• Home
  • »
  • News
  • »
  • entertainment
  • »
  • Olavina Nildana: ಸಿದ್ದು ವಿರುದ್ಧ ಮುಗಿಯದ ಷಡ್ಯಂತ್ರ! ತನ್ನ ಹುಡುಗನನ್ನು ಬಚಾವ್ ಮಾಡ್ತಾಳಾ ತಾರಿಣಿ?

Olavina Nildana: ಸಿದ್ದು ವಿರುದ್ಧ ಮುಗಿಯದ ಷಡ್ಯಂತ್ರ! ತನ್ನ ಹುಡುಗನನ್ನು ಬಚಾವ್ ಮಾಡ್ತಾಳಾ ತಾರಿಣಿ?

ಸಿದ್ಧಾಂತ್

ಸಿದ್ಧಾಂತ್

ಸಿದ್ಧಾಂತ್-ತಾರಿಣಿ ಸುಳ್ಳು ನಿಶ್ಚಿತಾರ್ಥ ಮಾಡಿಕೊಂಡಿರುತ್ತಾರೆ. ತಾರಿಣಿ ಮನೆಯವರು ಅದನ್ನು ನಿಜ ಎಂದುಕೊಂಡಿರುತ್ತಾರೆ. ಮದುವೆ ಪ್ರಸ್ತಾಪದವರೆಗೂ ಬಂದಿದ್ದಾರೆ. ಈಗ ಸಿದ್ಧಾಂತ್‍ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂಬ ಸುದ್ದಿ ಗೊತ್ತಾಗಿದೆ. ಎಲ್ಲರೂ ಗಾಬರಿ ಆಗಿದ್ದಾರೆ. ಇದೀಗ ತಾರಿಣಿ ಏನ್ ಮಾಡ್ತಾಳೆ? ಸಿದ್ದು ಜೈಲಿಂದ ಹೊರಕ್ಕೆ ಬರ್ತಾನಾ?

ಮುಂದೆ ಓದಿ ...
  • Share this:

    ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada), ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ನಟ ಸಿದ್ಧಾಂತ್ (Siddhant) ಗುರಿ, ಅವನ ಕಾಳಜಿ, ಮನೆಯವರ ಬಗ್ಗೆಯ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ಇನ್ನು ನಟಿ ತಾರಿಣಿ ಮುಗ್ಧತೆ, ಸಿದ್ಧಾಂತ್ ಮೇಲಿನ ಪ್ರೀತಿ, ತನ್ನ ಕನಸಿನ ಹುಡುಗನ್ನು ಪಡೆಯಲು ಪರದಾಡುತ್ತಿರುವ ಪರಿ ಜನರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ತಾರಿಣಿಗೆ ಸಿದ್ಧಾಂತ್ ಮೇಲೆ ಪ್ರೀತಿ ಇದೆ. ಅದನ್ನು ಹೇಳಿಕೊಳ್ಳಲು ಆಗುತ್ತಿಲ್ಲ. ಇನ್ನು ತಾರಿಣಿ ಮನೆಯವರ ಮುಂದೆ, ಸಿದ್ಧಾಂತ್-ತಾರಿಣಿ ಸುಳ್ಳು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಿದ್ಧಾಂತ್ ಪ್ರೀತಿ ಪಡೆಯಲು ತಾರಿಣಿ ಒದ್ದಾಡುತ್ತಿದ್ದಾಳೆ. ಇಬ್ಬರನ್ನು ದೂರ ಮಾಡಲು ತಾರಿಣಿ ಮಾವ ಪಾಲಾಕ್ಷ ಸ್ಕೆಚ್ ಹಾಕ್ತಾ ಇದ್ದಾನೆ. ಮಾಡದ ತಪ್ಪಿಗೆ ಅರೆಸ್ಟ್ (Arrest) ಆಗಿದ್ದಾನೆ ಸಿದ್ದು.


    ಚಕ್ರವರ್ತಿ ನೀಡಿದ್ದ ದೂರು
    ಇದರಲ್ಲೂ ತಾರಿಣಿ ಮಾವ ಪಾಲಾಕ್ಷನ ಕುತಂತ್ರ ಇದೆ. ರೌಡಿಗಳಿಗೆ ದುಡ್ಡು ಕೊಟ್ಟು ಕಾಲೇಜ್ ಹೆಚ್‍ಓಡಿ ಚಕ್ರವರ್ತಿಗೆ ಹೊಡೆಸಿದ್ದಾನೆ. ಅವರಿಗೆ ಸಿದ್ದು ಹೆಸರು ಹೇಳಲು ಹೇಳಿದ್ದಾನೆ. ಅದಕ್ಕೆ ರೌಡಿಗಳು ಚಕ್ರವರ್ತಿಗೆ ಹೊಡೆದು, ಸಿದ್ಧಾಂತ್ ಸುದ್ದಿಗೆ ಬರಬೇಡಿ ಎಂದು ಎಚ್ಚರಿಕೆ ಕೊಟ್ಟಿರುತ್ತಾರೆ. ಅದಕ್ಕೆ ಚಕ್ರವರ್ತಿ ಅವರು ಪೊಲೀಸರಿಗೆ ದೂರು ನೀಡಿರುತ್ತಾರೆ. ಅದಕ್ಕೆ ಕಾಲೇಜ್‍ಗೆ ಬಂದು ಸಿದ್ಧಾಂತ್‍ನನ್ನು ಪೊಲೀಸ್ ಅರೆಸ್ಟ್ ಮಾಡಿಕೊಂಡು ಹೋಗಿದ್ದಾರೆ.


    ಸಿದ್ದು ಅಮ್ಮ ಕಣ್ಣೀರು
    ಸಿದ್ಧಾಂತ್ ಮನೆಯಲ್ಲಿ ಹೀಗಾಗಲೇ ಹಲವಾರು ಕಷ್ಟಗಳಿವೆ. ಸಿದ್ದು ಅಮ್ಮ ಮಗನ ಮೇಲೆ ಪೂರ್ಣ ನಂಬಿಕೆ ಇಟ್ಟಿದ್ಲು. ಆದ್ರೆ ಈ ರೀತಿ ಆಗುತ್ತಿರುವುದನ್ನು ನೋಡಿ ಶಾಕ್ ಆಗಿದ್ದಾಳೆ. ಮಗನ ಭವಿಷ್ಯ ಹಾಳಾಯ್ತು ಎಂದು ಕಣ್ಣೀರು ಹಾಕುತ್ತಿದ್ದಾಳೆ. ತನ್ನ ಗಂಡನ ಜೊತೆ ಮಾತು ಬಿಟ್ಟಿದ್ದ ಆಕೆ, ಈಗ ಮಾತನಾಡಿಸಿ ಅಳುತ್ತಿದ್ದಾಳೆ. ಹೇಗಾದ್ರೂ ನನ್ನ ಮಗನನ್ನು ಬಿಡಿಸಿಕೊಡಿ ಎನ್ನುತ್ತಿದ್ದಾರೆ. ಸಿದ್ಧಾಂತ್ ಅಪ್ಪನ ಅದೇ ಪ್ರಯತ್ನದಲ್ಲಿ ಇದ್ದಾರೆ.


    ಸಿದ್ದು ಅಮ್ಮ


    ತಾರಿಣಿ ಮನೆಗೆ ಗೊತ್ತಾದ ವಿಷ್ಯ
    ಬೇಡದ ನಿಶ್ಚಿತಾರ್ಥ ತಪ್ಪಿಸಲು ಸಿದ್ಧಾಂತ್-ತಾರಿಣಿ ಸುಳ್ಳು ನಿಶ್ಚಿತಾರ್ಥ ಮಾಡಿಕೊಂಡಿರುತ್ತಾರೆ. ತಾರಿಣಿ ಮನೆಯವರು ಅದನ್ನು ನಿಜ ಎಂದುಕೊಂಡಿರುತ್ತಾರೆ.


    ಇದನ್ನೂ ಓದಿ: Aishwarya-Nawaj: ಬೈಕ್ ರೇಸರ್ ಐಶ್ವರ್ಯ ಮೇಲೆ ಸೈಕೋ ನವಾಜ್‍ಗೆ ಕುಚ್​ಕುಚ್!


    ಮದುವೆ ಪ್ರಸ್ತಾಪದವರೆಗೂ ಬಂದಿದ್ದಾರೆ. ಈಗ ಸಿದ್ಧಾಂತ್‍ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂಬ ಸುದ್ದಿ ಗೊತ್ತಾಗಿದೆ. ಎಲ್ಲರೂ ಗಾಬರಿ ಆಗಿದ್ದಾರೆ.


    ತಾರಿಣಿ ಮನೆಯವರು


    ಕಾಲೇಜ್ ಸ್ಟಾಫ್ ಮಾಡಿದ್ದ ತಪ್ಪು
    ಕಾಲೇಜ್ ಸ್ಟಾಪ್ ಸುರೇಶ್ ಎಂಬಾತ ಸಿದ್ಧಾಂತ್ ಬಳಿ ಬಂದು, ತನಗೆ ಕಷ್ಟ. ಮನೆ ನಡೆಸಲು ಆಗುತ್ತಿಲ್ಲ ಎಂದು ಹೇಳಿಕೊಳ್ಳುತ್ತಿದ್ದ. ಅದಕ್ಕೆ ಸಿದ್ದು ದುಡ್ಡು ಕೊಟ್ಟು ಸಹಾಯ ಮಾಡೋಣ ಎಂದು ದುಡ್ಡು ಕೊಡಲು ಹೋಗುತ್ತಾನೆ. ಅಷ್ಟರಲ್ಲೇ ಹೆಚ್‍ಓಡಿ ಚಕ್ರವರ್ತಿ ಅಲ್ಲಿಗೆ ಬರುತ್ತಾರೆ.


    ಏನ್ ದುಡ್ಡು ಕೊಡ್ತಿದೀಯಾ ಅಂತಾರೆ. ಅದಕ್ಕೆ ಅವರ ಮನೆಯಲ್ಲಿ ಕಷ್ಟ ಅಂತೆ. ಅದಕ್ಕೆ ದುಡ್ಡು ಕೊಡ್ತಿದ್ದೆ ಎಂದು ಹೇಳುತ್ತಾನೆ. ಅಷ್ಟರಲ್ಲೇ ಸುರೇಶ್, ಇಲ್ಲ ಸರ್ ಇಂಟರ್‍ನಲ್ ಪಾಸ್ ಮಾಡಲು ದುಡ್ಡು ಕೊಡ್ತಿದ್ರು ಎಂದು ಹೇಳುತ್ತಾನೆ. ಅದಕ್ಕೆ ಅವನನ್ನು ಸಿದ್ದು ಹೊಡೆಯುತ್ತಾನೆ. ಅಲ್ಲಿಂದ ಶುರುವಾದ ಮೋಸದಿಂದ ಸಿದ್ದು ಜೈಲು ಸೇರಿದ್ದಾನೆ.


    ಇದನ್ನೂ ಓದಿ: Jothe Jotheyali: ಅನಿರುದ್ಧ್ ಇಲ್ಲದ ಜೊತೆ ಜೊತೆಯಲಿ ಹೇಗಿದೆ? ಹರೀಶ್ ರಾಜ್‌ ಪಾತ್ರ ಒಪ್ಪಿಕೊಂಡರಾ ಫ್ಯಾನ್ಸ್?


    ಸಿದ್ಧಾಂತ್ ಜೈಲಿನಿಂದ ಬರ್ತಾನಾ? ತನ್ನ ಮೇಲೆ ಬಂದಿರುವ ಆರೋಪ ಸುಳ್ಳು ಎಂದು ನಿರೂಪಿಸುತ್ತಾನಾ? ಎಲ್ಲವನ್ನೂ ನೋಡಲು ಒಲವಿನ ನಿಲ್ದಾಣ ಸೀರಿಯಲ್ ನೋಡಬೇಕು.

    Published by:Savitha Savitha
    First published: