರಬೇಕು, ಆದ್ರೆ ತನ್ನ ಜೀವನದಲ್ಲಿ ಬಂದಿದ್ದಾಳೆ ಎಂದು ಬೇಸರ ಪಟ್ಟುಕೊಳ್ಳುತ್ತಾನೆ. ಸಿದ್ಧಾಂತ್ ಕಾಳಜಿ ಪ್ರೀತಿಯಾಗಿ ಬದಲಾಗುತ್ತಾ ಕಾದು ನೋಡಬೇಕು.

ಒಲವಿನ ನಿಲ್ದಾಣ

ಒಲವಿನ ನಿಲ್ದಾಣ

 • Share this:
  ಸದ್ದಿಲ್ಲದೇ ಕನ್ನಡಿಗರ ಮನದಲ್ಲಿ ಜಾಗ ಮಾಡಿಕೊಳ್ತಿದೆ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial). ಕಳೆದ ತಿಂಗಳಷ್ಟೇ ತನ್ನ ಪ್ರಯಾಣ ಶುರು ಮಾಡಿರುವ ಒಲವಿನ ನಿಲ್ದಾಣ ಧಾರಾವಾಹಿ ಅಭಿಮಾನಿಗಳ ಮನದಲ್ಲಿ ಎಲ್ಲೂ ಸ್ಟಾಪ್ ಆಗದೇ ಓಡ್ತಾ ಇದೆ. ಈ ಧಾರಾವಾಹಿಯು ಕಲರ್ಸ್ ಕನ್ನಡ (Colors Kannada)ದಲ್ಲಿ ಸೋಮವಾರ (Monday)ದಿಂದ ಶುಕ್ರವಾರ (Friday)ದವರೆಗೆ ಸಂಜೆ 6 ಗಂಟೆವರೆಗೆ ಪ್ರಸಾರ ಆಗುತ್ತಿದೆ. ಶ್ರುತಿ ನಾಯ್ಡು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸೀರಿಯಲ್ ಪ್ರೀತಿಯ ಪಯಣವಾಗಿದೆ. ಇದರಲ್ಲಿ ನಟ ಸಿದ್ಧಾಂತ, ನಟಿ ತಾರಿಣಿ ಇಬ್ಬರ ನಡುವಿನ ಕೋಳಿ ಜಗಳ, ತಾರಿಣಿಯನ್ನು, ಸಿದ್ಧಾಂತ ಮಾಡುತ್ತಿರುವ ಕಾಳಜಿ, ತಾರಿಣಿಗೆ, ಸಿದ್ಧಾಂತ ಮೇಲಾಗಿರುವ ಪ್ರೀತಿ ಎಲ್ಲವನ್ನು ಒಳಗೊಂಡಿದೆ. ಜನರಿಗೆ ಕ್ಯೂಟ್ ಜೋಡಿ ಒಂದಾದ್ರೆ ಒಳ್ಳೆಯದಾಗುತ್ತೆ ಅಂತ ತಪ್ಪದೇ ಧಾರವಾಹಿ ನೋಡ್ತಾ ಇದ್ದಾರೆ.

  ಸಿದ್ಧಾಂತ್‍ಗೆ ತಾರಿಣಿ ಮೇಲೆ ಪ್ರೀತಿಯಾಗುತ್ತಾ?

  ಒಲವಿನ ನಿಲ್ದಾಣದಲ್ಲಿ ಸಿದ್ಧಾಂತ್ ಮತ್ತು ತಾರಿಣಿ ಒಂದೇ ಕಾಲೇಜಿನಲ್ಲಿ ಓದುತ್ತಿರುವ ಸ್ನೇಹಿತರು. ತಾರಿಣಿ ತನ್ನ ಊರಿಗೆ ಹೋದಾಗ ತಾತಾ ಇಷ್ಟವಿಲ್ಲದ ನಿಶ್ಚಿತಾರ್ಥ ಮಾಡುತ್ತಾ ಇರುತ್ತಾರೆ. ಆಗ ಅದನ್ನು ಸಿದ್ಧಾಂತ್ ತಪ್ಪಿಸಿರುತ್ತಾನೆ. ತಾನು, ತಾರಿಣಿ ಪ್ರೀತಿ ಮಾಡುತ್ತಿದ್ದೇವೆ ಎಂದು ಹೇಳಿ ಸುಳ್ಳು ಹೇಳಿ ಎಂಗೇಜ್‍ಮೆಂಟ್ ಮಾಡಿಕೊಂಡಿರುತ್ತಾನೆ. ಆದ್ರೆ ಸಿದ್ಧಾಂತ್ ತನ್ನ ಕನಸಿನ ಹುಡುಗ ಎಂದು ಕೊಂಡ ತಾರಿಣಿಗೆ ಆತನ ಮೇಲೆ ಪ್ರೀತಿಯಾಗುತ್ತೆ.

  ಟ್ರಿಪ್ ಹೋದಲ್ಲಿ ತಾರಿಣಿ ಮೇಲೆ ಹೆಚ್ಚಿದ ಕಾಳಜಿ

  ಸಿದ್ಧಾಂತ್ ಮತ್ತು ಆತನ ಗೆಳೆಯರು ಕಾಲೇಜಿನಿಂದ ಟ್ರಿಪ್ ಹೋಗಿದ್ದಾರೆ. ಎಲ್ಲ ಸ್ನೇಹಿತರಿಗೂ ಗರ್ಲ್ ಫ್ರೆಂಡ್ಸ್ ಇದ್ದು, ಸಿದ್ಧಾಂತ್‍ಗೆ ಇಲ್ಲ. ಹಾಗೇ ತಾರಿಣಿ ಸಹ ಒಂಟಿ. ಇಬ್ಬರಿಗೂ ದಾರಿ ಸಿಗದೇ ನಿರ್ಜನ ಪ್ರದೇಶದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಚಳಿ ತಡೆದುಕೊಳ್ಳಲಾಗದೇ ಇಬ್ಬರೂ ಫೈರ್ ಕ್ಯಾಂಪ್ ಮಾಡಿಕೊಂಡಿದ್ದಾರೆ.

  ಇದನ್ನೂ ಓದಿ: Breaking News: ಕನ್ನಡ ಕಿರುತೆರೆ ನಟ ಚಂದನ್‌ಗೆ ಕಪಾಳಮೋಕ್ಷ! ತೆಲುಗು ಧಾರಾವಾಹಿ ಶೂಟಿಂಗ್ ಸೆಟ್‌ನಲ್ಲಿ ಕಿರಿಕ್

  ತಾನೇ ಎಲೆಗಳನ್ನು ಹಾಸಿಗೆ ಮಾಡಿದ ಸಿದ್ಧಾಂತ್

  ಇವತ್ತಿನ ಎಪಿಸೋಡ್‍ನಲ್ಲಿ ಸಿದ್ಧಾಂತ್, ತಾರಿಣಿಯ ಪ್ರೀತಿಯ ಬಲೆಗೆ ಬೀಳ್ತಾನಾ ಎನ್ನೋ ಅನುಮಾನ ಶುರುವಾಗಿದೆ. ಯಾಕಂದ್ರೆ ಸಿದ್ಧಾಂತ್, ತಾರಿಣಿಗಾಗಿ ತಾನೇ ಎಲೆಗಳನ್ನು ಹಾಸಿ ಮಲಗಿಸಿದ್ದಾನೆ. ಅಲ್ಲದೇ ತನ್ನ ಜಾಕೇಟ್ ಹಾಕಿ ಆಕೆಯನ್ನು ಮಲಗಿಸಿದ್ದಾನೆ. ಅಲ್ಲದೇ ಇಷ್ಟು ಒಳ್ಳೆ ಹುಡುಗಿಯನ್ನು ಮದುವೆಯಾಗಲು ಪುಣ್ಯ ಮಾಡಿರಬೇಕು, ಆದ್ರೆ ತನ್ನ ಜೀವನದಲ್ಲಿ ಬಂದಿದ್ದಾಳೆ ಎಂದು ಬೇಸರ ಪಟ್ಟುಕೊಳ್ಳುತ್ತಾನೆ. ಸಿದ್ಧಾಂತ್ ಕಾಳಜಿ ಪ್ರೀತಿಯಾಗಿ ಬದಲಾಗುತ್ತಾ ಕಾದು ನೋಡಬೇಕು.

  ತಾರಿಣಿ-ಸಿದ್ಧಾಂತ್ ದೂರ ಮಾಡಲು ಶತ ಪ್ರಯತ್ನ

  ಇನ್ನು ತಾರಿಣಿ-ಸಿದ್ಧಾಂತ್ ನಿಜವಾಗಿಯೂ ಪ್ರೀತಿಸುತ್ತಿದ್ದಾರೆ ಎಂದು ಕೊಂಡಿರುವ ತಾರಿಣಿಯ ಮಾವ ಅಂದ್ರೆ ಮಂಡ್ಯ ರಮೇಶ್, ಅವರನ್ನು ದೂರ ಮಾಡುವ ಯತ್ನದಲ್ಲಿದ್ದಾರೆ. ಸಿದ್ಧಾಂತ್ ಅತ್ತಿಗೆಯನ್ನು ಪರಿಚಯ ಮಾಡಿಕೊಂಡು, ಸಿದ್ಧಾಂತ್ ಮನೆಯವರಿಗೆ ಅನುಮಾನ ಮೂಡಿಸುತ್ತಿದ್ದಾರೆ.

  ಸಿದ್ಧಾಂತ್, ತಾರಿಣಿಯನ್ನು ನಿಶ್ಚಿತಾರ್ಥವಾಗಿದ್ದು ಅವರ ತಂದೆಗೆ ಬಿಟ್ಟು ಮನೆಯಲ್ಲಿ ಬೇರೆ ಯಾರಿಗೂ ಗೊತ್ತಿಲ್ಲ. ಯಾಕಂದ್ರೆ ಸಿದ್ಧಾಂತ್ ತನ್ನದೇ ಆದ ಸಿದ್ಧಾಂತಗಳನ್ನು ಇಟ್ಟುಕೊಂಡು ದೊಡ್ಡ ಗುರಿ ಹೊಂದಿರುವ ಹುಡುಗು.

  ಇದನ್ನೂ ಓದಿ: Krithi Shetty: ಕನ್ನಡತಿ ಕೃತಿ ಶೆಟ್ಟಿ ಮನಸು ಕದ್ದಿದ್ದ ಹೀರೋ ಇವ್ರೇ ಅಂತೆ! ಕುಡ್ಲಬಾಲೆಗೆ ಇವ್ರ ಮೇಲೆ ಕ್ರಶ್

  ಸಿದ್ಧಾಂತ್ ಅಮ್ಮನಿಗೆ ಗೊತ್ತಾದ್ರೆ ಏನ್ ಕಥೆ?

  ಈಗಾಗಲೇ ಸಿದ್ಧಾಂತ ಅಪ್ಪ ಮಾಡಿರುವ ಸಾಲದಿಂದ ಕುಟುಂಬ ಸಂಕಷ್ಟದಲ್ಲಿದೆ. ಅಲ್ಲದೇ ನಟನ ತಾಯಿಯೂ ವಯಸ್ಸಾದರೂ ಕೆಲಸ ಮಾಡುತ್ತಿದ್ದಾರೆ. ಸಿದ್ಧಾಂತ್ ತಾನು ಹೊರದೇಶಕ್ಕೆ ಹೋಗಿ ಮನೆಯ ಕಷ್ಟ ದೂರ ಮಾಡ್ತೀನಿ ಅಂದುಕೊಂಡಿದ್ದಾನೆ. ಇದಲ್ಲೆದರ ನಡುವೆ ಸಿದ್ಧಾಂತ್, ತಾರಿಣಿಯನ್ನು ನಿಶ್ಚಿತಾರ್ಥವಾದ ವಿಷಯ ತಿಳಿದ್ರೆ, ಮನೆಯಲ್ಲಿ ಜಗಳವಾಗುದು ಖಂಡಿತ.

  ಸಿದ್ಧಾಂತ್‍ಗೆ ತಾರಿಣಿ ಮೇಲಿರುವ ಕಾಳಜಿ ಪ್ರೀತಿಯಾಗಿ ಬದಲಾಗುತ್ತಾ ಅಂತ ಇವತ್ತಿನ ಎಪಿಸೋಡ್‍ನಲ್ಲಿ ನೋಡಬೇಕು. ಹಾಗೇ ಮಂಡ್ಯ ರಮೇಶ್ ಕಿತಾಪತಿ ವರ್ಕ್ ಆಗುತ್ತಾ ಅನ್ನೋ ಕುತೂಹಲವೂ ಹೆಚ್ಚಿದೆ.
  Published by:Savitha Savitha
  First published: