ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ ( Olavina Nildana) ಧಾರಾವಾಹಿ (Serial) ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ನಟಿ ತಾರಿಣಿಯನ್ನು ಮೊದಲು ಸಿದ್ಧಾಂತ್ ಇಷ್ಟ ಪಡ್ತಿದ್ದ. ತಾರಿಣಿ ಸಹ ಇಷ್ಟ ಪಡುತ್ತಿದ್ದಳು. ಆದ್ರೆ ಇಬ್ಬರ ಮನೆಯವರ ಮುನಿಸು ಇವರ ಪ್ರೀತಿಯನ್ನು ದೂರ ಮಾಡಿದೆ. ತಾರಿಣಿ ಮನೆಯವರು ಸಿದ್ದು ಜೊತೆ ಮಾತನಾಡದಂತೆ ತಾಕೀತು ಮಾಡಿದ್ದಾರೆ. ತಾರಿಣಿ ಮನಸ್ಸಿನಲ್ಲಿ ಇಲ್ಲ ಸಲ್ಲದ ತಪ್ಪಿತಸ್ಥ ಭಾವನೆ ಮೂಡಿಸುತ್ತಿದ್ದಾರೆ. ಸಿದ್ಧಾಂತ್ ತಾರಿಣಿಯನ್ನು ಸಂಪೂರ್ಣವಾಗಿ ಮರೆಯುತ್ತಾನಂತೆ. ಇತ್ತ ಸಿದ್ಧಾಂತ್ ಅಪ್ಪ (Father) ಮಾಡಿದ ಸಾಲದಿಂದ ಮನೆ ಹರಾಜಿಗೆ ಬಂದಿತ್ತು. ತಾರಿಣಿ ದುಡ್ಡು (Money) ಕೊಟ್ಟು ಸಹಾಯ ಮಾಡಿದ್ದಾಳೆ. ಅದರಿಂದ ಸಿದ್ದುಗೆ ಅವಮಾನ ಆಗಿದೆ.
ಬ್ಯಾಂಕ್‍ನಿಂದ ಸಾಲ
ಸಿದ್ಧಾಂತ್ ಅಪ್ಪ ಮನೆ ಮೇಲೆ ಬ್ಯಾಂಕ್‍ನಲ್ಲಿ ತುಂಬಾ ಸಾಲ ಮಾಡಿರುತ್ತಾರೆ. ಅದರ ಬಡ್ಡಿಯನ್ನು ಸಹ ಬ್ಯಾಂಕ್ ಗೆ ಕಟ್ಟಿರಲ್ಲ. ಅದಕ್ಕೆ ಬ್ಯಾಂಕ್ ನವರು ಮನೆಗೆ ಬಂದು ನೋಟಿಸ್ ಕೊಟ್ಟಿದ್ದಾರೆ. ಅಲ್ಲದೇ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿ ಹೋಗಿರುತ್ತಾರೆ. 40 ಲಕ್ಷ ಕಟ್ಟಿಲ್ಲ ಅಂದ್ರೆ ಮನೆ ಹರಾಜು ಹಾಕುವುದಾಗಿ ಹೇಳಿದ್ದರು. ಸಿದ್ದು ಅಪ್ಪ ಅನಂತಕೃಷ್ಣಾಗೆ ತಾರಿಣಿ ಸಹಾಯ ಮಾಡಿರುತ್ತಾಳೆ. ಅದರಿಂದ ಸಿದ್ದು ಮನೆ ಉಳಿದಿರುತ್ತೆ.
ತಾರಿಣಿ ಅಮ್ಮ ಉಮಾ ಕೋಪ
ತಾರಿಣಿ ತನ್ನ ತಂದೆ ದುಡ್ಡು ಕೊಟ್ಟರು ಎಂದು ಅನಂತಕೃಷ್ಣ ಬಳಿ ಹೇಳಿರುತ್ತಾಳೆ. ಆ ವಿಷ್ಯ ತಾರಿಣಿ ಅಮ್ಮ ಉಮಾನಿಗೆ ಗೊತ್ತಾಗಿ, ತಾರಿಣಿಗೆ ಬೈಯುತ್ತಾಳೆ. ಯಾಕೆ ನೀನು ಅವರಿಗೆ ಸಹಾಯ ಮಾಡ್ತೀಯಾ? ನಿನಗೆ ಇನ್ನೂ ಅವನ ಮೇಲೆ ಪ್ರೀತಿ ಹೋಗಿಲ್ವಾ ಎಂದೆಲ್ಲಾ ಪ್ರಶ್ನೆ ಮಾಡ್ತಾಳೆ. ತಾರಿಣಿ ಏನೇ ಹೇಳಿದ್ರೂ ಉಮಾ ಕೇಳ್ತಾ ಇಲ್ಲ. ನೀನು ಮಾಡಿದ್ದು ತಪ್ಪು ಎಂದು ಹೇಳ್ತಾ ಇದ್ದಾಳೆ.
ಸಿದ್ದು ಪ್ರಶ್ನೆ ಮಾಡಿದ ಉಮಾ
ನಾವು, ನಮ್ಮ ಮಗಳ ಸಹವಾಸಕ್ಕೆ ಬರಬೇಡ ಅಂತ ಎಷ್ಟು ಸಲು ಹೇಳಿದ್ದೀವಿ. ಮತ್ತೆ ನಾಚಿಕೆ ಇಲ್ಲದೇ ನನ್ನ ಮಗಳ ಬಳಿ ದುಡ್ಡು ಪಡೆದು ಮನೆ ಬಿಡಿಸಿಕೊಂಡ್ರಾ ಎಂದು ಅವಮಾನ ಮಾಡ್ತಾಳೆ. ತಾರಿಣಿ ಸಹಾಯ ಮಾಡಿದ್ದು ಸಿದ್ದುಗೆ ಗೊತ್ತಿಲ್ಲ. ಅದಕ್ಕೆ ಸರಿಯಾಗಿ ಮಾತನಾಡಿ ಈ ದುಡ್ಡನ್ನು ನಮ್ಮ ಅಪ್ಪ ಜೋಡಿಸಿದ್ದು ಎಂದು ಹೇಳ್ತಾನೆ. ನಿಮ್ಮ ಅಪ್ಪನನ್ನು ಕರೆಸು ಎಂದು ಉಮಾ ಹೇಳ್ತಾಳೆ.
ದುಡ್ಡು ಕೊಟ್ಟಿದ್ದು ತಾರಿಣಿ ಎಂದು ಅನಂತಕೃಷ್ಣ
ಸಿದ್ದು ನನಗೆ 40 ಲಕ್ಷದ ಚೆಕ್ ಕೊಟ್ಟಿದ್ದು ನಮ್ಮ ಮೇಡಂ ಅಲ್ಲ, ತಾರಿಣಿ. ಬೇರೆ ಎಲ್ಲೂ ದುಡ್ಡು ಸಿಗಲಿಲ್ಲ. ನನಗೆ ಬೇರೆ ದಾರಿ ಇರಲಿಲ್ಲ. ತಾರಿಣಿ ಬಂದು ಬಲವಂತವಾಗಿ ದುಡ್ಡು ತೆಗೆದುಕೊಳ್ಳುವಂತೆ ಹೇಳಿದ್ಲು.
ನಿಮ್ಮ ಅಮ್ಮನಿಗೆ ಕೊಟ್ಟ ನೋವು, ಮನೆಯವರಿಗೆ ಆದ ಅವಮಾನದಿಂದ, ತಾರಿಣಿ ದುಡ್ಡು ಕೊಟ್ಟಾಗ ತೆಗೆದುಕೊಳ್ಳಲೇಬೇಕಾದ ಅನಿವಾರ್ಯ ಬಂತು, ನಿನಗೆ ಗೊತ್ತಾದ್ರೆ ಸಿಟ್ಟು ಮಾಡಿಕೊಳ್ತೀಯಾ ಅಂತ ಸುಳ್ಳು ಹೇಳಿದೆ ಎಂದು ಅನಂತ್ ಕೃಷ್ಣ ಹೇಳ್ತಾರೆ.
ತಪ್ಪು ಮಾಡಿದ ಅಪ್ಪ
ಇಷ್ಟು ಸಾಕಾ ಸಿದ್ಧಾಂತ್ ಇನ್ನೂ ಏನಾದ್ರೂ ಸಾಕ್ಷಿ ಬೇಕಾ ಎಂದು ಉಮಾ ಪ್ರಶ್ನೆ ಮಾಡ್ತಾಳೆ. ನಿಮ್ಮ ನಟನೆ ಸಾಕು, ಇಲ್ಲಿ ಯಾರೂ ಚಪ್ಪಾಳೆ ತಟ್ಟೋರಿಲ್ಲ ಉತ್ತರ ಹೇಳಿ ಎಂದು ಉಮಾ ಹೇಳ್ತಾಳೆ. ಅದಕ್ಕೆ ಸಿದ್ದು, ಅಪ್ಪ ತುಂಬಾ ದೊಡ್ಡ ತಪ್ಪು ಮಾಡಿದ್ರಿ. ಅವತ್ತು ನಮ್ಮ ಮನೆ ಕಳೆದುಕೊಂಡ್ರು ಪರವಾಗಿಲ್ಲ ಎಂದು ಹೇಳಿ ಬಂದಿದ್ದೆ. ಇವಳ ಹತ್ರ ಯಾಕ್ ದುಡ್ಡು ತೆಗೆದುಕೊಂಡೆ ಎಂದು ಪ್ರಶ್ನೆ ಮಾಡಿದ್ದಾನೆ.
ಇದನ್ನೂ ಓದಿ: Anupama Gowda: ಅನುಪಮಾ ಗೌಡ ಮನೇಲಿ ಎಷ್ಟು ನಾಯಿಮರಿಗಳಿವೆ? ನೀವೇ ನೋಡಿ
ಉಮಾ ದುಡ್ಡು ವಾಪಸ್ ಕೇಳ್ತಾಳಾ? ಸಿದ್ದು ಮತ್ತೆ 40 ಲಕ್ಷ ಎಲ್ಲಿಂದ ಜೋಡಿಸುತ್ತಾನೆ? ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ