ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ ಧಾರಾವಾಹಿ (Olavina Nildana) ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ (Serial) ನಟ ಸಿದ್ಧಾಂತ್ (Siddhant) ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ತಾರಿಣಿ ಪ್ರೀತಿಮೊದಲೇ ಅರ್ಥ ಮಾಡಿಕೊಳ್ಳದ ಸಿದ್ಧಾಂತ್, ಈಗ ಆಕೆಯ ಪ್ರೀತಿ ಪಡೆಯಲು ಒದ್ದಾಡುತ್ತಿದ್ದಾನೆ. ಆದ್ರೆ ತಾರಿಣಿ ಮನೆಯವರು ಸಿದ್ದು ಜೊತೆ ಮಾತನಾಡದಂತೆ ತಾರಿಣಿಗೆ ತಾಕೀತು ಮಾಡಿದ್ದಾರೆ. ತಾರಿಣಿ ಮನಸ್ಸಿನಲ್ಲಿ ಇಲ್ಲ ಸಲ್ಲದ ತಪಿತಸ್ಥ ಭಾವನೆ ಮುಡಿಸುತ್ತಿದ್ದಾರೆ. ಸಿದ್ಧಾಂತ್ ತಾರಿಣಿಯನ್ನು ಸಂಪೂರ್ಣವಾಗಿ ಮರೆಯುತ್ತಾನಂತೆ. ಅತ್ತ ತಾರಿಣಿಗೆ ಮತ್ತೆ ಸಿದ್ದು ಮೇಲೆ ಪ್ರೀತಿ ಹುಟ್ಟುತ್ತಾ ಇದೆ. ಆದ್ರೆ ಸಿದ್ಧಾಂತ್ ಅಮ್ಮ (Mother) ಬಂದು ತಾರಿಣಿಗೆ ಬೈಯುತ್ತಿದ್ದಾಳೆ.
ತಾರಿಣಿ ವಿಶ್ ಸಹ ಮಾಡದ ಸಿದ್ಧಾಂತ್
ಸಿದ್ಧಾಂತ್ ತಾರಿಣಿ ಹುಟ್ಟುಹಬ್ಬಕ್ಕೆ ನೇರವಾಗಿ ವಿಶ್ ಸಹ ಮಾಡಿಲ್ಲ. ಸಿದ್ದು ಅವಳನ್ನು ಮರೆಯುತ್ತೇನೆ ಎಂದು ತನ್ನ ತಾಯಿಗೆ ಮಾತು ಕೊಟ್ಟಿದ್ದಾನೆ. ಅದಕ್ಕೆ ಆಕೆಯನ್ನು ಮಾತನಾಡಿಸುತ್ತಿಲ್ಲ. ಅವಳ ಬರ್ತ್ಡೇಗೆ ವಿಶ್ ಮಾಡಲಾಗದೇ ಒದ್ದಾಡಿದ್ದಾನೆ. ಅದಕ್ಕೆ ಹೆಸರಿಲ್ಲದೇ ಗ್ರಿಟೀಂಗ್ಸ್ ಕೊಟ್ಟು ವಿಶ್ ಮಾಡಿದ್ದ, ಅದು ತಾರಿಣಿಗೆ ಗೊತ್ತಾಗಿ ಖುಷಿ ಆಗಿದ್ಲು.
ಸಿದ್ದು ಓದಿಗೆ ತಾರಿಣಿ ಅಡ್ಡಿ
ಸಿದ್ದು ಎಲ್ಲವನ್ನೂ ಮರೆತು ಓದಿನ ಕಡೆ ಹೆಚ್ಚು ಗಮನ ಕೊಡಬೇಕು ಎಂದುಕೊಂಡಿದ್ದಾನೆ. ತಾರಿಣಿಯನ್ನು ಮರೆಯಬೇಕು ಎಂದು ನಿರ್ಧಾರ ಮಾಡಿದ್ದಾರೆ. ಅದಕ್ಕೆ ಆಕೆಯನ್ನು ಮಾತನಾಡಿಸುತ್ತಿಲ್ಲ. ಆದ್ರೆ ತಾರಿಣಿಯೇ ಹಿಂದೆ ಹಿಂದೆ ಹೋಗಿ ಸಿದ್ದು ಮಾತನಾಡಿಸಲು ಪ್ರಯತ್ನ ಪಡ್ತಾ ಇದ್ದಾಳೆ. ಅದಕ್ಕೆ ಅವನ ಓದಿಗೆ ಅಡ್ಡಿ ಆಗುತ್ತಿದೆ.
ಇದನ್ನೂ ಓದಿ: Kannadathi: ಭುವಿ ಕೈಯಲ್ಲಿ ಸಾನಿಯಾ ಲಗಾಮು, ಸಿಕ್ಕಿರುವ ಇನ್ನೊಂದು ವಿಡಿಯೋದಲ್ಲಿ ಏನಿದೆ?
ತಾರಿಣಿ ಮನೆಗೆ ಬಂದ ಸಿದ್ಧಾಂತ್ ಅಮ್ಮ-ಅತ್ತಿಗೆ
ಸಿದ್ಧಾಂತ್ ಅಮ್ಮ ಮತ್ತು ಅತ್ತಿಗೆ ತಾರಿಣಿ ಮನೆಗೆ ಬಂದಿದ್ದಾರೆ. ಒಂದಿಷ್ಟು ವಿಷಯಗಳನ್ನು ಮಾತನಡಿಕೊಂಡು ಹೋಗೋಣ ಅಂತ ಬಂದೆ. ನೀನು ಮಾಡ್ತಾ ಇರೋದು ಸರಿ ಇಲ್ಲ ತಾರಿಣಿ ಅದನ್ನು ಹೇಳೋದಕ್ಕೆ ಬಂದಿದ್ದೇನೆ.
ನೀನು ಸಿದ್ಧಾಂತ್ ಇಷ್ಟ ಪಡ್ತಾ ಇದೀರಿಎನ್ನುವ ವಿಚಾರವನ್ನು ತಾಯಿಯಾದ ನನ್ನಿಂದಾನೆ ಮುಚ್ಚಿಟ್ಟಿದ್ದ ಅವನು. ಈ ವಿಷ್ಯ ನನಗೆ ಗೊತ್ತಾಗಿದ್ದೇ ನಾಲ್ಕು, ಐದು ದಿನದ ಹಿಂದೆ. ಈ ವಿಷ್ಯ ಗೊತ್ತಾಗಿ ನಮ್ಮ ಮನೆಯಲ್ಲಿ ದೊಡ್ಡ ಗಲಾಟೆ ನಡೆಯಿತು ಎಂದು ಸಿದ್ದು ಅಮ್ಮ ಹೇಳಿದ್ದಾಳೆ.
ತಾರಿಣಿಗೆ ಬೈದ ಸಿದ್ದು ಅಮ್ಮ
ಗಲಾಟೆ ಆದ ಮೇಲೆ ಸಿದ್ಧಾಂತ್ ನಿನ್ನ ಮುಖ ನೋಡಲ್ಲ. ಮಾತನಾಡಿಸಲ್ಲ ಅಂತ ಪ್ರಾಮಿಸ್ ಮಾಡಿದ್ದ. ನಾನು ಅವನ ಮಾತಿಗೆ ಗೌರವ ಕೊಟ್ಟು ಸುಮ್ನಾದೆ. ಈಗಿನ ಕಾಲದ ಹುಡುಗರು ದಾರಿ ತಪ್ಪುವುದು ಸಹಜ ಅಂತ. ಸರಿ ಹೋಗ್ತಾರೆ ಅಂದುಕೊಂಡಿದ್ದೆ. ಅವನು ಅವನ ಪಾಡಿಗೆ ಇದಾನೆ.
ನೀನು ಆ ರೀತಿ ಇರೋದಕ್ಕೆ ಏನ್ ಕಷ್ಟ. ಅವನು ನಿನ್ನಿಂದ ದೂರ ಹೋಗ್ತಾ ಇದಾನೆ ಅಂದ್ರೆ, ನೀನೂ ಕೂಡ ಅದನ್ನೇ ಮಾಡಬೇಕಲ್ವಾ ತಾರಿಣಿ, ಯಾಕ್ ಅವರನ ದಾರಿಗೆ ಪದೇ ಪದೇ ಅಡ್ಡ ಬರ್ತಾ ಇದೀಯಾ? ಎಂದು ಸಿದ್ಧಾಂತ್ ಅಮ್ಮ ತಾರಿಣಿಗೆ ಬೈದಿದ್ದಾಳೆ.
ಇದನ್ನೂ ಓದಿ: Manju Pavagada: ದುಬೈ ಪ್ರವಾಸದಲ್ಲಿ ಮಂಜು ಪಾವಗಡ, ಕೆಲಸದಿಂದ ಕೊಂಚ ಬ್ರೇಕ್!
ಸಿದ್ಧಾಂತ್ ಅಮ್ಮನನ್ನು ಸುಮತಿ ತಡೆದಿದ್ದಾಳೆ. ಹಲೋ ಏನ್ ಮಾತನಾಡುತ್ತಾ ಇದೀರಿ ನೀವು. ಸುಮ್ನೇ ಇದೀವಿ ಅಂತ ಬಾಯಿಗೆ ಬಂದಂತೆ ಮಾತನಾಡ್ತಾ ಇದೀರಾ? ಎಂದಿದ್ದಾಳೆ. ಧಾರಾವಾಹಿ ಮತ್ತೊಂದು ತಿರುವು ಪಡೆದುಕೊಳ್ತಿದೆ. ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ