• Home
  • »
  • News
  • »
  • entertainment
  • »
  • Olavina Nildana: ಅಪ್ಪನ ಜೊತೆ ತಾರಿಣಿ ಮನೆಗೆ ಹೋದ ಸಿದ್ಧಾಂತ್! ಮದುವೆ ಬೇಡ ಅಂತಾರಾ?

Olavina Nildana: ಅಪ್ಪನ ಜೊತೆ ತಾರಿಣಿ ಮನೆಗೆ ಹೋದ ಸಿದ್ಧಾಂತ್! ಮದುವೆ ಬೇಡ ಅಂತಾರಾ?

ತಾರಿಣಿ

ತಾರಿಣಿ

ತಾರಿಣಿ ಮಾವ ಪಾಲಾಕ್ಷ. ಸಿದ್ಧಾಂತ್ ಮತ್ತು ತಾರಿಣಿ ಮದುವೆ ಆಗುವುದು ಅವನಿಗೆ ಇಷ್ಟ ಇಲ್ಲ. ಅದಕ್ಕೆ ಹೇಗಾದ್ರೂ ಮದುವೆ ಮುರಿಯಬೇಕು ಎಂದುಕೊಂಡಿದ್ದಾನೆ. ಅಲ್ಲದೇ ಸಿದ್ದು ಅಮ್ಮನಿಗೆ ಈ ವಿಷ್ಯ ಗೊತ್ತಿಲ್ಲ ಎಂದು ಪಾಲಾಕ್ಷನಿಗೆ ಗೊತ್ತು.

  • News18 Kannada
  • Last Updated :
  • Karnataka, India
  • Share this:

    ಒಲವಿನ ನಿಲ್ದಾಣ (Olavina Nildana)  ಧಾರಾವಾಹಿ (Serial) ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada), ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ನಟ ಸಿದ್ಧಾಂತ್ (Siddhant) ಗುರಿ, ಅವನ ಕಾಳಜಿ, ಮನೆಯವರ ಬಗ್ಗೆಯ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ.  ತಾರಿಣಿಗೆ ಸಿದ್ಧಾಂತ್ ಮೇಲೆ ಪ್ರೀತಿ (Love) ಇದೆ. ಅದನ್ನು ಹೇಳಿಕೊಳ್ಳಲು ಆಗುತ್ತಿಲ್ಲ. ಇನ್ನು ತಾರಿಣಿ ಮನೆಯವರ ಮುಂದೆ, ಸಿದ್ಧಾಂತ್-ತಾರಿಣಿ ಸುಳ್ಳು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಿದ್ಧಾಂತ್ ಪ್ರೀತಿ ಪಡೆಯಲು ತಾರಿಣಿ ಒದ್ದಾಡುತ್ತಿದ್ದಾಳೆ. ಸಿದ್ಧಾಂತ್ ತನಗೆ ತಾರಿಣಿ ಮೇಲೆ ಯಾವುದೇ ಭಾವನೆ ಇಲ್ಲ ಎಂದು ಹೇಳಿದ್ದಾನೆ. ತಾರಿಣಿ ಮನೆಗೆ ಸಿದ್ಧಾಂತ್ ಮತ್ತು ಅವರಪ್ಪ (Father) ಹೋಗಿದ್ದಾರೆ.


    ತಾರಿಣಿಗೆ ಸಿದ್ಧಾಂತ್ ಮೇಲೆ ಪ್ರೀತಿ


    ತಾರಿಣಿ, ಸಿದ್ದು ಜೊತೆ ಸುಳ್ಳಿನ ನಿಶ್ಚಿತಾರ್ಥ ಮಾಡಿಕೊಂಡಿರಬಹುದು. ಆದ್ರೆ, ತಾರಿಣಿಗೆ ಸಿದ್ದು ಮೇಲೆ ತುಂಬಾ ಪ್ರೀತಿ ಇದೆ. ಸಿದ್ದು ತನ್ನನ್ನು ಪ್ರೀತಿ ಮಾಡಲಿ ಎಂದು ಏನೇನೋ ಮಾಡ್ತಿದ್ದಾಳೆ. ಮನೆಯಲ್ಲೂ ಸಿದ್ಧಾಂತ್ ನನ್ನು ಒಪ್ಪಿಸುವುದಾಗಿ ಹೇಳಿದ್ಲು. ಆದ್ರೆ ಸಿದ್ದುಗೆ ತಾರಿಣಿ ಮೇಲೆ ಪ್ರೀತಿ ಇಲ್ವಂತೆ.


    ಅಪ್ಪನ ಬಳಿಯೂ ಪ್ರೀತಿ ಇಲ್ಲ ಎಂದ ಸಿದ್ಧಾಂತ್


    ಸಿದ್ಧಾಂತ್ ಅಪ್ಪ ನೀನು ತಾರಿಣಿಗೆ ಇಲ್ಲದೇ ಇರೋ ಭ್ರಮೆ ಹುಟ್ಟಿಸಿದ್ದೀಯಾ. ಅವಳ ಮನಸ್ಸಿನಲ್ಲಿ ಪ್ರೀತಿ ಹುಟ್ಟಿಸಿದ್ದಿ ಅಂತ ಹೇಳ್ತಾನೆ. ಅದಕ್ಕೆ ಸಿದ್ದು, ತಾರಿಣಿ ಮೇಲೆ ನನಗೆ ಯಾವ ರೀತಿಯ ಭಾವನೆಯೂ ಇಲ್ಲ. ನಾನು ಎಂದು ಅವಳ ಬಳಿ ಪ್ರೀತಿ ಮಾಡ್ತೇನೆ ಎಂದು ಹೇಳಿಲ್ಲ. ಅವಳು ಒಬ್ಬ ಒಳ್ಳೆಯ ಫ್ರೆಂಡ್ ಅಷ್ಟೆ. ಅವಳ ಖುಷಿಗಾಗಿ ಇದೆಲ್ಲಾ ಮಾಡಿದೆ. ನನಗೆ ಪ್ರೀತಿ ಮಾಡೋಕೆ ಟೈಮ್ ಇಲ್ಲ. ಮನಸ್ಸಿನಲ್ಲಿ ಪ್ರೀತಿ ಹುಟ್ಟಿಲ್ಲ ಅಂದ್ರೆ ಏನ್ ಮಾಡೋದು ಎಂದು ಹೇಳ್ತಾನೆ.


    ಇದನ್ನೂ ಓದಿ: Lakshana: ಕೊನೆಗೂ ನಕ್ಷತ್ರಾ ಮನೆ ಸೇರಿ ಬಿಟ್ಲು ಶ್ವೇತಾ! ಮರೆಯಲ್ಲಿ ನಿಂತು ಸಹಾಯ ಮಾಡ್ತಿರೋರು ಯಾರು? 


    ಲಗ್ನ ಪತ್ರಿಕೆ ಪೂಜೆ ದಿನ ಸತ್ಯ ಹೇಳಲು ನಿರ್ಧಾರ


    ತಾರಿಣಿಗೆ ಇಷ್ಟ ಇಲ್ಲದ ನಿಶ್ಚಿತಾರ್ಥ ನಿಲ್ಲಿಸಲು ಹೋಗಿ, ಸಿದ್ದು ತಾರಿಣಿ ಸುಳ್ಳಿನ ನಿಶ್ಚಿತಾರ್ಥ ಮಾಡಿಕೊಂಡಿದ್ರು. ಅದಕ್ಕೆ ತಾರಿಣಿ ಮನೆಯವರು ಮದುವೆವರೆಗೂ ಬಂದಿದ್ದಾರೆ. ಲಗ್ನ ಪತ್ರಿಕೆ ಪೂಜೆ ಇಟ್ಟುಕೊಂಡಿದ್ದಾರೆ. ಅದಕ್ಕೆ ಸಿದ್ಧಾಂತ್ ತನ್ನ ಕುಟುಂಬದವರ ಜೊತೆ ಹೋಗಬೇಕಿದೆ. ಆದ್ರೆ ಈ ವಿಷ್ಯ ಸಿದ್ಧಾಂತ್ ಅಪ್ಪನಿಗೆ ಬಿಟ್ರೆ, ಯಾರಿಗೂ ಗೊತ್ತಿಲ್ಲ. ಅದಕ್ಕೆ ಸಿದ್ಧಾಂತ್ ಲಗ್ನ ಪತ್ರಿಕೆ ಪೂಜೆ ದಿನ ಎಲ್ಲಾ ಸತ್ಯ ಹೇಳಲು ಹೊರಟಿದ್ದಾನೆ.


    ತಾರಿಣಿ ಮನೆಗೆ ಹೋದ ಸಿದ್ಧಾಂತ್ ಮತ್ತು ಅವರಪ್ಪ


    ಲಗ್ನ ಪತ್ರಿಕೆ ಪೂಜೆಗೆ ತಾರಿಣಿ ಮನೆಗೆ ಸಿದ್ಧಾಂತ್ ಮತ್ತು ಅಪ್ಪ ಅನಂತಕೃಷ್ಣ ಬಂದಿದ್ದಾರೆ. ಆದ್ರೆ ತಾರಿಣಿ ಮನೆಯವರು ಉಳಿದವರು ಎಲ್ಲಿ ಎಂದು ಕೇಳುತ್ತಿದ್ದಾರೆ. ಅವರ್ಯಾರೂ ನಮ್ಮ ಜೊತೆ ಬರಲಿಲ್ಲ. ಅವರೆಲ್ಲಾ ಚಾಮುಂಡಿ ಬೆಟ್ಟಕ್ಕೆ ಹೋಗಿದ್ದಾರೆ ಅಮ್ಮ, ಅಣ್ಣ, ಅತ್ತಿಗೆ ಪೂಜೆ ಮುಗಿಸಿ, ಇಲ್ಲಿಗೆ ಡೈರೆಕ್ಟ್ ಆಗಿ ಬರ್ತಾರೆ ಎಂದು  ಸಿದ್ಧಾಂತ್ ಹೇಳ್ತಾನೆ. ಲಗ್ನ ಪತ್ರಿಕೆ ಪೂಜೆ ಸಮಯಕ್ಕೆ ಬಂದ್ರೆ ಸಾಕು ಎಂದು ತಾರಿಣಿ ಮನೆಯವರು ಸುಮ್ನೆ ಆಗ್ತಾರೆ.


    colors kannada serial, kannada serial, olavina nildana serial, olavina nildana serial today episode, olavina nildana serial timing, siddhant and father came to tharini house, ಒಲವಿನ ನಿಲ್ದಾಣ ಧಾರಾವಾಹಿ, ತಾರಿಣಿ ಮನೆಗೆ ಹೋದ ಸಿದ್ಧಾಂತ್ ಮತ್ತು ಅವರಪ್ಪ, ಮದುವೆ ಬೇಡ ಎಂದು ಹೇಳ್ತಾರಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,s
    ತಾರಿಣಿ


    ಮದುವೆ ಕ್ಯಾನ್ಸಲ್ ಮಾಡಲು ಪಾಲಾಕ್ಷನ ಪ್ಲ್ಯಾನ್
    ತಾರಿಣಿ ಮಾವ ಪಾಲಾಕ್ಷ. ಸಿದ್ಧಾಂತ್ ಮತ್ತು ತಾರಿಣಿ ಮದುವೆ ಆಗುವುದು ಅವನಿಗೆ ಇಷ್ಟ ಇಲ್ಲ. ಅದಕ್ಕೆ ಹೇಗಾದ್ರೂ ಮದುವೆ ಮುರಿಯಬೇಕು ಎಂದುಕೊಂಡಿದ್ದಾನೆ.


    ಇದನ್ನೂ ಓದಿ: Actress Archana Jois: ರಾಕಿಭಾಯ್ ಅಮ್ಮನ ರಾಕ್ ಫೋಟೋಸ್ ನೋಡಿ, ದೀಪಾವಳಿಗೆ ಕಂಗೊಳಿಸಿದ ಅರ್ಚನಾ ಜೋಯಿಸ್ 


    ಅಲ್ಲದೇ ಸಿದ್ದು ಅಮ್ಮನಿಗೆ ಈ ವಿಷ್ಯ ಗೊತ್ತಿಲ್ಲ ಎಂದು ಪಾಲಾಕ್ಷನಿಗೆ ಗೊತ್ತು. ಅದಕ್ಕೆ ಸಿದ್ದು ಅತ್ತಿಗೆ ಸಂಗೀತಾಗೆ ಕಾಲ್ ಮಾಡಿ ಮನೆಗೆ ಬರುಲು ಹೇಳಿದ್ದಾನೆ. ಸಿದ್ದುವನ್ನು ಎಲ್ಲರ ಮುಂದೆ ಸಿಕ್ಕಿ ಹಾಕಿಸಿಕೊಳ್ಳೋ ತಯಾರಿ ನಡೆಸಿದ್ದಾನೆ.


    colors kannada serial, kannada serial, olavina nildana serial, olavina nildana serial today episode, olavina nildana serial timing, siddhant and father came to tharini house, ಒಲವಿನ ನಿಲ್ದಾಣ ಧಾರಾವಾಹಿ, ತಾರಿಣಿ ಮನೆಗೆ ಹೋದ ಸಿದ್ಧಾಂತ್ ಮತ್ತು ಅವರಪ್ಪ, ಮದುವೆ ಬೇಡ ಎಂದು ಹೇಳ್ತಾರಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,s
    ಪಾಲಾಕ್ಷ


    ಸಿದ್ದು ಮನೆಯವರ ಮುಂದೆ ಸತ್ಯ ಹೇಳ್ತಾನಾ. ತಾರಿಣಿ ಮನೆಯವರು ಅದನ್ನು ಹೇಗೆ ಸ್ವೀಕರಿಸುತ್ತಾರೆ? ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.

    Published by:Savitha Savitha
    First published: