ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ನಟಿ ತಾರಿಣಿಯನ್ನು ಮೊದಲು ಸಿದ್ಧಾಂತ್ ಇಷ್ಟ ಪಡ್ತಿದ್ದ. ತಾರಿಣಿ ಸಹ ಇಷ್ಟ ಪಡುತ್ತಿದ್ದಳು. ಆದ್ರೆ ಇಬ್ಬರ ಮನೆಯವರ ಮುನಿಸು ಇವರ ಪ್ರೀತಿಯನ್ನು ದೂರ ಮಾಡಿದೆ. ತಾರಿಣಿಗೆ ಧೀರಜ್ ಜೊತೆ ಮದುವೆ ಫಿಕ್ಸ್ ಆಗಿದೆ. ಆದ್ರೆ ತಾರಿಣಿ ಸಿದ್ಧಾಂತ್ ನನ್ನು ಪ್ರೀತಿ (Love) ಮಾಡ್ತಾ ಇದ್ದಾಳೆ. ಆ ವಿಷ್ಯವನ್ನು ಹೇಳಿಕೊಳ್ಳಬೇಕು ಎಂದುಕೊಂಡಿದ್ದಳು. ಆದ್ರೆ ಹೇಳದೇ ಕಣ್ಣೀರು (Crying) ಹಾಕುತ್ತಾ ವಾಪಸ್ ಹೋಗಿದ್ದಾಳೆ.
ಪ್ರೀತಿ ಹೇಳಿಕೊಳ್ಳಲು ಬಂದಿದ್ದ ತಾರಿಣಿ
ತಾರಿಣಿಗೆ ಧೀರಜ್ ಮತ್ತು ಸಿದ್ಧಾಂತ್ ಇಬ್ಬರಲ್ಲಿ ಯಾರ ಬೆಸ್ಟ್ ಎಂದು ಟೆಸ್ಟ್ ಮಾಡಿದ್ದಾಳೆ. ಎಲ್ಲಾ ವಿಚಾರದಲ್ಲೂ ತಾರಿಣಿಗೆ ಧೀರಜ್ ಬೆಸ್ಟ್ ಎಂದು ಗೊತ್ತಾಗಿದೆ. ಅದಕ್ಕೆ ತಾರಿಣಿ ತನ್ನ ಪ್ರೀತಿ ವಿಚಾರ ಹೇಳಿಕೊಳ್ಳಬೇಕು ಎಂದುಕೊಂಡಿದ್ದಳು. ಅದಕ್ಕೆ ಫೆÇೀನ್ ಮಾಡಿ ಸಿದ್ಧಾಂತ್‍ನನ್ನು ಭೇಟಿಯಾಗಲು ಕರೆದಿದ್ದಳು. ಸಿದ್ದು ಸಹ ನಿನ್ನ ಜೊತೆ ಮಾತನಾಡಬೇಕು ಎಂದಿದ್ದ.
ಆಸ್ಟ್ರೇಲಿಯಾಗೆ ಹೊರಟ ಸಿದ್ಧಾಂತ್
ಸಿದ್ಧಾಂತ್‍ಗೆ ಆಸ್ಟ್ರೇಲಿಯಾದಲ್ಲಿ ಜಾಬ್ ಸಿಕ್ಕಿದೆ. 4 ಲಕ್ಷ ಸಂಬಳ. ಅದಕ್ಕೆ ತುಂಬಾ ಖುಷಿಯಾಗಿದ್ದಾನೆ. ಮನೆಯವರು ಅಷ್ಟೇ ಖುಷಿಯಾಗಿದ್ದಾರೆ. ಇನ್ಮುಂದೆ ನಮ್ಮ ಕಷ್ಟ ಎಲ್ಲಾ ತೀರಿತು. ನಾವು ಖುಷಿಯಾಗಿರಬಹುದು ಎಂದುಕೊಂಡಿದ್ದಾರೆ. ಈ ಸಂತೋಷದ ವಿಚಾರವನ್ನು ಸಿದ್ದು ತಾರಿಣಿಗೆ ಹೇಳಬೇಕು ಎಂದು ಸಿದ್ದು ಚಡಪಡಿಸುತ್ತಿದ್ದ.
4 ದಿನದಲ್ಲಿ ಎಲ್ಲವೂ ಬದಲಾಗುತ್ತೆ
ಸಿದ್ದು ತಾರಿಣಿಗೆ ಕೊಡೆಯನ್ನು ಗಿಫ್ಟ್ ಆಗಿ ನೀಡಿದ್ದಾನೆ. ಅಲ್ಲದೇ ತನ್ನ ಕೆಲಸದ ವಿಚಾರವನ್ನು ಹೇಳಿದ್ದಾನೆ. ಇನ್ನು 4 ದಿನದಲ್ಲಿ ನನ್ನ ಬದುಕು ಬದಲಾಗುತ್ತೆ ತಾರಿಣಿ. ನಾನು ಆಸ್ಟ್ರೇಲಿಯಾಗೆ ಹೋಗ್ತಾ ಇದ್ದೇನೆ. ನಮ್ಮ ಮನೆಯ ಕಷ್ಟ ತೀರುತ್ತೆ ಎಂದು ಹೇಳಿದ್ದಾನೆ. ಅದನ್ನು ಕೇಳಿ ತಾರಿಣಿಗೆ ಬರ ಸಿಡಿಲು ಬಡಿದಂತೆ ಆಗಿದೆ. ಸಿದ್ಧಾಂತ್ ನನಗೆ ಸಿಗಲ್ಲ ಎಂದು ಬೇಸರ ಮಾಡಿಕೊಂಡಿದ್ದಾಳೆ.
ಖುಷಿಯ ಕಣ್ಣೀರು
ನಿಮಗೆ ಒಳ್ಳೆ ಕೆಲಸ ಸಿಕ್ಕಿದೆ. ಒಳ್ಳೆ ಪ್ಯಾಕೇಜ್ ಸಿಕ್ಕಿದೆ. ಮನೆ ಕಷ್ಟ ಎಲ್ಲಾ ಬೇಗ ತೀರುತ್ತೆ. ನಿಮ್ಮ ತಂದೆ, ತಾಯಿ ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಪಡ್ತಾರೆ. ನನಗೆ ತುಂಬಾ ಖುಷಿ ಆಗ್ತಿದೆ ಸಿದ್ಧಾಂತ್. ಈ ಸ್ಟೇಜ್ ಗೆ ಬರಲು ನೀವು ಎಷ್ಟು ಕಷ್ಟ ಪಟ್ಟಿದ್ರಿ. ಕೊನೆಗೂ ನೀವು ಅದನ್ನು ಸಾಧಿಸಿದ್ರಿ ಎಂದು ಅಳುತ್ತಾ ಹೇಳಿದ್ದಾಳೆ. ಇದು ಖುಷಿಯ ಕಣ್ಣೀರು ಎಂದು ತಾರಿಣಿ ಹೇಳಿದ್ದಾಳೆ.
ತನ್ನ ಪ್ರೀತಿ ವಿಚಾರ ಮುಚ್ಚಿಟ್ಟ ತಾರಿಣಿ
ನಿಮ್ಮನ್ನು ನೋಡಬೇಕು, ಮಾತನಾಡಿಸಬೇಕು ಎಂದು ಮೀಟ್ ಆದೆ ಅಷ್ಟೇ, ತುಂಬಾ ಮುಖ್ಯವಾದ ವಿಚಾರ ಏನಿಲ್ಲ ಎಂದು ತಾರಿಣಿ ಸುಳ್ಳು ಹೇಳಿದ್ದಾಳೆ. ನಿಮಗೆ ಆಲ್ ದಿ ಬೆಸ್ಟ್. ನೀವೂ ಯಾವಗಲೂ ಬೆಸ್ಟೇ ಎಂದು ಹೇಳಿದ್ದಾಳೆ. ತನ್ನ ಮನಸ್ಸಿನ ಮಾತನ್ನು ಮುಚ್ಚಿಟ್ಟಿದ್ದಾಳೆ. ತಾರಿಣಿಯ ಪ್ರೀತಿ ಮನಸ್ಸಿನಲ್ಲಿ ಸಾಯುತ್ತಿದೆ. ಕಣ್ಣೀರು ಹಾಕುತ್ತಾ ಮಳೆಯಲ್ಲಿ ನಡೆದಿದ್ದಾಳೆ.
ಇದನ್ನೂ ಓದಿ: Weekend with Ramesh: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಗೆಸ್ಟ್ಗಳು ಇವರೇ!
ತಾರಿಣಿ ತನ್ನ ಪ್ರೀತಿ ಹೇಳಿಕೊಳ್ಳಲ್ವಾ? ಸಿದ್ಧಾಂತ್ ಗೆ ಆಕೆಯ ಪ್ರೀತಿ ಅರ್ಥ ಆಗಲ್ವಾ? ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೊಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ