ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada) ಪ್ರತಿ ದಿನ 6 ಗಂಟೆಗೆ ಪ್ರಸಾರವಾಗುತ್ತಿದೆ. ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ತಾರಿಣಿ ಪ್ರೀತಿ ಮೊದಲೇ ಅರ್ಥ ಮಾಡಿಕೊಳ್ಳದ ಸಿದ್ಧಾಂತ್, ಈಗ ಆಕೆಯ ಪ್ರೀತಿ ಪಡೆಯಲು ಒದ್ದಾಡುತ್ತಿದ್ದಾನೆ. ಆದ್ರೆ ತಾರಿಣಿ ಮನೆಯವರು ಸಿದ್ದು ಜೊತೆ ಮಾತನಾಡದಂತೆ ತಾರಿಣಿಗೆ ತಾಕೀತು ಮಾಡಿದ್ದಾರೆ. ತಾರಿಣಿ ಮನಸ್ಸಿನಲ್ಲಿ ಇಲ್ಲ ಸಲ್ಲದ ತಪಿತಸ್ಥ ಭಾವನೆ ಮುಡಿಸುತ್ತಿದ್ದಾರೆ. ತಾರಿಣಿಗೆ ಸಿದ್ದು ಮೇಲೆ ಪ್ರೀತಿ (Love) ಇದೆ. ಆದ್ರೆ ಅವರ ಅಮ್ಮನ (Mother) ಬ್ಲ್ಯಾಕ್ ಮೇಲ್ ನಿಂದ ಹೇಳಿಕೊಳ್ತಾ ಇಲ್ಲ. ಸಿದ್ದು ಏನು ಮಾಡಬೇಕೆಂದು ತಿಳಿದಯದೇ ಒದ್ದಾಡುತ್ತಿದ್ದಾನೆ.
ಸಿದ್ದು ಅಪ್ಪ ಹೇಳಿದ್ದೇನು?
ತಾರಿಣಿ ಮೇಲೆ ನನಗೆ ಮತ್ತೆ ಪ್ರೀತಿ ಆಗ್ತಾ ಇರಲಿಲ್ಲ. ಇಷ್ಟು ಒದ್ದಾಟ ನಡೆಸುತ್ತಿರಲಿಲ್ಲ ಎಂದು ಅಪ್ಪನ ಬಳಿ ಸಿದ್ದು ಹೇಳ್ತಾನೆ. ಕೆಂಡ ಮೊದಲೇ ಇತ್ತು, ಅದರ ಮೇಲೆ ಬೂದಿ ಮುಚ್ಚಿತ್ತು. ನಾನೂ ಬೂದಿ ಸರಿಸಿ, ಕೆಂಡ ತೋರಿಸಿದೆ ಅಷ್ಟೇ. ನಿನಗೆ ತಾರಿಣಿ ಮೇಲೆ ಪ್ರೀತಿ ಇತ್ತು. ಅದನ್ನು ನಾನು ತೋರಿಸಿದೆ. ತಾರಿಣಿ ನಿನ್ನ ಕೈಯಿಂದ ಜಾರಿ ಹೋಗದ ರೀತಿ ಮಾಡಿಕೊಳ್ಳಬೇಡ ಅಷ್ಟೇ ಎಂದು ಸಿದ್ದು ಅಪ್ಪ ಹೇಳ್ತಾರೆ.
ಗಣಪನಿಂದ ಪರಿಹಾರ ಸಿಗುತ್ತಾ?
ಗಣಪ ನಾನು ಕಾಲೇಜಿಗೆ ಹೋಗ್ತಾ ಇದೀನಿ. ಮನಸ್ಸಿಗೆ ಏನೋ ಒಂಥರಾ ಆಗ್ತಾ ಇದೆ. ಅದು ಖುಷಿನೋ, ಭಯನೋ, ಗೊಂದಲನೂ, ಏನು ಅಂತ ಗೊತ್ತಾಗ್ತಾ ಇಲ್ಲ. ಕಾಲೇಜಿನಲ್ಲಿ ಸಿದ್ಧಾಂತ್ ಸಿಗಬಹುದು. ಅವರು ನನ್ನ ಮಾತನಾಡಿಸಬಹುದು. ಅಥವಾ ನೋಡಿದ್ರೂ, ನೋಡದೇ ಇರುವ ರೀತಿ ಹೊರಟು ಹೋಗಬಹುದು. ಗೊತ್ತಿಲ್ಲ ದೇವ್ರೇ ಎಂದು ತಾರಿಣಿ ಗಣಪನ ಬಳಿ ತನ್ನ ಭಾವನೆ ಹೇಳಿ ಕೊಳ್ತಾ ಇದ್ದಾಳೆ.
ಇದನ್ನೂ ಓದಿ: Bigg Boss Kannada: ಬಿಗ್ ಬಾಸ್ ಜರ್ನಿ ಮೆಲುಕು ಹಾಕಿ, ಭಾವುಕರಾದ ಸ್ಪರ್ಧಿಗಳು!
ದೇವರ ಮೇಲೆ ಭಾರ ಹಾಕಿದ ತಾರಿಣಿ
ನನಗೆ ಸಿದ್ಧಾಂತ್ ಜೊತೆ ಮಾತನಾಡದೇ ಇದ್ರೆ ಬೇಜಾರು ಆಗುತ್ತಾ? ಮಾತನಾಡಲಿ ಅನ್ನಿಸುತ್ತಾ? ಅವರು ಮತ್ತೆ ಬಂದು ಪ್ರೀತಿಸುತ್ತಿದ್ದೇನೆ ಎಂದ್ರೆ, ನಾನು ಹೇಗೆ ರಿಯಾಕ್ಟ್ ಮಾಡಲಿ, ಒಂದು ಗೊತ್ತಾಗ್ತಾ ಇಲ್ಲ. ಮಾವನು ಬಂದಿಲ್ಲ.
ಅಮ್ಮ ನೋಡಿದ್ರೆ ರೆಡಿ ಆಗಿರು. ಕಾಲೇಜಿಗೆ ಹೋಗೋಕೆ ಬೇರೆ ವ್ಯವಸ್ಥೆ ಮಾಡಿದ್ದೀನಿ ಅಂತಾಳೆ. ಗಣಪ ನಿನ್ನ ಮೇಲೆ ಭಾರ ಹಾಕಿ ಕಾಲೇಜಿಗೆ ಹೋಗ್ತಾ ಇದೀನಿ. ಅಲ್ಲಿ ಏನೇ ಆದ್ರೂ ಒಳ್ಳೆಯದಕ್ಕೆ ಆಗೋ ರೀತಿ ನೋಡಿಕೋ ಎಂದು ತಾರಿಣಿ ಕೇಳಿಕೊಂಡಿದ್ದಾಳೆ.
ಕೆಲಸಕ್ಕೆ ರಾಜೀನಾಮೆ ಕೊಡಲ್ಲ ಸಿದ್ದು ಅಮ್ಮ
ಸಿದ್ಧಾಂತ್ ಅಮ್ಮ ತನ್ನ ಮಗ ಚೆನ್ನಾಗಿ ಓದಿ, ಒಳ್ಳೆ ಕೆಲಸಕ್ಕೆ ಸೇರಿ, ಮನೆ ಕಷ್ಟಕ್ಕೆ ಆಗ್ತಾನೆ ಎಂದುಕೊಂಡಿದ್ಲು. ಆದ್ರೆ ಸಿದ್ದು ಪ್ರೀತಿ-ಪ್ರೇಮ ಎಂದು ಓಡಾಡ್ತಾ ಇದ್ದಾನೆ. ಅದಕ್ಕೆ ನಾನು ಕೆಲಸಕ್ಕೆ ರಾಜೀನಾಮೆ ನೀಡಲ್ಲ ಸರ್, ಕೆಲಸ ಮುಂದುವರಿಸುತ್ತೇನೆ ಎಂದು ಕಾಲ ಮಾಡಿ ಸಿದ್ದು ಅಮ್ಮ ಹೇಳ್ತಾ ಇದ್ದಾನೆ.
ಇದನ್ನೂ ಓದಿ: Bigg Boss Kannada: ಡಿವೋರ್ಸ್ ಆದ ಇಬ್ಬರನ್ನು ಮದುವೆ ಆಗಿದ್ರಂತೆ ರೂಪೇಶ್ ಶೆಟ್ಟಿ! ನಿಜಾನಾ?
ಸಿದ್ದು-ತಾರಿಣಿ ಒಂದಾಗ್ತಾರಾ?
ಎಲ್ಲಾ ವಿಘ್ನಗಳನ್ನು ದಾಟಿಕೊಂಡು, ಸಿದ್ದು-ತಾರಿಣಿ ಜೊತೆಯಾಗ್ತಾರಾ? ಇಬ್ಬರಿಗೂ ಪ್ರೀತಿ ಇದೆ. ಆದ್ರೆ ಅದನ್ನು ಒಪ್ಪೊಕೊಳ್ಳುವ ಮನಸ್ಥಿಯಲ್ಲಿ ಇಲ್ಲ. ಸಿದ್ಧಾಂತ್ ಮತ್ತೆ ತಾರಿಣಿಗೆ ತನ್ನ ಪ್ರೀತಿ ಹೇಳಿಕೊಳ್ತಾನಾ? ತಾರಿಣಿ ಒಪ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ