Olavina Nildana: ಸಿದ್ಧಾಂತ್‍ಗೆ ಅವಮಾನ ಮಾಡಲು ಪಾಲಾಕ್ಷನ ಕುತಂತ್ರ ಬುದ್ಧಿ! ಕಾಲೇಜಿನಿಂದ ಡಿಬಾರ್ ಆಗ್ತಾನಾ ಸಿದ್ದು?

ಪಾಲಾಕ್ಷ ಹೇಗೋ ಕಾಲೇಜಿನಲ್ಲಿ ಸಿದ್ಧಾಂತ್‍ಗೆ ಆಗದೇ ಇರೋ ಹುಡುಗನನ್ನು ಪರಿಚಯ ಮಾಡಿಕೊಂಡಿದ್ದಾನೆ. ಅವನ ಬಳಿ ಸಿದ್ಧಾಂತ್‍ಗೆ ಅವಮಾನ ಮಾಡೋದು ಹೇಗೆ ಎಂದು ಕೇಳುತ್ತಿದ್ದಾನೆ. ಅದಕ್ಕೆ ಅವನು ಕಾಲೇಜಿನಿಂದ ಡಿಬಾರ್ ಮಾಡೋ ಐಡಿಯಾ ಕೊಡುತ್ತಾನೆ. ಕಾಲೇಜಿನಿಂದ ಡಿಬಾರ್ ಆದ್ರೆ, ಅವನಿಗೆ ಅವಮಾನ ಆಗುತ್ತೆ ಎಂದು ಹೇಳುತ್ತಾನೆ.

ಸಿದ್ಧಾಂತ್‍

ಸಿದ್ಧಾಂತ್‍

  • Share this:
    ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada), ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ನಟ ಸಿದ್ಧಾಂತ್ (Siddhant) ಗುರಿ, ಅವನ ಕಾಳಜಿ, ಮನೆಯವರ ಬಗ್ಗೆಯ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ಇನ್ನು ನಟಿ ತಾರಿಣಿ ಮುಗ್ಧತೆ, ಸಿದ್ಧಾಂತ್ ಮೇಲಿನ ಪ್ರೀತಿ (Love), ತನ್ನ ಕನಸಿನ ಹುಡುಗನ್ನು ಪಡೆಯಲು ಪರದಾಡುತ್ತಿರುವ ಪರಿ ಜನರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ತಾರಿಣಿಗೆ ಸಿದ್ಧಾಂತ್ ಮೇಲೆ ಪ್ರೀತಿ ಇದೆ. ಅದನ್ನು ಹೇಳಿಕೊಳ್ಳಲು ಆಗುತ್ತಿಲ್ಲ. ಇನ್ನು ತಾರಿಣಿ ಮನೆಯವರ ಮುಂದೆ, ಸಿದ್ಧಾಂತ್-ತಾರಿಣಿ ಸುಳ್ಳು ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದಾರೆ. ಸಿದ್ಧಾಂತ್ ಪ್ರೀತಿ ಪಡೆಯಲು ತಾರಿಣಿ ಒದ್ದಾಡುತ್ತಿದ್ದಾಳೆ. ಇಬ್ಬರನ್ನು ದೂರ ಮಾಡಲು ತಾರಿಣಿ ಮಾವ ಪಾಲಾಕ್ಷ ಸ್ಕೆಚ್ ಹಾಕ್ತಾ ಇದ್ದಾನೆ.

    ಸಿದ್ಧಾಂತ್ ಪ್ರೀತಿ ಪಡೆಯಬೇಕು ತಾರಿಣಿ
    ತಾರಿಣಿ-ಸಿದ್ಧಾಂತ್ ಮಧ್ಯೆ ಸುಳ್ಳು ನಿಶ್ಚಿತಾರ್ಥ ಆಗಿದ್ದು ನಿಜ, ಆದ್ರೆ ತಾರಿಣಿಗೆ ಸಿದ್ಧಾಂತ್ ಕಂಡ್ರೆ ತುಂಬಾ ಪ್ರೀತಿ. ಹೇಗಾದ್ರೂ ಮಾಡಿ ಅವನ ಪ್ರೀತಿ ಪಡೆಯಬೇಕು ಎಂದು ಹಂಬಲಿಸುತ್ತಿದ್ದಾಳೆ. ಸಿದ್ಧಾಂತ್ ಗೆ ತಾರಿಣಿ ಕಂಡ್ರೆ ಇಷ್ಟ. ಆದ್ರೆ ಪ್ರೀತಿ ಅಲ್ಲ. ಒಳ್ಳೆಯ ಸ್ನೇಹಿತೆಯಾಗಿ ತಾರಿಣಿ ಇಷ್ಟ. ಇಬ್ಬರೂ ಯಾವಾಗಲು ಜೊತೆಗೆ ಇರುತ್ತಾರೆ. ಎಲ್ಲ ವಿಷಯಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.

    ತಾರಿಣಿ-ಸಿದ್ಧಾಂತ್ ದೂರ ಮಾಡಲು ಪಾಲಾಕ್ಷನ ಕುತಂತ್ರ
    ಪಾಲಾಕ್ಷಾ, ತಾರಿಣಿ ಮಾವ. ಆತನಿಗೆ ತಾರಿಣಿ-ಸಿದ್ಧಾಂತ್ ಮದುವೆ ಆಗೋದು ಇಷ್ಟ ಇಲ್ಲ. ಅದಕ್ಕೆ ಇಬ್ಬರನ್ನೂ ಹೇಗಾದ್ರೂ ದೂರ ಮಾಡಬೇಕು ಎಂದು ಪಣ ತೊಟ್ಟಿದ್ದಾನೆ. ಅದಕ್ಕೆ ಧೀರಜ್ ಎನ್ನುವವನ ಜೊತೆ ಸೇರಿ, ಬೆಂಗಳೂರಿಗೆ ಬಂದಿದ್ದಾನೆ. ಕಾಲೇಜಿನಲ್ಲಿ ಸಿದ್ಧಾಂತ್‍ಗೆ ಆಗದೇ ಇರೋರನ್ನು ಪರಿಚಯ ಮಾಡಿಕೊಂಡು, ಸಿದ್ಧಾಂತ್ ಹೆಸರು ಹಾಳು ಮಾಡುವ ಪ್ರಯತ್ನ ಮಾಡುತ್ತಿದ್ದಾನೆ.

    ಇದನ್ನೂ ಓದಿ: SIIMA 2022: ಸೈಮಾದಲ್ಲಿ ಕಾಡಿದ ಅಪ್ಪು ನೆನಪು: ಪುನೀತ್​ ನೆನೆದು ವೇದಿಕೆಯಲ್ಲೇ ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ!

    ಸಿದ್ದು ಹೆಸರು ಹಾಳು ಮಾಡಲು ಡಿಬಾರ್ ಐಡಿಯಾ
    ಪಾಲಾಕ್ಷ ಹೇಗೋ ಕಾಲೇಜಿನಲ್ಲಿ ಸಿದ್ಧಾಂತ್‍ಗೆ ಆಗದೇ ಇರೋ ಹುಡುಗನನ್ನು ಪರಿಚಯ ಮಾಡಿಕೊಂಡಿದ್ದಾನೆ. ಅವನ ಬಳಿ ಸಿದ್ಧಾಂತ್‍ಗೆ ಅವಮಾನ ಮಾಡೋದು ಹೇಗೆ ಎಂದು ಕೇಳುತ್ತಿದ್ದಾನೆ. ಅದಕ್ಕೆ ಅವನು ಕಾಲೇಜಿನಿಂದ ಡಿಬಾರ್ ಮಾಡೋ ಐಡಿಯಾ ಕೊಡುತ್ತಾನೆ. ಕಾಲೇಜಿನಿಂದ ಡಿಬಾರ್ ಆದ್ರೆ, ಅವನಿಗೆ ಅವಮಾನ ಆಗುತ್ತೆ ಎಂದು ಹೇಳುತ್ತಾನೆ.

    Colors Kannada serial, Kannada serial, Olavina nildana Serial, Olavina Nildana serial today episode, Siddhant college life, ಒಲವಿನ ನಿಲ್ದಾಣ ಧಾರಾವಾಹಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ತಾರಿಣಿ


    ಕಾಲೇಜಿನ HOD ತುಂಬಾ ಸ್ಟ್ರಿಕ್ಟ್
    ಆ ಕಾಲೇಜಿನಲ್ಲಿರುವ ಹೆಚ್‍ಓಡಿ ತುಂಬಾ ಸ್ಟ್ರಿಕ್ಟ್. ವಿದ್ಯಾರ್ಥಿಗಳು ಯಾವುದೇ ತಪ್ಪು ಮಾಡುವಂತಿಲ್ಲ. ಒಂದು ವೇಳೆ ತಪ್ಪು ಮಾಡಿ ಸಿಕ್ಕಿ ಹಾಕಿಕೊಂಡ್ರೆ ಅವರು ಸುಮ್ಮನೇ ಬಿಡಲ್ಲ. ಕಾಲೇಜಿನಿಂದ ಡಿಬಾರ್ ಮಾಡ್ತಾರೆ. ಅಂದ್ರೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪಾಲಿಗೆ ಶನಿ ಇದ್ದಂತೆ ಎಂದು ಹೇಳ್ತಾರೆ. ಆತನ ಕಣ್ಣು ಸಿದ್ದು ಮೇಲೆ ಬೀಳುವಂತೆ ಮಾಡಬೇಕಿದೆ.

    ಇದನ್ನೂ ಓದಿ: Shwetha Srivastav: ರಾಜ್ಯಕ್ಕಾಗಿ ಎಲ್ಲರೂ ಒಟ್ಟಾಗಿ ಗಿನ್ನಿಸ್ ದಾಖಲೆ ನಿರ್ಮಿಸೋಣ: ಶ್ವೇತಾ ಶ್ರೀವಾತ್ಸವ್ ಕರೆ

    ಹೆಚ್‍ಓಡಿ ಭೇಟಿಯಾಗಲು ಹೋದ ಪಾಲಾಕ್ಷ-ಧೀರಜ್
    ಹೇಗಾದ್ರೂ ಸಿದ್ಧಾಂತ್‍ನನ್ನು ಕಾಲೇಜಿನಿಂದ ಡಿಬಾರ್ ಮಾಡಿಸಬೇಕು ಎಂದು ಪಾಲಾಕ್ಷ ಮತ್ತು ಧೀರಜ್ ಹೆಚ್‍ಓಡಿಭೇಟಿ ಮಾಡಲು ಬಂದಿದ್ದಾರೆ. ಬರುತ್ತಾ ಏನೋ ಉಡುಗೊರೆ ತಂದಿದ್ದಾರೆ. ಅದಕ್ಕೆ ಆ ಹೆಚ್‍ಓಡಿ ಏನು ಅಂತ ಕೇಳ್ತಾನೆ. ಅದಕ್ಕೆ ಪಾಲಾಕ್ಷ ಬರುವಾಗ ಬರೀ ಕೈಯಲ್ಲಿ ಬರಬಾರದು ಅಲ್ವಾ ಎನ್ನುತ್ತಾನೆ. ಆಗ ಹೆಚ್‍ಓಡಿ ಬೈದು ಕಳಿಸುತ್ತಾನೆ. ಆದ್ರೆ ಸಿದ್ಧಾಂತ್ ಹೆಸರು ಕೇಳಿ, ಇವರತ್ತ ನೋಡುತ್ತಾನೆ.

    Colors Kannada serial, Kannada serial, Olavina nildana Serial, Olavina Nildana serial today episode, Siddhant college life, ಒಲವಿನ ನಿಲ್ದಾಣ ಧಾರಾವಾಹಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಪಾಲಾಕ್ಷ


    ಪಾಲಾಕ್ಷನ ಸುಳಿಯಲ್ಲಿ ಸಿಲುಕುತ್ತಾನಾ ಸಿದ್ಧಾಂತ್? ಕಾಲೇಜಿನಿಂದ ಡಿಬಾರ್ ಆಗ್ತಾನಾ? ಎಲ್ಲವನ್ನೂ ನೋಡಲು ಒಲವಿನ ನಿಲ್ದಾಣ ಸೀರಿಯಲ್ ನೋಡಬೇಕು.
    Published by:Savitha Savitha
    First published: