ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ ( Olavina Nildana) ಧಾರಾವಾಹಿ (Serial) ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ತಾರಿಣಿ ಪ್ರೀತಿ ಮೊದಲೇ ಅರ್ಥ ಮಾಡಿಕೊಳ್ಳದ ಸಿದ್ಧಾಂತ್, ಈಗ ಆಕೆಯ ಪ್ರೀತಿ (Love) ಪಡೆಯಲು ಒದ್ದಾಡುತ್ತಿದ್ದಾನೆ. ಆದ್ರೆ ತಾರಿಣಿ ಮನೆಯವರು ಸಿದ್ದು ಜೊತೆ ಮಾತನಾಡದಂತೆ ತಾರಿಣಿಗೆ ತಾಕೀತು ಮಾಡಿದ್ದಾರೆ. ತಾರಿಣಿ ಮನಸ್ಸಿನಲ್ಲಿ ಇಲ್ಲ ಸಲ್ಲದ ತಪಿತಸ್ಥ ಭಾವನೆ ಮೂಡಿಸುತ್ತಿದ್ದಾರೆ. ಸಿದ್ಧಾಂತ್ ತಾರಿಣಿಯನ್ನು ಸಂಪೂರ್ಣವಾಗಿ ಮರೆಯುತ್ತಾನಂತೆ. ಸಿದ್ಧಾಂತ್ ಅಪ್ಪ (Mother) ಮಾಡಿದ ಸಾಲದಿಂದ ಮನೆ ಹರಾಗಿಗೆ ಬಂದಿದೆ. ಈ ವಿಷ್ಯ ಕೇಳಿ ಸಿದ್ದು ಅಮ್ಮ ನಿರುಪಮಾ ಕುಸಿದು ಬಿದ್ದಿದ್ದಾಳೆ.
ಮನೆಗೆ ಬಂದ ಬ್ಯಾಂಕ್ ನೋಟಿಸ್
ಸಿದ್ಧಾಂತ್ ಅಪ್ಪ ಮನೆ ಮೇಲೆ ತುಂಬಾ ಸಾಲ ಮಾಡಿದ್ದಾರೆ. ಅದರ ಬಡ್ಡಿಯನ್ನು ಸಹ ಬ್ಯಾಂಕ್ ಗೆ ಕಟ್ಟಿಲ್ಲ. ಬ್ಯಾಂಕ್ ನವರು ಕಾಲ್ ಮಾಡಿದ್ರೆ ರಿಸೀವ್ ಸಹ ಮಾಡಿಲ್ಲ. ಅದಕ್ಕೆ ಬ್ಯಾಂಕ್ ನವರು ನೋಟಿಸ್ ಕೊಡಲು ಮನೆಗೆ ಬಂದಿದ್ದಾರೆ. ಅವರನ್ನು ನೋಡಿ ಮನೆಯವರೆಲ್ಲಾ ಶಾಕ್ ಆಗಿದ್ದಾರೆ. ಏನು ಎಂದು ಕೇಳುತ್ತಿದ್ದಾರೆ.
ಮನೆ ಹರಾಜಿಗೆ ಬಂದಿದೆ ನಿರುಪಮಾ
ಬ್ಯಾಂಕ್ ನವರಿಗೆ ಇಲ್ಲಿಗೆ ಯಾಕೆ ಬಂದಿದ್ದೀರಿ ಎಂದು ಸಿದ್ದು ಅತ್ತಿಗೆ ಸಂಗೀತಾ ಕೇಳ್ತಾರೆ. ಅದಕ್ಕೆ, ನೀವು ಸರಿಯಾಗಿ ಲೋನ್ ಕಟ್ಟಿಲ್ಲ ಅಂದ್ರೆ ಮನೆ ಹರಾಜಿಗೆ ಬರುತ್ತೆ. ಅದು ಬ್ಯಾಂಕ್ ರೂಲ್ಸ್. ಬ್ಯಾಂಕ್ನಿಂದ ನೋಟಿಸ್ ಜಾರಿ ಆಗಿದೆ ಎಂದು ಬ್ಯಾಂಕ್ನವರು ಹೇಳಿದ್ದಾರೆ. ಸಿದ್ಧಾಂತ್ ಅಮ್ಮ ಗಾಬರಿಗೊಂಡಿದ್ದಾರೆ.
5 ದಿನದಲ್ಲಿ 40 ಲಕ್ಷ ಕಟ್ಟಬೇಕು
ಬ್ಯಾಂಕ್ ನೋಟಿಸ್ ನಲ್ಲಿ ಇನ್ನು 5 ದಿನದಲ್ಲಿ 40 ಲಕ್ಷ ಕಟ್ಟಬೇಕು ಎಂದು ಬರೆದಿದೆ. ಇಲ್ಲದೇ ಇದ್ರೆ ಮನೆ ಹರಾಜು ಹಾಕಿ ನೋಟಿಸ್ ಹಾಕ್ತಾರಂತೆ ಎಂದು ಸಂಗೀತಾ ಓದಿ ಹೇಳಿದ್ದಾಳೆ. ಅದನ್ನು ಕೇಳಿಸಿಕೊಂಡು ನಿರುಪಮಾ ಕುಸಿದು ಬಿದ್ದಿದ್ದಾಳೆ. ಎಚ್ಚರ ತಪ್ಪಿದ್ದಾಳೆ. ಮನೆ ನಮಗೆ ಇನ್ನು ಇರಲ್ಲ ಎಂದು ಕಂಗಾಲಾಗಿದ್ದಾಳೆ.
ಮನೆ ನಡೆಸುತ್ತಿದ್ದ ನಿರುಪಮಾ
ಸಿದ್ಧಾಂತ್ ಅಪ್ಪ ಯಾವುದೇ ಜವಾಬ್ದಾರಿ ತೆಗೆದುಕೊಂಡಿಲ್ಲ. ಅಲ್ಲದೇ ವಿಪರೀತ ಸಾಲ ಮಾಡಿದ್ದಾರೆ. ಮನೆಯ ಜವಾಬ್ಧಾರಿಯನ್ನು ತೆಗೆದುಕೊಂಡಿದ್ದಾಳೆ. ಕೆಲಸಕ್ಕೆ ಹೋಗಿ ಮನೆ ನಿಭಾಯಿಸುತ್ತಿದ್ದಾಳೆ. ಈ ವಯಸ್ಸಿನಲ್ಲಿ ಆಗದೇ ಇದ್ದರೂ ಎಲ್ಲ ಕೆಲಸ ಮಾಡ್ತಾಳೆ. ಆದ್ರೆ ಗಂಡನ ಬೇಜವಾಬ್ದಾರಿಯಿಂ ಮನೆ ಹಾರಾಜಿಗೆ ಬಂದಿದೆ. ಅದಕ್ಕೆ ನಿರುಪಮಾ ಕಣ್ಣೀರಿಡುತ್ತಿದ್ದಾಳೆ.
ಕೊನೆಯ ಭರವಸೆ ಸಿದ್ದು ಮಾತ್ರ
ನಿರುಪಮಾಗೆ ಕೊನೆ ಭರವಸೆ ಅಂದ್ರೆ ಅದು ಸಿದ್ದು ಮಾತ್ರ. ಸಿದ್ದು ಚೆನ್ನಾಗಿ ಓದಿ ಈ ಮನೆಯ ಕಷ್ಟಗಳನ್ನು ತೀರಿಸುತ್ತಾನೆ. ಸಾಲವನ್ನು ತೀರಿಸುತ್ತಾನೆ. ನಾವೆಲ್ಲಾ ನೆಮ್ಮದಿಯಿಂದ ಇರಬಹುದು ಎಂದುಕೊಂಡಿದ್ದಾಳೆ. ಆದ್ರೆ ಸಿದ್ದು ಪ್ರೀತಿ ಪ್ರೇಮಾ ಅಂತ ಹೋಗಿ ಎಲ್ಲಿ ಹಾಳಾಗಿ ಬಿಡ್ತಾನೋ ಎಂದು ಭಯ ಸ್ಟಾರ್ಟ್ ಆಗಿದೆ.
ಇದನ್ನೂ ಓದಿ: Sagar Biligowda: ಸಂಭ್ರಮದಲ್ಲಿ 'ಸತ್ಯ' ನಟ, ಶೀಘ್ರದಲ್ಲೇ ಸಾಗರ್ ಬಿಳಿಗೌಡ-ಸಿರಿ ರಾಜು ಮದುವೆ
ಸಿದ್ಧಾಂತ್ ತನ್ನ ಮನೆಯ ಕಷ್ಟ ನಿವಾರಿಸುತ್ತಾನಾ? ಮನೆ ಹರಾಜು ಆಗುವುದನ್ನು ಹೇಗೆ ತಪ್ಪಿಸಿಸುತ್ತಾರೆ. ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ