• Home
 • »
 • News
 • »
 • entertainment
 • »
 • Olavina Nildana: ಮೋಸದ ಸುಳಿಯಿಂದ ಸಿದ್ಧಾಂತ್ ಬಿಡಿಸಲು ತಾರಿಣಿ ಪರದಾಟ, ಸಕ್ಸಸ್ ಆಗುತ್ತಾ ಪ್ಲ್ಯಾನ್?

Olavina Nildana: ಮೋಸದ ಸುಳಿಯಿಂದ ಸಿದ್ಧಾಂತ್ ಬಿಡಿಸಲು ತಾರಿಣಿ ಪರದಾಟ, ಸಕ್ಸಸ್ ಆಗುತ್ತಾ ಪ್ಲ್ಯಾನ್?

ಒಲವಿನ ನಿಲ್ದಾಣ

ಒಲವಿನ ನಿಲ್ದಾಣ

ಸುರೇಶ್ ಅಣ್ಣನ ಮನೆ ಮುಂದೆ ಹೋಗಿ ತಾರಿಣಿ ಕಾಯುತ್ತಿದ್ದಾಳೆ. ಆತ ನಿಜ ಹೇಳಿದ್ರೆ ಎಲ್ಲಾ ಸತ್ಯ ಬಯಲಾಗಲಿದೆ. ಆಗ ಸಿದ್ಧಾಂತ್ ಸಮಸ್ಯೆಯ ಸುಳಿಯಿಂದ ಆಚೆ ಬರಬಹುದು. ಸುರೇಶ್ ಅಣ್ಣ ನಿಜ ಹೇಳ್ತಾನಾ ನೋಡಬೇಕು.

 • Share this:

  ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada), ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಬಗ್ಗೆಯ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ಇನ್ನು ನಟಿ ತಾರಿಣಿ ಮುಗ್ಧತೆ, ಸಿದ್ಧಾಂತ್ ಮೇಲಿನ ಪ್ರೀತಿ (Love), ತನ್ನ ಕನಸಿನ ಹುಡುಗನ್ನು ಪಡೆಯಲು ಪರದಾಡುತ್ತಿರುವ ಪರಿ ಜನರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ತಾರಿಣಿಗೆ ಸಿದ್ಧಾಂತ್ ಮೇಲೆ ಪ್ರೀತಿ ಇದೆ. ಅದನ್ನು ಹೇಳಿಕೊಳ್ಳಲು ಆಗುತ್ತಿಲ್ಲ. ಇನ್ನು ತಾರಿಣಿ ಮನೆಯವರ ಮುಂದೆ, ಸಿದ್ಧಾಂತ್-ತಾರಿಣಿ ಸುಳ್ಳು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಿದ್ಧಾಂತ್ ಪ್ರೀತಿ ಪಡೆಯಲು ತಾರಿಣಿ ಒದ್ದಾಡುತ್ತಿದ್ದಾಳೆ. ಇಬ್ಬರನ್ನು ದೂರ ಮಾಡಲು ತಾರಿಣಿ ಮಾವ ಪಾಲಾಕ್ಷ ಸ್ಕೆಚ್ ಹಾಕ್ತಾ ಇದ್ದಾನೆ. ಕಾಲೇಜ್ (College) HOD ಬೀಸಿದ ಸುಳಿಯಲ್ಲಿ ಸಿದ್ದು ಸಿಲುಕಿದ್ದಾನೆ


  ಕಾಲೇಜ್ ಸ್ಟಾಫ್ ಸುರೇಶ್ ವಂಚನೆ
  ಕಾಲೇಜ್ ಸ್ಟಾಪ್ ಸುರೇಶ್ ಎಂಬಾತ ಸಿದ್ಧಾಂತ್ ಬಳಿ ಬಂದು, ತನಗೆ ಕಷ್ಟ. ಮನೆ ನಡೆಸಲು ಆಗುತ್ತಿಲ್ಲ ಎಂದು ಹೇಳಿಕೊಳ್ಳುತ್ತಿದ್ದ. ಅದಕ್ಕೆ ಸಿದ್ದು ದುಡ್ಡು ಕೊಟ್ಟು ಸಹಾಯ ಮಾಡೋಣ ಎಂದು ದುಡ್ಡು ಕೊಡಲು ಹೋಗುತ್ತಾನೆ. ಅಷ್ಟರಲ್ಲೇ ಹೆಚ್‍ಓಡಿ ಚಕ್ರವರ್ತಿ ಅಲ್ಲಿಗೆ ಬರುತ್ತಾರೆ. ಏನ್ ದುಡ್ಡು ಕೊಡ್ತಿದೀಯಾ ಅಂತಾರೆ. ಅದಕ್ಕೆ ಅವರ ಮನೆಯಲ್ಲಿ ಕಷ್ಟ ಅಂತೆ. ಅದಕ್ಕೆ ದುಡ್ಡು ಕೊಡ್ತಿದ್ದೆ ಎಂದು ಹೇಳುತ್ತಾನೆ. ಅಷ್ಟರಲ್ಲೇ ಸುರೇಶ್, ಇಲ್ಲ ಸರ್ ಇಂಟರ್‍ನಲ್ ಪಾಸ್ ಮಾಡಲು ದುಡ್ಡು ಕೊಡ್ತಿದ್ರು ಎಂದು ಹೇಳುತ್ತಾನೆ.


  ಸುರೇಶ್‍ಗೆ ಹೊಡೆದ ಸಿದ್ದು
  ಕಾಲೇಜ್ ಸ್ಟಾಪ್ ಸುರೇಶ್ ಸುಳ್ಳು ಹೇಳಿದ್ದಕ್ಕೆ ಕೋಪಗೊಂಡ ಸಿದ್ದು ಅವನಿಗೆ ಹೊಡೆಯುತ್ತಾನೆ. ಆಗ ಅಲ್ಲೇ ಇದ್ದ ಕಾಲೇಜಿನ ಹುಡುಗರು ಕಾಲೇಜ್ ಸ್ಟಾಫ್ ಮೇಲೆ ಕೈ ಮಾಡ್ತೀಯಾ ಎಂದು ಸಿದ್ಧಾಂತ್‍ಗೆ ಹೊಡೆಯುತ್ತಾರೆ. ಆಗ ಚಕ್ರವರ್ತಿ ಅಡ್ಡ ಬಂದು ತಡೆದು ಎಲ್ಲರನ್ನು ಸ್ಟಾಫ್ ರೂಂಗೆ ಕರೆಯುತ್ತಾರೆ. ಸಿದ್ದುಗೆ ತನ್ನ ಅಪ್ಪ-ಅಮ್ಮನನ್ನು ಕರೆದುಕೊಂಡು ಬರಲು ಹೇಳ್ತಾರೆ. ಅದರಂತೆ ಅವರ ಅಪ್ಪ ಅಮ್ಮ ಬಂದಿದ್ದಾರೆ.
  ಇದನ್ನೂ ಓದಿ: Star Suvarna: ಸುವರ್ಣ ದಸರಾ ಉತ್ಸವದಲ್ಲಿ ಕರ್ನಾಟಕದ ಅಪ್ರತಿಮ ಸಾಧಕಿಯರಿಗೆ ವಿಶೇಷ ಗೌರವ, ಸನ್ಮಾನ


  ಕ್ಷಮಾ ಪತ್ರ ಬರೆಯುವಂತೆ ಹೇಳ್ತಾರೆ
  ಸಿದ್ದು ಅಪ್ಪ-ಅಮ್ಮ ಕಾಲೇಜಿನಲ್ಲಿ ಬಂದು ಹೆಚ್‍ಓಡಿ ಬಳಿ ಮಾತನಾಡುತ್ತಾರೆ. ತಮ್ಮ ಮಗನನ್ನು ಡಿಬಾರ್ ಮಾಡಬೇಡಿ ಎಂದು ಕೇಳಿಕೊಳ್ಳುತ್ತಾರೆ. ಅದಕ್ಕೆ ಚಕ್ರವರ್ತಿ, ಸರಿ ಡಿಬಾರ್ ಮಾಡಲ್ಲ. ಕ್ಷಮಾ ಪತ್ರ ಬರೆದುಕೊಡುವಂತೆ ಕೇಳ್ತಾರೆ.


  Colors Kannada serial, Kannada serial, Olavina nildana Serial, Olavina Nildana serial today episode, Siddhant in problem, ಒಲವಿನ ನಿಲ್ದಾಣ ಧಾರಾವಾಹಿ, ಮೋಸದ ಸುಳಿಯಿಂದ ಸಿದ್ಧಾಂತ್ ಬಿಡಿಸಲು ತಾರಿಣಿ ಪರದಾಟ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  HOD ಚಕ್ರವರ್ತಿ


  ಸಿದ್ಧಾಂತ್ ಅಮ್ಮ ಸಹ ಅದಕ್ಕೆ ಓಕೆ ಅಂತಾರೆ. ಆದ್ರೆ ಸಿದ್ಧಾಂತ್ ಮಾತ್ರ ಕ್ಷಮಾ ಪತ್ರ ಬರೆದುಕೊಡಲ್ಲ. ಕ್ಷಮೆ ಪತ್ರ ಬರೆದು ಕೊಟ್ಟರೆ ತಪ್ಪು ಮಾಡಿದ್ದೀನಿ ಅಂತ ಆಗುತ್ತೆ. ತಾನು ತಪ್ಪೇ ಮಾಡಿಲ್ಲ ಎಂದು, ಮತ್ತೆ ಸುರೇಶ್‍ಗೆ ಹೊಡೆದು ಹೋಗುತ್ತಾನೆ.


  ಇದನ್ನೂ ಓದಿ: Lakshana: ಎಲ್ಲರನ್ನೂ ಕಿಡ್ನ್ಯಾಪ್ ಮಾಡ್ತಿದ್ದ ಮೌರ್ಯನೇ ಕಿಡ್ನ್ಯಾಪ್? ಲಕ್ಷಣ ಧಾರಾವಾಹಿಯಲ್ಲಿ ರೋಚಕ ತಿರುವು!


  ಸುರೇಶ್ ಬಳಿ ಸತ್ಯ ಬಾಯ್ಬಿಡಿಸಲು ತಾರಿಣಿ ಒದ್ದಾಟ
  ಕಾಲೇಜಿನ ಸುರೇಶ್ ಅಣ್ಣ ಏಕೆ ಸುಳ್ಳು ಹೇಳಿದ ಎಂದ ತಿಳದಿಕೊಳ್ಳಲು ತಾರಿಣಿ ಪರದಾಡುತ್ತಿದ್ದಾಳೆ. ಸುರೇಶ್ ಅಣ್ಣನ ಮನೆ ಮುಂದೆ ಹೋಗಿ  ತಾರಿಣಿ ಕಾಯುತ್ತಿದ್ದಾಳೆ. ಆತ ನಿಜ ಹೇಳಿದ್ರೆ ಎಲ್ಲಾ ಸತ್ಯ ಬಯಲಾಗಲಿದೆ. ಆಗ ಸಿದ್ಧಾಂತ್ ಸಮಸ್ಯೆಯ ಸುಳಿಯಿಂದ ಆಚೆ ಬರಬಹುದು. ಸುರೇಶ್ ಅಣ್ಣ ನಿಜ ಹೇಳ್ತಾನಾ ನೋಡಬೇಕು.


  Colors Kannada serial, Kannada serial, Olavina nildana Serial, Olavina Nildana serial today episode, Siddhant in problem, ಒಲವಿನ ನಿಲ್ದಾಣ ಧಾರಾವಾಹಿ, ಮೋಸದ ಸುಳಿಯಿಂದ ಸಿದ್ಧಾಂತ್ ಬಿಡಿಸಲು ತಾರಿಣಿ ಪರದಾಟ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ತಾರಿಣಿ


  ಹೆಚ್‍ಓಡಿ ಚಕ್ರವರ್ತಿಗೆ ಸಿದ್ದು ಕಂಡ್ರೆ ಮೊದಲೇ ಆಗಲ್ಲ. ಅವನನ್ನು ಡಿಬಾರ್ ಮಾಡಲೆಂದೇ ಈ ಎಲ್ಲಾ ಪ್ಲ್ಯಾನ್ ಮಾಡಿದ್ದಾನೆ. ಅವನು ಅಂದುಕೊಂಡತೆ ಎಲ್ಲಾ ಆಗಿದೆ. ಪಾಲಾಕ್ಷ ಮತ್ತು ಧೀರಜ್ ಕುತಂತ್ರದಿಂದ ಸಿದ್ಧಾಂತ್ ಜೀವನ ಹಾಳಾಗ್ತಿದೆ. ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಸೀರಿಯಲ್ ನೋಡಬೇಕು.

  Published by:Savitha Savitha
  First published: