Olavina Nildana: ಪಾಲಾಕ್ಷ-ಚಕ್ರವರ್ತಿ ಸಂಚು ಸಫಲ, ಕಾಲೇಜಿನಿಂದ ಡಿಬಾರ್ ಆಗ್ತಾನಾ ಸಿದ್ಧಾಂತ್?

ಹೆಚ್‍ಓಡಿ ಚಕ್ರವರ್ತಿಗೆ ಸಿದ್ದು ಕಂಡ್ರೆ ಮೊದಲೇ ಆಗಲ್ಲ. ಅವನನ್ನು ಡಿಬಾರ್ ಮಾಡಲೆಂದೇ ಈ ಎಲ್ಲಾ ಪ್ಲ್ಯಾನ್ ಮಾಡಿದ್ದಾನೆ. ಅವನು ಅಂದುಕೊಂಡತೆ ಎಲ್ಲಾ ಆಗಿದೆ. ಈಗ ಸಿದ್ದು ಕರೆದು ಅವನನನು ಡಿಬಾರ್ ಮಾಡಬಹುದು.

ಒಲವಿನ ನಿಲ್ದಾಣ

ಒಲವಿನ ನಿಲ್ದಾಣ

  • Share this:
    ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada), ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ನಟ ಸಿದ್ಧಾಂತ್ (Siddhant) ಗುರಿ, ಅವನ ಕಾಳಜಿ, ಮನೆಯವರ ಬಗ್ಗೆಯ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ಇನ್ನು ನಟಿ ತಾರಿಣಿ ಮುಗ್ಧತೆ, ಸಿದ್ಧಾಂತ್ ಮೇಲಿನ ಪ್ರೀತಿ, ತನ್ನ ಕನಸಿನ ಹುಡುಗನ್ನು ಪಡೆಯಲು ಪರದಾಡುತ್ತಿರುವ ಪರಿ ಜನರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ತಾರಿಣಿಗೆ ಸಿದ್ಧಾಂತ್ ಮೇಲೆ ಪ್ರೀತಿ (Love) ಇದೆ. ಅದನ್ನು ಹೇಳಿಕೊಳ್ಳಲು ಆಗುತ್ತಿಲ್ಲ. ಇನ್ನು ತಾರಿಣಿ ಮನೆಯವರ ಮುಂದೆ, ಸಿದ್ಧಾಂತ್-ತಾರಿಣಿ ಸುಳ್ಳು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಿದ್ಧಾಂತ್ ಪ್ರೀತಿ ಪಡೆಯಲು ತಾರಿಣಿ ಒದ್ದಾಡುತ್ತಿದ್ದಾಳೆ. ಇಬ್ಬರನ್ನು ದೂರ ಮಾಡಲು ತಾರಿಣಿ ಮಾವ ಪಾಲಾಕ್ಷ ಸ್ಕೆಚ್ ಹಾಕ್ತಾ ಇದ್ದಾನೆ. ಡಿಬಾರ್ ಅನ್ನೋ ಸುಳಿಯಲಿ ಸಿಲುಕ್ತಾನಾ ಸಿದ್ಧಾಂತ್?

    ತಾರಿಣಿ-ಸಿದ್ಧಾಂತ್ ದೂರ ಮಾಡಲು ಪಾಲಾಕ್ಷನ ಕುತಂತ್ರ

    ಪಾಲಾಕ್ಷಾ, ತಾರಿಣಿ ಮಾವ. ಆತನಿಗೆ ತಾರಿಣಿ-ಸಿದ್ಧಾಂತ್ ಮದುವೆ ಆಗೋದು ಇಷ್ಟ ಇಲ್ಲ. ಅದಕ್ಕೆ ಇಬ್ಬರನ್ನೂ ಹೇಗಾದ್ರೂ ದೂರ ಮಾಡಬೇಕು ಎಂದು ಪಣ ತೊಟ್ಟಿದ್ದಾನೆ. ಅದಕ್ಕೆ ಧೀರಜ್ ಎನ್ನುವವನ ಜೊತೆ ಸೇರಿ, ಬೆಂಗಳೂರಿಗೆ ಬಂದಿದ್ದಾನೆ. ಕಾಲೇಜಿನಲ್ಲಿ ಸಿದ್ಧಾಂತ್‍ಗೆ ಆಗದೇ ಇರೋರನ್ನು ಪರಿಚಯ ಮಾಡಿಕೊಂಡು, ಸಿದ್ಧಾಂತ್ ಹೆಸರು ಹಾಳು ಮಾಡುವ ಪ್ರಯತ್ನ ಮಾಡುತ್ತಿದ್ದಾನೆ. ಸಿದ್ದು ಹೆಸರು ಹಾಳು ಮಾಡಲು ಡಿಬಾರ್ ಐಡಿಯಾ ಮಾಡಿದ್ದಾರೆ.

    HOD ಚಕ್ರವರ್ತಿ ಪ್ಲ್ಯಾನ್ ಎಲ್ಲ

    ಕಾಲೇಜಿನಲ್ಲಿರುವ ಹೆಚ್‍ಓಡಿ ಚಕ್ರವರ್ತಿ ತುಂಬಾ ಸ್ಟ್ರಿಕ್ಟ್. ಕಾಲೇಜಿನ ಹುಡುಗರು ಇವನನ್ನು ನೋಡಿದ್ರೆ ಭಯ ಬೀಳ್ತಾರೆ. ಯಾರಾದ್ರೂ ತಪ್ಪು ಮಾಡಿದ್ರೆ ಡಿಬಾರ್ ಒಂದೇ ಅವನ ಅಸ್ತ್ರ. ಅದಕ್ಕೆ ಎಲ್ಲಾ ವಿದ್ಯಾರ್ಥಿಗಳನ್ನು ಚಕ್ರವರ್ತಿ ಕಂಡ್ರೆ ಭಯ ಪಡುತ್ತಾರೆ. ಹಿಂದೆ ಒಂದು ದಿನ ಸಿದ್ದು, ಈ ಚಕ್ರವರ್ತಿ ವಿರುದ್ಧ ಪ್ರತಿಭಟನೆ ಮಾಡಿರುತ್ತಾನೆ. ಅದಕ್ಕೆ ಚಕ್ರವರ್ತಿ ಪಾಲಾಕ್ಷನ ಜೊತೆ ಕೈ ಜೋಡಿಸಿ ಸಿದ್ದು ವಿರುದ್ಧ ಸಂಚು ರೂಪಿಸಿದ್ರು.

    ಇದನ್ನೂ ಓದಿ: Kannadathi: ಸಾನಿಯಾಳನ್ನು ಬಿಟ್ಟು ಬಿಡದೇ ಕಾಡ್ತಿದ್ದಾನೆ ಹರ್ಷ, ಅಮ್ಮಮ್ಮ-ಭುವಿ ಸುದ್ದಿಗೆ ಬಂದ್ರೆ ಸುಮ್ನೆ ಬಿಡಲ್ಲ!

    ಕಾಲೇಜ್ ಸ್ಟಾಪ್ ಸುರೇಶ್ ವಂಚನೆ

    ಕಾಲೇಜ್ ಸ್ಟಾಪ್ ಸುರೇಶ್ ಎಂಬಾತ ಸಿದ್ಧಾಂತ್ ಬಳಿ ಬಂದು, ತನಗೆ ಕಷ್ಟ. ಮನೆ ನಡೆಸಲು ಆಗುತ್ತಿಲ್ಲ ಎಂದು ಹೇಳಿಕೊಳ್ಳುತ್ತಿದ್ದ. ಅದಕ್ಕೆ ಸಿದ್ದು ದುಡ್ಡು ಕೊಟ್ಟು ಸಹಾಯ ಮಾಡೋಣ ಎಂದು ದುಡ್ಡು ಕೊಡಲು ಹೋಗುತ್ತಾನೆ. ಅಷ್ಟರಲ್ಲೇ ಚಕ್ರವರ್ತಿ ಅಲ್ಲಿಗೆ ಬರುತ್ತಾರೆ. ಏನ್ ದುಡ್ಡು ಕೊಡ್ತಿದೀಯಾ ಅಂತಾರೆ. ಅದಕ್ಕೆ ಅವರ ಮನೆಯಲ್ಲಿ ಕಷ್ಟ ಅಂತೆ. ಅದಕ್ಕೆ ದುಡ್ಡು ಕೊಡ್ತಿದ್ದೆ ಎಂದು ಹೇಳುತ್ತಾನೆ. ಅಷ್ಟರಲ್ಲೇ ಸುರೇಶ್, ಇಲ್ಲ ಸರ್ ಇಂಟರ್‍ನಲ್ ಮಾಕ್ರ್ಸ್ ಜಾಸ್ತಿ ಮಾಡಲು ದುಡ್ಡು ಕೊಡ್ತಿದ್ರು ಎಂದು ಹೇಳುತ್ತಾನೆ.

    Colors Kannada serial, Kannada serial, Olavina nildana Serial, Olavina Nildana serial today episode, interestin episode in serial, ಒಲವಿನ ನಿಲ್ದಾಣ ಧಾರಾವಾಹಿ, ಕಾಲೇಜಿನಿಂದ ಡಿಬಾರ್ ಆಗ್ತಾನಾ ಸಿದ್ಧಾಂತ್?, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    HOD ಚಕ್ರವರ್ತಿ


    ಸುರೇಶ್‍ಗೆ ಹೊಡೆದ ಸಿದ್ದು

    ಕಾಲೇಜ್ ಸ್ಟಾಪ್ ಸುರೇಶ್ ಸುಳ್ಳು ಹೇಳಿದ್ದಕ್ಕೆ ಕೋಪಗೊಂಡ ಸಿದ್ದು ಅವನಿಗೆ ಹೊಡೆಯುತ್ತಾನೆ. ಆಗ ಅಲ್ಲೇ ಇದ್ದ ಕಾಲೇಜಿನ ಹುಡುಗರು ಕಾಲೇಜ್ ಸ್ಟಾಫ್ ಮೇಲೆ ಕೈ ಮಾಡ್ತೀಯಾ ಎಂದು ಸಿದ್ಧಾಂತ್‍ಗೆ ಹೊಡೆಯುತ್ತಾರೆ. ಗಲಾಟೆ ವೇಳೆ ತಾರಿಣಿಗೆ ಏಟಾಗುತ್ತೆ. ಆಗ ಚಕ್ರವರ್ತಿ ಅಡ್ಡ ಬಂದು ತಡೆದು ಎಲ್ಲರನ್ನು ಸ್ಟಾಫ್ ರೂಂಗೆ ಕರೆಯುತ್ತಾರೆ.

    ಇದನ್ನೂ ಓದಿ: Lakshana Serial: ಭೂಪತಿ-ಶೌರ್ಯನ ಆಪರೇಷನ್ ಖೆಡ್ಡಾ ಸಕ್ಸಸ್, ನಕ್ಷತ್ರಾ ಕೊಲ್ಲಲು ಬಂದ ಮೌರ್ಯ ಲಾಕ್!

    ಸಿದ್ದುನಾ ಡಿಬಾರ್ ಮಾಡ್ತಾರಾ?
    ಹೆಚ್‍ಓಡಿ ಚಕ್ರವರ್ತಿಗೆ ಸಿದ್ದು ಕಂಡ್ರೆ ಮೊದಲೇ ಆಗಲ್ಲ. ಅವನನ್ನು ಡಿಬಾರ್ ಮಾಡಲೆಂದೇ ಈ ಎಲ್ಲಾ ಪ್ಲ್ಯಾನ್ ಮಾಡಿದ್ದಾನೆ. ಅವನು ಅಂದುಕೊಂಡತೆ ಎಲ್ಲಾ ಆಗಿದೆ. ಈಗ ಸಿದ್ದು ಕರೆದು ಅವನನನು ಡಿಬಾರ್ ಮಾಡಬಹುದು. ಪಾಲಾಕ್ಷ ಕುತಂತ್ರದಿಂದ ಸಿದ್ಧಾಂತ್ ಜೀವನ ಹಾಳಾಗ್ತಿದೆ.

    Colors Kannada serial, Kannada serial, Olavina nildana Serial, Olavina Nildana serial today episode, interestin episode in serial, ಒಲವಿನ ನಿಲ್ದಾಣ ಧಾರಾವಾಹಿ, ಕಾಲೇಜಿನಿಂದ ಡಿಬಾರ್ ಆಗ್ತಾನಾ ಸಿದ್ಧಾಂತ್?, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಪಾಲಾಕ್ಷ


    ಈಗ ಸಿದ್ಧಾಂತ್ ತನ್ನ ತಪ್ಪಿಲ್ಲ ಎಂದು ಹೇಗೆ ಸಾಬೀತು ಪಡಿಸುತ್ತಾನೆ. ಈ ಸುಳಿಯಿಂದ ಹೇಗೆ ಆಚೆ ಬರ್ತಾನೆ? ಎಲ್ಲವನ್ನೂ ನೋಡಲು ಒಲವಿನ ನಿಲ್ದಾಣ ಸೀರಿಯಲ್ ನೋಡಬೇಕು.
    Published by:Savitha Savitha
    First published: