• Home
  • »
  • News
  • »
  • entertainment
  • »
  • Olavina Nildana: ತಾರಿಣಿ ಅಂದ್ರೆ ತುಂಬಾ ಇಷ್ಟ! ಮನೆಮಂದಿ ಮುಂದೆ ಲವ್ ರಿವೀಲ್ ಮಾಡಿದ ಸಿದ್ಧಾಂತ್!

Olavina Nildana: ತಾರಿಣಿ ಅಂದ್ರೆ ತುಂಬಾ ಇಷ್ಟ! ಮನೆಮಂದಿ ಮುಂದೆ ಲವ್ ರಿವೀಲ್ ಮಾಡಿದ ಸಿದ್ಧಾಂತ್!

ಒಲವಿನ ನಿಲ್ದಾಣ

ಒಲವಿನ ನಿಲ್ದಾಣ

ನನಗೆ ತಾರಿಣಿಯನ್ನು ಕಂಡ್ರೆ ತುಂಬಾ ಇಷ್ಟ ಎಂದು ಮನೆಯವರು ಮುಂದೆ ಹೇಳಿದ್ದಾನೆ. ಅಲ್ಲೇ ಇದ್ದ ತಾರಿಣಿ ಕೂಡ ಶಾಕ್ ಆಗಿದ್ದಾಳೆ. ಅದಕ್ಕೆ ಸಿದ್ದು ಅವಳ ಕಡೆ ತಿರುಗಿ ಹೌದು ಎಂದಿದ್ದಾನೆ.

  • News18 Kannada
  • Last Updated :
  • Karnataka, India
  • Share this:

    ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada), ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಬಗ್ಗೆಯ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ತಾರಿಣಿಗೆ ಸಿದ್ಧಾಂತ್ ಮೇಲೆ ಪ್ರೀತಿ ಇದೆ. ಇನ್ನು ತಾರಿಣಿ ಮನೆಯವರ ಮುಂದೆ, ಸಿದ್ಧಾಂತ್-ತಾರಿಣಿ ಸುಳ್ಳು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮನೆಯವರು ನಂಬಿ ಮದುವೆ ತಯಾರಿಲ್ಲಿದ್ದು, ಸಿದ್ಧಾಂತ್ ಪ್ರೀತಿ ಪಡೆಯಲು ತಾರಿಣಿ ಒದ್ದಾಡುತ್ತಿದ್ದಾಳೆ. ಸಿದ್ಧಾಂತ್ ಗೆ ಈಗ ತಾರಿಣಿ ಮೇಲೆ ತನಗೆ ಪ್ರೀತಿ (Love) ಇದೆ ಎಂದು ಗೊತ್ತಾಗಿದೆ. ಸಿದ್ಧಾಂತ್‍ಗೆ ತನ್ನ ಮೇಲೆ ಪ್ರೀತಿ ಇಲ್ಲ ಎಂದುಕೊಂಡು ಮನೆಯಲ್ಲಿ ಮದುವೆ (Marriage) ಬೇಡ ಎಂದಿದ್ದಳು.


    ಪ್ರೀತಿ ಹೇಳಿಕೊಳ್ಳೋ ಮೊದಲೇ ಗುಂಡಿನ ಸದ್ದು


    ತಾರಿಣಿ ಮೇಲೆ ಸಿದ್ಧಾಂತ್ ಗೂ ಪ್ರೀತಿ ಆಗಿದೆ. ಅದನ್ನು ಅವನು ಅವಳ ಬಳಿ ಹೇಳಿಕೊಳ್ಳಬೇಕು ಎಂದುಕೊಂಡಿದ್ದ, ಅಷ್ಟರಲ್ಲೇ ತಾರಿಣಿ ಮದುವೆ ಬೇಡ ಎಂದು ಬಿಟ್ಟಿದ್ದಾಳೆ. ಅದಕ್ಕೆ ಸಿದ್ಧಾಂತ್ ತಾರಿಣಿಯ ಬಳಿ ಮಾತನಾಡಲು ಹೋಗಿದ್ದಾನೆ. ಆದ್ರೆ ಅಷ್ಟೊತ್ತಿಗೆ ಗುಂಡಿನ ಸದ್ದು ಕೇಳುತ್ತೆ. ನೋಡಿದ್ರೆ ತಾರಿಣಿಗೆ ಏಟು ಬಿದ್ದಿರುತ್ತೆ.


    ಸಿದ್ಧಾಂತ್ ಕೊಲ್ಲಲು ಮಾಸ್ಟರ್ ಪ್ಲ್ಯಾನ್


    ಸಿದ್ದು ಕೊಲ್ಲಲು ಜಗದೀಶ್ವರಿ ಜೊತೆ ಸೇರಿ ಪಾಲಾಕ್ಷ ಪ್ಲ್ಯಾನ್ ಮಾಡಿರುತ್ತಾನೆ. ಅಂತೆಯೇ ಅವಳ ಆಜ್ಞೆಯಂತೆ ಗನ್‍ನಿಂದ ಕಿಲ್ಲರ್ ಬುಲೆಟ್ ಹಾರಿಸಿಬಿಟ್ಟಿದ್ದಾನೆ. ಆದ್ರೆ ಅದು ಸಿದ್ಧಾಂತ್ ಬದಲು ತಾರಿಣಿಗೆ ಬೀಳುತ್ತೆ. ಸದ್ಯ ತಾರಿಣಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದಾಳೆ. ಸಿದ್ಧಾಂತ್ ಅಲ್ಲೇ ಇರುವುದನ್ನು ನೋಡಿ ಖುಷಿ ಆಗಿದ್ದಾಳೆ.


    ಇದನ್ನೂ ಓದಿ: BBK Season 09: ದಿವ್ಯಾ ಉರುಡುಗ-ಅರವಿಂದ್ ಮದುವೆಯಾದ್ರೆ ಡಿವೋರ್ಸ್ ಆಗುತ್ತಂತೆ! ಗುರೂಜಿ ಭವಿಷ್ಯ 


    ಮನೆಯವರ ಜೊತೆ ಮಾತು


    ತಾರಿಣಿ ಮನೆಯಲ್ಲಿ ಮದುವೆ ಬೇಡ ಎಂದಿದ್ದಾಳೆ. ಮನೆಯವರು ಯಾಕೆ ಎಂದು ತಿಳಿಯದೇ ಬೇಸರ ಮಾಡಿಕೊಂಡಿದ್ದಾರೆ. ಅದಕ್ಕೆ ಪಾಲಾಕ್ಷ, ನಮ್ಮ ಪಾಪುಗೆ ಮದುವೆ ಇಷ್ಟ ಇಲ್ಲ. ನೀನು ಆದಷ್ಟು ಬೇಗ ಮನೆಯಿಂದ ಹೊರಡು. ಅವಳ ನಿರ್ಧಾರವೇ ಅಂತಿಮ. ಅವಳ ಇಷ್ಟಕ್ಕೆ ವಿರುದ್ಧ ಈ ಮನೆಯಲ್ಲಿ ಏನೂ ನಡೆಯುವುದಿಲ್ಲ ಎಂದು ಸಿದ್ಧಾಂತ್ ಗೆ ಹೇಳುತ್ತಾನೆ.


    ತಾರಿಣಿ ಅಂದ್ರೆ ಇಷ್ಟ ಎಂದ ಸಿದ್ದು


    ತಾರಿಣಿ ಮಾವ ಪಾಲಾಕ್ಷ ಈ ಮದುವೆ ನಡೆಯಲ್ಲ ಎಂದು ಹೇಳುತ್ತಿರುವಗಲೇ, ಸಿದ್ಧಾಂತ್ ಆ ರೀತಿ ಮಾಡಬೇಡಿ. ನನಗೆ ತಾರಿಣಿಯನ್ನು ಕಂಡ್ರೆ ತುಂಬಾ ಇಷ್ಟ ಎಂದು ಮನೆಯವರು ಮುಂದೆ ಹೇಳಿದ್ದಾನೆ. ಅಲ್ಲೇ ಇದ್ದ ತಾರಿಣಿ ಕೂಡ ಶಾಕ್ ಆಗಿದ್ದಾಳೆ. ಅದಕ್ಕೆ ಸಿದ್ದು ಅವಳ ಕಡೆ ತಿರುಗಿ ಹೌದು ಎಂದಿದ್ದಾನೆ.


    colors kannada serial, kannada serial, olavina nildana serial, olavina nildana serial today episode, olavina nildana serial timing, siddhant loves tharini, ಒಲವಿನ ನಿಲ್ದಾಣ ಧಾರಾವಾಹಿ, ತಾರಿಣಿಯನ್ನು ತುಂಬಾ ಇಷ್ಟ ಪಡ್ತೇನೆ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,s
    ಸಿದ್ಧಾಂತ್


    ತಾರಿಣಿ ಖುಷಿಗೆ ಪಾರವೇ ಇಲ್ಲ
    ತಾರಿಣಿ ಮೇಲೆ ಪ್ರೀತಿ ಇದೆ ಎಂದು ಸಿದ್ಧಾಂತ್ ಹೇಳಿದ್ದೇ ತಡ, ತಾರಿಣಿ ಖುಷಿ ಆಗಿದ್ದಾಳೆ. ಇಷ್ಟು ದಿನ ಅವಳು ಸಿದ್ಧಾಂತ್ ಪ್ರೀತಿ ಪಡೆಯಲು ಪರದಾಡ್ತಿದ್ದಳು. ಅವನು ಒಪ್ಪಿರಲಿಲ್ಲ. ಈಗ ಅವನೇ ತಾರಿಣಿ ಕಂಡ್ರೆ ಇಷ್ಟ ಎಂದು ಹೇಳಿದ್ದಾನೆ. ಅದಕ್ಕೆ ಅವಳು ತುಂಬಾ ಖುಷಿ ಆಗಿದ್ದಾಳೆ.


    colors kannada serial, kannada serial, olavina nildana serial, olavina nildana serial today episode, olavina nildana serial timing, siddhant loves tharini, ಒಲವಿನ ನಿಲ್ದಾಣ ಧಾರಾವಾಹಿ, ತಾರಿಣಿಯನ್ನು ತುಂಬಾ ಇಷ್ಟ ಪಡ್ತೇನೆ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,s
    ಸಿದ್ಧಾಂತ್  ತಾರಿಣಿ


    ಇದನ್ನೂ ಓದಿ: BBK Season 09: ನೀನು ಮಾನಗೆಟ್ಟವನು, ನೀನು ಮಾನಗೆಟ್ಟವನು; ಪ್ರಶಾಂತ್-ರಾಜಣ್ಣನ ನಡುವೆ ತಾರಕಕ್ಕೇರಿದ ಜಗಳ! 


    ತಾರಿಣಿಗೆ ಇಂಚಿಂಚು ನೋವು ಕೊಡಲು ತೀರ್ಮಾನ


    ತಾರಿಣಿಯನ್ನು ಕಂಡ್ರೆ ಪಾಲಾಕ್ಷನ ಹೆಂಡತಿ ಸುಮತಿಗೆ ಆಗಲ್ಲ. ತಾರಿಣಿ ಅಮ್ಮ ಬಂಜೆ ಅಂತಿದ್ದಳು ಎಂದು ತಾರಿಣಿ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾಳೆ. ಒಂದೇ ಸಲ ಸಾಯಿಸೋದು ಬೇಡ. ಇಂಚಿಂಚೂ ನೋವು ಕೊಡಬೇಕು ಎಂದು ನಿರ್ಧಾರ ಮಾಡಿದ್ದಾಳೆ.

    Published by:Savitha Savitha
    First published: