ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ನಟಿ ತಾರಿಣಿಯನ್ನು ಮೊದಲು ಸಿದ್ಧಾಂತ್ ಇಷ್ಟ ಪಡ್ತಿದ್ದ. ತಾರಿಣಿ ಸಹ ಇಷ್ಟ ಪಡುತ್ತಿದ್ದಳು. ಆದ್ರೆ ಇಬ್ಬರ ಮನೆಯವರ ಮುನಿಸು ಇವರ ಪ್ರೀತಿಯನ್ನು ದೂರ ಮಾಡಿದೆ. ತಾರಿಣಿಗೆ ಧೀರಜ್ ಜೊತೆ ಮದುವೆ (Marriage) ಫಿಕ್ಸ್ ಆಗಿದೆ. ಆದ್ರೆ ತಾರಿಣಿ ಸಿದ್ಧಾಂತ್‍ನನ್ನು ಪ್ರೀತಿ (Love) ಮಾಡ್ತಾ ಇದ್ದು, ಆ ವಿಷ್ಯವನ್ನು ಹೇಳಿಕೊಳ್ಳಬೇಕು ಎಂದುಕೊಂಡಿದ್ದಾಳೆ.
ಸಿದ್ಧಾಂತ್‍ನನ್ನು ಪ್ರೀತಿ ಮಾಡ್ತಿದ್ದ ತಾರಿಣಿ
ತಾರಿಣಿ ಈ ಧಾರಾವಾಹಿ ಶುರುವಾದಾಗಿನಿಂದ ಸಿದ್ಧಾಂತ್‍ನ್ನು ಪ್ರೀತಿ ಮಾಡ್ತಾ ಇದ್ಲು. ತಾರಿಣಿ ಮನೆಯಲ್ಲೂ ಒಪ್ಪಿದ್ರು. ಆದ್ರೆ ಆಗ ಸಿದ್ದುಗೆ ಇವಳ ಮೇಲೆ ಪ್ರೀತಿ ಇರಲಿಲ್ಲ. ಅದಕ್ಕೆ ಅವನ ಬೇಡ ಎನ್ನುತ್ತಾನೆ. ತಾರಿಣಿಯೂ ಸುಮ್ಮನಾಗ್ತಾಳೆ. ಆದ್ರೆ ನಂತರ ಸಿದ್ಧಾಂತ್‍ಗೆ ಪ್ರೀತಿ ಹುಟ್ಟುತ್ತೆ. ಆಗ ತಾರಿಣಿ ಬೇಡ ಎನ್ನುತ್ತಾಳೆ. ಇಬ್ಬರು ಗೊಂದಲದಲ್ಲಿದ್ರು.
ಸಿದ್ಧಾಂತ್‍ಗೆ ಕುಟುಂಬದ ಜವಾಬ್ದಾರಿ
ಸಿದ್ದು ಅಪ್ಪ ತುಂಬಾ ಸಾಲ ಮಾಡಿ, ಕಷ್ಟ ಸ್ಥಿತಿಯಲ್ಲಿದ್ದಾರೆ. ಸಿದ್ದು ಅಮ್ಮ ಕೆಲಸ ಮಾಡಿ, ಮನೆ ನೋಡಿಕೊಳ್ತಾ ಇದ್ದಾಳೆ. ಅದಕ್ಕೆ ಸಿದ್ದು ಚೆನ್ನಾಗಿ ಓದಿ ಕೆಲಸ ತೆಗೆದುಕೊಂಡು ಮನೆ ನೋಡಿಕೊಳ್ಳಬೇಕಿದೆ. ಅಂತೆಯೇ ಸಿದ್ದು ಚೆನ್ನಾಗಿ ಓದಿ, ಜಾಬ್ ತೆಗೆದುಕೊಂಡಿದ್ದಾನೆ. ಮನೆಯ ಸಂಪೂರ್ಣ ಜವಾಬ್ದಾರಿ ಹೊರಬೇಕಿದೆ. ಅದಕ್ಕೆ ಅವನು ಸಿದ್ಧವಾಗಿದ್ದಾನೆ.
ವಿದೇಶಕ್ಕೆ ಹೊರಡಲು ಸಿದ್ಧ
ಸಿದ್ಧಾಂತ್‍ಗೆ ಆಸ್ಟ್ರೇಲಿಯಾದಲ್ಲಿ ಜಾಬ್ ಸಿಕ್ಕಿದೆ. 4 ಲಕ್ಷ ಸಂಬಳ. ಅದಕ್ಕೆ ತುಂಬಾ ಖುಷಿಯಾಗಿದ್ದಾನೆ. ಮನೆಯವರು ಅಷ್ಟೇ ಖುಷಿಯಾಗಿದ್ದಾರೆ. ಇನ್ಮುಂದೆ ನಮ್ಮ ಕಷ್ಟ ಎಲ್ಲಾ ತೀರಿತು. ನಾವು ಖುಷಿಯಾಗಿರಬಹುದು ಎಂದುಕೊಂಡಿದ್ದಾರೆ. ಈ ಸಂತೋಷದ ವಿಚಾರವನ್ನು ಸಿದ್ದು ತಾರಿಗೆ ಹೇಳಬೇಕು ಎಂದು ಕಾಲ್ ಮಾಡಿದ್ದಾನೆ.
ಸಿದ್ಧಾಂತ್‍ನನ್ನು ಭೇಟಿ ಆಗು ಎಂದ ತಾರಿಣಿ
ತಾರಿಣಿಗೆ ಧೀರಜ್ ಮತ್ತು ಸಿದ್ಧಾಂತ್ ಇಬ್ಬರಲ್ಲಿ ಯಾರ ಬೆಸ್ಟ್ ಎಂದು ಟೆಸ್ಟ್ ಮಾಡಿದ್ದಾಳೆ. ಎಲ್ಲಾ ವಿಚಾರದಲ್ಲೂ ತಾರಿಣಿಗೆ ಧೀರಜ್ ಬೆಸ್ಟ್ ಎಂದು ಗೊತ್ತಾಗಿದೆ. ಅದಕ್ಕೆ ತಾರಿಣಿ ತನ್ನ ಪ್ರೀತಿ ವಿಚಾರ ಹೇಳಿಕೊಳ್ಳಬೇಕು ಎಂದುಕೊಂಡಿದ್ದಾಳೆ. ಅದಕ್ಕೆ ಫೋನ್ ಮಾಡಿ ಸಿದ್ಧಾಂತ್‍ನನ್ನು ಭೇಟಿಯಾಗಲು ಕರೆದಿದ್ದಾಳೆ. ಅದಕ್ಕೆ ಸಿದ್ದು ಸಹ ಒಪ್ಪಿದ್ದಾನೆ.
ಪ್ರೀತಿ ಹೇಳಿಕೊಳ್ತಾಳಾ ತಾರಿಣಿ?
ಸಿದ್ಧಾಂತ್ ತನಗೆ ಜಾಬ್ ಸಿಕ್ಕ ವಿಚಾರವನ್ನು ತಾರಿಣಿ ಬಳಿ ಹೇಳಿಕೊಳ್ಳಬೇಕು. ಆಕೆ ಖುಷಿಯಾಗ್ತಾಳೆ ಎಂದು ಬಂದಿದ್ದಾನೆ. ಆದ್ರೆ ತಾರಿಣಿ ಮಾತ್ರ ತನ್ನ ಪ್ರೀತಿ ಹೇಳಿಕೊಳ್ಳಬೇಕು. ಮದುವೆ ಆಗ್ತೀರಾ ಎಂದು ಕೇಳಬೇಕು ಎಂದು ಬಂದಿದ್ದಾಳೆ. ಈಗ ಇಬ್ಬರಲ್ಲಿ ಯಾರು ಮೊದಲು ತಮ್ಮ ವಿಚಾರವನ್ನು ಹೇಳಿಕೊಳ್ತಾರೆ ಅನ್ನೋದೇ ಕುತುಹಲ.
ಅಲ್ಲದೇ ಸಿದ್ದು ಜಾಬ್ ವಿಚಾರ ಹೇಳಿದ್ರೆ, ತಾರಿಣಿ ತನ್ನ ಪ್ರೀತಿ ವಿಷ್ಯವನ್ನು ಮುಚ್ಚಿಡಬಹುದು. ತಾರಿಣಿ ಮೊದಲು ಪ್ರೀತಿ ವಿಚಾರ ಹೇಳಿದ್ರೆ, ಸಿದ್ದು ಒಪ್ಪಿಕೊಳ್ತಾನಾ ನೋಡಬೇಕು.
ಇದನ್ನೂ ಓದಿ: Actress Shriya Saran: ಸೀರೆಯಲ್ಲಿ ಕಬ್ಜ ಬೆಡಗಿ, ಗ್ಲಾಮರಸ್ ಫೋಟೋ ಶೇರ್ ಮಾಡಿದ ನಟಿ ಶ್ರಿಯಾ ಶರಣ್!
ಬದುಕು ಕಟ್ಟಿಕೊಳ್ಳುವ ನಿರ್ಧಾರದಲ್ಲಿ ಸಿದ್ಧಾಂತ್, ಪ್ರೀತಿ ಹೇಳಿಕೊಳ್ಳುವ ತವಕದಲ್ಲಿ ತಾರಿಣಿ. ಇಬ್ಬರು ಬಾಳಿನಲ್ಲೂ ಮುಖ್ಯ ಹಂತದ ಘಟ್ಟ, ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ