• Home
 • »
 • News
 • »
 • entertainment
 • »
 • Olavina Nildana: ತನ್ನ ಮಗಳ ತಂಟೆಗೆ ಬಾರದಂತೆ ವಾರ್ನಿಂಗ್ ಕೊಟ್ಟ ತಾರಿಣಿ ಅಮ್ಮ, ಸಿದ್ದು ಅಮ್ಮ ಕೆಂಡಾಮಂಡಲ!

Olavina Nildana: ತನ್ನ ಮಗಳ ತಂಟೆಗೆ ಬಾರದಂತೆ ವಾರ್ನಿಂಗ್ ಕೊಟ್ಟ ತಾರಿಣಿ ಅಮ್ಮ, ಸಿದ್ದು ಅಮ್ಮ ಕೆಂಡಾಮಂಡಲ!

ವಾರ್ನಿಂಗ್ ಕೊಟ್ಟ ತಾರಿಣಿ ಅಮ್ಮ

ವಾರ್ನಿಂಗ್ ಕೊಟ್ಟ ತಾರಿಣಿ ಅಮ್ಮ

ನಿಮ್ಮ ಪೌರುಷನಾ ನನ್ನ ತಮ್ಮನ ಮುಂದೆ ತೋರಿಸುತ್ತಿದ್ದೀರಾ? ನಮ್ಮ ಕಡೆ ತಲೆನೂ ಹಾಕಬೇಡಿ. ನಿಮ್ಮ ಪಾಡಿಗೆ ನೀವು ಇದ್ರೆ ಸರಿ ಸುಮ್ಮನೇ ನಮ್ಮ ತಂಟೆಗೆ ಬಂದ್ರೆ ದೂರು ನೀಡುತ್ತೇವೆ ಎಂದು ಎಚ್ಚರಿಸಿದ್ದಾರೆ.

 • News18 Kannada
 • Last Updated :
 • Karnataka, India
 • Share this:

  ಎಲ್ಲೂ ಸ್ಟಾಪ್ ಆಗದೇ ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 6 ಗಂಟೆಗೆ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಓಡ್ತಾ ಇದೆ. ಜನರ ಮನಸ್ಸನ್ನು ಗೆದ್ದಿದೆ.ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ತಾರಿಣಿ ಪ್ರೀತಿಯನ್ನು ಮೊದಲೇ ಅರ್ಥ ಮಾಡಿಕೊಳ್ಳದ ಸಿದ್ಧಾಂತ್, ಈಗ ಆಕೆಯ ಪ್ರೀತಿ ಪಡೆಯಲು ಒದ್ದಾಡುತ್ತಿದ್ದಾನೆ. ಆದ್ರೆ ತಾರಿಣಿ ಮನೆಯವರು ಸಿದ್ದು ಜೊತೆ ಮಾತನಾಡದಂತೆ ತಾರಿಣಿಗೆ ತಾಕೀತು ಮಾಡಿದ್ದಾರೆ. ತಾರಿಣಿ ಮನಸ್ಸಿನಲ್ಲಿ ಇಲ್ಲ ಸಲ್ಲದ ತಪಿತಸ್ಥ ಭಾವನೆ ಮೂಡಿಸುತ್ತಿದ್ದಾರೆ. ಅಲ್ಲದೇ ಸಿದ್ಧಾಂತ್ ತಾರಿಣಿ ಜೊತೆ ಮಾತನಾಡಲು ಪಾಲಾಕ್ಷನಿಗೆ ಹೊಡೆಇರುತ್ತಾನೆ. ಈ ವಿಷ್ಯ ತಾರಿಣಿ ಅಮ್ಮನಿಗೆ (Mother) ಗೊತ್ತಾಗಿ ಖಡಕ್ ವಾರ್ನಿಂಗ್ ಮಾಡಿದ್ದಾಳೆ. ಪೊಲೀಸರಿಗೆ ದೂರು (Police Complaint) ನೀಡುವುದಾಗಿ ಎಚ್ಚರಿಸಿದ್ದಾಳೆ.


  ತಾರಿಣಿ ಪ್ರೀತಿ ಪಡೆಯಲು ಸಿದ್ಧಾಂತ್ ಒದ್ದಾಟ
  ಮೊದಲು ಸಿದ್ಧಾಂತ್ ಮತ್ತು ತಾರಿಣಿ ಮಧ್ಯೆ ಸುಳ್ಳಿನ ನಿಶ್ಚಿತಾರ್ಥ ನಡೆದಿರುತ್ತೆ. ತಾರಿಣಿ ಮನೆಯವರು ಮದುವೆ ತನಕ ಬಂದಿರುತ್ತಾರೆ. ಆಗ ತಾರಿಣಿಗೆ ಮಾತ್ರ ಸಿದ್ಧಾಂತ್ ಮೇಲೆ ತುಂಬಾ ಪ್ರೀತಿ ಇರುತ್ತೆ. ಸಿದ್ದುಗೆ ಪ್ರೀತಿ ಇರುವುದಿಲ್ಲ. ಅದಕ್ಕೆ ತಾರಿಣಿ ಮನೆಯವರ ಬಳಿ ಹೇಳಿ ಮದುವೆ ಕ್ಯಾನ್ಸಲ್ ಮಾಡಿಸಿದ್ದಾಳೆ. ಆದ್ರೆ ಈಗ ಸಿದ್ದುಗೆ ತಾರಿಣಿ ಮೇಲೆ ಪ್ರೀತಿ ಆಗಿದೆ. ಆಕೆಯನ್ನು ಹೇಗಾದ್ರೂ ಒಪ್ಪಿಸಬೇಕು ಎಂದು ಒದ್ದಾಡುತ್ತಿದ್ದಾನೆ.


  ಸಿದ್ದು-ತಾರಿಣಿ ಮಧ್ಯೆ ಅಡ್ಡ ಗೋಡೆಯಾದ ಪಾಲಾಕ್ಷ
  ತಾರಿಣಿ ಮಾವ ಪಾಲಾಕ್ಷ. ಆತನಿಗೆ ತಾರಿಣಿ ಸಿದ್ದು ಜೊತೆ ಮದುವೆ ಆಗುವುದು ಇಷ್ಟ ಇಲ್ಲ. ತಾರಿಣಿ ಧೀರಜ್ ನನ್ನು ಮದುವೆ ಆಗಬೇಕು. ಅದಕ್ಕೆ ಈ ಕುತಂತ್ರ ಮಾಡುತ್ತಿದ್ದಾರೆ. ಸಿದ್ದು-ತಾರಿಣಿ ಎಲ್ಲೂ ಕೂಡ ಮಾತನಾಡಬಾರದು ಎಂದು ಆಕೆಯ ಜೊತೆಯೇ ಕಾಲೇಜಿಗೆ ಬರುತ್ತಿದ್ದಾರೆ. ತಾರಿಣಿ ಜೊತೆ ಮಾತನಾಡಲು ಪಾಲಾಖ್ಷನಿಗೆ ಹೊಡೆಸಿರುತ್ತಾನೆ.


  ಇದನ್ನೂ ಓದಿ: Kannadathi: ಅಮ್ಮಮ್ಮ ಬರೆದ ವಿಲ್ ಓದುವ ಸಮಯ ಬಂದೇ ಬಿಡ್ತು; ವರು, ಸಾನಿಯಾ ಮುಂದೇನು ಮಾಡ್ತಾರೆ?


  ಅನಂತ್ ಕೃಷ್ಣಾಗೆ ಕಾಲ್ ಮಾಡಿದ ತಾರಿಣಿ ಅಮ್ಮ
  ಸಿದ್ದು ಮನೆಯವರೆಲ್ಲಾ ಊಟ ಮಾಡುವಾಗ ತಾರಿಣಿ ಅಮ್ಮ ಕಾಲ್ ಮಾಡ್ತಾಳೆ. ಅದನ್ನು ಸಿದ್ದು ಅತ್ತಿಗೆ ಸಂಗೀತಾ ರಿಸೀವ್ ಮಾಡಿ  ಸ್ಪೀಕರ್ ಗೆ ಹಾಕ್ತಾಳೆ. ನಿಮ್ಮಿಂದ ತೊಂದ್ರೆ ಅನುಭವಿಸುತ್ತಿದ್ದೇವೆ. ಅಪ್ಪ- ಮಗ ನಿಮ್ಮನ್ನು ನೀವು ಏನ್ ಅಂದುಕೊಂಡಿದ್ದೀರಾ? ಇಷ್ಟು ವಯಸ್ಸಾಗಿದೆಯಲ್ಲಾ, ಮಾಡೋಕೆ ಬೇರೆ ಏನೂ ಕೆಲಸ ಇಲ್ವಾ? ನಿಮ್ಮ ಮಗನಿಗೆ ಬುದ್ದಿ ಹೇಳಿ ತಿದ್ದಬೇಕಾದವರು ನೀವು. ಅದು ಬಿಟ್ಟು ನೀವು ಅವನ ಜೊತೆ ಸೇರಿ ಆಟ ಆಡ್ತಾ ಇದೀರಾ?


  colors kannada serial, kannada serial, olavina nildana serial, tharini mother class to siddhant family, olavina nildana serial today episode, olavina nildana serial timing, ಒಲವಿನ ನಿಲ್ದಾಣ ಧಾರಾವಾಹಿ, ತನ್ನ ಮಗಳ ತಂಟೆಗೆ ಬಾರದಂತೆ ವಾರ್ನಿಂಗ್ ಕೊಟ್ಟ ತಾರಿಣಿ ಅಮ್ಮ, ಸಿದ್ದು ಅಮ್ಮ ಕೆಂಡಾಮಂಡಲ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ಸಿದ್ಧಾಂತ್


  ಸಿದ್ದು ಕುಟುಂಬಕ್ಕೆ ಕ್ಲಾಸ್
  ನಾನು ತಾರಿಣಿ ಅಮ್ಮ ಮಾತನಾಡುತ್ತಿದ್ದೇನೆ. ನನ್ನ ಮಗಳ ಜೀವನ ಹಾಳು ಮಾಡೋಕೆ ನೋಡಿದ್ರಿ, ಇಗ ನನ್ನ ತಮ್ಮನನ್ನು ಬಿಡಬಾರದು ಅಂದುಕೊಂಡಿದ್ದೀರಾ? ನಿಮ್ಮ ಮೇಲೆ ಅವತ್ತೇ ಪೊಲೀಸರಿಗೆ ದೂರ ಕೊಡಬೇಕಿತ್ತು. ಬಿಟ್ಟಿದ್ದೇ ತಪ್ಪಾಯ್ತು. ನಿಮ್ಮ ಪೌರುಷನಾ ನನ್ನ ತಮ್ಮನ ಮುಂದೆ ತೋರಿಸುತ್ತಿದ್ದೀರಾ? ನಮ್ಮ ಕಡೆ ತಲೆನೂ ಹಾಕಬೇಡಿ. ನಿಮ್ಮ ಪಾಡಿಗೆ ನೀವು ಇದ್ರೆ ಸರಿ ಸುಮ್ಮನೇ ನಮ್ಮ ತಂಟೆಗೆ ಬಂದ್ರೆ ದೂರು ನೀಡುತ್ತೇವೆ ಎಂದು ಎಚ್ಚರಿಸಿದ್ದಾರೆ.


  ಊಟದ ತಟ್ಟೆಯಲ್ಲೇ ಕೈ ತೊಳೆದು ಹೋದ ಸಿದ್ದು ಅಮ್ಮ
  ತಾರಿಣಿ ಅಮ್ಮ ಬೈದಿದ್ದನನ್ನು ಕೇಳಿದ ಸಿದ್ದು ಅಮ್ಮ ತುಂಬಾ ಬೇಸರದ ಜೊತೆ ಕೋಪವನ್ನೂ ಮಾಡಿಕೊಂಡಿದ್ದಾರೆ. ಯಾರ ಜೊತೆಯೂ ಮಾತನಾಡದೇ, ಊಟವನ್ನೂ ಮಾಡದೇ ತಟ್ಟೆಯಲ್ಲೇ ಕೈ ತೊಳೆದು ಹೋಗಿದ್ದಾಳೆ. ಅದನ್ನು ನೋಡಿ ಮನೆಯವರು ಗಾಬರಿ ಆಗಿದ್ದಾರೆ.


  colors kannada serial, kannada serial, olavina nildana serial, tharini mother class to siddhant family, olavina nildana serial today episode, olavina nildana serial timing, ಒಲವಿನ ನಿಲ್ದಾಣ ಧಾರಾವಾಹಿ, ತನ್ನ ಮಗಳ ತಂಟೆಗೆ ಬಾರದಂತೆ ವಾರ್ನಿಂಗ್ ಕೊಟ್ಟ ತಾರಿಣಿ ಅಮ್ಮ, ಸಿದ್ದು ಅಮ್ಮ ಕೆಂಡಾಮಂಡಲ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ಸಿದ್ದು ಅಮ್ಮ


  ಇದನ್ನೂ ಓದಿ: Actress Vijaya Lakshmi: ನಕ್ಷತ್ರಾಳ ನಿಜ ಜೀವನದ ಬಗ್ಗೆ ನಿಮಗೆ ಗೊತ್ತಾ? ಸಿಂಪಲ್ ಹುಡುಗಿ ಈ ಬೆಡಗಿ!  


  ಸಿದ್ದು-ತಾರಿಣಿ ಪ್ರೀತಿ ಕೊನೆಗೊಳ್ಳುತ್ತಾ? ಸಿದ್ದು ಅಮ್ಮನಿಗೆ ಎಲ್ಲ ಸತ್ಯ ಗೊತ್ತಾಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಸಿರೀಯಲ್ ನೋಡಬೇಕು.

  Published by:Savitha Savitha
  First published: