ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada) ಪ್ರತಿ ದಿನ 6 ಗಂಟೆಗೆ ಪ್ರಸಾರವಾಗುತ್ತಿದೆ. ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ತಾರಿಣಿ ಪ್ರೀತಿ ಮೊದಲೇ ಅರ್ಥ ಮಾಡಿಕೊಳ್ಳದ ಸಿದ್ಧಾಂತ್, ಈಗ ಆಕೆಯ ಪ್ರೀತಿ ಪಡೆಯಲು ಒದ್ದಾಡುತ್ತಿದ್ದಾನೆ. ಆದ್ರೆ ತಾರಿಣಿ ಮನೆಯವರು ಸಿದ್ದು ಜೊತೆ ಮಾತನಾಡದಂತೆ ತಾರಿಣಿಗೆ ತಾಕೀತು ಮಾಡಿದ್ದಾರೆ. ತಾರಿಣಿ ಮನಸ್ಸಿನಲ್ಲಿ ಇಲ್ಲ ಸಲ್ಲದ ತಪಿತಸ್ಥ ಭಾವನೆ ಮುಡಿಸುತ್ತಿದ್ದಾರೆ. ತಾರಿಣಿಗೆ ಧೀರಜ್ ಜೊತೆ ನಿಶ್ಚಿತಾರ್ಥ ಮಾಡಲು ತಯಾರಾಗಿದ್ದಾರೆ. ಸಿದ್ದು ತಾರಿಣಿ ಪ್ರೀತಿ ಪಡೆಯಲು ಒದ್ದಾಡುತ್ತಿದ್ದಾನೆ. ತಾರಿಣಿ ಧೀರಜ್ ಜೊತೆಗಿನ ನಿಶ್ಚಿತಾರ್ಥ ನಿಲ್ಲಿಸಿದ್ದಾಳೆ.
ಸಿದ್ಧಾಂತ್ಗೆ ತಾರಿಣಿ ಮೇಲೆ ಪ್ರೀತಿ ಸಿಗಲ್ವಾ?
ಮೊದಲು ಸಿದ್ಧಾಂತ್ ಮತ್ತು ತಾರಿಣಿ ಮಧ್ಯೆ ಸುಳ್ಳಿನ ನಿಶ್ಚಿತಾರ್ಥ ನಡೆದಿರುತ್ತೆ. ತಾರಿಣಿ ಮನೆಯವರು ಮದುವೆ ತನಕ ಬಂದಿರುತ್ತಾರೆ. ಆಗ ತಾರಿಣಿಗೆ ಮಾತ್ರ ಸಿದ್ಧಾಂತ್ ಮೇಲೆ ತುಂಬಾ ಪ್ರೀತಿ ಇರುತ್ತೆ. ಸಿದ್ದುಗೆ ಇರುವುದಿಲ್ಲ.
ಅದಕ್ಕೆ ತಾರಿಣಿ ಮನೆಯವರ ಬಳಿ ಹೇಳಿ ಮದುವೆ ಕ್ಯಾನ್ಸಲ್ ಮಾಡಿಸಿದ್ದಳು. ಆದ್ರೆ ಈಗ ಸಿದ್ದುಗೆ ತಾರಿಣಿ ಮೇಲೆ ಪ್ರೀತಿ ಆಗಿದೆ. ಆಕೆಯನ್ನು ಹೇಗಾದ್ರೂ ಒಪ್ಪಿಸಬೇಕು ಎಂದು ಒದ್ದಾಡುತ್ತಿದ್ದ, ಆದ್ರೆ ತಾರಿಣಿ ನೀವು ನನಗೆ ಇಲ್ಲ ಎಂದು ಹೇಳಿ ಬಿಟ್ಟಿದ್ದಾಳೆ.
ಧೀರಜ್ ಜೊತೆ ತಾರಿಣಿ ನಿಶ್ಚಿತಾರ್ಥ
ತಾರಿಣಿ ಎಷ್ಟೇ ಸಿದ್ಧಾಂತ್ ಮೇಲೆ ಪ್ರೀತಿ ಇಲ್ಲ ಎಂದು ಹೇಳಿದ್ರೂ, ಮನೆಯವರಿಗೆ ನಂಬಲು ಆಗುತ್ತಿಲ್ಲ. ಮತ್ತೆ ಎಲ್ಲಿ ತಾರಿಣಿ ಸಿದ್ಧಾಂತ್ ಕಡೆ ವಾಲಿ ಬಿಡ್ತಾಳೋ ಅನ್ನೋ ಭಯ. ಅದಕ್ಕೆ ಧೀರಜ್ ಜೊತೆ ನಿಶ್ಚಿತಾರ್ಥ ಮಾಡಬೇಕು ಎಂದುಕೊಂಡಿದ್ದಾರೆ. ನಿಶ್ಚಿತಾರ್ಥದ ತಯಾರಿ ನಡೆದಿತ್ತು.
ಇದನ್ನೂ ಓದಿ: Tripura Sundari: ತ್ರಿಪುರ ಸುಂದರಿಯಾಗಿ ಬಂದ ದಿವ್ಯಾ ಸುರೇಶ್, ಬಾಹುಬಲಿ ಸೀರಿಯಲ್ ಎಂದ ನೆಟ್ಟಿಗರು!
ಪೊಲೀಸರಿಗೆ ದೂರು ನೀಡಿದ್ದ ಸಿದ್ದು
ಸಿದ್ಧಾಂತ್, ಹುಡುಗಿಗೆ ಬಲವಂತವಾಗಿ ನಿಶ್ಚಿತಾರ್ಥ ಮಾಡ್ತಾ ಇದ್ದಾರೆ. ಅವಳಿಗೆ ಇಷ್ಟ ಇಲ್ಲ ಎಂದು ದೂರು ನೀಡಿ, ಪೊಲೀಸರನ್ನು ಜೊತೆಗೆ ಕರೆದುಕೊಂಡು ಬಂದಿದ್ದ. ತಾರಿಣಿ ಅವನ ಪರ ಮಾತನಾಡಬಹುದು ಎಂದು ಕೊಂಡಿದ್ದ. ಆದ್ರೆ ತಾರಿಣಿ, ಅಮ್ಮನ ಬ್ಲ್ಯಾಕ್ ಮೇಲ್ ಗೆ ಭಯಪಟ್ಟು, ನಾನು ಈ ನಿಶ್ಚಿತಾರ್ಥ ಇಷ್ಟ ಪಟ್ಟು ಆಗುತ್ತಿದ್ದೇನೆ ಎಂದು ಹೇಳುತ್ತಾಳೆ. ಸಿದ್ದುಗೆ ಬೇಜಾರಾಗಿ ಅಲ್ಲಿಂದ ಹೊರಡುತ್ತಾನೆ.
ಧೀರಜ್ ಜೊತೆ ಮಾತನಾಡಿದ ತಾರಿಣಿ
ನಾನು ನಿಮ್ಮನ್ನು ಮದುವೆ ಆಗಲು ಕಮಿಟ್ ಆಗಿದ್ದೇನೆ. ಈಗ ನಿಮ್ಮ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡ್ರೆ, ಸಿದ್ಧಾಂತ್ ಜೊತೆಗಿನಿ ನಿಶ್ಚಿತಾರ್ಥದ ನೆನಪು ಬರುತ್ತೆ. ಅವರನ್ನು ಮರೆಯಲು ಪ್ರಯತ್ನ ಪಡ್ತಾ ಇರೋ ನನಗೆ ಸ್ವಲ್ಪ ಕಷ್ಟ ಆಗಬಹುದು. ಈ ನಿಶ್ಚಿತಾರ್ಥ ಬೇಡ ಎನ್ನುತ್ತಾಳೆ. ಅದಕ್ಕೆ ಧೀರಜ್ ಒಪ್ಪಿ ಬೇಡ ಎಂದು ಹೇಳ್ತಾನೆ.
ಸಿದ್ದುಗೆ ಖುಷಿಯೋ ಖುಷಿ
ಧೀರಜ್ ಮನೆಯವರ ಬಳಿ ಹೋಗಿ, ನನಗೆ ನಿಶ್ಚಿತಾರ್ಥ ಬೇಡ. ಮದುವೆ ಆಗ್ತೀವಿ ಸ್ಪಲ್ಪ ಟೈಂ ತೆಗೆದುಕೊಂಡು ಎಂದು ಹೇಳ್ತಾನೆ. ಅದಕ್ಕೆ ಮನೆಯವರು ಸುಮ್ಮನಾಗ್ತಾರೆ. ಈ ಸುದ್ದಿಯನ್ನು ಸುಮತಿ ಸಿದ್ದುಗೆ ಕಾಲ್ ಮಾಡಿ ತಿಳಿಸುತ್ತಾಳೆ. ಕೊನೆಗೂ ನೀನು ಅಂದುಕೊಂಡಂತೆ ಈ ನಿಶ್ಚಿತಾರ್ಥ ನಿಲ್ಲಿಸಿ ಬಿಟ್ಟೆ. ನಿನಗೆ ಖುಷಿ ತಾನೇ ಎಂದು ಬೈಯುತ್ತಾಳೆ. ನಿಶ್ಚಿತಾರ್ಥ ನಿಂತ ಸುದ್ದಿ ಕೇಳಿ ಸಿದ್ದು ಖುಷಿ ಆಗ್ತಾನೆ.
ಇದನ್ನೂ ಓದಿ: Kannadathi: ಕಚೇರಿಯಲ್ಲೇ ಎಚ್ಚರ ತಪ್ಪಿ ಬಿದ್ದ ಭುವಿ, ಆತಂಕದಲ್ಲಿ ಹರ್ಷ!
ಸಿದ್ದುಗೆ ತಾರಿಣಿ ಪ್ರೀತಿ ಸಿಗುತ್ತಾ? ತಾರಿಣಿ-ಸಿದ್ಧಾಂತ್ ಮದುವೆ ಆಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ