• Home
  • »
  • News
  • »
  • entertainment
  • »
  • Olavina Nildana: ಅಮ್ಮ ಎಂದುಕೊಂಡಿದ್ದವಳೇ ತಾರಿಣಿಗೆ ವಿಷ ಬೆರೆಸಿ ಕೊಟ್ಟಿದ್ದಾಳೆ! ಗಣಪತಿ ಕಾಪಾಡ್ತಾನಾ?

Olavina Nildana: ಅಮ್ಮ ಎಂದುಕೊಂಡಿದ್ದವಳೇ ತಾರಿಣಿಗೆ ವಿಷ ಬೆರೆಸಿ ಕೊಟ್ಟಿದ್ದಾಳೆ! ಗಣಪತಿ ಕಾಪಾಡ್ತಾನಾ?

ಸುಮತಿ

ಸುಮತಿ

ತಾರಿಣಿಗೆ ಸುಮತಿ ಅಮ್ಮ ಎಂದ್ರೆ ಹೆತ್ತಮ್ಮನಿಗಿಂತ ಜಾಸ್ತಿ ಪ್ರೀತಿ. ದೇವರ ಪ್ರಸಾದ ಎಂದು ಸುಮತಿ, ಅದರಲ್ಲಿ ವಿಷ ಬೆರೆಸಿ ಕೊಟ್ಟಿದ್ದಾಳೆ. ಅದನ್ನು ತಾರಿಣಿ ಕುಡಿಯುತ್ತಾಳಾ ನೋಡಬೇಕು.

  • News18 Kannada
  • Last Updated :
  • Karnataka, India
  • Share this:

    ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada), ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ನಟ ಸಿದ್ಧಾಂತ್ (Siddhant) ಗುರಿ, ಅವನ ಕಾಳಜಿ, ಮನೆಯವರ ಬಗ್ಗೆಯ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ತಾರಿಣಿಗೆ ಸಿದ್ಧಾಂತ್ ಮೇಲೆ ಪ್ರೀತಿ ಇದೆ. ಅದನ್ನು ಹೇಳಿಕೊಳ್ಳಲು ಆಗುತ್ತಿಲ್ಲ. ಇನ್ನು ತಾರಿಣಿ ಮನೆಯವರ ಮುಂದೆ, ಸಿದ್ಧಾಂತ್-ತಾರಿಣಿ ಸುಳ್ಳು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಿದ್ಧಾಂತ್ ಪ್ರೀತಿ (Love) ಪಡೆಯಲು ತಾರಿಣಿ ಒದ್ದಾಡುತ್ತಿದ್ದಾಳೆ. ಸಿದ್ಧಾಂತ್ ಗೆ ಈಗ ತಾರಿಣಿ ಮೇಲೆ ತನಗೆ ಪ್ರೀತಿ ಇದೆ ಎಂದು ಗೊತ್ತಾಗಿದೆ. ಅದನ್ನು ಹೇಳಿಕೊಳ್ಳುವ ಮೊದಲೇ ತಾರಿಣಿಗೆ ಗುಂಡೇಟು ಬಿದ್ದಿದೆ. ತಾರಿಣಿ ಈಗ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ.


    ಪ್ರೀತಿ ಹೇಳಿಕೊಳ್ಳೋ ಮೊದಲೇ ಅನಾಹುತ


    ತಾರಿಣಿ ಮೇಲೆ ಸಿದ್ಧಾಂತ್ ಗೂ ಪ್ರೀತಿ ಆಗಿದೆ. ಅದನ್ನು ಅವನು ಅವಳ ಬಳಿ ಹೇಳಿಕೊಳ್ಳಬೇಕು ಎಂದುಕೊಂಡಿದ್ದ, ಅಷ್ಟರಲ್ಲೇ ತಾರಿಣಿ ಮದುವೆ ಬೇಡ ಎಂದು ಬಿಟ್ಟಿದ್ದಾಳೆ. ಅದಕ್ಕೆ ಸಿದ್ಧಾಂತ್ ತಾರಿಣಿಯ ಬಳಿ ಮಾತನಾಡಲು ಹೋಗಿದ್ದಾನೆ. ಆದ್ರೆ ಅಷ್ಟೋತ್ತಿಗೆ ಗುಂಡಿನ ಸದ್ದು ಕೇಳುತ್ತೆ. ನೋಡಿದ್ರೆ ತಾರಿಣಿಗೆ ಏಟು ಬಿದ್ದಿರುತ್ತೆ.


    ಸಿದ್ಧಾಂತ್ ಕೊಲ್ಲಲು ನಡೆದಿತ್ತು ಪ್ಲ್ಯಾನ್


    ಸಿದ್ದು ಕೊಲ್ಲಲು ಜಗದೀಶ್ವರಿ ಪ್ಲ್ಯಾನ್ ಮಾಡಿರುತ್ತಾಳೆ. ಅಂತೆಯೇ ಅವಳ ಆಜ್ಞೆಯಂತೆ ಗನ್‍ನಿಂದ ಕಿಲ್ಲರ್ ಬುಲೆಟ್ ಹಾರಿಸಿಬಿಟ್ಟಿದ್ದಾನೆ. ಆದ್ರೆ ಅದು ಸಿದ್ಧಾಂತ್ ಬದಲು ತಾರಿಣಿಗೆ ಬೀಳುತ್ತೆ. ಸದ್ಯ ತಾರಿಣಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದಾಳೆ.


    colors kannada serial, kannada serial, olavina nildana serial, serial cast, sumathi fake love to tharini, ಒಲವಿನ ನಿಲ್ದಾಣ ಧಾರಾವಾಹಿ, ಅಮ್ಮ ಎಂದುಕೊಂಡಿದ್ದವಳೇ ತಾರಿಣಿಗೆ ವಿಷ ಬೆರೆಸಿ ಕೊಟ್ಟಿದ್ದಾಳೆ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಸಿದ್ಧಾಂತ್


    ಸುಮತಿ ಅಮ್ಮನಿಗೆ ತಾರಿಣಿ ಮೇಲೆ ಕೋಪ
    ಸುಮತಿ ತಾರಿಣಿಯ ಅತ್ತೆ.  ಅಂದ್ರೆ ತನ್ನ ಅಮ್ಮನ ತಮ್ಮನ ಹೆಂಡ್ತಿ. ಆದ್ರೆ ಈಕೆ ಯಾವತ್ತೂ ಅವಳನ್ನು ಅತ್ತೆ ಅಂತ ಕರೆದಿಲ್ಲ. ಅಮ್ಮ ಎಂದೇ ಕರೆಯುತ್ತಾಳೆ. ಸುಮತಿಗೆ ಮಕ್ಕಳಿಲ್ಲದ ಕಾರಣ ಅವಳು ತಾರಿಣಿಯನ್ನು ಸ್ವಂತ ಮಗಳಂತೆ ನೋಡಿಕೊಳ್ಳುತ್ತಿದ್ದಳು. ಇಷ್ಟು ದಿನ ಅದು ನಿಜ ಅಂತ ಅಭಿಮಾನಿಗಳು ಎಂದುಕೊಂಡಿದ್ರು. ಆದ್ರೆ ಆಕೆಯ ಮುಖವಾಡ ಬಯಲಾಗಿದೆ. ಆಕೆ ಸೇಡು ತೀರಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾಳಂತೆ.


    ಇದನ್ನೂ ಓದಿ: Kendasampige: ನಿತ್ಯಾಳಿಗೆ ವಾರ್ನಿಂಗ್ ಕೊಟ್ಟ ಸುಮನಾ ಅತ್ತೆ ಪದ್ಮಾ, ತೀರ್ಥನ ಸುದ್ದಿಗೆ ಬರದಂತೆ ಎಚ್ಚರಿಕೆ! 


    ಬಂಜೆ ಎಂದಿದ್ದಕ್ಕೆ ಸೇಡು
    ಸುಮತಿಗೆ ಮಕ್ಕಳಾಗಿಲ್ಲ. ಅದಕ್ಕೆ ತಾರಿಣಿಯ ಅಮ್ಮ, ಯಾವಾಗಲೂ ಅವಳನ್ನು ಬಂಜೆ ಅನ್ನುತ್ತಿದ್ದಳು. ಸಭೆ, ಸಮಾರಂಭಗಳಲ್ಲಿ, ನೆಂಟರ ಮುಂದೆ ಅವಮಾನ ಮಾಡಿರುತ್ತಾಳೆ. ಅದಕ್ಕೆ ಆಕೆ ಮಗಳನ್ನೇ ದಾಳ ಮಾಡಿಕೊಂಡು ನೋವು ಕೊಟ್ಟು ಸೇಡು ತೀರಿಸಿಕೊಳ್ಳೋ ಪ್ರಯತ್ನ ಮಾಡ್ತಾ ಇದ್ದಾಳೆ.


    ತಾರಿಣಿಗೆ ವಿಷ ಕೊಟ್ಟಳು
    ತಾರಿಣಿ ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದಾಳೆ. ತಾರಿಣಿಗೆ ಸುಮತಿ ಅಮ್ಮ ಎಂದ್ರೆ ಹೆತ್ತಮ್ಮನಿಗಿಂತ ಜಾಸ್ತಿ ಪ್ರೀತಿ. ಅವಳು ಏನ್ ಹೇಳಿದ್ರು ಕೇಳ್ತಾಳೆ. ಅದನ್ನೇ ಮುಂದಿಟ್ಟುಕೊಂಡು ದೇವರ ಪ್ರಸಾದ ಎಂದು, ಅದರಲ್ಲಿ ವಿಷ ಬೆರೆಸಿ ಕೊಟ್ಟಿದ್ದಾಳೆ. ಅದನ್ನು ತಾರಿಣಿ ಕುಡಿಯುತ್ತಾಳಾ ನೋಡಬೇಕು.


    colors kannada serial, kannada serial, olavina nildana serial, serial cast, sumathi fake love to tharini, ಒಲವಿನ ನಿಲ್ದಾಣ ಧಾರಾವಾಹಿ, ಅಮ್ಮ ಎಂದುಕೊಂಡಿದ್ದವಳೇ ತಾರಿಣಿಗೆ ವಿಷ ಬೆರೆಸಿ ಕೊಟ್ಟಿದ್ದಾಳೆ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ತಾರಿಣಿ


    ಇದನ್ನೂ ಓದಿ: BBK Season 09: ದೊಡ್ಮನೆಯಲ್ಲಿ ಮತ್ತೆ ದೊಡ್ಡ ಗಲಾಟೆ, ಲಗೇಜ್​ ಸಮೇತ ಮನೆ ಬಿಟ್ಟು ಹೊರಟ ರೂಪೇಶ್​ ರಾಜಣ್ಣ! 


    ತಾರಿಣಿ ಪ್ರಾಣಕ್ಕೆ ಅಪಾಯ ಇದೆಯಾ? ಸುಮತಿ ಅಮ್ಮ ಕೊಟ್ಟ ವಿಷ ಕುಡಿಯುತ್ತಾಳೆ. ಅಮ್ಮ ಎಂದುಕೊಂಡಿದ್ದವಳ ಮೋಸ ತಿಳಿಯುತ್ತಾ? ಅವಳು ನಂಬಿದ ಗಣಪತಿ ಅವಳನ್ನು ಕಾಪಾಡ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.

    Published by:Savitha Savitha
    First published: