• Home
 • »
 • News
 • »
 • entertainment
 • »
 • Olavina Nildana: ಧೀರಜ್‍ನನ್ನು ಮದುವೆ ಆಗ್ತೀನಿ ಎಂದ ತಾರಿಣಿ, ಸಿದ್ಧಾಂತ್ ಕಣ್ಣೀರು!

Olavina Nildana: ಧೀರಜ್‍ನನ್ನು ಮದುವೆ ಆಗ್ತೀನಿ ಎಂದ ತಾರಿಣಿ, ಸಿದ್ಧಾಂತ್ ಕಣ್ಣೀರು!

ನಾನು ಧೀರಜ್‍ನನ್ನು ಮದುವೆ ಆಗ್ತೀನಿ ಎಂದ ತಾರಿಣಿ

ನಾನು ಧೀರಜ್‍ನನ್ನು ಮದುವೆ ಆಗ್ತೀನಿ ಎಂದ ತಾರಿಣಿ

ಧೀರಜ್ ನನ್ನು ಮದುವೆ ಆಗೋದೇ ನಿನ್ನ ಕೊನೆಯ ನಿರ್ಧಾರಾನಾ ಎಂದು ಸಿದ್ಧಾಂತ್ ಕೇಳುತ್ತಾನೆ. ತಾರಿಣಿ ಹೌದು ಎನ್ನುತ್ತಾಳೆ. ಅದಕ್ಕೆ ಸಿದ್ಧಾಂತ್ ಬೇಸರ ಮಾಡಿಕೊಂಡು ಕಣ್ಣೀರು ಹಾಕಿದ್ದಾನೆ.

 • News18 Kannada
 • Last Updated :
 • Karnataka, India
 • Share this:

  ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada), ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಬಗ್ಗೆಯ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ತಾರಿಣಿಗೆ ಸಿದ್ಧಾಂತ್ ಮೇಲೆ ಪ್ರೀತಿ ಇದೆ. ಇನ್ನು ತಾರಿಣಿ ಮನೆಯವರ ಮುಂದೆ, ಸಿದ್ಧಾಂತ್-ತಾರಿಣಿ ಸುಳ್ಳು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮನೆಯವರು ನಂಬಿ ಮದುವೆ ತಯಾರಿಯಲ್ಲಿದ್ದರು. ಆಗಲೇ ತಾರಿಣಿ ಮದುವೆ ಬೇಡ ಎಂದಿದ್ದಾಳೆ. ಸಿದ್ಧಾಂತ್ ಗೆ ಈಗ ತಾರಿಣಿ ಮೇಲೆ ತನಗೆ ಪ್ರೀತಿ ಇದೆ ಎಂದು ಗೊತ್ತಾಗಿದೆ. ಆದ್ರೆ ತಾರಿಣಿ ತಾನು ಧೀರಜ್ ನನ್ನು ಮದುವೆ (Marriage) ಆಗ್ತೀನಿ ಎಂದು ಸಿದ್ದು ಬಳಿ ಹೇಳಿದ್ದಾಳೆ. ಅದನ್ನು ಕೇಳಿ ಅವನು ಕಣ್ಣೀರು (Tears) ಹಾಕಿದ್ದಾನೆ.


  ಮದುವೆ ಬೇಡ ಎಂದ ತಾರಿಣಿ


  ತಾರಿಣಿ ಮನೆಯಲ್ಲಿ ಮದುವೆ ಬೇಡ ಎಂದಿದ್ದಾಳೆ. ಮನೆಯವರು ಯಾಕೆ ಎಂದು ತಿಳಿಯದೇ ಬೇಸರ ಮಾಡಿಕೊಂಡಿದ್ದಾರೆ. ಅದಕ್ಕೆ ಪಾಲಾಕ್ಷ, ನಮ್ಮ ಪಾಪುಗೆ ಮದುವೆ ಇಷ್ಟ ಇಲ್ಲ. ನೀನು ಆದಷ್ಟು ಬೇಗ ಮನೆಯಿಂದ ಹೊರಡು. ಅವಳ ನಿರ್ಧಾರವೇ ಅಂತಿಮ. ಅವಳ ಇಷ್ಟಕ್ಕೆ ವಿರುದ್ಧ ಈ ಮನೆಯಲ್ಲಿ ಏನೂ ನಡೆಯುವುದಿಲ್ಲ ಎಂದು ಸಿದ್ಧಾಂತ್ ಗೆ ಹೇಳುತ್ತಾನೆ.


  ತಾರಿಣಿ ಅಂದ್ರೆ ಇಷ್ಟ


  ತಾರಿಣಿ ಮಾವ ಪಾಲಾಕ್ಷ ಈ ಮದುವೆ ನಡೆಯಲ್ಲ ಎಂದು ಹೇಳುತ್ತಿರುವಗಲೇ, ಸಿದ್ಧಾಂತ್ ಆ ರೀತಿ ಮಾಡಬೇಡಿ. ನನಗೆ ತಾರಿಣಿಯನ್ನು ಕಂಡ್ರೆ ತುಂಬಾ ಇಷ್ಟ ಎಂದು ಮನೆಯವರು ಮುಂದೆ ಹೇಳಿದ್ದಾನೆ. ಅಲ್ಲೇ ಇದ್ದ ತಾರಿಣಿ ಕೂಡ ಶಾಕ್ ಆಗಿದ್ದಾಳೆ. ಅದಕ್ಕೆ ಸಿದ್ದು ಅವಳ ಕಡೆ ತಿರುಗಿ ಹೌದು ಎಂದಿದ್ದಾನೆ. ಆದ್ರೆ ತಾರಿಣಿ ಮನಸ್ಸು ಕರಗಿಲ್ಲ.


  ಇದನ್ನೂ ಓದಿ: BBK Season 09: ಪ್ರಶಾಂತ್ ಸಂಬರ್ಗಿ ವಿರುದ್ಧ ಕನ್ನಡ ಹೋರಾಟಗಾರರ ಪ್ರತಿಭಟನೆ! 


  ಧೀರಜ್‍ನನ್ನು ಮದುವೆ ಆಗ್ತಾಳಂತೆ


  ಸಿದ್ಧಾಂತ್ ತಾರಿಣಿ ಇಷ್ಟ ಅಂದ ಮೇಲೂ ಯಾಕೋ ತಾರಿಣಿ ಮನಸ್ಸು ಕರಗಿಲ್ಲ. ಸಿದ್ಧಾಂತ್, ನಾನು ಧೀರಜ್‍ನನ್ನು ಮದುವೆ ಆಗುವುದಾಗಿ ತೀರ್ಮಾನ ಮಾಡಿದ್ದೇನೆ ಎಂದು ಹೇಳ್ತಾಳೆ. ಅದನ್ನು ಕೇಳಿ ಸಿದ್ದು ಶಾಕ್ ಆಗಿದ್ದಾನೆ. ಏನ್ ಹೇಳ್ತಾ ಇದೀಯಾ ತಾರಿಣಿ ನೀನು ಅವನ್ನು ಮದುವೆ ಆಗೋದಾ? ಅವನ ಬಗ್ಗೆ ಗೊತ್ತು ತಾನೆ. ಅವನು ಕೆಟ್ಟವನು. ಅವನನ್ನು ಮದುವೆ ಆದ್ರೆ ನೀನು ಖುಷಿಯಾಗಿರಲ್ಲ ಎಂದು ಹೇಳ್ತಾನೆ. ಆದ್ರೂ ತಾರಿಣಿ ಕೇಳಲ್ಲ.


  colors kannada serial, kannada serial, olavina nildana serial, olavina nildana serial today episode, tharini reject siddhanth love, ಒಲವಿನ ನಿಲ್ದಾಣ ಧಾರಾವಾಹಿ, ನಾನು ಧೀರಜ್‍ನನ್ನು ಮದುವೆ ಆಗ್ತೀನಿ ಎಂದ ತಾರಿಣಿ, ಸಿದ್ಧಾಂತ್ ಕಣ್ಣೀರು, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ಧೀರಜ್‍


  ಸಿದ್ಧಾಂತ್ ಕಣ್ಣೀರು
  ತಾರಿಣಿ ಇಷ್ಟು ದಿನ ಸಿದ್ಧಾಂತ್ ಪ್ರೀತಿ ಮಾಡಲಿ ಎಂದು ಕಾಯುತ್ತಿದ್ದಳು. ಈಗ ಸಿದ್ಧಾಂತ್ ನೀನು ಇಷ್ಟ ಎಂದು ಹೇಳಿದ್ರೂ ಸುಮ್ಮನೇ ಇದ್ದಾಳೆ. ಧೀರಜ್ ನನ್ನು ಮದುವೆ ಆಗೋದೇ ನಿನ್ನ ಕೊನೆಯ ನಿರ್ಧಾರಾನಾ ಎಂದು ಸಿದ್ಧಾಂತ್ ಕೇಳುತ್ತಾನೆ. ತಾರಿಣಿ ಹೌದು ಎನ್ನುತ್ತಾಳೆ. ಅದಕ್ಕೆ ಸಿದ್ಧಾಂತ್ ಬೇಸರ ಮಾಡಿಕೊಂಡು ಕಣ್ಣೀರು ಹಾಕಿದ್ದಾನೆ. ತಾರಿಣಿ ತನಗೆ ಸಿಗಲ್ಲ ಎಂಬ ನೋವಿನಲ್ಲಿದ್ದಾನೆ.


  ಇದನ್ನೂ ಓದಿ: Lakshana: ವೈಷ್ಣವಿ ವಿಲನ್ ಅಲ್ಲ, ಭೂಪತಿ ಬೆಸ್ಟ್ ಫ್ರೆಂಡ್! ನಾಟಕ ಮಾಡಿ ಮನೆ ಮಂದಿಗೆಲ್ಲಾ ಶಾಕ್ 


  ಪಾಲಾಕ್ಷ ಮತ್ತು ಸುಮತಿ ಪ್ಲ್ಯಾನ್
  ಇದೆಲ್ಲಾ ಪಾಲಾಕ್ಷ ಮತ್ತು ಸುಮತಿ ಪ್ಲ್ಯಾನ್. ಇಬ್ಬರು ಸಿದ್ಧಾಂತ್ ನನ್ನು ಮದುವೆ ಆಗುವುದು ಬೇಡ. ಧೀರಜ್ ನನ್ನು ಮದುವೆ ಆಗು ಎಂದು ಹೇಳಿದ್ದಾರೆ. ಅದಕ್ಕೆ ಆಕೆ ಸಹ ಒಪ್ಪಿಗೆ ಸೂಚಿಸಿದ್ದಾಳೆ. ಮತ್ತೆ ನಾನು ಮನೆಯವರಿಗೆ ನೋವು ಮಾಡಬಾರದು ಎಂದು ಈ ನಿರ್ಧಾರ ತೆಗೆದುಕೊಂಡಿದ್ದಾಳೆ.


  colors kannada serial, kannada serial, olavina nildana serial, olavina nildana serial today episode, tharini reject siddhanth love, ಒಲವಿನ ನಿಲ್ದಾಣ ಧಾರಾವಾಹಿ, ನಾನು ಧೀರಜ್‍ನನ್ನು ಮದುವೆ ಆಗ್ತೀನಿ ಎಂದ ತಾರಿಣಿ, ಸಿದ್ಧಾಂತ್ ಕಣ್ಣೀರು, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ಪಾಲಾಕ್ಷ


  ತಾರಿಣಿ ಸಿದ್ಧಾಂತ್ ನನ್ನು ಮರೆಯುತ್ತಾಳಾ? ಧೀರಜ್ ಜೊತೆ ನಿಜವಾಗ್ಲೂ ಮದುವೆ ಆಗ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.

  Published by:Savitha Savitha
  First published: