Olavina Nildana: ಸಿದ್ಧಾಂತ್ ಮನಸ್ಸಿನಲ್ಲಿ ತಾರಿಣಿ ಮೇಲೆ ಪ್ರೀತಿ ಇದ್ಯಾ? ಸತ್ಯ ಬಾಯ್ಬಿಡಿಸಲು ಅತ್ತಿಗೆಯ ಐಡಿಯಾ!

ಅತ್ತಿಗೆ ಸಂಗೀತಾ ಹೇಳಿದಂತೆ ನನಗೆ ಯಾವುದೇ ಹುಡುಗಿ ಮೇಲೆ ಲವ್ ಇಲ್ಲ ಅಂತ ಅಮ್ಮನ ಮೇಲೆ ಆಣೆ ಮಾಡ್ತಾನಾ ಸಿದ್ಧಾಂತ್? ಹಾಗಾದ್ರೆ ಆಣೆ ಮಾಡಲಿಲ್ಲ ಅಂದ್ರೆ, ತಾರಿಣಿ ಮೇಲೆ ಪ್ರೀತಿ ಆಗಿರೋದು ನಿಜನಾ? ಈಗ ಅಮ್ಮನ ಬಳಿ ಸಿದ್ಧಾಂತ್ ಏನ್ ಹೇಳ್ತಾನೆ ಅನ್ನೋ ಕುತೂಹಲ ಹೆಚ್ಚಾಗಿದೆ.

ಒಲವಿನ ನಿಲ್ದಾಣ ಧಾರಾವಾಹಿ

ಒಲವಿನ ನಿಲ್ದಾಣ ಧಾರಾವಾಹಿ

  • Share this:
    ಒಲವಿನ ನಿಲ್ದಾಣ (Olavina Nildana), ಧಾರಾವಾಹಿ (Serial) ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಬಗ್ಗೆಯ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ಇನ್ನು ನಟಿ ತಾರಿಣಿ ಮುಗ್ಧತೆ, ಸಿದ್ಧಾಂತ್ ಮೇಲಿನ ಪ್ರೀತಿ, ತನ್ನ ಕನಸಿನ ಹುಡುಗನ್ನು ಪಡೆಯಲು ಪರದಾಡುತ್ತಿರುವ ಪರಿ ಜನರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ಈಗ ತಾರಿಣಿ ಮೇಲೆ ಸಿದ್ಧಾಂತ್‍ಗೆ ಲವ್ (Love) ಆಗಿರಬಹುದು ಎಂಬ ಅನುಮಾನ ಹೆಚ್ಚಾಗಿದೆ. ಅದನ್ನು ಬಾಯ್ಬಿಡಿಸಲು ಅವರ ಅತ್ತಿಗೆ ಪ್ರಯತ್ನ ಪಡುತ್ತಿದ್ದಾಳೆ. ಅವರ ಅಮ್ಮನ (Mother) ಮೇಲೆ ಆಣೆ (Promise) ಮಾಡಿ ಯಾರನ್ನೂ ಪ್ರೀತಿಸಿಲ್ಲ ಅಂತ ಹೇಳು ಅಂತ ಪಟ್ಟು ಹಿಡಿದಿದ್ದಾಳೆ.

    ಸಿದ್ಧಾಂತ್ ಕಾಫಿ ಕುಡಿಯುವುದನ್ನು ಯಾವಾಗ ಕಲಿತ?

    ಸಿದ್ಧಾಂತ್ ಈ ಮೊದಲು ಯಾವತ್ತೂ ಟೀ, ಕಾಫಿ ಕುಡಿಯುತ್ತಿರಲಿಲ್ವಂತೆ. ಈಗ ಅತ್ತಿಗೆ ಕಾಫಿ ಕೊಟ್ಟರೆ, ಬೇಡ ಎನ್ನದೇ ಕಾಫಿ ಕುಡಿಯುತ್ತಿದ್ದಾನೆ. ಅದಕ್ಕೆ ಅತ್ತಿಗೆಗೆ ಅನುಮಾನ ಬಂದಿದೆ. ಸಿದ್ಧಾಂತ್ ನೀನು ಯಾವಾಗ ಕಾಫಿ ಕುಡಿಯುವುದನ್ನು ಕಲಿತೆ. ನೀನು ಚಿಕ್ಕಮಗಳೂರಿಗೆ ನಿನ್ನ ಸ್ನೇಹಿತರ ಮನೆಗೆ ಹೋದಾಗ ಕಲಿತ್ಯಾ ಎಂದು ಪ್ರಶ್ನೆ ಮಾಡುತ್ತಾಳೆ. ಮೊದಲೆಲ್ಲಾ ಓದುವುದು ಇರುತ್ತೆ ಕಾಫಿ ಕುಡಿ ಅಂದ್ರೂ ಕುಡಿಯುತ್ತಿರಲಿಲ್ಲ. ಈಗ ಕುಡಿಯುತ್ತಿ ಎಂದು ಕೇಳುತ್ತಾಳೆ.

    ಲವ್ ಆಗಿದ್ಯಾ ಎಂದು ಕೇಳಿದ ಸಿದ್ಧಾಂತ್ ಅಮ್ಮ

    ಚಿಕ್ಕಮಗಳೂರು ಫ್ರೆಂಡ್ ಯಾರು ಎಂದು ಕೇಳಿದ ಸಿದ್ಧಾಂತ್ ಅಮ್ಮ ಸಿದ್ಧಾಂತ್​ನನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುತ್ತಾರೆ. ನನಗೆ ಗೊತ್ತಿಲ್ಲದೇ ಇರೋ ಫ್ರೆಂಡ್ ಯಾರು ಅಂತ ಅತ್ತೆ ಕೇಳ್ತಿದಾರೆ ಹೇಳು ಸಿದ್ದು, ಹೇಳೋಕೆ ನಾಚಿಕೆನಾ ಎಂದು ಅತ್ತಿಗೆ ಕೇಳುತ್ತಾಳೆ. ನಾಚಿಕೆನಾ, ಹುಡುಗಿ ಫ್ರೆಂಡ್, ಲವ್ ಆಗಿದ್ಯಾ ಎಂದು ಅಮ್ಮ ಕೇಳುತ್ತಾಳೆ. ಲವ್, ನಾನಾ ಇಲ್ಲ ಅಮ್ಮ ಎಂದು ಸಿದ್ಧಾಂತ್ ಹೇಳುತ್ತಾನೆ.

    ಇದನ್ನೂ ಓದಿ: Ramachari Serial: ಇನ್ಮೇಲೆ ಕಿತ್ತಾಡೋದು ಬೇಡ ಎಂದು ರಾಮಾಚಾರಿಗೆ ಹೇಳಿದ ಚಾರು! ಇದ್ಯಾವ ಹೊಸ ಪ್ಲಾನ್? 

    ಲವ್ ಅಲ್ಲ ಎಂದು ಪ್ರಾಮಿಸ್ ಮಾಡಲು ಹೇಳಿದ ಅತ್ತಿಗೆ

    ಹಾಗಾದ್ರೆ ನೀನು ಯಾವ ಹುಡುಗಿಯನ್ನೂ ಲವ್ ಮಾಡಿಲ್ಲ ಅಂದ್ರೆ, ಅತ್ತೆ ಮೇಲೆ ಪ್ರಾಮಿಸ್ ಮಾಡು ಎಂದು ಸಿದ್ಧಾಂತ್ ಅತ್ತಿಗೆ ಹೇಳುತ್ತಾಳೆ. ಆಗ ಅವರ ಅಮ್ಮ, ಪ್ರಾಮಿಸ್ ಎಲ್ಲಾ ಯಾಕೆ ಸಂಗೀತಾ, ಸಿದ್ದು ಏನು ಅಂತ ಗೊತ್ತಿಲ್ವಾ ನಮಗೆ ಎನ್ನುತ್ತಾರೆ. ಆಗ ಸಂಗೀತಾ ಇರಿ ಅತ್ತೆ, ಅವನು ಏನ್ ಹೇಳ್ತಾನೆ ಕೇಳೋಣ ಅನ್ನುತ್ತಾಳೆ. ನೀನು ಯಾವ ಲವ್ ಸಹ ಮಾಡಿಲ್ಲ ಎಂದು ಅತ್ತೆ ಮೇಲೆ ಪ್ರಮಾಣ ಮಾಡು ಎಂದು ಅತ್ತಿಗೆ ಮತ್ತೊಮ್ಮೆ ಹೇಳುತ್ತಾಳೆ.

    Colors Kannada serial, Olavina nildana serial, Kannada Serial, serial today episode, Promise seen in episode, ಒಲವಿನ ನಿಲ್ದಾಣ ಧಾರಾವಾಹಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಅತ್ತಿಗೆ ಸಂಗೀತಾ


    ಅಮ್ಮನ ಮೇಲೆ ಆಣೆ ಮಾಡ್ತಾನಾ ಸಿದ್ಧಾಂತ್?
    ಅತ್ತಿಗೆ ಸಂಗೀತಾ ಹೇಳಿದಂತೆ ನನಗೆ ಯಾವುದೇ ಹುಡುಗಿ ಮೇಲೆ ಲವ್ ಇಲ್ಲ ಅಂತ ಅಮ್ಮನ ಮೇಲೆ ಆಣೆ ಮಾಡ್ತಾನಾ ಸಿದ್ಧಾಂತ್. ಹಾಗಾದ್ರೆ ಆಣೆ ಮಾಡಲಿಲ್ಲ ಅಂದ್ರೆ, ತಾರಿಣಿ ಮೇಲೆ ಪ್ರೀತಿ ಆಗಿರೋದು ನಿಜನಾ? ಈಗ ಅಮ್ಮನ ಬಳಿ ಸಿದ್ಧಾಂತ್ ಏನ್ ಹೇಳ್ತಾನೆ ಅನ್ನೋ ಕುತೂಹಲ ಹೆಚ್ಚಾಗಿದೆ.

    ಅತ್ತ ಮನೆಯವರ ಮುಂದೆ ಸತ್ಯ ಹೇಳಲಾಗದೇ ತಾರಿಣಿ ಒದ್ದಾಟ
    ತಾರಿಣಿ ತನ್ನ, ಸಿದ್ಧಾಂತ್ ಮಧ್ಯೆ ಪ್ರೀತಿ ಇಲ್ಲ. ಅವತ್ತು ನಡೆದಿದ್ದು ಸುಳ್ಳು ನಿಶ್ಚಿತಾರ್ಥ. ನನಗೆ ಇಷ್ಟ ಇಲ್ಲದೇ ಇರೋ ಗಂಡು ಮದುವೆ ಮಾಡ್ತೀರಾ ಅಂತ ಸಿದ್ಧಾಂತ್ ಅವತ್ತು ಪ್ರೀತಿ ನಾಟಕ ಆಡಿದ್ದರು. ಎಂದು ಎಲ್ಲ ಸತ್ಯವನ್ನು ತಾರಿಣಿ ಮನೆಯವರ ಮುಂದೆ ಹೇಳಬೇಕಿದೆ. ಆದ್ರೆ ಅವಳ ಕೈಯಲ್ಲಿ ಆಗುತ್ತಿಲ್ಲ. ಸತ್ಯ ಹೇಳಲಾಗದೇ ಪರದಾಟ ನಡೆಸುತ್ತಿದ್ದಾಳೆ.

    ಇದನ್ನೂ ಓದಿ: Jote Joteyali: ಆರ್ಯವರ್ಧನ್ ಪಾತ್ರಕ್ಕೆ ಆಫರ್ ಬಂದಿದ್ದು ನಿಜ ಎಂದ ಅನೂಪ್ ಭಂಡಾರಿ, ಒಪ್ತಾರಾ ಸ್ಟಾರ್ ಡೈರೆಕ್ಟರ್?

    ದಿನದಿಂದ ದಿನಕ್ಕೆ ಧಾರಾವಾಹಿಯೂ ತೀವ್ರ ಕುತೂಹಲ ಮೂಡಿಸುತ್ತಿದ್ದು, ಏನಾಗುತ್ತೆ ಅನ್ನೋದನ್ನ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.
    Published by:Savitha Savitha
    First published: