ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada) ಪ್ರತಿ ದಿನ 6 ಗಂಟೆಗೆ ಪ್ರಸಾರವಾಗುತ್ತಿದೆ. ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ತಾರಿಣಿ ಪ್ರೀತಿ ಮೊದಲೇ ಅರ್ಥ ಮಾಡಿಕೊಳ್ಳದ ಸಿದ್ಧಾಂತ್, ಈಗ ಆಕೆಯ ಪ್ರೀತಿ ಪಡೆಯಲು ಒದ್ದಾಡುತ್ತಿದ್ದಾನೆ. ಆದ್ರೆ ತಾರಿಣಿ ಮನೆಯವರು ಸಿದ್ದು ಜೊತೆ ಮಾತನಾಡದಂತೆ ತಾರಿಣಿಗೆ ತಾಕೀತು ಮಾಡಿದ್ದಾರೆ. ತಾರಿಣಿ ಮನಸ್ಸಿನಲ್ಲಿ ಇಲ್ಲ ಸಲ್ಲದ ತಪಿತಸ್ಥ ಭಾವನೆ ಮುಡಿಸುತ್ತಿದ್ದಾರೆ. ತಾರಿಣಿಗೆ ಧೀರಜ್ ಜೊತೆ ನಿಶ್ಚಿತಾರ್ಥ (Engagement) ಮಾಡಲು ತಯಾರಾಗಿದ್ದರು. ತಾರಿಣಿ ಧೀರಜ್ ಜೊತೆಗಿನ ನಿಶ್ಚಿತಾರ್ಥ ನಿಲ್ಲಿಸಿದ್ದಾಳೆ. ಆದ್ರೆ ಸಿದ್ದು, ಅಮ್ಮನ (Mother) ನಂಬಿಕೆ ಕಳೆದುಕೊಂಡಿದ್ದಾನೆ.
ಸಿದ್ಧಾಂತ್ಗೆ ತಾರಿಣಿ ಮೇಲೆ ಪ್ರೀತಿ ಸಿಗಲ್ವಾ?
ಮೊದಲು ಸಿದ್ಧಾಂತ್ ಮತ್ತು ತಾರಿಣಿ ಮಧ್ಯೆ ಸುಳ್ಳಿನ ನಿಶ್ಚಿತಾರ್ಥ ನಡೆದಿರುತ್ತೆ. ತಾರಿಣಿ ಮನೆಯವರು ಮದುವೆ ತನಕ ಬಂದಿರುತ್ತಾರೆ. ಆಗ ತಾರಿಣಿಗೆ ಮಾತ್ರ ಸಿದ್ಧಾಂತ್ ಮೇಲೆ ತುಂಬಾ ಪ್ರೀತಿ ಇರುತ್ತೆ. ಸಿದ್ದುಗೆ ಇರುವುದಿಲ್ಲ.
ಅದಕ್ಕೆ ತಾರಿಣಿ ಮನೆಯವರ ಬಳಿ ಹೇಳಿ ಮದುವೆ ಕ್ಯಾನ್ಸಲ್ ಮಾಡಿಸಿದ್ದಳು. ಆದ್ರೆ ಈಗ ಸಿದ್ದುಗೆ ತಾರಿಣಿ ಮೇಲೆ ಪ್ರೀತಿ ಆಗಿದೆ. ಆಕೆಯನ್ನು ಹೇಗಾದ್ರೂ ಒಪ್ಪಿಸಬೇಕು ಎಂದು ಒದ್ದಾಡುತ್ತಿದ್ದ, ಆದ್ರೆ ತಾರಿಣಿ ನೀವು ನನಗೆ ಇಲ್ಲ ಎಂದು ಹೇಳಿ ಬಿಟ್ಟಿದ್ದಾಳೆ.
ಅಮ್ಮನ ನಂಬಿಕೆಯೋ ಕಳೆದೋಯ್ತು!
ಸಾಕು ಮಾಡೋದೆಲ್ಲಾ ಮಾಡಿ, ವಿವರಣೆ ಬೇರೆ ಕೊಡ್ತೀಯಾ? ನೀನು ತುಂಬಾ ದೊಡ್ಡ ತಪ್ಪು ಮಾಡಿ ಬಿಟ್ಟೆ ಸಿದ್ದು. ನಾನು ನಿನ್ನ ಮೇಲಿಟ್ಟಿರುವ ಆಸೆ, ಕನಸು ಎಲ್ಲ ನುಚ್ಚುನೂರು ಮಾಡಿಬಿಟ್ಟೆ. ಆವಾಗ ಅಪ್ಪ. ಈಗ ಮಗ. ಚೆನ್ನಾಗಿದೆ, ಒಟ್ನಲ್ಲಿ ನಾನು ಯಾವುತ್ತು, ಸುಖವಾಗಿರಬಾರದು, ಸಂತೋಷವಾಗಿರಬಾರದು, ಡಿಸೈಡ್ ಮಾಡಿದ್ದೀರಿ ಇಬ್ಬರು ಎಂದು ದಿದ್ದು, ಸಿದ್ದು ಅಮ್ಮ ಬೇಸರ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Rashmika Mandanna: ಮಾದಕ ಲುಕ್ನಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ, ಅಭಿಮಾಗಳು ಕ್ಲೀನ್ ಬೋಲ್ಡ್!
ಜವಾಬ್ದಾರಿ ಇಲ್ಲದ ಮಗ
ಹಗಲು-ರಾತ್ರಿ ಕಷ್ಟಪಟ್ಟು ಕೆಲಸ ಮಾಡ್ತಾ ಇದೀನಿ. ಯಾವಾಗ ನೀನು ಕೆಲಸಕ್ಕೆ ಸೇರ್ತಿಯೋ, ಮನೆ ಜವಾಬ್ದಾರಿ ತೆಗೆದುಕೊಳ್ತೀಯಾ ಅಂತ ಕಾಯ್ತಾ ಇದ್ದೆ ಸಿದ್ದು. ನೀನು ಅದನ್ನು ಮನಸ್ಸಿಗೆ ಹಚ್ಚಿಕೊಳ್ಳದೇ, ಬಾಯಲ್ಲಿ ದೊಡ್ಡ ಸಾಧನೆ ಮಾಡ್ತೀನಿ ಎಂದು ಹೇಳಿಕೊಂಡು ಓಡಾಡ್ತಾ ಇದೀಯಾ? ಎಂದು ಅಮ್ಮ ಹೇಳ್ತಾಳೆ.
ಇವನು ಮಾಡಿದ ಸಾಧನೆಯೇ ಇದು. ಪ್ರೀತಿ-ಪ್ರೇಮ ಎಂದು ಅವಳ ಹಿಂದೆ ಓಡಾಡಿದ್ದು ಅಲ್ದೇ, ಬೇರೆಯವರ ಜೊತೆ ಆಗ್ತಾ ಇದ್ದ ಎಂಗೇಜ್ಮೆಂಟ್ ನಿಲ್ಲಿಸಿ ಬಂದಿದ್ದಾನೆ ಎಂದು ಸಿದ್ದು ಅಣ್ಣ ಹೇಳ್ತಾನೆ.
ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ
ಅಮ್ಮ ನನ್ನ ಕ್ಷಮಿಸಿ ಬಿಡಮ್ಮ ಪ್ಲೀಸ್ ಎಂದು ಸಿದ್ದು ಕೇಳ್ತಾನೆ. ಈಗ ನಿನ್ನ ಕ್ಷಮಿಸುವು, ಬಿಡುವುದು ಮುಖ್ಯ ಅಲ್ಲ ಸಿದ್ದು. ನೀನು ನನಗೆ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ಮನೆ ಪರಿಸ್ಥಿತಿ ಏನಿದೆ ಎಂದು ನಿನಗೆ ಚೆನ್ನಾಗಿ ಗೊತ್ತಿತ್ತು.
ಪ್ರೀತಿ, ಪ್ರೇಮ ಅಂತ ಓದನ್ನು, ಮನೆಯನ್ನು ನೆಗ್ಲೆಟ್ ಮಾಡಲ್ಲ ಅಂತ ಪ್ರಾಮಿಸ್ ಮಾಡಿದ್ದೆ. ಆದ್ರೆ ಆ ಪ್ರಾಮಿಸ್ ಬ್ರೇಕ್ ಮಾಡಿದೆ. ಅಮ್ಮನಿಗೆ ಕೊಟ್ಟ ಮಾತಿಗೆ ಬೆಲೆ ಇಲ್ಲ ಎಂದು ತೋರಿಸಿ ಕೊಟ್ಟೆ ಸಿದ್ದು. ಅಮ್ಮನಿಗಿಂತ ನಿನಗೆ ಪ್ರೀತಿನೇ ಮುಖ್ಯ ಆಯ್ತು ಅಲ್ವಾ? ಎಂದು ಸಿದ್ದು ಅಮ್ಮ ಕೇಳಿದ್ದಾರೆ.
ಇದನ್ನೂ ಓದಿ: Bigg Boss Kannada: ಬಿಗ್ ಬಾಸ್ ಫಿನಾಲೆಗೆ 6ರಲ್ಲಿ ಐವರಿಗೆ ಮಾತ್ರ ಅವಕಾಶ, ಹೊರ ಹೋಗಿದ್ದು ರೂಪೇಶ್ ಶೆಟ್ಟಿನಾ?
ಸಿದ್ದುಗೆ ಈ ಕಡೆ ಪ್ರೀತಿಯೂ ಸಿಗಲಿಲ್ಲ. ಇನ್ನೊಂದೆಡೆ ಅಮ್ಮನ ನಂಬಿಕೆಯನ್ನು ಕಳೆದುಕೊಂಡು. ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ