ಎಲ್ಲೂ ಸ್ಟಾಪ್ ಆಗದೇ ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 6 ಗಂಟೆಗೆ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಓಡ್ತಾ ಇದೆ. ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ತಾರಿಣಿ ಪ್ರೀತಿಯನ್ನು ಮೊದಲೇ ಅರ್ಥ ಮಾಡಿಕೊಳ್ಳದ ಸಿದ್ಧಾಂತ್, ಈಗ ಆಕೆಯ ಪ್ರೀತಿ ಪಡೆಯಲು ಒದ್ದಾಡುತ್ತಿದ್ದಾನೆ. ಆದ್ರೆ ತಾರಿಣಿ ಮನೆಯವರು ಸಿದ್ದು ಜೊತೆ ಮಾತನಾಡದಂತೆ ತಾರಿಣಿಗೆ ತಾಕೀತು ಮಾಡಿದ್ದಾರೆ. ತಾರಿಣಿ ಮನಸ್ಸಿನಲ್ಲಿ ಇಲ್ಲ ಸಲ್ಲದ ತಪಿತಸ್ಥ ಭಾವನೆ ಮೂಡಿಸುತ್ತಿದ್ದಾರೆ. ತಾರಿಣಿ ಮನಸ್ಸಿನಲ್ಲಿ ಸಿದ್ದು ಬಗ್ಗೆ ದ್ವೇಷ ಮೂಡಿದೆ. ಇನ್ನೊಂದೆಡೆ ಜಗದೀಶ್ವರಿ ಸಿದ್ಧಾಂತ್ ಕುಟುಂಬದಲ್ಲಿ (Family) ಹಾವು-ಏಣಿ ಆಟ ಆಡ್ತಾ ಇದ್ದಾಳೆ. ಸಿದ್ಧಾಂತ್ (Siddhant) ತಾಯಿ ತೀವ್ರ ಬೇಸರ ಮಾಡಿಕೊಂಡಿದ್ದಾಳೆ.
ಸಿದ್ಧಾಂತ್ಗೆ ತಾರಿಣಿ ಪ್ರೀತಿ ಬೇಕು
ಮೊದಲು ಸಿದ್ಧಾಂತ್ ಮತ್ತು ತಾರಿಣಿ ಮಧ್ಯೆ ಸುಳ್ಳಿನ ನಿಶ್ಚಿತಾರ್ಥ ನಡೆದಿರುತ್ತೆ. ತಾರಿಣಿ ಮನೆಯವರು ಮದುವೆ ತನಕ ಬಂದಿರುತ್ತಾರೆ. ಆಗ ತಾರಿಣಿಗೆ ಮಾತ್ರ ಸಿದ್ಧಾಂತ್ ಮೇಲೆ ತುಂಬಾ ಪ್ರೀತಿ ಇರುತ್ತೆ. ಸಿದ್ದುಗೆ ಇರುವುದಿಲ್ಲ. ಅದಕ್ಕೆ ತಾರಿಣಿ ಮನೆಯವರ ಬಳಿ ಹೇಳಿ ಮದುವೆ ಕ್ಯಾನ್ಸಲ್ ಮಾಡಿಸಿದ್ದಾಳೆ. ಆದ್ರೆ ಈಗ ಸಿದ್ದುಗೆ ತಾರಿಣಿ ಮೇಲೆ ಪ್ರೀತಿ ಆಗಿದೆ. ಆಕೆಯನ್ನು ಹೇಗಾದ್ರೂ ಒಪ್ಪಿಸಬೇಕು ಎಂದು ಒದ್ದಾಡುತ್ತಿದ್ದಾನೆ.
ತಾರಿಣಿ ಮನಸ್ಸಿನಲ್ಲಿ ದ್ವೇಷದ ಬೀಜ
ಈ ಧಾರಾವಾಹಿಯಲ್ಲಿ ಪಾಲಾಕ್ಷನ ಹೆಂಡತಿ ಸುಮತಿ ಕುತಂತ್ರಿ. ತನಗೆ ಮಕ್ಕಳಾಗದ ಕಾರಣ ತಾರಿಣಿ ಅಮ್ಮ ನನಗೆ ಅವಮಾನ ಮಾಡಿದ್ದಾರೆ ಎಂದು, ಎಲ್ಲರಿಗೂ ನೋವು ಮಾಡಲು ಹೊರಟಿದ್ದಾಳೆ. ತಾರಿಣಿ ಮನಸ್ಸಿನಲ್ಲಿ ಸಿದ್ಧಾಂತ್ ಬಗ್ಗೆ ಇಲ್ಲ ಸಲ್ಲದ್ದನ್ನು ಹೇಳುತ್ತಿದ್ದಾಳೆ. ಅದನ್ನು ತಾರಿಣಿ ನಂಬುತ್ತಿದ್ದಾಳೆ.
ಆಸ್ತಿಗಾಗಿ ನಿನ್ನ ಮೇಲೆ ಪ್ರೀತಿ
ಸಿದ್ಧಾಂತ್ ಕುಟುಂಬ ಸದ್ಯ ಕಷ್ಟಲ್ಲಿದೆ. ಸಿದ್ದು ಅಪ್ಪ ತುಂಬಾ ಸಾಲ ಮಾಡಿದ್ದಾರೆ. ಅದಕ್ಕೆ ಮನೆ ಪ್ಲಡ್ಜ್ ಮಾಡಿದ್ದಾರೆ. ಸಾಲದ ಬಡ್ಡಿ ಕಟ್ಟಲು ಬೇರೆ ಬೇರೆ ಕಡೆ ಸಾಲ ಮಾಡಿದ್ದಾರೆ. ಇದನ್ನೇ ಬಳಸಿಕೊಂಡ ಸುಮತಿ, ತಾರಿಣಿಗೆ ಹೇಳುತ್ತಿದ್ದಾಳೆ. ಸಿದ್ಧಾಂತ್ ನಿನ್ನನ್ನು ನಿಜವಾಗಿಯೂ ಪ್ರೀತಿ ಮಾಡ್ತಾ ಇಲ್ಲ. ಅವರ ಮನೆಯ ಸಾಲ ತೀರಿಸಲು ನಿನ್ನ ಆಸ್ತಿ ಬೇಕು ಅವನಿಗೆ ಎಂದು ಹೇಳಿದ್ದಾಳೆ. ತಾರಿಣಿಗೂ ಅದು ನಿಜ ಎನ್ನಿಸಿದೆ.
ಸಿದ್ದು ಅಪ್ಪ ಟಾರ್ಗೆಟ್
ಇನ್ನು ತಾರಿಣಿ ಮದುವೆ ಮಾಡಿಕೊಳ್ಳುತ್ತಿರುವ ಹುಡಗ ಧೀರಜ್ ಅಮ್ಮ ಜಗದೀಶ್ವರಿ . ಆಕೆ ತನ್ನ ಮಗನ ಖುಷಿಗಾಗಿ ಏನ್ ಬೇಕಾದ್ರೂ ಮಾಡ್ತಾಳೆ. ಅದಕ್ಕೆ ಸಿದ್ದು ಕುಟುಂಬಕ್ಕೆ ತೊಂದ್ರೆ ಕೊಡಲು ಮುಂದಾಗಿದ್ದಾಳೆ. ಆಕೆಯೇ ಸಿದ್ದು ಅಪ್ಪನಿಗೆ 3 ಲಕ್ಷ ಸಾಲ ಕೊಟ್ಟಿರುತ್ತಾಳೆ. ಬಡ್ಡಿ ವಸೂಲಿಗೆ ಮನೆ ಬಳಿ ಹುಡುಗರನ್ನು ಕಳಿಸಿರುತ್ತಾಳೆ. ಅದಕ್ಕೆ ಸಿದ್ದು ಅಮ್ಮ ತುಂಬಾ ಬೇಸರ ಮಾಡಿಕೊಂಡು ಕಣ್ಣೀರು ಹಾಕುತ್ತಿದ್ದಾರೆ.
ಕೆಲಸದ ಆಸೆ ತೋರಿಸಿ ವಂಚನೆ
ಸಿದ್ದು ತಂದೆ ನೀವು ನಮ್ಮ ಕಂಪನಿಯಲ್ಲೇ ಕೆಲಸ ಮಾಡಿ ಎಂದು ಧೀರಜ್ ಹೇಳಿದ್ದಾರೆ. ಅವರು ಕೆಲಸ ಸಿಕ್ಕ ಖುಷಿಯಲ್ಲಿ ಇರ್ತಾರೆ. ಆದ್ರೆ ಮರುದಿನ ನಮ್ಮ ಬಳಿ ಕೆಲಸ ಇಲ್ಲ. ಇರುವುದು ಒಂದೇ ಕೆಲಸ ಟೀ ಮಾಡುವುದು. ಅಪ್ಪನಿಗೆ ಕೆಲಸ ಸಿಕ್ತು ಎಂದು ಸಿದ್ದು ಮನೆಯವರು ಸಹ ಖುಷಿಯಾಗಿದ್ದಾರೆ.
ಇದನ್ನೂ ಓದಿ: Kendasampige: ಮನೆಯವರ ಮನಸ್ಸು ಗೆಲ್ಲುತ್ತಿರುವ ಸುಮನಾಗೆ ಗಂಡನ ಪ್ರೀತಿ ಸಿಗುತ್ತಾ?
ತುಂಬಾ ಪ್ರೀತಿ ಮಾಡ್ತಿದ್ದ ತಾರಿಣಿ ಈಗ ಬದಲಾಗಿದ್ದಾಳೆ. ಸಿದ್ದುಗೆ ಏನ್ ಮಾಡಬೇಕೆಂದು ತಿಳಿಯದೇ ಒದ್ದಾಡುತ್ತಿದ್ದಾನೆ. ಇಬ್ಬರ ನಡುವಿನ ಪ್ರೀತಿ, ಎರಡು ಕುಟುಂಬದ ದ್ವೇಷವಾಗಿ ಬದಲಾಗಿದೆ. ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ