• Home
 • »
 • News
 • »
 • entertainment
 • »
 • Olavina Nildana: ಏನೂ ತಪ್ಪು ಮಾಡದ ಸಿದ್ಧಾಂತ್ ಅರೆಸ್ಟ್! ಕಾಲೇಜಿನಲ್ಲಿ ಎಲ್ಲರ ಮುಂದೆ ಹೋಯ್ತು ಮರ್ಯಾದೆ

Olavina Nildana: ಏನೂ ತಪ್ಪು ಮಾಡದ ಸಿದ್ಧಾಂತ್ ಅರೆಸ್ಟ್! ಕಾಲೇಜಿನಲ್ಲಿ ಎಲ್ಲರ ಮುಂದೆ ಹೋಯ್ತು ಮರ್ಯಾದೆ

ಏನೂ ತಪ್ಪು ಮಾಡದ ಸಿದ್ಧಾಂತ್ ಅರೆಸ್ಟ್

ಏನೂ ತಪ್ಪು ಮಾಡದ ಸಿದ್ಧಾಂತ್ ಅರೆಸ್ಟ್

ಕೋಪಗೊಂಡ ಇನ್ಸ್ ಪೆಕ್ಟರ್ ಸಿದ್ದು ಕಪಾಳಕ್ಕೆ ಹೊಡೆಯುತ್ತಾರೆ. ಮತ್ತೆ ಹೊಡೆಯಲು ಬಂದಾಗ ತಾರಿಣಿ ತಡೆಯುತ್ತಾಳೆ. ಆಗ ಪೊಲೀಸರು ಸಿದ್ಧಾಂತ್‍ನನ್ನು ಎಳೆದುಕೊಂಡು ಹೋಗುತ್ತಾರೆ.

 • Share this:

  ಒಲವಿನ ನಿಲ್ದಾಣ (Olavina Nildana)  ಧಾರಾವಾಹಿ (Serial) ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada), ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಬಗ್ಗೆಯ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ಇನ್ನು ನಟಿ ತಾರಿಣಿ ಮುಗ್ಧತೆ, ಸಿದ್ಧಾಂತ್ ಮೇಲಿನ ಪ್ರೀತಿ (Love), ತನ್ನ ಕನಸಿನ ಹುಡುಗನ್ನು ಪಡೆಯಲು ಪರದಾಡುತ್ತಿರುವ ಪರಿ ಜನರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ತಾರಿಣಿಗೆ ಸಿದ್ಧಾಂತ್ ಮೇಲೆ ಪ್ರೀತಿ ಇದೆ. ಅದನ್ನು ಹೇಳಿಕೊಳ್ಳಲು ಆಗುತ್ತಿಲ್ಲ. ಇನ್ನು ತಾರಿಣಿ ಮನೆಯವರ ಮುಂದೆ, ಸಿದ್ಧಾಂತ್-ತಾರಿಣಿ ಸುಳ್ಳು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಿದ್ಧಾಂತ್ ಪ್ರೀತಿ ಪಡೆಯಲು ತಾರಿಣಿ ಒದ್ದಾಡುತ್ತಿದ್ದಾಳೆ. ಇಬ್ಬರನ್ನು ದೂರ ಮಾಡಲು ತಾರಿಣಿ ಮಾವ ಪಾಲಾಕ್ಷ ಸ್ಕೆಚ್ ಹಾಕ್ತಾ ಇದ್ದಾನೆ. ಮಾಡದ ತಪ್ಪಿಗೆ ಅರೆಸ್ಟ್ (Arrest) ಆಗಿದ್ದಾನೆ ಸಿದ್ದು.


  ಕಾಲೇಜ್ ಸ್ಟಾಫ್ ಮಾಡಿದ್ದ ತಪ್ಪು
  ಕಾಲೇಜ್ ಸ್ಟಾಪ್ ಸುರೇಶ್ ಎಂಬಾತ ಸಿದ್ಧಾಂತ್ ಬಳಿ ಬಂದು, ತನಗೆ ಕಷ್ಟ. ಮನೆ ನಡೆಸಲು ಆಗುತ್ತಿಲ್ಲ ಎಂದು ಹೇಳಿಕೊಳ್ಳುತ್ತಿದ್ದ. ಅದಕ್ಕೆ ಸಿದ್ದು ದುಡ್ಡು ಕೊಟ್ಟು ಸಹಾಯ ಮಾಡೋಣ ಎಂದು ದುಡ್ಡು ಕೊಡಲು ಹೋಗುತ್ತಾನೆ. ಅಷ್ಟರಲ್ಲೇ ಹೆಚ್‍ಓಡಿ ಚಕ್ರವರ್ತಿ ಅಲ್ಲಿಗೆ ಬರುತ್ತಾರೆ.


  ಏನ್ ದುಡ್ಡು ಕೊಡ್ತಿದೀಯಾ ಅಂತಾರೆ. ಅದಕ್ಕೆ ಅವರ ಮನೆಯಲ್ಲಿ ಕಷ್ಟ ಅಂತೆ. ಅದಕ್ಕೆ ದುಡ್ಡು ಕೊಡ್ತಿದ್ದೆ ಎಂದು ಹೇಳುತ್ತಾನೆ. ಅಷ್ಟರಲ್ಲೇ ಸುರೇಶ್, ಇಲ್ಲ ಸರ್ ಇಂಟರ್‍ನಲ್ ಪಾಸ್ ಮಾಡಲು ದುಡ್ಡು ಕೊಡ್ತಿದ್ರು ಎಂದು ಹೇಳುತ್ತಾನೆ. ಅದಕ್ಕೆ ಅವನನ್ನು ಸಿದ್ದು ಹೊಡೆಯುತ್ತಾನೆ.


  ಇದನ್ನೂ ಓದಿ: Kendasampige: ಸುಮನಾ ಮದುವೆಯನ್ನು ಕಾರ್ಪೊರೇಟರ್ ಮಾಡಿಸ್ತಾರಂತೆ! ಸಾಮೂಹಿಕ ವಿವಾಹದಲ್ಲೇ ಆಕೆಗೂ ಮುಹೂರ್ತ


  ಕ್ಷಮಾ ಪತ್ರ ಬರೆದುಕೊಡಲು ಬಂದವನಿಗೆ ಶಾಕ್
  ಸಿದ್ದು ತಪ್ಪೇ ಮಾಡಿಲ್ಲ ಮೊದಲು ಕ್ಷಮೆಯನ್ನೂ ಕೇಳುವುದಿಲ್ಲ ಎಂದು ಹಠ ಹಿಡಿದಿದ್ದ ಆದ್ರೆ, ಅವನ ತಾಯಿ ಒಪ್ಪಿಸಿ ಕ್ಷಮಾ ಪ್ತರ ಬರೆದು ಕೊಡಲು ಬಂದಿದ್ದ. ಅಷ್ಟರಲ್ಲೇ ಹೆಚ್‍ಓಡಿ ಚಕ್ರವರ್ತಿ ಬರುತ್ತಾರೆ. ಅವರಿಗೆ ಯಾರೋ ರೌಡಿಗಳು ಹೊಡೆದು ಸಿದ್ಧಾಂತ್ ಹೆಸರು ಹೇಳಿದ್ದಾರೆ. ಅದಕ್ಕೆ ಚಕ್ರವರ್ತಿ ಕೋಪಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.


  Colors Kannada serial, Kannada serial, Olavina nildana Serial, Olavina Nildana serial today episode, interestin episode in serial, hero arrested by police, ಒಲವಿನ ನಿಲ್ದಾಣ ಧಾರಾವಾಹಿ, ಏನೂ ತಪ್ಪು ಮಾಡದ ಸಿದ್ಧಾಂತ್ ಅರೆಸ್ಟ್, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ಚಕ್ರವರ್ತಿ


  ಪೊಲೀಸರಿಗೆ ಅವಾಜ್ ಹಾಕಿದ ಸಿದ್ದು
  ಪೊಲೀಸರು ಸಿದ್ಧಾಂತ್‍ನನ್ನು ಠಾಣೆಗೆ ಬಾ ಎನ್ನುತ್ತಾರೆ. ತಪ್ಪೇ ಮಾಡದ ಸಿದ್ಧಾಂತ್ ಕೋಪಗೊಂಡು ಎಷ್ಟು ದುಡ್ಡು ಪಡೆದಿದ್ದೀರಿ ಈ ರೀತಿ ಅರೆಸ್ಟ್ ಮಾಡಲು ಎನ್ನುತ್ತಾನೆ. ಅದಕ್ಕೆ ಕೋಪಗೊಂಡ ಇನ್ಸ್ ಪೆಕ್ಟರ್ ಸಿದ್ದು ಕಪಾಳಕ್ಕೆ ಹೊಡೆಯುತ್ತಾರೆ. ಮತ್ತೆ ಹೊಡೆಯಲು ಬಂದಾಗ ತಾರಿಣಿ ತಡೆಯುತ್ತಾಳೆ. ಆಗ ಪೊಲೀಸರು ಸಿದ್ಧಾಂತ್‍ನನ್ನು ಎಳೆದುಕೊಂಡು ಹೋಗುತ್ತಾರೆ.


  Colors Kannada serial, Kannada serial, Olavina nildana Serial, Olavina Nildana serial today episode, interestin episode in serial, hero arrested by police, ಒಲವಿನ ನಿಲ್ದಾಣ ಧಾರಾವಾಹಿ, ಏನೂ ತಪ್ಪು ಮಾಡದ ಸಿದ್ಧಾಂತ್ ಅರೆಸ್ಟ್, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ಪಾಲಾಕ್ಷ


  ನ ಕುತಂತ್ರ
  ಇದರಲ್ಲೂ ತಾರಿಣಿ ಮಾವ ಪಾಲಾಕ್ಷನ ಕುತಂತ್ರ ಇದೆ. ರೌಡಿಗಳಿಗೆ ದುಡ್ಡು ಕೊಟ್ಟು ಚಕ್ರವರ್ತಿಗೆ ಹೊಡೆಸಿದ್ದಾನೆ. ಅವರಿಗೆ ಸಿದ್ದು ಹೆಸರು ಹೇಳಲು ಹೇಳಿದ್ದಾನೆ. ಅದಕ್ಕೆ ರೌಡಿಗಳು ಚಕ್ರವರ್ತಿಗೆ ಹೊಡೆದು, ಸಿದ್ಧಾಂತ್ ಸುದ್ದಿಗೆ ಬರಬೇಡಿ ಎಂದು ಎಚ್ಚರಿಕೆ ಕೊಟ್ಟಿರುತ್ತಾರೆ. ಅದಕ್ಕೆ ಅವನು ಪೊಲೀಸರಿಗೆ ದೂರು ನೀಡಿರುತ್ತಾರೆ. ಸಿದ್ಧಾಂತ್‍ನನ್ನು ಪೊಲೀಸರು ಎಳೆದುಕೊಂಡು ಹೋಗುತ್ತಿರುವುದನ್ನು ವಿಡಿಯೋ ಮಾಡಿಕೊಂಡಿದ್ದಾನೆ ಪಾಲಾಕ್ಷ.


  ಇದನ್ನೂ ಓದಿ: Ramachari: ಇಂದೇ ರಾಮಾಚಾರಿ ಮದುವೆ! ಅಮ್ಮನ ಮಾತಿಗೆ ಕಟ್ಟು ಬಿದ್ದು ಅತ್ತೆ ಮಗಳಿಗೆ ತಾಳಿ ಕಟ್ತಾನಾ?


  ಸಿದ್ದು ಅಮ್ಮನಿಗೆ ಶಾಕ್
  ಸಿದ್ಧಾಂತ್ ಮನೆಯಲ್ಲಿ ಹೀಗಾಗಲೇ ಹಲವಾರು ಕಷ್ಟಗಳಿವೆ. ಸಿದ್ದು ಅಮ್ಮ ಮಗನ ಮೇಲೆ ಪೂರ್ಣ ನಂಬಿಕೆ ಇಟ್ಟಿದ್ಲು. ಆದ್ರೆ ಈ ರೀತಿ ಆಗುತ್ತಿರುವುದನ್ನು ನೋಡಿ ಶಾಕ್ ಆಗಿದ್ದಾಳೆ. ಮಗನ ಭವಿಷ್ಯ ಹಾಳಾಯ್ತು ಎಂದು ಕಣ್ಣೀರು ಹಾಕುತ್ತಿದ್ದಾಳೆ.


  ಪಾಲಾಕ್ಷ ಎಣೆದ ಮೋಸದ ಬಲೆಯಲ್ಲಿ ಸಿದ್ದು ಸಿಲುಕಿಗೊಂಡಿದ್ದಾನೆ. ಅದರಿಂದ ಹೇಗೆ ಆಚೆ ಬರ್ತಾನೆ? ಎಲ್ಲವನ್ನೂ ನೋಡಲು ಒಲವಿನ ನಿಲ್ದಾಣ ಸೀರಿಯಲ್ ನೋಡಬೇಕು.

  Published by:Savitha Savitha
  First published: