• Home
  • »
  • News
  • »
  • entertainment
  • »
  • Olavina Nildana: ಸಿದ್ಧಾಂತ್‍ಗೆ ತನ್ನ ಮೇಲೆ ಪ್ರೀತಿ ಇಲ್ಲ ಎಂದು ಗೊತ್ತಾಗಿ ಒಡೆದಿದೆ ತಾರಿಣಿ ಹೃದಯ!

Olavina Nildana: ಸಿದ್ಧಾಂತ್‍ಗೆ ತನ್ನ ಮೇಲೆ ಪ್ರೀತಿ ಇಲ್ಲ ಎಂದು ಗೊತ್ತಾಗಿ ಒಡೆದಿದೆ ತಾರಿಣಿ ಹೃದಯ!

ಒಡೆದಿದೆ ತಾರಿಣಿ ಹೃದಯ

ಒಡೆದಿದೆ ತಾರಿಣಿ ಹೃದಯ

ಸಿದ್ಧಾಂತ್ ತಾರಿಣಿ ಮೇಲೆ ಪ್ರೀತಿ ಇಲ್ಲ. ಅವಳು ಒಬ್ಬ ಫ್ರೆಂಡ್ ಆಗಿ ಮಾತ್ರ ಇಷ್ಟ ಎನ್ನುವುದನ್ನು ಕೇಳಿಸಿಕೊಂಡ ತಾರಿಣಿ ಹೃದಯ ಒಡೆದಿದೆ. ಪ್ರಾಣಕ್ಕಿಂತ ಹೆಚ್ಚು ಪ್ರೀತಿ ಮಾಡೋ ಹುಡುಗನ ಬಾಯಿಂದ ಈ ಮಾತು ಕೇಳಿ ಸಿಡಿಲು ಬಡಿದಂತೆ ಆಗಿದೆ.

  • News18 Kannada
  • Last Updated :
  • Karnataka, India
  • Share this:

    ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada), ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ನಟ ಸಿದ್ಧಾಂತ್ (Siddhant) ಗುರಿ, ಅವನ ಕಾಳಜಿ, ಮನೆಯವರ ಬಗ್ಗೆಯ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ಇನ್ನು ನಟಿ ತಾರಿಣಿ ಮುಗ್ಧತೆ, ಸಿದ್ಧಾಂತ್ ಮೇಲಿನ ಪ್ರೀತಿ (Love), ತನ್ನ ಕನಸಿನ ಹುಡುಗನ್ನು ಪಡೆಯಲು ಪರದಾಡುತ್ತಿರುವ ಪರಿ ಜನರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ತಾರಿಣಿಗೆ ಸಿದ್ಧಾಂತ್ ಮೇಲೆ ಪ್ರೀತಿ ಇದೆ. ಅದನ್ನು ಹೇಳಿಕೊಳ್ಳಲು ಆಗುತ್ತಿಲ್ಲ. ಇನ್ನು ತಾರಿಣಿ ಮನೆಯವರ ಮುಂದೆ, ಸಿದ್ಧಾಂತ್-ತಾರಿಣಿ ಸುಳ್ಳು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಿದ್ಧಾಂತ್ ಪ್ರೀತಿ ಪಡೆಯಲು ತಾರಿಣಿ ಒದ್ದಾಡುತ್ತಿದ್ದಾಳೆ. ಸಿದ್ಧಾಂತ್ ತನಗೆ ತಾರಿಣಿ ಮೇಲೆ ಯಾವುದೇ ಭಾವನೆ (Feeling) ಇಲ್ಲ ಎಂದು ಹೇಳಿದ್ದಾನೆ.


    ಲಗ್ನ ಪತ್ರಿಕೆ ಪೂಜೆ ದಿನ ಸತ್ಯ ಹೇಳಲು ಸಿದ್ದು ನಿರ್ಧಾರ
    ತಾರಿಣಿಗೆ ಇಷ್ಟ ಇಲ್ಲದ ನಿಶ್ಚಿತಾರ್ಥ ನಿಲ್ಲಿಸಲು ಹೋಗಿ, ಸಿದ್ದು ತಾರಿಣಿ ಸುಳ್ಳಿನಿ ನಿಶ್ಚಿತಾರ್ಥ ಮಾಡಿಕೊಂಡಿದ್ರು. ಅದಕ್ಕೆ ತಾರಿಣಿ ಮನೆಯವರು ಮದುವೆ ವರೆಗೂ ಬಂದಿದ್ದಾರೆ. ಲಗ್ನ ಪತ್ರಿಕೆ ಪೂಜೆ ಇಟ್ಟುಕೊಂಡಿದ್ದಾರೆ. ಅದಕ್ಕೆ ಸಿದ್ಧಾಂತ್ ತನ್ನ ಕುಟುಂಬದವರ ಜೊತೆ ಹೋಗಬೇಕಿದೆ. ಆದ್ರೆ ಈ ವಿಷ್ಯ ಸಿದ್ಧಾಂತ್ ಅಪ್ಪನಿಗೆ ಬಿಟ್ರೆ, ಯಾರಿಗೂ ಗೊತ್ತಿಲ್ಲ. ಅದಕ್ಕೆ ಸಿದ್ಧಾಂತ್ ಲಗ್ನ ಪತ್ರಿಕೆ ಪೂಜೆ ದಿನ ಎಲ್ಲಾ ಸತ್ಯ ಹೇಳಲು ಹೊರಟಿದ್ದಾನೆ.


    ತಾರಿಣಿಗೆ ಸಿದ್ಧಾಂತ್ ಎಂದ್ರೆ ಪ್ರಾಣ
    ತಾರಿಣಿ, ಸಿದ್ದು ಜೊತೆ ಸುಳ್ಳಿನ ನಿಶ್ಚಿತಾರ್ಥ ಮಾಡಿಕೊಂಡಿರಬಹುದು. ಆದ್ರೆ, ತಾರಿಣಿಗೆ ಸಿದ್ದು ಮೇಲೆ ತುಂಬಾ ಪ್ರೀತಿ ಇದೆ. ಸಿದ್ದು ತನ್ನನ್ನು ಪ್ರೀತಿ ಮಾಡಲಿ ಎಂದು ಏನೇನೋ ಮಾಡ್ತಿದ್ದಾಳೆ. ಮನೆಯಲ್ಲೂ ಸಿದ್ಧಾಂತ್ ನನ್ನು ಒಪ್ಪಿಸುವುದಾಗಿ ಹೇಳಿದ್ಲು. ಆದ್ರೆ ಸಿದ್ದುಗೆ ತಾರಿಣಿ ಮೇಲೆ ಪ್ರೀತಿ ಇಲ್ವಂತೆ.


    ಇದನ್ನೂ ಓದಿ: Kannadathi: ಕಂಬಿ ಹಿಂದೆ ಹರ್ಷ, ಟೈಮ್ ನೋಡಿ ಜೈಲಿಗೆ ಕಳಿಸಿದ ಸಾನಿಯಾ!


    ತಾರಿಣಿ ಮೇಲೆ ನನಗೆ ಯಾವುದೇ ಭಾವನೆ ಇಲ್ಲ
    ಸಿದ್ಧಾಂತ್ ಗೆಳೆಯ ನೀನು ತಾರಿಣಿಗೆ ಇಲ್ಲದೇ ಇರೋ ಭ್ರಮೆ ಹುಟ್ಟಿಸಿದ್ದೀಯಾ. ಅವಳ ಮನಸ್ಸಿನಲ್ಲಿ ಪ್ರೀತಿ ಹುಟ್ಟಿಸಿದ್ದಿ ಅಂತ ಹೇಳ್ತಾನೆ. ಅದಕ್ಕೆ ಸಿದ್ದು, ತಾರಿಣಿ ಮೇಲೆ ನನಗೆ ಯಾವ ರೀತಿಯ ಭಾವನೆಯೂ ಇಲ್ಲ. ನಾನು ಎಂದು ಅವಳ ಬಳಿ ಪ್ರೀತಿ ಮಾಡ್ತೇನೆ ಎಂದು ಹೇಳಿಲ್ಲ. ಅವಳು ಒಬ್ಬ ಒಳ್ಳೆಯ ಫ್ರೆಂಡ್ ಅಷ್ಟೆ. ಅವಳ ಖುಷಿಗಾಗಿ ಇದೆಲ್ಲಾ ಮಾಡಿದೆ. ನನಗೆ ಪ್ರೀತಿ ಮಾಡೋಕೆ ಟೈಮ್ ಇಲ್ಲ. ಮನಸ್ಸಿನಲ್ಲಿ ಪ್ರೀತಿ ಹುಟ್ಟಿಲ್ಲ ಅಂದ್ರೆ ಏನ್ ಮಾಡೋದು ಎಂದು ಹೇಳ್ತಾನೆ.


    Colors Kannada serial, Kannada serial, Olavina nildana Serial, Olavina Nildana serial today episode, olavina nildana serial timing, Siddhant love story, ಒಲವಿನ ನಿಲ್ದಾಣ ಧಾರಾವಾಹಿ, ಲಗ್ನ ಪತ್ರಿಕೆ ಪೂಜೆ ದಿನ ಸತ್ಯ ಹೇಳಲು ಸಿದ್ದು ನಿರ್ಧಾರ ತಾರಿಣಿಗೆ ಸಿದ್ಧಾಂತ್ ಎಂದ್ರೆ ಪ್ರಾಣ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಸಿದ್ಧಾಂತ್


    ತಾರಿಣಿ ಅಂದ್ರೆ ಇಷ್ಟ, ಪ್ರೀತಿ ಇಲ್ಲ
    ತಾರಿಣಿ ಅಂದ್ರೆ ನನಗೆ ತುಂಬಾ ಇಷ್ಟ. ಅವಳ ಮಾತು ಇಷ್ಟ. ಅವಳ ನೇಚರ್ ಇಷ್ಟ. ಅವಳ ಡಿಸೆನ್ಸಿ ಇಷ್ಟ. ಅವಳ ವರ್ತನೆ ಇಷ್ಟ. ಒಬ್ಬ ಒಳ್ಳೆ ಫ್ರೆಂಡ್ ಆಗಿ ಮಾತ್ರ ಇಷ್ಟ. ಲವರ್ ಆಗಿ ಅಲ್ಲ ಎಂದು ಸಿದ್ದು ಹೇಳ್ತಾನೆ. ಅದನ್ನು ಕೇಳಿಸಿಕೊಂಡ ತಾರಿಣಿಗೆ ಶಾಕ್ ಆಗಿದೆ. ಕಣ್ಣೀರು ಬಂದಿದೆ.


    ಇದನ್ನೂ ಓದಿ: BBK Season 9: ಸೀರೆಯುಟ್ಟು ಮಳೆ ಡ್ಯಾನ್ಸ್ ಮಾಡಿದ ಸಾನ್ಯಾ ಹಾಟ್ ಲುಕ್! ಪಡ್ಡೆ ಹುಡುಗರ ನಿದ್ದೆ ಕದ್ದ ಚೆಲುವೆ


    ಒಡೆದಿದೆ ತಾರಿಣಿ ಹೃದಯ
    ಸಿದ್ಧಾಂತ್ ತಾರಿಣಿ ಮೇಲೆ ಪ್ರೀತಿ ಇಲ್ಲ. ಅವಳು ಒಬ್ಬ ಫ್ರೆಂಡ್ ಆಗಿ ಮಾತ್ರ ಇಷ್ಟ ಎನ್ನುವುದನ್ನು ಕೇಳಿಸಿಕೊಂಡ ತಾರಿಣಿ ಹೃದಯ ಒಡೆದಿದೆ. ಪ್ರಾಣಕ್ಕಿಂತ ಹೆಚ್ಚು ಪ್ರೀತಿ ಮಾಡೋ ಹುಡುಗನ ಬಾಯಿಂದ ಈ ಮಾತು ಕೇಳಿ ಸಿಡಿಲು ಬಡಿದಂತೆ ಆಗಿದೆ. ಕಣ್ಣೀರಿನ ಕಟ್ಟೆ ಒಡೆದಿದೆ. ಇನ್ನು ಸಿದ್ಧಾಂತ್ ತನಗೆ ಸಿಗಲ್ಲ ಎಂದು ಬೇಸರ ಮಾಡಿಕೊಂಡಿದ್ದಾಳೆ.


    Colors Kannada serial, Kannada serial, Olavina nildana Serial, Olavina Nildana serial today episode, olavina nildana serial timing, Siddhant love story, ಒಲವಿನ ನಿಲ್ದಾಣ ಧಾರಾವಾಹಿ, ಲಗ್ನ ಪತ್ರಿಕೆ ಪೂಜೆ ದಿನ ಸತ್ಯ ಹೇಳಲು ಸಿದ್ದು ನಿರ್ಧಾರ ತಾರಿಣಿಗೆ ಸಿದ್ಧಾಂತ್ ಎಂದ್ರೆ ಪ್ರಾಣ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಸಿದ್ಧಾಂತ್ ಕುಟುಂಬ


    ಸಿದ್ದುಗೆ ತಾರಿಣಿ ಮೇಲೆ ಪ್ರೀತಿಯೇ ಹುಟ್ಟಲ್ವಾ? ತಾರಿಗೆ ಸಿದ್ಧಾಂತ್ ಸಿಗಲ್ವಾ? ಎಲ್ಲವನ್ನೂ ನೋಡಲು ಒಲವಿನ ನಿಲ್ದಾಣ ಸೀರಿಯಲ್ ನೋಡಬೇಕು.

    Published by:Savitha Savitha
    First published: