ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ ( Olavina Nildana) ಧಾರಾವಾಹಿ (Serial) ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ನಟಿ ತಾರಿಣಿಯನ್ನು ಮೊದಲು ಸಿದ್ಧಾಂತ್ ಇಷ್ಟ ಪಡ್ತಿದ್ದ. ತಾರಿಣಿ ಸಹ ಇಷ್ಟ ಪಡುತ್ತಿದ್ದಳು. ಆದ್ರೆ ಇಬ್ಬರ ಮನೆಯವರ ಮುನಿಸು ಇವರ ಪ್ರೀತಿಯನ್ನು ದೂರ ಮಾಡಿದೆ. ತಾರಿಣಿ ಮನೆಯವರು ಸಿದ್ದು ಜೊತೆ ಮಾತನಾಡದಂತೆ ತಾಕೀತು ಮಾಡಿದ್ದಾರೆ. ತಾರಿಣಿ ಮನಸ್ಸಿನಲ್ಲಿ ಇಲ್ಲ ಸಲ್ಲದ ತಪಿತಸ್ಥ ಭಾವನೆ ಮೂಡಿಸುತ್ತಿದ್ದಾರೆ. ಸಿದ್ಧಾಂತ್ ತಾರಿಣಿಯನ್ನು ಸಂಪೂರ್ಣವಾಗಿ ಮರೆಯುತ್ತಾನಂತೆ. ಇತ್ತ ಸಿದ್ಧಾಂತ್ ಅಪ್ಪ ಮಾಡಿದ ಸಾಲದಿಂದ ಮನೆ ಹರಾಜಿಗೆ (Auction) ಬಂದಿತ್ತು. ತಾರಿಣಿ ದುಡ್ಡು ಕೊಟ್ಟು ಸಹಾಯ (Help) ಮಾಡಿದ್ದಾಳೆ.
ಮನೆ ಮುಂದೆ ಬ್ಯಾಂಕ್ ನೋಟಿಸ್
ಸಿದ್ಧಾಂತ್ ಅಪ್ಪ ಮನೆ ಮೇಲೆ ತುಂಬಾ ಸಾಲ ಮಾಡಿದ್ದಾರೆ. ಅದರ ಬಡ್ಡಿಯನ್ನು ಸಹ ಬ್ಯಾಂಕ್ ಗೆ ಕಟ್ಟಿಲ್ಲ. ಬ್ಯಾಂಕ್ ನವರು ಕಾಲ್ ಮಾಡಿದ್ರೆ ರಿಸೀವ್ ಸಹ ಮಾಡಿಲ್ಲ. ಅದಕ್ಕೆ ಬ್ಯಾಂಕ್ ನವರು ಮನೆಗೆ ಬಂದು ನೋಟಿಸ್ ಕೊಟ್ಟಿದ್ದಾರೆ. ಅಲ್ಲದೇ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿ ಹೋಗಿದ್ದಾರೆ. 40 ಲಕ್ಷ ಕಟ್ಟಿಲ್ಲ ಅಂದ್ರೆ ಮನೆ ಹರಾಜು ಹಾಕುವುದಾಗಿ ಹೇಳಿದ್ದರು.
ಧೀರಜ್ ಸಹಾಯ ಪಡೆದ ತಾರಿಣಿ
ತಾರಿಣಿಗೆ ಸಿದ್ದು ಕಷ್ಟದಲ್ಲಿರುವುದು ಗೊತ್ತಾಗುತ್ತೆ ಅದಕ್ಕೆ ಧೀರಜ್ ಬಳಿ ತನಗೆ 40 ಲಕ್ಷ ಬೇಕು ಕೊಡ್ತೀಯಾ ಎಂದು ಕೇಳಿದ್ದಾಳೆ. ಅದಕ್ಕೆ ಧೀರಜ್ ಓಕೆ ಎಂದು ಚೆಕ್ ಕೊಟ್ಟಿದ್ದಾನೆ. ನನಗೆ ನಿನ್ನ ಖುಷಿ ಮುಖ್ಯ ತಾರಿಣಿ. ನಿನಗಾಗಿ ಏನ್ ಬೇಕಾದ್ರೂ ಮಾಡ್ತೀನಿ ಎಂದು ಧೀರಜ್ ಹೇಳಿದ್ದಾನೆ. ತಾರಿಣಿಗೆ ಖುಷಿ ಆಗಿದೆ.
ತಾರಿಣಿಗೆ ಅವಮಾನ ಮಾಡಿದ ಸಿದ್ಧಾಂತ್
ತಾರಿಣಿ ಸಿದ್ಧಾಂತ್ ಬಳಿ ಚೆಕ್ ಕೊಟ್ಟಿದ್ದಾಳೆ. ಅದಕ್ಕೆ ಸಿದ್ದು ಕೋಪ ಮಾಡಿಕೊಂಡಿದ್ದಾನೆ. ನಿನ್ನ ಸಹಾಯ ಯಾರು ಕೇಳಿದ್ದು. ನೀನು ಕೊಡುವ ಭಿಕ್ಷೆ ನನಗೆ ಬೇಡ. ನಿನ್ನ ಋಣದಲ್ಲಿ ನಾನು ಇರಲ್ಲ. ದಯವಿಟ್ಟು ನನ್ನ ದಾರಿಗೆ ಅಡ್ಡ ಬರಬೇಡ ಎಂದು ತಾರಿಣಿಯನ್ನು ತಳ್ಳಿ ಹೋಗಿದ್ದಾನೆ. ಅದಕ್ಕೆ ತಾರಿಣಿಗೆ ಬೇಸರವಾಗಿದೆ.
ಸಿದ್ದು ಅಪ್ಪ ಅನಂತಕೃಷ್ಣಾಗೆ ಚೆಕ್ ಕೊಟ್ಟ ತಾರಿಣಿ
ಸಿದ್ದು ಚೆಕ್ ಪಡೆಯದಿದ್ದಕ್ಕೆ, ತಾರಿಣಿ ಸಿದ್ದು ಅಪ್ಪನಿಗೆ ಕಾಲ್ ಮಾಡಿ ಕರೆಸಿದ್ದಾಳೆ ಚೆಕ್ ಕೊಟ್ಟಿದ್ದಾಳೆ. ಇದನ್ನು ನನ್ನ ಅಪ್ಪ ಕೊಟ್ಟರು. ನೀವು ಮನೆ ಕಳೆದುಕೊಳ್ಳುವುದು ಬೇಡ ಎಂದು ಹೇಳಿದ್ರು ಎಂದು ಸುಳ್ಳು ಹೇಳಿದ್ದಾಳೆ. ಚೆಕ್ ತಗೊಂಡು ಹೋಗಿ ಬ್ಯಾಂಕ್ ಲೋನ್ ತೀರಿಸಿ, ಸಿದ್ಧಾಂತ್ ಗೆ ಕೊಡೋಕೆ ಹೋದೆ. ಅವರು ಬೈದರು. ನಾನು ಕೊಡೋ ದುಡ್ಡು ಭಿಕ್ಷೆ ಅಂತೆ. ತಗೊಳ್ಳಲ್ಲ ಎಂದು ಕಡ್ಡಿ ತುಂಡು ಮಾಡಿದ ಹಾಗೆ ಹೇಳಿಬಿಟ್ರು ಎಂದು ತಾರಿಣಿ ಹೇಳಿದ್ದಾಳೆ.
ಅನಂತಕೃಷ್ಣ ಒಪ್ಪಿಗೆ
ಇದರಿಂದ ನಿಮ್ಮ ಮನೆ ಬಿಡಿಸಿಕೊಳ್ಳಿ ಎಂದು ತಾರಿಣಿ ಹೇಳ್ತಾಳೆ. ನಿನ್ನದು ತುಂಬಾ ದೊಡ್ಡ ಮನಸ್ಸು. ನಿನ್ನ ಉಪಕಾರಕ್ಕೆ ಬೆಲೆ ಕಟ್ಟುಲು ಆಗಲ್ಲ. ಆದ್ರೆ ಸಿದ್ದು ಬೇಡ ಅಂದ್ರೆ ನಮಗೆ ಬೇಡ ಎನ್ನುತ್ತಾರೆ. ಆದ್ರೂ ತಾರಿಣಿ ಬಲವಂತವಾಗಿ ಚೆಕ್ ಕೊಟ್ಟಿದ್ದಾಳೆ. ನಾಳೆ ತನಕ ಮಾತ್ರ ಟೈಂ ಇದೆ. ಇದನ್ನು ಕೊಟ್ಟು ನಿಮ್ಮ ಮನೆ ಉಳಿಸಿಕೊಳ್ಳಿ ಎಂದು ಕೇಳಿಕೊಂಡಿದ್ದಾಳೆ. ಅದಕ್ಕೆ ಅನಂತಕೃಷ್ಣ ಒಪ್ಪಿಕೊಂಡಿದ್ದಾರೆ. ಸಂತೋಷವಾಗಿದ್ದಾರೆ.
ಇದನ್ನೂ ಓದಿ: Love Mocktail: ಲವ್ ಮಾಕ್ಟೇಲ್‍ಗೆ 3 ವರ್ಷದ ಸಂಭ್ರಮ, ವಿಶೇಷವಾಗಿ ಧನ್ಯವಾದ ಹೇಳಿದ ಡಾರ್ಲಿಂಗ್ ಕೃಷ್ಣ!
ತಾರಿಣಿ ಸಹಾಯದಿಂದ ಸಿದ್ಧಾಂತ್ ಮನೆ ಉಳಿದಿದೆ. ಈ ವಿಷ್ಯ ಸಿದ್ದುಗೆ ಗೊತ್ತಾದ್ರೆ ಸುಮ್ನೆ ಇರ್ತಾನಾ? ಅನಂತಕೃಷ್ಣ ಈ ವಿಷ್ಯ ಮಗನಿಗೆ ಹೇಳ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ