Olavina Nildana: ಪಾಲಾಕ್ಷನ ಕುತಂತ್ರದಿಂದ ತಾರಿಣಿ-ಸಿದ್ಧಾಂತ್ ಮಧ್ಯೆ ಬಿರುಕು! ಅರಳೋ ಮೊದಲೇ ಪ್ರೀತಿ ಮುದುಡುತ್ತಾ?

ತಾರಿಣಿ-ಸಿದ್ಧಾಂತ್ ಒಳ್ಳೆಯ ಗೆಳೆಯರು. ಕಾಲೇಜಿನಲ್ಲಿ ಯಾವಾಗಲು ಜೊತೆಗೆ ಇರುತ್ತಾರೆ. ಹೇಗಾದ್ರೂ ಮಾಡಿ ತಾರಿಣಿ ಕಣ್ಣಲ್ಲಿ ಸಿದ್ಧಾಂತ್ ಕೆಟ್ವವನು ಎಂದು ಮಾಡಬೇಕು ಎಂದು ಪಾಲಾಕ್ಷ, ಧೀರಜ್ ಪ್ರಯತ್ನ ಪಡುತ್ತಿದ್ದಾರೆ. ಸಿದ್ಧಾಂತ್ ಬಗ್ಗೆ ಪೂರ ತಿಳಿದುಕೊಳ್ಳಲು ಪ್ರಯತ್ನ ಪಡ್ತಾ ಇದ್ದಾರೆ.

ಸಿದ್ಧಾಂತ್

ಸಿದ್ಧಾಂತ್

 • Share this:
  ಒಲವಿನ ನಿಲ್ದಾಣ (Olavina Nildana), ಧಾರಾವಾಹಿ (Serial) ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannad) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ನಟ ಸಿದ್ಧಾಂತ್ (Siddhant) ಗುರಿ, ಅವನ ಕಾಳಜಿ, ಮನೆಯವರ ಬಗ್ಗೆಯ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ಇನ್ನು ನಟಿ ತಾರಿಣಿ ಮುಗ್ಧತೆ, ಸಿದ್ಧಾಂತ್ ಮೇಲಿನ ಪ್ರೀತಿ, ತನ್ನ ಕನಸಿನ ಹುಡುಗನ್ನು ಪಡೆಯಲು ಪರದಾಡುತ್ತಿರುವ ಪರಿ ಜನರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ತಾರಿಣಿಗೆ ಸಿದ್ಧಾಂತ್ ಅಂದ್ರೆ ತುಂಬಾ ಇಷ್ಟ. ಹೇಗಾದ್ರೂ ಅವನ ಪ್ರೀತಿಯನ್ನು ಪಡೆಯಬೇಕು ಎಂದು ಹಂಬಲಿಸುತ್ತಿದ್ದಾನೆ. ಇನ್ನು ಸಿದ್ಧಾಂತ್‍ಗೂ ತಾರಿಣಿಯನ್ನು ಕಂಡ್ರೆ ಇಷ್ಟ. ಅದು ಪ್ರೀತಿ (Love) ಇರಬಹುದಾ ಎಂದು ಗೊತ್ತಿಲ್ಲ. ಆದ್ರೆ ಇಬ್ಬರನ್ನು ದೂರ ಮಾಡಲು ಪಾಲಾಕ್ಷ ಕುತಂತ್ರ ಮಾಡುತ್ತಿದ್ದಾನೆ.

  ಸಿದ್ಧಾಂತ್ ಮನೆಯವರನ್ನು ಕರೆದುಕೊಂಡು ಹೋಗುವ ಸವಾಲ್
  ತಾರಿಣಿಗೆ ಧೀರಜ್ ಎನ್ನುವ ಹುಡುಗನ ಜೊತೆ ನಿಶ್ಚಿತಾರ್ಥ ನಡೆಯುತ್ತಾ ಇರುತ್ತೆ. ಆದ್ರೆ ಅದು ಅವಳಿಗೆ ಇಷ್ಟ ಇರಲಿಲ್ಲ. ಅದನ್ನು ತಪ್ಪಿಸುವ ಸಲುವಾಗಿ, ಸಿದ್ಧಾಂತ್ ತಾರಿಣಿಯನ್ನು ತಾನು ಪ್ರೀತಿಸುವುದಾಗಿ ಸುಳ್ಳು ಹೇಳಿ, ಸುಳ್ಳಿನ ನಿಶ್ಚಿತಾರ್ಥ ಮಾಡಿಕೊಂಡಿರುತ್ತಾರೆ. ಅದಕ್ಕೆ ತಾರಿಣಿ ಮನೆಯವರು ಮದುವೆ ಬಗ್ಗೆ ಮಾತನಾಡಲು, ಸಿದ್ಧಾಂತ್ ಮನೆಯವರನ್ನು ಕರೆದುಕೊಂಡು ಬರುವ ಜವಾಬ್ದಾರಿಯನ್ನು ತಾರಿಣಿಗೆ ನೀಡಿದ್ದಾರೆ.

  ಸಿದ್ಧಾಂತ್ ನನ್ನನ್ನು ಇಷ್ಟ ಪಡುವಂತೆ ಮಾಡ್ತೀನಿ
  ತಾರಿಣಿಗೆ ಸಿದ್ಧಾಂತ್ ಅಂದ್ರೆ ತುಂಬಾ ಇಷ್ಟ. ಅವನ್ನನ್ನು ತುಂಬಾ ಪ್ರೀತಿ ಮಾಡುತ್ತಿದ್ದಾಳೆ. ಆದ್ರೆ ಸಿದ್ಧಾಂತ್ ಬಳಿ ಹೇಳಿಕೊಂಡಿಲ್ಲ. ಅದಲ್ಲದೇ ಸಿದ್ಧಾಂತ್‍ಗೆ ತಾರಿಣಿ ಮೇಲೆ ಪ್ರೀತಿ ಇದೆಯೋ, ಇಲ್ಲವೋ ಗೊತ್ತಿಲ್ಲ. ಅದಕ್ಕೆ ಮುಂದಿನ ಬಾರಿ ಊರಿಗೆ ಹೋಗುವುದರೊಳಗೆ, ಸಿದ್ಧಾಂತ್ ನನ್ನನ್ನು ಪ್ರೀತಿ ಮಾಡುವಂತೆ ಮಾಡಬೇಕು ಎಂದು ಕೊಂಡಿದ್ದಾಳೆ.

  Colors Kannada serial, Kannada serial, Olavina nildana Serial, Olavina Nildana serial today episode, olavina nildana serial timing, Siddhant love story, ಒಲವಿನ ನಿಲ್ದಾಣ ಧಾರಾವಾಹಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ಒಲವಿನ ನಿಲ್ದಾಣ


  ಇದನ್ನೂ ಓದಿ: Lakshana Serial: ಅಪ್ಪನ ಪ್ರಾಣ ಕಾಪಾಡಿದ ನಕ್ಷತ್ರಾಗೆ ನೆಮ್ಮದಿ ಇಲ್ಲ! ಹುಡುಕಿ ಬಂದು ಕೊಲ್ತಾನಂತೆ ಮೌರ್ಯ!

  ಧೀರಜ್ ಜೊತೆ ಸೇರಿ ಪಾಲಾಕ್ಷ ಕುತಂತ್ರ
  ಧೀರಜ್ ಈ ಮೊದಲು ತಾರಿಣಿಯನ್ನು ಮದುವೆ ಆಗಬೇಕಿದ್ದ ಹುಡುಗ. ಆದ್ರೆ ತಾರಿಣಿಗೆ ಇಷ್ಟ ಇಲ್ಲ. ಅದಲ್ಲದೇ ತಾರಿಣಿ ಮಾವ ಪಾಲಾಕ್ಷ, ಧೀರಜ್ ಜೊತೆ ಸೇರಿ ಸಿದ್ಧಾಂತ್, ತಾರಿಣಿಯನ್ನು ದೂರ ಮಾಡೋ ಪ್ಲ್ಯಾನ್ ಮಾಡಿದ್ದಾರೆ. ಅದಕ್ಕೆ ಊರಿನಿಂದ ಬೆಂಗಳೂರಿನಲ್ಲಿ ತಾರಿಣಿ ಓದುತ್ತಿರುವ ಕಾಲೇಜಿಗೆ ಬಂದಿದ್ದಾರೆ.

  Colors Kannada serial, Kannada serial, Olavina nildana Serial, Olavina Nildana serial today episode, olavina nildana serial timing, Siddhant love story, ಒಲವಿನ ನಿಲ್ದಾಣ ಧಾರಾವಾಹಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ಪಾಲಾಕ್ಷ


  ತಾರಿಣಿ ಕಣ್ಣಲ್ಲಿ ಸಿದ್ಧಾಂತ್ ಕೆಟ್ಟವನು ಎಂದು ಹೇಳಲು ಪ್ರಯತ್ನ
  ತಾರಿಣಿ-ಸಿದ್ಧಾಂತ್ ಒಳ್ಳೆಯ ಗೆಳೆಯರು. ಕಾಲೇಜಿನಲ್ಲಿ ಯಾವಾಗಲು ಜೊತೆಗೆ ಇರುತ್ತಾರೆ. ಹೇಗಾದ್ರೂ ಮಾಡಿ ತಾರಿಣಿ ಕಣ್ಣಲ್ಲಿ ಸಿದ್ಧಾಂತ್ ಕೆಟ್ವವನು ಎಂದು ಮಾಡಬೇಕು ಎಂದು ಪಾಲಾಕ್ಷ, ಧೀರಜ್ ಪ್ರಯತ್ನ ಪಡುತ್ತಿದ್ದಾರೆ. ಸಿದ್ಧಾಂತ್ ಬಗ್ಗೆ ಪೂರ ತಿಳಿದುಕೊಳ್ಳಲು ಪ್ರಯತ್ನ ಪಡ್ತಾ ಇದ್ದಾರೆ. ಸಿದ್ಧಾಂತ್ ಕಾಲೇಜಿನಲ್ಲಿ ಹೆಚ್ಚು ಹೊತ್ತು ತಾರಿಣಿ ಜೊತೆ ಕಳೆಯುತ್ತಾನೆ. ನಾವು ಹೊರಗಿನವರು ಮೂರು ಹೊತ್ತು ಇಲ್ಲೇ ಕಾಲ ಕಳೆಯಲು ಆಗಲ್ಲ. ಕಾಲೇಜಿನಲ್ಲಿ ಇರುವವರ ಸಹಾಯ ತೆಗೆದುಕೊಳ್ಳೋಣ ಎಂದು ಪಾಲಾಕ್ಷ ಹೇಳುತ್ತಿದ್ದಾನೆ.

  ಇದನ್ನೂ ಓದಿ: DKD-Jodi No 01: ಡಿಕೆಡಿ-ಜೋಡಿ ನಂಬರ್ 1 ಮಹಾಸಂಗಮ! ಅಭಿಜಿತ್ ಎನರ್ಜಿಗೆ ಶಿವಣ್ಣ ಫಿದಾ

  ಕಾಲೇಜಿನ ಹುಡುಗರ ಸಹಾಯ ಪಡೆಯಲು ಚಿಂತನೆ
  ಪಾಲಾಕ್ಷಾ ಮತ್ತು ಧೀರಜ್ ಕಾಲೇಜಿನ ಹುಡುಗರ ಸಹಾಯ ಪಡೆಯಲು ಮುಂದಾಗಿದ್ದಾರೆ. ಅದು ಯಾರಿಗೆ ಸಿದ್ಧಾಂತ್ ನನ್ನು ಕಡ್ರೆ ಆಗಲ್ವೋ ಅವರನ್ನು ಹುಡುಕುತ್ತಿದ್ದಾರೆ. ಮುಂದೇನಾಗುತ್ತೆ? ಸಿದ್ಧಾಂತ್, ತಾರಿಣಿ ಒಂದಾಗ್ತಾರಾ, ದೂರ ಆಗ್ತಾರಾ? ಎಲ್ಲವನ್ನೂ ನೋಡಲು ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.
  Published by:Savitha Savitha
  First published: