ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ ( Olavina Nildana) ಧಾರಾವಾಹಿ (Serial) ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ನಟಿ ತಾರಿಣಿಯನ್ನು ಮೊದಲು ಸಿದ್ಧಾಂತ್ ಇಷ್ಟ ಪಡ್ತಿದ್ದ. ತಾರಿಣಿ ಸಹ ಇಷ್ಟ ಪಡುತ್ತಿದ್ದಳು. ಆದ್ರೆ ಇಬ್ಬರ ಮನೆಯವರ ಮುನಿಸು ಇವರ ಪ್ರೀತಿಯನ್ನು ದೂರ ಮಾಡಿದೆ. ತಾರಿಣಿ ಮನೆಯವರು ಸಿದ್ದು ಜೊತೆ ಮಾತನಾಡದಂತೆ ತಾಕೀತು ಮಾಡಿದ್ದಾರೆ. ತಾರಿಣಿ ಮನಸ್ಸಿನಲ್ಲಿ ಇಲ್ಲ ಸಲ್ಲದ ತಪಿತಸ್ಥ ಭಾವನೆ ಮೂಡಿಸುತ್ತಿದ್ದಾರೆ. ಸಿದ್ಧಾಂತ್ ತಾರಿಣಿಯನ್ನು ಸಂಪೂರ್ಣವಾಗಿ ಮರೆಯುತ್ತಾನಂತೆ. ಇತ್ತ ಸಿದ್ಧಾಂತ್ ಅಪ್ಪ ಮಾಡಿದ ಸಾಲದಿಂದ ಮನೆ (Home) ಹರಾಜಿಗಿಗೆ (Auction) ಬಂದಿದೆ. ಸಿದ್ದು ಕಂಗಾಲಾಗಿ ಹೋಗಿದ್ದಾನೆ.
ಮನೆ ಮುಂದೆ ಬ್ಯಾಂಕ್ ನೋಟಿಸ್
ಸಿದ್ಧಾಂತ್ ಅಪ್ಪ ಮನೆ ಮೇಲೆ ತುಂಬಾ ಸಾಲ ಮಾಡಿದ್ದಾರೆ. ಅದರ ಬಡ್ಡಿಯನ್ನು ಸಹ ಬ್ಯಾಂಕ್ ಗೆ ಕಟ್ಟಿಲ್ಲ. ಬ್ಯಾಂಕ್ ನವರು ಕಾಲ್ ಮಾಡಿದ್ರೆ ರಿಸೀವ್ ಸಹ ಮಾಡಿಲ್ಲ. ಅದಕ್ಕೆ ಬ್ಯಾಂಕ್ ನವರು ಮನೆಗೆ ಬಂದು ನೋಟಿಸ್ ಕೊಟ್ಟಿದ್ದಾರೆ. ಅಲ್ಲದೇ ಮನೆ ಬಾಗಿಲಿಗೆ ನೋಟಿಸ್ ಹಂಟಿಸಿ ಹೋಗಿದ್ದಾರೆ.
5 ದಿನದಲ್ಲಿ 40 ಲಕ್ಷ ಕಟ್ಟಬೇಕು
ಬ್ಯಾಂಕ್ ನೋಟಿಸ್ ನಲ್ಲಿ ಇನ್ನು 5 ದಿನದಲ್ಲಿ 40 ಲಕ್ಷ ಕಟ್ಟಬೇಕು ಎಂದು ಬರೆದಿದೆ. ಇಲ್ಲದೇ ಇದ್ರೆ ಮನೆ ಹರಾಜು ಹಾಕಿ ನೋಟಿಸ್ ಹಾಕ್ತಾರಂತೆ.ಇದರಿಂದ ಮನೆಯವರೆಲ್ಲಾ ಕಣ್ಣೀರು ಹಾಕುತ್ತಿದ್ದಾರೆ. 40 ಲಕ್ಷ ಜೋಡಿಸುವುದು ಹೇಗೆ ಎಂದು ಒದ್ದಾಡುತ್ತಿದ್ದಾರೆ. ಸಿದ್ದು ತಾಯಿ ನಿರುಪಮಾ ಮನೆ ನಮ್ಮ ಕೈ ಬಿಟ್ಟು ಹೋಗುತ್ತೆ ಎಂದು ಅಳುತ್ತಿದ್ದಾರೆ.
ಕಂಗಾಲಾಗಿರುವ ಸಿದ್ಧಾಂತ್
ಮನೆಯವರೆಲ್ಲಾ 40 ಲಕ್ಷ ಹೇಗೆ ಜೋಡಿಸುವುದು ಎಂದು ಬೇಸರದಲ್ಲಿದ್ದಾರೆ. ಸಿದ್ದು ಸಹ ಕಾಲೇಜಿಗೆ ಬಮದ್ರೂ ಮನಸ್ಸೆಲ್ಲಾ ಮನೆಯ ಬಳಿ ಇದೆ. ಕ್ಲಾಸ್ಗೆ ಹೋಗದೇ ಹೊರಗೆ ಕೂತು ಅಳುತ್ತಿದ್ದಾನೆ. ಮನೆ ಹೇಗೆ ಉಳಿಸಿಕೊಳ್ಳುವುದು ಎಂದು ಒದ್ದಾಡುತ್ತಿದ್ದಾನೆ. ತಾರಿಣಿ ಬಂದು ಮಾತನಾಡಿಸಿದ್ರೆ, ಅವಳ ಮೇಲೆಯೇ ರೇಗಿ ಅಲ್ಲಿಂದ ಹೋಗಿದ್ದಾನೆ.
ಅನಂತಕೃಷ್ಣನ ಮುಂದೆ ಜಗದೀಶ್ವರಿ ನಾಟಕ
ಸಿದ್ದು ಅಪ್ಪ ಅನಂತಕೃಷ್ಣ ಧೀರಜ್ ತಾಯಿ ಜಗದೀಶ್ವರಿ ಬಳಿ ಹೋಗಿದ್ದಾನೆ. ತಮಗೆ ಸಾಲ ಕೊಡಿ ಎಂದು ಬೇಡಿಕೊಳ್ಳುತ್ತಿದ್ದಾನೆ. ಆದ್ರೆ ಜಗದೀಶ್ವರಿ ನಾಟಕ ಮಾಡ್ತಾ ಇದ್ದಾಳೆ. 10 ಲಕ್ಷ ಆದ್ರೆ ಹೇಗೋ ಕೊಡಬಹುದಿತ್ತು, ಆದ್ರೆ 40 ಲಕ್ಷ ಅಂದ್ರೆ ತುಂಬಾ ಕಷ್ಟ ಆಗುತ್ತೆ. ಅಲ್ಲದೇ ನಿಮ್ಮ ಸಂಬಳ 20 ಸಾವಿರ, ಅದರಲ್ಲಿ ಸಾಲ ಹೇಗೆ ತೀರಿಸುತ್ತೀರಿ? ಅದರಲ್ಲಿ ಬಡ್ಡಿ ಕಟ್ಟಲು ಸಹ ಆಗಲ್ಲ ಎಂದು ಅವಮಾನ ಮಾಡಿದ್ದಾಳೆ.
ಮನೆ ಹೇಗೆ ಉಳಿಸಿಕೊಳ್ತಾರೆ?
ನಿರುಪಮಾ ಮತ್ತು ಅವರ ದೊಡ್ಡ ಮಗ ಆದಿ ಕೆಲಸ ಮಾಡಿ ಮನೆ ನಿರ್ವಹಿಸುತ್ತಿದ್ರು. ಆದ್ರೆ ಅನಂತಕೃಷ್ಣ ಸಾಲ ಮಾಡಿ ಮನೆ ಪರಿಸ್ಥಿತಿ ಈ ಹಂತಕ್ಕೆ ತಂದಿದ್ದಾರೆ. ಮನೆ ಹೇಗೆ ಉಳಿಸಿಕೊಳ್ತಾರೆ ಅನ್ನೋದೇ ದೊಡ್ಡ ಪ್ರಶ್ನೆ ಆಗಿದೆ. 40 ಸಾವಿರ ಅಂದ್ರೆನೇ ಜೋಡಿಸುವುದು ಕಷ್ಟ. 40 ಲಕ್ಷ ಅಂದ್ರೆ ಜೋಡಿಸುವುದು ಹೇಗೆ ಅಂತ ಸಿದ್ದು ಅತ್ತಿಗೆ ಸಂಗೀತಾ ಮನೆಯವರಿಗೆಲ್ಲಾ ಹೇಳ್ತಾ ಇದ್ದಾಳೆ.
ಇದನ್ನೂ ಓದಿ: Rashmika Mandanna: 'ಮಿಷನ್ ಮಜ್ನು' ಖುಷಿಯಲ್ಲಿ ರಶ್ಮಿಕಾ ಮಂದಣ್ಣ, ವಿಭಿನ್ನವಾಗಿ ಫೋಟೋಗೆ ಪೋಸ್!
ಸಿದ್ದ ತನ್ನ ಮನೆಯನ್ನು ಉಳಿಸಿಕೊಳ್ತಾನಾ? ಸಿದ್ದು ಕುಟುಂಬ ಬೀದಿಗೆ ಬರುತ್ತಾ? ತಾರಿಣಿ ಏನಾದ್ರೂ ಸಹಾಯ ಮಾಡ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ