ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ತಾರಿಣಿ ಪ್ರೀತಿ ಮೊದಲೇ ಅರ್ಥ ಮಾಡಿಕೊಳ್ಳದ ಸಿದ್ಧಾಂತ್, ಈಗ ಆಕೆಯ ಪ್ರೀತಿ ಪಡೆಯಲು ಒದ್ದಾಡುತ್ತಿದ್ದಾನೆ. ಆದ್ರೆ ತಾರಿಣಿ ಮನೆಯವರು ಸಿದ್ದು ಜೊತೆ ಮಾತನಾಡದಂತೆ ತಾರಿಣಿಗೆ ತಾಕೀತು ಮಾಡಿದ್ದಾರೆ. ತಾರಿಣಿ ಮನಸ್ಸಿನಲ್ಲಿ ಇಲ್ಲ ಸಲ್ಲದ ತಪಿತಸ್ಥ ಭಾವನೆ ಮುಡಿಸುತ್ತಿದ್ದಾರೆ. ತಾರಿಣಿಗೆ ಸಿದ್ದು ಮೇಲೆ ಈಗ ಪ್ರೀತಿ (Love) ಇಲ್ಲ. ಅದನ್ನೇ ಅವಳು ಹೇಳಿದ್ದಾಳೆ. ತಾರಿಣಿ ಹೇಳಿದ ಮಾತು ಕೇಳಿ ಸಿದ್ಧಾಂತ್ (Siddhant) ಮನಸ್ಸು ಚೂರು ಚೂರಾಗಿದೆ.
ಸಿದ್ಧಾಂತ್ಗೆ ತಾರಿಣಿ ಮೇಲೆ ಪ್ರೀತಿ
ಮೊದಲು ಸಿದ್ಧಾಂತ್ ಮತ್ತು ತಾರಿಣಿ ಮಧ್ಯೆ ಸುಳ್ಳಿನ ನಿಶ್ಚಿತಾರ್ಥ ನಡೆದಿರುತ್ತೆ. ತಾರಿಣಿ ಮನೆಯವರು ಮದುವೆ ತನಕ ಬಂದಿರುತ್ತಾರೆ. ಆಗ ತಾರಿಣಿಗೆ ಮಾತ್ರ ಸಿದ್ಧಾಂತ್ ಮೇಲೆ ತುಂಬಾ ಪ್ರೀತಿ ಇರುತ್ತೆ. ಸಿದ್ದುಗೆ ಇರುವುದಿಲ್ಲ. ಅದಕ್ಕೆ ತಾರಿಣಿ ಮನೆಯವರ ಬಳಿ ಹೇಳಿ ಮದುವೆ ಕ್ಯಾನ್ಸಲ್ ಮಾಡಿಸಿದ್ದಾಳೆ. ಆದ್ರೆ ಈಗ ಸಿದ್ದುಗೆ ತಾರಿಣಿ ಮೇಲೆ ಪ್ರೀತಿ ಆಗಿದೆ. ಆಕೆಯನ್ನು ಹೇಗಾದ್ರೂ ಒಪ್ಪಿಸಬೇಕು ಎಂದು ಒದ್ದಾಡುತ್ತಿದ್ದಾನೆ.
ಸಿದ್ದು-ತಾರಿಣಿ ಮಧ್ಯೆ ಅಡ್ಡ ಗೋಡೆಯಾದ ಪಾಲಾಕ್ಷ
ತಾರಿಣಿ ಮಾವ ಪಾಲಾಕ್ಷ. ಆತನಿಗೆ ತಾರಿಣಿ ಸಿದ್ದು ಜೊತೆ ಮದುವೆ ಆಗುವುದು ಇಷ್ಟ ಇಲ್ಲ. ತಾರಿಣಿ ಧೀರಜ್ ನನ್ನು ಮದುವೆ ಆಗಬೇಕು. ಅದಕ್ಕೆ ಈ ಕುತಂತ್ರ ಮಾಡುತ್ತಿದ್ದಾರೆ. ಸಿದ್ದು-ತಾರಿಣಿ ಎಲ್ಲೂ ಕೂಡ ಮಾತನಾಡಬಾರದು ಎಂದು ಆಕೆಯ ಜೊತೆಯೇ ಓಡಾಡುತ್ತಿದ್ದಾರೆ. ಸಿದ್ದು ಜೊತೆ ತಾರಿಣಿ ಮಾತನಾಡಲು ಬಂದಿದ್ದಾಳೆ. ಈಗಲೂ ಪಾಲಾಕ್ಷ ಬಂದಿದ್ದಾನೆ.
ಸಿದ್ಧಾಂತ್ ಗೆ ಕಾಲ್ ಮಾಡಿದ ತಾರಿಣಿ
ಸಿದ್ದು ತಾರಿಣಿ ಬಳಿ ಮಾತನಾಡಲು ಒದ್ದಾಡುತ್ತಿದ್ದ. ಅಷ್ಟರಲ್ಲಿ ತಾರಿಣಿ ಸಿದ್ಧಾಂತ್ಗೆ ಕಾಲ್ ಮಾಡುತ್ತಾಳೆ. ಸಿದ್ದುಗೆ ತುಂಬಾ ಖುಷಿ ಆಗುತ್ತೆ. ಆಗ ತಾರಿಣಿ ಸಿದ್ಧಾಂತ್ ನಿಮ್ಮ ಬಳಿ ನಾನು ಮಾತನಾಡಬೇಕು, ಮೀಟ್ ಆಗೋಣ ಎಂದು ಹೇಳುತ್ತಾಳೆ. ಅದಕ್ಕೆ ಸಿದ್ಧಾಂತ್ ಖುಷಿಗೆ ಪಾರವೇ ಇಲ್ಲದಂತಾಗುತ್ತೆ. ಅಪ್ಪನನ್ನು ಕರೆದುಕೊಂಡು ತಾರಿಣಿಯನ್ನು ಮೀಟ್ ಆಗಲು ಬಂದಿದ್ದಾನೆ.
ಇದನ್ನೂ ಓದಿ: Actress Pranitha Subhash: ಯಂಗ್ ಆಗಿ ಕಾಣುವ ಪ್ರಣೀತಾ ಮುಂದೆ, ನಿಮ್ಮ ಫಿಟ್ ನೆಸ್ ಗುಟ್ಟೇನು ಅಂತಿದ್ದಾರೆ ಅಭಿಮಾನಿಗಳು?
ತಾರಿಣಿ ಮಾತಿಂದ ಸಿದ್ದು ಮನಸ್ಸು ಚೂರು-ಚೂರು
ನೋಡಿ ಸಿದ್ಧಾಂತ್ ನಾನು ನಿಮ್ಮನ್ನು ಇಷ್ಟ ಪಟ್ಟಿದ್ದು ನಿಜ. ನಿಮಗೆ ಅವತ್ತು ಹೇಳಿದ್ದೀನಿ. ಇವತ್ತು ಹೇಳ್ತಾ ಇದ್ದೀನಿ. ಆದ್ರೆ ಅದು ಆಗ. ನಿಮಗೆ ನನ್ನ ಮೇಲೆ ಪ್ರೀತಿ ಇಲ್ಲ ಎಂದು ಗೊತ್ತಾದಾಗ ನಾನೇ ಬದಲಾದೆ. ನಿಧಾನವಾಗಿ ನಿಮ್ಮನ್ನು ಮರೆಯೋಕೆ ಪ್ರಯತ್ನ ಮಾಡ್ತಾ ಬಂದೆ. ಆದ್ರೆ ಈಗ ನೀವು ನನ್ನ ಮೇಲೆ ಪ್ರೀತಿ ಇದೆ ಎಂದು ಬಂದಿದ್ದೀರಿ ಅದನ್ನು ಹೇಳಲು ಒದ್ದಾಡುತ್ತಿದ್ದೀರಿ. ಆದ್ರೆ ನನಗೆ ನಿಮ್ಮ ಮೇಲೆ ಪ್ರೀತಿ ಇಲ್ಲ ಎಂದು ತಾರಿಣಿ ಹೇಳ್ತಾಳೆ.
ನನ್ನ ಮನಸ್ಸು ಬದಲಾಗಲ್ಲ
ಈಗ ನಾನು ನಿಮ್ಮ ಪ್ರೀತಿ, ಪೇಮ ಎಲ್ಲವನ್ನೂ ದಾಟಿ ಮುಂದಕ್ಕೆ ಬಂದಿದ್ದೇನೆ. ನಿಮಗೆ ಅವಕಾಶ ಸಿಕ್ಕಾಗ ದೂರ ಹೋದ್ರಿ. ನನ್ನ ಮೇಲೆ ಆಸೆ ಇಟ್ಟುಕೊಳ್ಳಬೇಡ. ನನ್ನ ಪ್ರೀತಿಸಲಿಲ್ಲ ಎಂದು ಬಾಯ್ಬಿಟ್ಟು ಹೇಳಿದ್ರಿ. ಆಗ ಮನಸ್ಸಿನಿಗೆ ತುಂಬಾ ನೋವಾಯ್ತು. ಬದುಕುವುದೇ ಬೇಡ ಅನ್ನಿಸಿತ್ತು.
ಎಲ್ಲಾ ಕಂಟ್ರೋಲ್ ಮಾಡಿಕೊಂಡು ಧೀರಜ್ ನ ಮದುವೆ ಆಗಲು ಒಪ್ಪಿದ್ದೇನೆ. ಈಗ ಮತ್ತೆ ಬಂದು ಪ್ರೀತಿ ಹುಟ್ಟಿದೆ ಅಂದ್ರೆ ಹೇಗೆ? ಇದು ಮನಸ್ಸು, ನಿಮಗೆ ಬೇಕಾದಾಗ, ನೀವು ಹೇಳಿದಾಗ ಬದಲಾಗೋಕೆ ಆಗುತ್ತಾ ಎಂದು ತಾರಿಣಿ ಸಿದ್ಧಾಂತ್ ನನ್ನು ಪ್ರಶ್ನೆ ಮಾಡಿದ್ದಾಳೆ.
ಇದನ್ನೂ ಓದಿ: Bigg Boss Kannada: ನಿಮ್ಮಿಂದ ಸರ್ಟಿಫಿಕೇಟ್ ಬೇಡ: ರಾಜಣ್ಣನ ಮೇಲೆ ಮುಗಿಬಿದ್ದ ಮನೆಯ ಹೆಣ್ಣುಮಕ್ಕಳು
ತಾರಿಣಿ ಮಾತಿಂದ ಸಿದ್ದು ಮನಸ್ಸು ಚೂರು-ಚೂರು, ಮತ್ತೆ ತಾರಿಣಿ ಗೆ ಪ್ರೀತಿ ಆಗಲ್ವಾ? ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ